Lalitambha Nidi

ಶ್ರೀಮಠದಲ್ಲಿರುವ ಲಲಿತಾಂಬಾ ನಿಧಿ (ರಿ)ಅಂಗ ಸಂಸ್ಥೆಯು ಭಕ್ತಜನರ ಸೇವಾ ಕಾರ್ಯ ಕೈಗೊಳ್ಳಲು ನೆರವಾಗುವುದಲ್ಲದೇ ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಕಾರಣವಾಗಿದೆ. ಅನ್ನದಾನ ,ಅಭಯದಾನ ,ಆಶ್ರಯದಾನ,ವಿದ್ಯಾದಾನ ಶ್ರೀ ಸ್ವರ್ಣವಲ್ಲೀ ಮಠದ ಪ್ರಮುಖ ಸೇವಾಕರ್ಯಗಳಗಿವೆ. ಶ್ರೀ ಸ್ವರ್ಣವಲ್ಲೀ ಮಠಕ್ಕೆ ಬರುವ ಎಲ್ಲ ಭಕ್ತರಿಗೆ ಉಚಿತ ಪ್ರಸಾದ ಊಟ, ಉಪಹಾರ ವಸತಿ ವ್ಯವಸ್ಥೆ ಮಾಡುವುದಲ್ಲದೇ ಭಕ್ತರಸಮಸ್ಯೆಗಳಿಗೆ ಶ್ರೀಗಳು ಪರಿಹಾರ ಸೂಚಿಸಿ ಅವರಲ್ಲಿ ಧಾರ್ಮಿಕ ಶ್ರದ್ಧೆಬೆಳೆಯುವಂತೆ ಸ್ಫೂರ್ತಿ ತುಂಬುತ್ತಿದ್ದಾರೆ. ಶ್ರೀಮಠದಲ್ಲಿ ಶರನ್ನವರಾತ್ರಿ, ನರಸಿಂಹ ಜಯಂತಿ, ರಥೋತ್ಸವ, ಶ್ರೀಲಕ್ಷ್ಮೀನೃಸಿಂಹ, ಶ್ರೀಲಲಿತಾಂಬಾ ಚಂದ್ರಮೌಳೀಶ್ವರ ದೇವರ ಸನ್ನಿಧಿಯಲ್ಲಿ ಪಂಚಾಮೃತ,ರುದ್ರಾಭಿಷೇಕ, ಮಹಾಪೂಜೆ ಜರುಗುತ್ತಿದ್ದು ಇದರಲ್ಲಿ ಅಪರಾ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ. ಶ್ರೀದೇವರ ಸೇವೆಸಲ್ಲಿಸಲು ಶ್ರದ್ಧೆಯ ಭಕ್ತರಿರುವದಲ್ಲದೇ ಹದಿನಾರು ಸೀಮೆಯ ಶಿಷ್ಯಕೋಟಿ ಧಾರ್ಮಿಕ ಉತ್ಸವಗಳಲ್ಲಿ ಶ್ರೀಮಠದ ಸೇವಾಕಾರ್ಯದಲ್ಲಿ ಶ್ರದ್ಧೆಯಿಂದ ತನುಮನಧನಗಳಿಂದ ದುಡಿಯುತ್ತಾರೆ. ಬಹಳ ಆಶ್ಚರ್ಯದ ವಿಷಯವೆಂದರೆ ಶ್ರೀಮಠದ ರಥೋತ್ಸವದಲ್ಲಿ ಇಂದಿಗೂ ಬಿಟ್ಟಿ ಸಂಪ್ರದಾಯ ಶ್ರೀ ಸ್ವರ್ಣವಲ್ಲೀ ಮಠದಲ್ಲಿದೆ. ಮಠದ ಸೇವೆ ಮಾಡುವುದು ತಮ್ಮ ಹಕ್ಕು ಎನ್ನುವಂತೆ ಕರ್ತವ್ಯ ಶ್ರದ್ಧೆಯಿಂದ ಜನ ಮುಂದಾಗಿ ಸೇವೆ ಮಾಡಲು ಬರುತ್ತಾರೆ. ಶ್ರೀಮಠದ ಪ್ರಸಾದದಿಂದ ರೋಗ ಮುಕ್ತರಾದ ಅನೇಕ ಜನರು ತಮ್ಮ ಅನುಭವವನ್ನು ಹೇಳುತ್ತಾರೆ. ಜಿವನದಲ್ಲಿ ಸಂಕಟಬಂದಾಗ ಶ್ರೀ ಸ್ವರ್ಣವಲ್ಲೀ ಮಠದ ಲಕ್ಷ್ಮೀನೃಸಿಂಹ ದೇವರು ಶ್ರೀಲಲಿತಾಂಬಾ ಚಂದ್ರಮೌಳೀಶ್ವರರನ್ನು ಗುರುಗಳನ್ನೂ ನೆನೆದು ಸಂಕಟದಿಂದ ಬಿಡುಗಡೆಗೊಂಡ ಅನೇಕ ಜನರಿದ್ದಾರೆ.
ಶ್ರೀದೇವರ ಸೇವೆಸಲ್ಲಿಸಲು ಶ್ರದ್ಧೆಯ ಭಕ್ತರಿರುವದಲ್ಲದೇ ಹದಿನಾರು ಸೀಮೆಯ ಶಿಷ್ಯಕೋಟಿ ಧಾರ್ಮಿಕ ಉತ್ಸವಗಳಲ್ಲಿ ಶ್ರೀಮಠದ ಸೇವಾಕಾರ್ಯದಲ್ಲಿ ಶ್ರದ್ಧೆಯಿಂದ ತನುಮನಧನಗಳಿಂದ ದುಡಿಯುತ್ತಾರೆ.
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved