Swarnavalli prabha

ಶ್ರೀ ಸ್ವರ್ಣವಲ್ಲೀ ಪ್ರಭಾ” ಧರ್ಮ, ನೀತಿ, ಜ್ಞಾನ ಪ್ರಸಾರದ ಮಾಸಿಕಪತ್ರಿಕೆ. ಇದು ಹದಿನಾರು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಮೂಲಕ ಭಾರತೀಯ ಅಧ್ಯಾತ್ಮವಿದ್ಯೆ ಸಂಸ್ಕೃತಿ, ಸಂಸ್ಕಾರಗಳ ಬಗೆಗೆ ಜನತೆಗೆ ತಿಳಿಸಿ ಕೊಡುವುದರ ಜೊತೆಗೆ ಶ್ರೀ ಸ್ವರ್ಣವಲ್ಲೀ ಮಠದ ಕಾರ್ಯಕಲಾಪಗಳನ್ನು ಅರ್ಥಪೂರ್ಣವಾಗಿ ವಿದಿತ ಪಡಿಸಲಾಗುತ್ತದೆ. ಶ್ರೀಗಳ ಸಂದೇಶ ನುಡಿಯ ಸ್ಥಿರ ಶೀರ್ಷಿಕೆಯ ಅಂಕಣ ಲೇಖನಗಳು ಇದರಲ್ಲಿ ತುಂಬ ಪ್ರಭಾವ ಶಾಲಿಯಾಗಿ ಬರುತ್ತಿವೆ. ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ತೋರುವ ವಿದ್ವತ್ ಪ್ರೀತಿ ಅಸಾಧರಣವಾದುದು. ಅವರ ಪ್ರವಚನಗಳು ಲೇಖನಗಳು ನಿರಂತರವಾಗಿ ಹರಿದು ಬರುತ್ತಿರುವುದುಸ್ಫೂರ್ತಿದಾಯಕವಾಗಿದೆ.“ಶ್ರೀ ಸ್ವರ್ಣವಲ್ಲೀ ಪ್ರಭಾ”ದ ಮೂಲಕ ಗುರುಗಳು ಜನರನ್ನು ಸಂಸ್ಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶ್ರೀ ಸ್ವರ್ಣವಲ್ಲೀ ಪ್ರಭಾ ಪತ್ರಿಕೆಯ ಮೂಲಕ ಮತ್ತು ಶ್ರೀ ಭಗವತ್ಪಾದ ಪ್ರಕಾಶನದ ಪುಸ್ತಕಗಳ ಮೂಲಕ ಗುರುಗಳು ಭಾರತೀಯ ಸಂಸ್ಕೃತಿಯ ಪ್ರಸಾರ ಮಾಡುತ್ತಿರುವು ಮುಖ್ಯವಾದ ಸಂಗತಿಯಾಗಿದೆ. ಪತ್ರಿಕೆ ಪುಸ್ತಕಗಳ ಮೂಲಕ ಜನಸಂಸ್ಕೃತಿ ಬೆಳೆಸುವುದು ಗುರುಗಳ ಉದ್ದಾತ್ತ ವಿಚಾರವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಜನರೊಡನೆ ನೇರ ಸಂಬಂಧ ಹೊಂದಿದ್ದಾರೆ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved