ಭಗವದ್ಗೀತಾ ಅಭಿಯಾನ ಅಧ್ಯಾಯ  6
ಶ್ಲೋಕ  5
ಉದ್ಧರೇದಾತ್ಮನಾತ್ಮಾನಂ ಆತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರ್ ಆತ್ಮೈವ ರಿಪುರಾತ್ಮನಃ ||
ತನ್ನಿಂದಲೇ ತನ್ನನ್ನು ಸಂಸಾರ ಸಾಗರದಿಂದ ಉದ್ಧಾರ ಮಾಡಿಕೊಳ್ಳಬೇಕು ಮತ್ತು ತನ್ನನ್ನು ತಾನೇ ಅಧೋಗತಿಗೆ ತಳ್ಳಿಕೊಳ್ಳಬಾರದು. ಏಕೆಂದರೆ ಈ ಜೀವಾತ್ಮನೇ ತನ್ನ ಮಿತ್ರನೂ ಹಾಗೂ ತಾನೇ ತನ್ನ ಶತ್ರುವೂ ಸಹ, ಅರ್ಥಾತ್ ಬೇರೆ ಯಾರೂ ಶತ್ರುಗಳಾಗಲೀ ಅಥವಾ ಮಿತ್ರರಾಗಲೀ ಇಲ್ಲ||೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  6
ಶ್ಲೋಕ  4
ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ |
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ||
ಯಾವಾಗ ಇಂದ್ರಿಯಭೋಗಗಳಲ್ಲಿಯೂ, ಕರ್ಮಗಳಲ್ಲಿಯೂ ಆಸಕ್ತನಾಗುವುದಿಲ್ಲವೋ ಆಗ ಸರ್ವಸಂಕಲ್ಪಗಳನ್ನೂ ತ್ಯಜಿಸಿದವನು ಯೋಗ ನಿರತನೆಂದು ಹೇಳಲ್ಪಡುತ್ತಾನೆ ||೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  6
ಶ್ಲೋಕ  3
ಆರುರುಕ್ಷೋರ್ಮುನೆರ್ಯೋಗಂ ಕರ್ಮ ಕಾರಣಮುಚ್ಯತೇ |
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ ||
ಸಮತ್ವ ಬುದ್ಧಿರೂಪೀ ಯೋಗದಲ್ಲಿ ನಿರತನಾಗಲು ಬಯಸುವ ಮನನಶೀಲ ಪುರುಷನಿಗೆ ಯೋಗ ಸಿದ್ಧಿಸಲು ನಿಷ್ಕಾಮ ಕರ್ಮ ಮಾಡುವುದೇ ಕಾರಣವೆಂದು ಹೇಳಲಾಗಿದೆ ಮತ್ತು ಯೋಗದಲ್ಲಿ ನಿರತನಾದವನಿಗೆ ಸರ್ವ ಸಂಕಲ್ಪಗಳ ನಾಶವೇ ಶ್ರೇಯಸ್ಸಿಗೆ ಕಾರಣವೆಂದು ಹೇಳಲಾಗಿದೆ||೩|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  6
ಶ್ಲೋಕ  2
ಯಂ ಸಂನ್ಯಾಸಮಿತಿ ಪ್ರಾಹುಃ ಯೋಗಂ ತಂ ವಿದ್ಧಿ ಪಾಂಡವ|
ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ ||
ಎಲೈ ಅರ್ಜುನ ! ಯಾವುದನ್ನು ಸಂನ್ಯಾಸ ಎಂದು ಹೇಳುತ್ತಾರೆಯೋ ಅದನ್ನೇ ನೀನು ಯೋಗ ಎಂದು ತಿಳಿದುಕೋ, ಏಕೆಂದರೆ ಸಂಕಲ್ಪಗಳನ್ನು ತ್ಯಾಮಾಡದಿರುವ ಯಾವ ಪುರುಷನೂ ಸಹ ಯೋಗಿಯಾಗುವುದಿಲ್ಲ.||೨|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  6
ಶ್ಲೋಕ  1
ಶ್ರೀ ಪರಮಾತ್ಮನೇ ನಮಃ ಅಥ ಷಷ್ಠೋsಧ್ಯಾಯಃ-ಆತ್ಮ ಸಂಯಮಯೋಗಃ ಶ್ರೀ ಭಗವಾನುವಾಚ -ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ|
ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ||
ಶ್ರೀ ಕೃಷ್ಣ ಪರಮಾತ್ಮನು ಹೇಳಿದನು- ಯಾರು ಕರ್ಮಗಳ ಫಲವನ್ನು ಅಪೇಕ್ಷಿಸದೆ ಮಾಡಲು ಯೋಗ್ಯವಾದ ಕರ್ಮವನ್ನು ಮಾಡುತ್ತಾನೆಯೋ, ಅವನು ಸಂನ್ಯಾಸಿಯು ಮತ್ತು ಯೋಗಿಯೂ ಆಗಿದ್ದಾನೆ ಮತ್ತು ಕೇವಲ ಅಗ್ನಿಯನ್ನು ತ್ಯಾಗ ಮಾಡುವವನು ಸಂನ್ಯಾಸಿಯೂ ಅಲ್ಲ ಹಾಗೂ ಕೇವಲ ಕ್ರಿಯೆಯನ್ನೇ ತ್ಯಾಗ ಮಾಡುವವನೂ ಸಹ ಯೋಗಿಯಲ್ಲ.||೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  29
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ |
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ||೨೯||
ನನ್ನನ್ನು ಯಜ್ಞ ಮತ್ತು ತಪಸ್ಸುಗಳನ್ನು ಅನುಭವಿಸುವವನು, ಇಡೀ ಜಗತ್ತಿನ ಒಡೆಯರಿಗೆಲ್ಲಾ ಒಡೆಯನು ಹಾಗೂ ಎಲ್ಲಾ ಪ್ರಾಣಿಗಳಿಗೂ ಸುಹೃದಯಿ ಅರ್ಥಾತ್ ಸ್ವಾರ್ಥವಿಲ್ಲದ ಪ್ರೇಮಿ ಎಂದು ಯಥಾರ್ಥವನ್ನು ತಿಳಿದುಕೊಂಡು ಶಾಂತಿಯನ್ನು ಪಡೆಯುತ್ತಾನೆ||೨೯||
ಮತ್ತು ಸಚ್ಛಿದಾನಂದ ಘನ ಪರಿಪೂರ್ಣ ಶಾಂತ ಬ್ರಹ್ಮನ ಹೊರತಾಗಿ ಅವನ ದೃಷ್ಟಿಯಲ್ಲಿ ಮತ್ತೇನೂ ಸಹ ಇರುವುದಿಲ್ಲ, ಕೇವಲ ವಾಸುದೇವ - ವಾಸುದೇವನೇ ಇರುತ್ತಾನೆ. ಓಂ ತತ್ಸದಿತಿ
ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಸಂನ್ಯಾಸಯೋಗೋ ನಾಮ ಪಂಚಮೋsಧ್ಯಾಯಃ ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  28
ಯತೇಂದ್ರಿಯಮನೋಬುದ್ಧಿಃ ಮುನಿರ್ಮೋಕ್ಷಪರಾಯಣಃ |
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ||
ಯಾರ ಇಂದ್ರಿಯಗಳು, ಮನಸ್ಸು ಮತ್ತು ಬುದ್ದಿ - ಇವು ಜಯಿಸಲ್ಪಟ್ಟಿವೆಯೋ ಅಂತಹ ಮೋಕ್ಷಪರಾಯಣಾನಾದ ಯಾವ ಮುನಿಯು ಇಚ್ಛೆ, ಭಯ ಮತ್ತು ಕ್ರೋಧಗಳಿಲ್ಲದವನಾಗಿರುತ್ತಾನೆ-ಯೋ ಅವನು ಯಾವಾಗಲೂ ಮುಕ್ತನೇ ಆಗಿರುತ್ತಾನೆ.||೨೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  27
ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂನ್ ಚಕ್ಷುಶ್ಚೈವಾಂತರೇ ಭ್ರುವೋಃ|
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ||
ಹೊರಗಿನ ವಿಷಯ(ಭೋಗ)ಗಳನ್ನು ಯೋಚಿಸದೆ ಹೊರಗಡೆಯೇ ತ್ಯಜಿಸಿ ಮತ್ತು ಕಣ್ಣಿನ ದೃಷ್ಟಯನ್ನು ಹುಬ್ಬುಗಳ ಮಧ್ಯದಲ್ಲಿ ಸ್ಥಿರಗೊಳಿಸಿ ಮೂಗಿನಲ್ಲಿ ಸಂಚರಿಸುವ ಪ್ರಾಣ ಮತ್ತು ಅಪಾನ ವಾಯುವನ್ನು ಸಮಾನವಾಗಿ ಮಾಡಿ-- ||೨೭|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  26
ಕಾಮಕ್ರೋಧವಿಯುಕ್ತಾನಾಂ ಯತೀನಾಂ ಯತಚೇತಸಾಮ್|
ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್||
ಕಾಮಕ್ರೋಧಗಳಿಂದ ಬಿಡುಗಡೆ ಹೊಂದಿದವನಿಗೆ, ಮನಸ್ಸು ವಶದಲ್ಲಿರುವವನಿಗೆ ಮತ್ತು ಪರಬ್ರಹ್ಮ ಪರಮಾತ್ಮನ ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನೀ ಪುರುಷನಿಗೆ ಎಲ್ಲೆಲ್ಲಿಯೂ ಶಾಂತ ಪರಬ್ರಹ್ಮ ಪರಮಾತ್ಮನೇ ಇರುತ್ತಾನೆ||೨೬|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  25
ಲಭಂತೇ ಬ್ರಹ್ಮನಿರ್ವಾಣಮ್ ಋಷಯಃ ಕ್ಷೀಣಕಲ್ಮಷಾಃ|
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ||
ಪಾಪಗಳನ್ನೆಲ್ಲಾ ಕಳೆದುಕೊಂಡವರು, ಜ್ಞಾನದ ಮೂಲಕ ಭೇದಭಾವದ ಸಂಶಯಗಳನ್ನೆಲ್ಲಾ ನಿವಾರಿಸಿಕೊಂಡವರು, ಎಲ್ಲಾ ಪ್ರಾಣಿಗಳ ಹಿತದಲ್ಲಿ ನಿರತರಾದವರು ಮತ್ತು ಏಕಾಗ್ರತೆಯಿಂದ ಭಗವಂತನ ಧ್ಯಾನದಲ್ಲಿ ಮನಸ್ಸಿಟ್ಟಿರುವಂತಹ ಬ್ರಹ್ಮಜ್ಞಾನಿಯಾದವರು ಪ್ರಶಾಂತ ಬ್ರಹ್ಮಾನಂದವನ್ನು ಪಡೆಯುತ್ತಾರೆ||೨೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  24
ಯೋsಂತಃಸುಖೋsಂತಃರಾರಾಮಃ ತಥಾಂತರ್ಜ್ಯೋತಿರೇವ ಯಃ |
ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮ ಭೂತೋsಧಿಗಚ್ಛತಿ ||
ಯಾರು ನಿಶ್ಚಯಿಸಿಕೊಂಡು ಸರ್ವವ್ಯಾಪೀ ಆತ್ಮನಲ್ಲಿಯೇ ಸುಖಿಯಾಗಿರುತ್ತಾನೆಯೋ ಮತ್ತು ಆತ್ಮನಲ್ಲಿಯೇ ಆನಂದಾನುಭವ ಪಡೆಯುತ್ತಾನೆಯೋ ಹಾಗೂ ಯಾರು ಆತ್ಮಜ್ಞಾನವುಳ್ಳವನೋ ಮತ್ತು ಸಚ್ಚಿದಾನಂದ ಘನ ಪರಬ್ರಹ್ಮ ಪರಮಾತ್ಮನಲ್ಲಿ ಒಂದೇ ಭಾವವಾಗಿ ಬೆರೆತ ಸಾಂಖ್ಯಯೋಗಿಯು ಪ್ರಶಾಂತ ಬ್ರಹ್ಮಾನಂದವನ್ನು ಪಡೆಯುತ್ತಾನೆ ||೨೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  23
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ಶರೀರವಿಮೋಕ್ಷಣಾತ್ |
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ||
ಯಾರು ಶರೀರ ನಾಶವಾಗುವುದಕ್ಕಿಂತ ಮೊದಲೇ ಅರ್ಥಾತ್ ಈ ಜೀವನಾವಧಿಯಲ್ಲಿಯೇ ಕಾಮ -ಕ್ರೋಧಗಳಿಂದ ಉಂಟಾಗುವ ಉದ್ವೇಗವನ್ನು ಸಹಿಸಿಕೊಳ್ಳಲು ಸಮರ್ಥನೋ ಅರ್ಥಾತ್ ಕಾಮ - ಕ್ರೋಧಾದಿಗಳನ್ನು ಯಾರು ಶಾಶ್ವತವಾಗಿ ಜಯಿಸಿದ್ದಾನೆಯೋ ಆ ಮನುಷ್ಯನೇ ಈ ಲೋಕದಲ್ಲಿ ಯೋಗಿಯು ಮತ್ತು ಅವನೇ ಸುಖಿಯು ||೨೩|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  22
ಯೇ ಹಿ ಸಂಸ್ಪರ್ಜಾ ಭೋಗಾ ದುಃಖಯೋನಯ ಏವ ತೇ|
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ||೨೨||
ಈ ಇಂದ್ರಿಯ ಮತ್ತು ವಿಷಯಗಳಿಂದ ಉಂಟಾಗುವ ಭೋಗಗಳೆಲ್ಲವೂ ವಿಷಯೀ ಜನರಿಗೆ ಸುಖರೂಪಿಯಾಗಿ ಕಂಡುಬಂದರೂ ಅವು ದುಃಖಕ್ಕೆ ಕಾರಣವಾಗಿವೆ ಮತ್ತು ಅನಿತ್ಯವಾಗಿವೆ. ಅದ್ದರಿಂದ ಅರ್ಜುನನೇ! ಬುದ್ಧಿವಂತ ವಿವೇಕೀ ಪುರುಷರು ಅವುಗಳಲ್ಲಿ ರಮಿಸುವುದಿಲ್ಲ.||೨೨||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  21
ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ಸುಖಮ್|
ಸ ಬ್ರಹ್ಮ ಯೋಗ ಯುಕ್ತಾತ್ಮಾ ಸುಖಮಕ್ಷಯಮಶ್ನುತೇ ||
ಬಾಹ್ಯ ವಿಷಯಗಳಲ್ಲಿ ಅರ್ಥಾತ್ ಸಾಂಸಾರಿಕ ಸುಖ - ಭೋಗಗಳಲ್ಲಿ ಆಸಕ್ತಿಯಿಲ್ಲದ ಅಂತಃಕರಣವುಳ್ಳ ಸಾಧಕರು ಅಂತಃಕರಣದಲ್ಲಿ ಯಾವ ಆನಂದ ಭಗವಂತನ ಧ್ಯಾನದಿಂದ ಉಂಟಾಗುವುದೋ ಅದನ್ನು ಪಡೆಯುತ್ತಾರೆ. ಅನಂತರ ಅವರು ಸಚ್ಚಿದಾನಂದ ಘನ ಪರಬ್ರಹ್ಮ ಪರಮಾತ್ಮರೂಪೀ ಯೋಗದಲ್ಲಿ ಒಂದೇ ಭಾವದಿಂದ ಸ್ಥಿರವಾದ, ಅಕ್ಷಯವಾದ ಆನಂದವನ್ನು ಅನುಭವಿಸುತ್ತಾರೆ.||೨೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  20
ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ |
ಸ್ಥಿರಬುದ್ಧಿರಸಂಮೂಢೋ ಬ್ರಹ್ಮ ವಿದ್ಬ್ರಹ್ಮಣಿ ಸ್ಥಿತಃ ||
ಪ್ರಿಯವಾದುದನ್ನು ಅರ್ಥಾತ್ ಜನರು ಪ್ರಿಯವೆಂದು ತಿಳಿದುಕೊಳ್ಳುವುದನ್ನು ಪಡೆದಾಗ ಸಂತೋಷಪಡದೇ ಇರುವವನು ಮತ್ತು ಅಪ್ರಿಯವಾದುದನ್ನು ಅರ್ಥಾತ್ ಜನರು ಅಪ್ರಿಯವೆಂದು ತಿಳಿದುಕೊಳ್ಳುವುದನ್ನು ಪಡೆದಾಗ ಉದ್ವೇಗದಿಂದ ದುಃಖಪಡದೇ ಇರುವವನು. ಅಂತಹ ಸ್ಥಿರಬುದ್ಧಿಯುಳ್ಳ ಹಾಗೂ ಸಂಶಯರಹಿತನಾದ ಬ್ರಹ್ಮಜ್ಞಾನೀ ಪುರುಷನು ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಒಂದೇ ಭಾವನೆಯಿಂದ ಲೀನವಾಗಿದ್ದಾನೆ.||೨೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  19
ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ |
ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ಬ್ರಹ್ಮಣಿ ತೇ ಸ್ಥಿತಾಃ ||
ಸಮಭಾವದಲ್ಲಿ ಸ್ಥಿರವಾದ ಮನಸ್ಸಿನಿಂದ ಅವರು ಈ ಜನ್ಮದಲ್ಲೇ ಸಮಸ್ತ ಜಗತ್ತನ್ನು ಗೆದ್ದಿರುವರು. ಏಕೆಂದರೆ ಸಚ್ಚಿದಾನಂದಘನ ಪರಮಾತ್ಮನು ನಿರ್ದೋಷನೂ, ಸಮನೂ ಆಗುದ್ದಾನೆ. ಆದ್ದರಿಂದ ಅವರು ಸಚ್ಚಿದಾನಂದಘನ ಪರಮಾತ್ಮನಲ್ಲಯೇ ಸ್ಥಿರವಾಗಿರುತ್ತಾರೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  18
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||
ಜ್ಞಾನಿಗಳು, ವಿದ್ಯಾವಂತರೂ ಮತ್ತು ವಿನಯಶೀಲರೂ ಆದ ಬ್ರಾಹ್ಮಣರನ್ನು, ಗೋವು, ಆನೆ, ನಾಯಿ ಮತ್ತು ಚಂಡಾಲರನ್ನೂ ಸಹ ಸಮಾನ ಭಾವನೆಯಿಂದ ನೋಡುತ್ತಾರೆ ||೧೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  17
ತದ್ಬುದ್ಧಯಸ್ತದಾತ್ಮಾನಃ ತನ್ನಿಷ್ಠಾಸ್ತತ್ಪರಾಯಣಾಃ|
ಗಚ್ಛಂತ್ಯಪುನರಾವೃತ್ತಿಂ ಜ್ಞಾನನಿರ್ಧೂತಕಲ್ಮಷಾಃ||
ಯಾವ ಬುದ್ಧಿಯು ಸಚ್ಚಿದಾನಂದ ಘನ ಪರಮಾತ್ಮನಲ್ಲಿಯೇ ತಲ್ಲೀನವಾಗಿರುವುದೋ, ಯಾರ ಮನಸ್ಸು ಆತನಲ್ಲಿಯೇ ನಿಶ್ಚಲವಾಗಿರುವುದೋ ಮತ್ತು ಯಾರ ನಿಷ್ಠೆಯು ಆತನಲ್ಲಿಯೇ ಒಂದೇ ಭಾವದಿಂದ ಸದಾ ಸ್ಥಿರವಾಗಿರುವುದೋ ಅಂತಹ ತತ್ಪರರಾದವರು ಜ್ಞಾನದ ಮೂಲಕ ಪಾಪರಹಿತರಾಗಿ ಅಪುನರಾವೃತ್ತಿಯನ್ನು ಅರ್ಥಾತ್ ಹುಟ್ಟು- ಸಾವುಗಳ ಆವೃತ್ತಿಗಳಿಂದ ಮುಕ್ತರಾಗಿ ಪರಮಗತಿಯನ್ನು ಹೊಂದುತ್ತಾರೆ||೧೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  16
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ|
ತೇಷಾಮಾದಿತ್ಯವಜ್ಜ್ಞಾನಂ ಪ್ರಕಾಶಯತಿ ತತ್ಪರಮ್||
ಆದರೆ ಅಂತಃಕರಣದ ಆ ಅಜ್ಞಾನವು ಆತ್ಮಜ್ಞಾನದ ಮೂಲಕ ನಾಶವಾಗಿ ಹೋಗಿದೆಯೋ ಅವರ ಆ ಜ್ಞಾನವು ಸೂರ್ಯನಂತೆ ಸಚ್ಚಿದಾನಂದ ಘನ ಪರಮಾತ್ಮನನ್ನು ಪ್ರಕಾಶಪಡಿಸುತ್ತದೆ ||೧೬||
(ಅರ್ಥಾತ್ ಪರಮಾತ್ಮನ ಸ್ವರೂಪವನ್ನು ಸಾಕ್ಷಾತ್ಕಾರ ಮಾಡಿಸುತ್ತದೆ)
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  15
ನಾದತ್ತೇ ಕಸ್ಯಚಿತ್ ಪಾಪಂ ನ ಚೈವ ಸುಕೃತಂ ವಿಭುಃ|
ಅಜ್ಞಾನೇನಾವೃತಂ ಜ್ಞಾನಂ ತೇನ ಮುಹ್ಯಂತಿ ಜಂತವಃ||
ಸರ್ವವ್ಯಾಪೀ ಪರಮಾತ್ಮನು ಯಾರ ಪಾಪ ಕರ್ಮವನ್ನಾಗಲೀ, ಶುಭ ಕರ್ಮವನ್ನಾಗಲೀ ತೆಗೆದುಕೊಳ್ಳುವುದಿಲ್ಲ. ಅಜ್ಞಾನದಿಂದ ಜ್ಞಾನವು ಆವರಿಸಲ್ಪಟ್ಟಿದೆ. ಆದುದರಿಂದ ಜೀವರುಗಳೆಲ್ಲಾ ಮೋಹಿತರಾಗುತ್ತಿದ್ದಾರೆ.||೧೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  14
ನ ಕರ್ತೃತ್ವಂ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ|
ನ ಕರ್ಮ ಫಲಸಂಯೋಗಂ ಸ್ವಭಾವಸ್ತು ಪ್ರವರ್ತತೇ ||೧೪||
ಪರಮೇಶ್ವರನು ಮನುಷ್ಯರಿಗೆ ವಾಸ್ತವವಾಗಿಯೂ ಕರ್ತೃತ್ವವನ್ನು ವ್ಯವಸ್ಥೆ ಮಾಡುವುದಿಲ್ಲ, ಕರ್ಮವನ್ನೂ ವ್ಯವಸ್ಥೆ ಮಾಡುವುದಿಲ್ಲ ಮತ್ತು ಕರ್ಮಗಳ ಫಲ ಸಂಯೋಗದ ವ್ಯವಸ್ಥೆಯನ್ನೂ ಮಾಡುವುದಿಲ್ಲ. ಆದರೆ ಪರಮಾತ್ಮನ ಶಕ್ತಿಯಿಂದ ಪ್ರಕೃತಿಯೇ ಪ್ರವರ್ತಿಸುತ್ತದೆ ಅರ್ಥಾತ್ ಗುಣಗಳೇ ತಮ್ಮ ಗುಣಗಳಂತೇ ಸ್ವಾಭಾವಿಕವಾಗಿ ವ್ಯವಹರಿಸುತ್ತವೆ. ||೧೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  13
ಸರ್ವಕರ್ಮಾಣಿ ಮನಸಾ ಸಂನ್ಯಸ್ಯಾಸ್ತೇ ಸುಖಂ ವಶೀ|
ನವದ್ವಾರೇ ಪುರೇ ದೇಹೀ ನೈವ ಕುರ್ವನ್ನಕಾರಾಯನ್||೧೩||
ಅಂತಃಕರಣವು ಯಾರ ವಶದಲ್ಲಿದೆಯೋ ಅಂತಹ ಸಾಂಖ್ಯಯೋಗವನ್ನು ಆಚರಿಸುವ ಪುರುಷನು ಮಾಡದೇ ಮತ್ತು ಮಾಡಿಸದೇ ಇರುತ್ತಲೇ ನವದ್ವಾರಗಳುಳ್ಳಶರೀರರೂಪೀ ಪುರದಲ್ಲಿ ಎಲ್ಲಾ ಕ್ರಮಗಳನ್ನು ಮನಸ್ಸಿನಿಂದ ತ್ಯಜಿಸಿ, ಆನಂದದಿಂದ ಸಚ್ಚಿದಾನಂದಘನ ಪರಮಾತ್ಮನ ಸ್ವರೂಪದಲ್ಲಿ ಸ್ಥಿತನಾಗಿರುತ್ತಾನೆ. ||13||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  12
ಯುಕ್ತಂ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್|
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ||
ನಿಷ್ಕಾಮ ಕರ್ಮಯೋಗಿಯು ಕರ್ಮಗಳ ಫಲವನ್ನು ತ್ಯಾಗ ಮಾಡಿ ಅರ್ಥಾತ್ ಪರಮಾತ್ಮನಿಗೆ ಸಮರ್ಪಿಸಿ ಭಗವತ್ಸಾಕ್ಷಾತ್ಕಾರ ರೂಪೀ ಶಾಂತಿಯನ್ನು ಪಡೆಯುತ್ತಾನೆ ಮತ್ತು ಸಕಾಮೀ ಪುರುಷನು ಫಲದಲ್ಲಿ ಆಸಕ್ತನಾಗಿ ಕಾಮಪ್ರೇರಣೆಯಿಂದ ಬಂಧಿಸಲ್ಪಡುತ್ತಾನೆ||೧೨||
(ಆದುದರಿಂದ ನಿಷ್ಕಾಮ ಕರ್ಮಯೋಗ ಉತ್ತಮ)
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  11
ಕಾಯೇನ ಮನಸಾ ಬುದ್ಧ್ಯಾ ಕೇವಲೈರಿಂದ್ರಿಯೈರಪಿ |
ಯೋಗಿನಃ ಕರ್ಮ ಕುರ್ವಂತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ||
ನಿಷ್ಕಾಮ ಕರ್ಮಯೋಗಿಗಳು ಮಮಕಾರ ಬುದ್ಧಿಯಿಲ್ಲದೆ ಕೇವಲ ಇಂದ್ರಿಯ, ಮನಸ್ಸು, ಬುದ್ದಿ ಮತ್ತು ಶರೀರಗಳ ಮೂಲಕವೂ ಸಹ ಆಸಕ್ತಿಯನ್ನು ಬಿಟ್ಟು ಅಂತಃಕರಣದ ಶುದ್ಧಿಗಾಗಿಯೇ ಕರ್ಮವನ್ನು ಮಾಡುತ್ತಾರೆ||೧೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  10
ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ|
ಲಿಪ್ಯತೇ ನ ಸ ಪಾಪೇನ ಪದ್ಮ ಪತ್ರಮಿವಾಂಭಸಾ||
(ಆದರೆ ಎಲೈ ಅರ್ಜುನ ! ದೇಹಾಭಿಮಾನಿಯಾದವರಿಗೆ ಈ ಸಾಧನೆ ಕಠಿಣ ಮತ್ತು ನಿಷ್ಕಾಮ ಕರ್ಮಯೋಗ ಸುಲಭ; ಏಕೆಂದರೆ) ಯಾರು ಕರ್ಮಗಳನ್ನೆಲ್ಲಾ ಪರಮಾತ್ಮನಿಗೆ ಸಮರ್ಪಿಸಿ ಆಸಕ್ತಿಯನ್ನು ತ್ಯಜಿಸಿ ಕರ್ಮ ಮಾಡುತ್ತಾನೆಯೋ ಅವನು ನೀರಿನಲ್ಲಿರುವ ತಾವರೆ ಎಲೆಯಂತೆ ಪಾಪದಿಂದ ಲೇಪಿಸಲ್ಪಡುವುದಿಲ್ಲ. ||೧೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  8
ನೈವ ಕಿಂಚಿತ್ಕರೋಮೀತಿ ಯುಕ್ತೋ ಮನ್ಯೇತ ತತ್ತ್ವವಿತ್ |
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್ ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್||

ಪ್ರಲಪನ್ವಿಸೃಜನ್ ಗ್ರಹ್ಣನ್ ಉನ್ಮಿಷನ್ನಿಮಿಷನ್ನಪಿ|
ಇಂದ್ರಿಯಾಣೀಂದ್ರಿಯಾರ್ಥೇಷು ವರ್ತಂತ ಇತಿ ಧಾರಯನ್ ||
ತತ್ತ್ವಜ್ಞಾನಿಯಾದ ಸಾಂಖ್ಯಯೋಗಿಯು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ಊಟ ಮಾಡುವಾಗ, ಓಡಾಡುವಾಗ, ನಿದ್ರಿಸುವಾಗ,ಉಸಿರಾಡುವಾಗ,ಮಾತನಾಡುವಾಗ,ತ್ಯಜಿಸುವಾಗ ಹಾಗೂ ಸ್ವೀಕರಿಸುವಾಗ,ಕಣ್ಣು ತಿಳಿಯುವಾಗ ಹಾಗೂ ಕಣ್ಣು ಮುಚ್ಚುವಾಗಲೂ ಸಹ ಇಂದ್ರಿಯಗಳೆಲ್ಲವೂ ತಮ್ಮ- ತಮ್ಮ ಸ್ವಾಭಾವಿಕ ವಿಷಯಗಳಲ್ಲಿ ಪ್ರವೃತ್ತವಾಗಿರುತ್ತವೆ ಎಂದು ತಿಳಿದುಕೊಳ್ಳುತ್ತಾ, ನಾನು ಏನನ್ನೂ ಸಹ ಮಾಡುತ್ತಾ ಇಲ್ಲ ಎಂದು ನಿಃಸಂದೇಹವಾಗಿ ತಿಳಿಯಬೇಕು ||೮-೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  7
ಸಂನ್ಯಾಸಸ್ತು ಮಹಾಬಹೋ ದುಃಖಮಾಪ್ತುಮಯೋಗತಃ|
ಯೋಗಯುಕ್ತೋ ಮುನಿರ್ಬ್ರಹ್ಮ ನಚಿರೇಣಾಧಿಗಚ್ಛತಿ||
ಆದರೆ, ಎಲೈ ಅರ್ಜುನ ನಿಷ್ಕಾಮ ಕರ್ಮಯೋಗದ ಸಿದ್ಧಿಯಿಲ್ಲದೆ ಸಂನ್ಯಾಸ ಅರ್ಥಾತ್ ಮನಸ್ಸು, ಇಂದ್ರಿಯಗಳು ಮತ್ತು ಶರೀರದಿಂದ ನಡೆಯುವ ಎಲ್ಲಾ ಕರ್ಮಗಳಲ್ಲಿಯೂ ಕರ್ತೃತ್ವಭಾವದ ತ್ಯಾಗವನ್ನು ಪಡೆಯುವುದು ಕಠಿಣ ಮತ್ತು ಭಗವಂತನ ಸ್ವರೂಪವನ್ನು ಮನನ ಮಾಡುವ ನಿಷ್ಕಾಮ ಕರ್ಮಯೋಗಿಯು ಪರಬ್ರಹ್ಮ ಪರಮಾತ್ಮನನ್ನು ಬಹು ಬೇಗ ಪಡೆದುಕೊಳ್ಳುತ್ತಾನೆ||೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  6
ಯೋಗಯುಕ್ತೋ ವಿಶುದ್ಧಾತ್ಮಾ ವಿಜಿತಾತ್ಮಾ ಜಿತೇಂದ್ರಿಯಃ |
ಸರ್ವಭೂತಾತ್ಮ ಭೂತಾತ್ಮಾ ಕುರ್ವನ್ನಪಿ ನ ಲಿಪ್ಯತೇ ||
ಮನಸ್ಸನ್ನು ವಶದಲ್ಲಿಟ್ಟುಕೊಂಡಿರುವವನು, ಇಂದ್ರಿಯಗಳನ್ನು ಜಯಿಸಿದವನು, ಶುದ್ಧವಾದ ಅಂತಃಕರಣವುಳ್ಳವನು ಹಾಗೂ ಎಲ್ಲಾ ಜೀವಿಗಳ ಆತ್ಮರೂಪನಾದ ಪರಮಾತ್ಮನಲ್ಲಿ ಒಂದೇ ಭಾವವುಳ್ಳವನಾದ ನಿಷ್ಕಾಮ ಕರ್ಮಯೋಗಿಯು ಕರ್ಮ ಮಾಡುತ್ತಾ ಇದ್ದರೂ ಸಹ ಲಿಪ್ತನಾಗಿರುವುದಿಲ್ಲ ||೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  5
ಯತ್ಸಾಂಖ್ಯೈಃ ಪ್ರಾಪ್ಯತೇ ಸ್ಥಾನಂ ತದ್ಯೋಗೈರಪಿ ಗಮ್ಯತೇ|
ಏಕಂ ಸಾಂಖ್ಯಂ ಯೋಗಂ ಚ ಯಃ ಪಶ್ಯತಿ ಸ ಪಶ್ಯತಿ||
ಜ್ಞಾನಯೋಗಿಗಳಿಗೆ ಯಾವ ಪರಮಧಾಮವು ದೊರೆಯುವುದೋ, ನಿಷ್ಕಾಮ ಕರ್ಮಯೋಗಿಗಳಿಗೂ ಸಹ ಅದೇ ದೊರೆಯುವುದು. ಆದುದರಿಂದ ಯಾರು ಜ್ಞಾನಯೋಗ ಮತ್ತು ನಿಷ್ಕಾಮ ಕರ್ಮಯೋಗವನ್ನು ಫಲದ ರೂಪದಿಂದ ಒಂದೇ ಎಂದು ನೋಡುತ್ತಾನೆಯೋ ಅವನೇ ಯಥಾರ್ಥವನ್ನು ಅರಿತವನು||೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  4
ಸಾಂಖ್ಯಯೋಗೌ ಪೃಥಗ್ಬಾಲಾಃ ಪ್ರವದಂತಿ ನ ಪಂಡಿತಾಃ|
ಏಕಮಪ್ಯಾಸ್ಥಿತಃ ಸಮ್ಯಕ್ ಉಭಯೋರ್ವಿಂದತೇ ಫಲಮ್||
ಮೇಲೆ ಹೇಳಿದ ಸಂನ್ಯಾಸವನ್ನು ಮತ್ತು ಕರ್ಮಯೋಗವನ್ನು ಮೂರ್ಖಜನರು ಬೇರೆ -ಬೇರೆಯಾದ ಫಲವನ್ನು ಕೋಡುವವು ಎಂದು ಹೇಳುತ್ತಾರೆ, ಪಂಡಿತರಾದವರು ಹೇಳುವುದಿಲ್ಲ; ಏಕೆಂದರೆ, ಎರಡರ ಪೈಕಿ ಒಂದರಲ್ಲಿಯಾದರೂ ಸಮ್ತಕ್ಪ್ರಕಾರದಿಂ ಸ್ಥಿತನಾದ ಪುರುಷನು ಎರಡರ ಫಲರೂಪೀ ಪರಮಾತ್ಮನನ್ನು ಪಡೆಯುತ್ತಾನೆ.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  3
ಜ್ಞೇಯಃ ಸ ನಿತ್ಯ ಸಂನ್ಯಾಸೀಯೋ ನ ದ್ವೇಷ್ಟಿ ನ ಕಾಂಕ್ಷತಿ|
ನಿರ್ದ್ವಂದ್ವೋ ಹಿ ಮಹಾಬಾಹೋ ಸುಖಂ ಬಂಧಾತ್ಪ್ರಮುಚ್ಯತೇ||
ಎಲೈ ಅರ್ಜುನ ! ಯಾವ ಮನುಷ್ಯನು ಯಾರನ್ನೂ ದ್ವೇಷಿಸುವುದಿಲ್ಲವೋ ಮತ್ತು ಯಾವುದನ್ನೂ ಅಪೇಕ್ಷೆಪಡುವುದಿಲ್ಲವೋ ಆ ನಿಷ್ಕಾಮ ಕರ್ಮಯೋಗಿಯು ಯಾವಾಗಲೂ ಸಂನ್ಯಾಸಿಯೇ ಎಂದು ತಿಳಿದುಕೊಳ್ಳಲು ಯೋಗ್ಯನು; ಏಕೆಂದರೆ, ರಾಗದ್ವೇಷಾದಿ ದ್ವಂದ್ವಗಳಿಲ್ಲದ ಅವನು ಸಂಸಾರ ಬಂಧನದಿಂದ ಬಿಡುಗಡೆ ಹೊಂದುತ್ತಾನೆ||೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  2
ಶ್ರೀ ಭಗವಾನುವಾಚ
ಸಂನ್ಯಾಸಃ ಕರ್ಮಯೋಗಶ್ಚ ನಿಃಶ್ರೇಯಸಕರಾವುಭೌ|
ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ||
ಶ್ರೀ ಕೃಷ್ಣ ಹೇಳಿದನು - ಕರ್ಮ ಸಂನ್ಯಾಸ ಮತ್ತು ನಿಷ್ಕಾಮ ಕರ್ಮಯೋಗ ಇವೆರಡೂ ಸಹ ಪರಮ ಶ್ರೇಯಸ್ಕರವಾಗಿವೆ. ಆದರೆ ಇವೆರಡರಲ್ಲಿ ಕರ್ಮ ಸಂನ್ಯಾಸಕ್ಕಿಂತ ನಿಷ್ಕಾಮ ಕರ್ಮಯೋಗವು ಸಾಧನೆಯಲ್ಲಿ ಸುಲಭವಾದುದರಿಂದ ಉತ್ಕೃಷ್ಟವಾಗಿದೆ ||೨||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  5
ಶ್ಲೋಕ  1
ಕರ್ಮಸನ್ಯಾಸಯೋಗಃ-ಅರ್ಜುನ ಉವಾಚ
ಸನ್ಯಾಸಂ ಕರ್ಮಾಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ|
ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್||
ಅರ್ಜುನನು ಹೇಳಿದನು-ಹೇ ಕೃಷ್ಣ! ನೀನು ಕರ್ಮಗಳ ಸಂನ್ಯಾಸವನ್ನೂ ಮತ್ತೆ ಪುನಃ ಕರ್ಮಯೋಗವನ್ನೂ ಪ್ರಶಂಸಿಸುತ್ತಿರುವೆ.ಆದ್ದರಿಂದ ಇವೆರಡರಲ್ಲಿ ಯಾವುದಾದರೊಂದು ನಿಶ್ಚಿತವಾದ, ಶ್ರೇಯಸ್ಕರವಾದ ಸಾಧನವಾಗಿದೆಯೋ ಅದನ್ನು ನನಗೆ ಹೇಳು.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  42
ತಸ್ಮಾದಜ್ಞಾನಸಂಭೂತಂ ಹೃತ್ಸ್ಥಂ ಜ್ಞಾನಾಸಿನಾತ್ಮನಃ|
ಛಿತ್ವೈನಂ ಸಂಶಯಂ ಯೋಗಮ್ ಆತಿಷ್ಠೋತ್ತಿಷ್ಠ ಭಾರತ||
ಆದುದರಿಂದ, ಎಲೈ ಭರತವಂಶಜನಾದ ಅರ್ಜುನ ! ನೀನು ಸಮತ್ವ ಬುದ್ಧಿರೂಪೀ ಕರ್ಮಯೋಗದಲ್ಲಿ ಏಕಾಗ್ರತೆ ಉಳ್ಳವನಾಗು ಮತ್ತು ಅಜ್ಞಾನದಿಂದ ಉಂಟಾಗಿರುವ ಹಾಗೂ ಮನಸ್ಸಿನಲ್ಲಿ ಅಡಗಿರುವ ಈ ನಿನ್ನ ಸಂಶಯವನ್ನು ಜ್ಞಾನರೂಪೀ ಕತ್ತಿಯಿಂದ ಕತ್ತರಿಸಿ ಯುದ್ಧ ಮಾಡಲು ಸಿದ್ಧನಾಗಿ ನಿಲ್ಲು||೪೨|| ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಜ್ಞಾನಕರ್ಮಸಂನ್ಯಾಸಯೋಗೋ ನಾಮ ಚತುರ್ಥೋಧ್ಯಾಯಃ ||೪||
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
ಹರಿಃ ಓಂ ತತ್ಸತ್ (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  41
ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್|
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ||
ಎಲೈ ಧನಂಜಯ ! ಯಾರು ಕರ್ಮಗಳನ್ನೆಲ್ಲಾ ಸಮತ್ವ ಬುದ್ಧಿರೂಪೀ ಯೋಗದಿಂದ ಭಗವದರ್ಪಣ ಮಾಡಿದ್ದಾರೆಯೋ ಮತ್ತು ಯಾರ ಸಂಶಯಗಳೆಲ್ಲಾ ಜ್ಞಾನದ ಮೂಲಕ ನಾಶವಾಗಿ ಹೋಗಿವೆಯೋ ಅಂತಹ ಪರಮಾತ್ಮ ಪರಾಯಣನಾದವನನ್ನು ಕರ್ಮಗಳು ಬಂಧಿಸಲಾರವು||೪೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  40
ಅಜ್ಞಶ್ಚಾಶ್ರದ್ಧದಾನಶ್ಚ ಸಂಶಯಾತ್ಮಾ ವಿನಶ್ಯತಿ|
ನಾಯಂ ಲೋಕೋsಸ್ತಿ ನ ಪರೋನ ಸುಖಂ ಸಂಶಯಾತ್ಮನಃ||
ಭಗವದ್ವಿಷಯಗಳನ್ನು ತಿಳಿಯದ ಅಜ್ಞಾನಿ ಹಾಗೂ ಶ್ರದ್ಧೆಯಿಲ್ಲದವನೂ ಹಾಗೂ ಸಂಶಯ ಸ್ವಭಾವದವನೂ ಪಾರಮಾರ್ಥಿಕವಾಗಿ ಭ್ರಷ್ಟನಾಗುತ್ತಾನೆ. ಅಂತಹ ಸಂಶಯ ಪಡುವ ಪುರುಷನಿಗಾದರೋ ಸುಖವೂ ಇಲ್ಲ, ಈ ಲೋಕವೂ ಇಲ್ಲ ಮತ್ತು ಪರಲೋಕವೂ ಇಲ್ಲ ಅರ್ಥಾತ್ ಇಹ- ಪರ ಎರಡೂ ಕಡೆಗಳಲ್ಲಿಯೂ ಭ್ರಷ್ಟನಾಗಿ ಹೋಗುತ್ತಾನೆ.||೪೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  39
ಶ್ರದ್ಧಾವಾಂಲ್ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ|
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ||
ಜಿತೇಂದ್ರಿಯನೂ, ತತ್ಪರನೂ ಮತ್ತು ಶ್ರದ್ಧಾವಂತನೂ ಆದವನು ಜ್ಞಾನವನ್ನು ಪಡೆಯುತ್ತಾನೆ. ಜ್ಞಾನವನ್ನು ಪಡೆದುಕೊಂಡ ಕೂಡಲೇ ಭಗವತ್ಸಾಕ್ಷಾತ್ಕಾರವೆಂಬ ಪರಮ ಶಾಂತಿಯನ್ನು ಪಡೆದುಕೊಳ್ಳುತ್ತಾನೆ||೩೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  38
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ||
ಈ ಜಗತ್ತಿನಲ್ಲಿ ಜ್ಞಾನಕ್ಕೆ ಸರಿಸಮಾನ ಪವಿತ್ರವಾದ ವಸ್ತು ನಿಃಸಂದೇಹವಾಗಿಯೂ ಬೇರೆ ಯಾವುದು ಸಹ ಇರುವುದಿಲ್ಲ. ಆ ಜ್ಞಾನವನ್ನು ಕಾಲಾಂತರದಲ್ಲಿ ಸಾಧನೆಯ ಪರಿಪಕ್ವಾವಸ್ಥೆಯಿಂದ ತಾನೇ ಸ್ವತಃ ಸಮತ್ವ ಬುದ್ಧಿರೂಪೀ ಕರ್ಮಯೋಗದಿಂದ ಒಳ್ಳೆಯ ಶುದ್ಧಾಂತಃಕರಣವುಳ್ಳ ಪುರುಷನು ಆತ್ಮನಲ್ಲಿ ಅನುಭವ ಪಡೆಯುತ್ತಾನೆ ||೩೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  37
ಯಥೈಧಾಂಸಿ ಸಮಿದ್ಧೋsಗ್ನಿರ್ಭಸ್ಮಸಾತ್ಕುರುತೇsರ್ಜುನ|
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ ||
ಎಲೈ ಅರ್ಜುನ ! ಯಾವ ರೀತಿ ಪ್ರಜ್ವಲಿಸುವ ಅಗ್ನಿಯು ಉರುವಲನ್ನು (ಸೌದೆ) ಸುಟ್ಟು ಬೂದಿಯನ್ನಾಗಿ ಮಾಡಿಬಿಡುವುದೋ, ಅದರಂತೆಯೇ ಜ್ಞಾನರೂಪೀ ಅಗ್ನಿಯೂ ಸಕಲ ಕರ್ಮಗಳನ್ನು ಭಸ್ಮಮಯವಾಗಿ ಮಾಡಿಬಿಡುವುದು ||೩೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  36
ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ|
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ ||
ಆದರೆ, ನೀನು ಎಲ್ಲಾ ಪಾಪಿಗಳಿಗಿಂತಲೂ ಸಹ ಹೆಚ್ಚು ಪಾಪ ಮಾಡಿದವನೇ ಆಗಿದ್ದರೂ ಸಹ ಜ್ಞಾನರೂಪೀ ದೋಣಿಯ ಮೂಲಕ ನಿಃಸಂದೇಹವಾಗಿ ಸಮಸ್ತ ಪಾಪರೂಪೀ ಸಮುದ್ರವನ್ನು ಚೆನ್ನಾಗಿ ದಾಟಿ ಪಾರಾಗುವೆ||೩೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  35
ಯಜ್ಜ್ಞಾತ್ತ್ವಾ ನ ಪುನರ್ಮೋಹಮ್ ಏವಂ ಯಾಸ್ಯಸಿ ಪಾಂಡವ|
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ||
ಯಾವುದನ್ನು ತಿಳಿದುಕೊಂಡರೆ ನೀನು ಪುನಃ ಈ ರೀತಿ ಮೋಹಕ್ಕೆ ಒಳಗಾಗುವದಿಲ್ಲವೋ ಎಲೈ ಅರ್ಜುನ ! ಆ ಜ್ಞಾನದ ಮೂಲಕ ಸರ್ವವ್ಯಾಪೀ ಅನಂತ ಚೇತನ ರೂಪನಾದ ಆತ್ಮನಲ್ಲಿ ಅರ್ಥಾತ್ ನಿನ್ನ ಅಂತರ್ಗತವಾದ ಸಮಷ್ಟಿ ಬುದ್ಧಿಯಿಂದ ನಿನ್ನಲ್ಲೇ ಎಲ್ಲಾ ಜೀವಿಗಳನ್ನೂ ಕಾಣುವೆ. ಮತ್ತು ಅನಂತರ ನನ್ನಲ್ಲಿ ಅರ್ಥಾತ್ ಸಚ್ಚಿದಾನಂದ ಸ್ವರೂಪದಲ್ಲಿ ಒಂದೇ ಭಾವದಿಂದ ಸಚ್ಚಿದಾನಂದಮಯವನ್ನೇ ನೋಡುವೆ ||೩೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  34
ಯಜ್ಜ್ಞಾತ್ತ್ವಾ ನ ಪುನರ್ಮೋಹಮ್
ಏವಂ ಯಾಸ್ಯಸಿ ಪಾಂಡವ|
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ||
ಯಾವುದನ್ನು ತಿಳಿದುಕೊಂಡರೆ ನೀನು ಪುನಃ ಈ ರೀತಿ ಮೋಹಕ್ಕೆ ಒಳಗಾಗುವದಿಲ್ಲವೋ ಎಲೈ ಅರ್ಜುನ ! ಆ ಜ್ಞಾನದ ಮೂಲಕ ಸರ್ವವ್ಯಾಪೀ ಅನಂತ ಚೇತನ ರೂಪನಾದ ಆತ್ಮನಲ್ಲಿ ಅರ್ಥಾತ್ ನಿನ್ನ ಅಂತರ್ಗತವಾದ ಸಮಷ್ಟಿ ಬುದ್ಧಿಯಿಂದ ನಿನ್ನಲ್ಲೇ ಎಲ್ಲಾ ಜೀವಿಗಳನ್ನೂ ಕಾಣುವೆ. ಮತ್ತು ಅನಂತರ ನನ್ನಲ್ಲಿ ಅರ್ಥಾತ್ ಸಚ್ಚಿದಾನಂದ ಸ್ವರೂಪದಲ್ಲಿ ಒಂದೇ ಭಾವದಿಂದ ಸಚ್ಚಿದಾನಂದಮಯವನ್ನೇ ನೋಡುವೆ ||೩೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  33
ಶ್ರೇಯಾನ್ ದ್ರವ್ಯಮಯಾದ್ಯಜ್ಞಾಜ್ಜ್ಞಾನಯಜ್ಞಃ ಪರಂತಪ|
ಸರ್ವಂ ಕರ್ಮಾಖಿಲಂ ಪಾರ್ಥಜ್ಞಾನೇ ಪರಿಸಮಾಪ್ಯತೇ||
ಎಲೈ ಅರ್ಜುನ ಸಾಂಸಾರಿಕ ವಸ್ತುಗಳಿಂದ ಸಿದ್ಧಿಸುವಂತಹ ಯಜ್ಞಕ್ಕಿಂತ ಜ್ಞಾನರೂಪೀ ಯಜ್ಞವು ಎಲ್ಲಾ ರೀತಿಯಿಂದಲೂ ಶ್ರೇಷ್ಠ. ಏಕೆಂದರೆ ಎಲೈ ಪಾರ್ಥ ಎಲ್ಲಾ ಸರ್ವಾಂಗೀಣ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದುತ್ತವೆ ಅರ್ಥಾತ್ ಜ್ಞಾನವು ಅವುಗಳ ಪರಾಕಾಷ್ಠತೆಯಾಗಿದೆ||೩೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  32
ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ|
ಕರ್ಮಜಾನ್ವಿದ್ಧಿ ತಾನ್ ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ ||
ಹೀಗೆ ಅನೇಕ ಪ್ರಕಾರದ ಯಜ್ಞಗಳು ವೇದದ ವಾಣಿಯಲ್ಲಿ ವಿಸ್ತಾರವಾಗಿ ವಿವರಿಸಲ್ಪಟ್ಟಿವೆ.ಅವುಗಳೆಲ್ಲವನ್ನೂ
ಶರೀರ, ಮನಸ್ಸು ಮತ್ತು ಇಂದ್ರಿಯಗಳ ಕ್ರಿಯೆಯ ಮೂಲಕವೇ ಉತ್ಪತ್ತಿಯಾದವು ಎಂದು ತಿಳಿ. ಈ ರೀತಿ ಯಥಾರ್ಥವಾಗಿ ತಿಳಿದುಕೊಂಡು ನಿಷ್ಕಾಮಕರ್ಮಯೋಗದ ಮೂಲಕ ಸಂಸಾರ ಬಂಧನದಿಂದ ಮುಕ್ತನಾಗಿ ಹೋಗುವೆ. ||೩೨||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  31
ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್|
ನಾಯಂ ಲೋಕೋsಸ್ತ್ಯಯಜ್ಞಸ್ಯ ಕುತೋsನ್ಯಃಕುರುಸತ್ತಮಃ||೩೧||
ಎಲೈ ಕುರುಶ್ರೇಷ್ಠನಾದ ಅರ್ಜುನ ! ಯಜ್ಞಗಳ ಪರಿಣಾಮರೂಪೀ ಜ್ಞಾನಾಮೃತವನ್ನು ಸವಿಯುವ ಯೋಗಿಗಳು ಸನಾತನವಾದ ಪರಬ್ರಹ್ಮ ಪರಮಾತ್ಮನನ್ನು ಪಡೆಯುತ್ತಾರೆ ಮತ್ತು ಯಜ್ಞವನ್ನು ಮಾಡದವರಿಗೆ ಈ ಮಾನವ ಲೋಕವೂ ಸಹ ಸುಖದಾಯಕವಾಗುವುದಿಲ್ಲ ಅಂದ ಮೇಲೆ ಪರಲೋಕವು ಹೇಗೆ ತಾನೆ ಸುಖಕರವಾಗಬಲ್ಲದು?||೩೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  30
ಅಪರೇ ನಿಯತಾಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ|
ಸರ್ವೇsಪ್ಯೇತೇಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ||೩೦||
ಇನ್ನು ಬೇರೆ ನಿಯಮಿತ ಆಹಾರ ಸೇವನೆ ಮಾಡುವ ಯೋಗಿಗಳು ಪ್ರಾಣವನ್ನು ಪ್ರಾಣದಲ್ಲಿಯೇ ಹೋಮ ಮಾಡುತ್ತಾರೆ. ಈ ಪ್ರಕಾರ ಯಜ್ಞಗಳ ಮೂಲಕ ಯಾರ ಪಾಪಗಳು ನಾಶವಾಗಿ ಹೋಗಿವೆಯೋ ಅಂತಹವರೆಲ್ಲರೂ ಸಹ ಯಜ್ಞಗಳನ್ನೂ ತಿಳಿದವರಾಗಿರುತ್ತಾರೆ||೩೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  29
ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇsಪಾನಂ ತಥಾಪರೇ|
ಪ್ರಾಣಾಪಾನಗತೀ ರುಧ್ವಾ ಪ್ರಾಣಾಯಾಮಪರಾಯಣಾಃ||೨೯
ಇನ್ನು ಬೇರೆ ಯೋಗಿಗಳು - ಅಪಾನ ವಾಯುವಿನಲ್ಲಿ ಪ್ರಾಣವಾಯು ಹೋಮ ಮಾಡುತ್ತಾರೆ. ಅದರಂತೆಯೇ ಮತ್ತೆ ಬೇರೆ ಯೋಗಿಗಳು ಪ್ರಾಣವಾಯುವಿನಲ್ಲಿ ಅಪಾನ ವಾಯುವನ್ನು ಹೋಮ ಮಾಡುತ್ತಾರೆ ಹಾಗೂ ಬೇರೆ ಯೋಗಿಗಳು ಪ್ರಾಣ ಮತ್ತು ಅಪಾನಗಳ ಗತಿಯನ್ನು ತಡೆದು ಪ್ರಾಣಾಯಾಮದ ಪರಾಯಣರಾಗುತ್ತಾರೆ||೨೯||(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  28
ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ|
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ||28||
ಮತ್ತೆ ಹಲವರು ಈಶ್ವರಾರ್ಪಣ ಬುದ್ದಿಯಿಂದ ಲೋಕೋದ್ಧಾರಕ್ಕಾಗಿ ದ್ರವ್ಯಗಳನ್ನು ತೊಡಗಿಸುತ್ತಾರೆ, ಅದರಂತೆಯೇ ಅನೇಕರು ಸ್ವಧರ್ಮಪಾಲನಾರೂಪೀ ತಪೋಯಜ್ಞವನ್ನು ಮಾಡುವುದುಂಟು, ಮತ್ತೆ ಅನೇಕರು ಅಷ್ಟಾಂಗ ಯೋಗರೂಪೀ ಯಜ್ಞವನ್ನು ಮಾಡುವುದುಂಟು, ಇನ್ನು ಕೆಲವರು ಅಹಿಂಸಾದಿ ಕಠಿಣ ವ್ರತಗಳಿಂದ ಕೂಡಿದ ಪ್ರಯತ್ನಶೀಲ ವ್ಯಕ್ತಿಗಳು ಭಗವಂತನ ನಾಮ- ಜಪ ಹಾಗೂ ಭಗವತ್ಸಾಕ್ಷಾತ್ಕಾರದ ವಿಷಯಗಳ ಶಾಸ್ತ್ರಾಧ್ಯಯನ ರೂಪೀ ಜ್ಞಾನ ಯಜ್ಞ ಮಾಡುವುದುಂಟು||೨೮|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  27
ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ|
ಆತ್ಮ ಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ||27||
ಬೇರೆ ಯೋಗಿಗಳು ಸಂಪೂರ್ಣವಾಗಿ ಇಂದ್ರಿಯಗಳ ಯತ್ನಗಳನ್ನು ಹಾಗೂ ಪ್ರಾಣದ ಸಮಸ್ತ ಕ್ರಿಯೆಗಳನ್ನು ಜ್ಞಾನದಿಂದ ಪ್ರಕಾಶಗೊಂಡ ಆತ್ಮ- ಸಂಯಮರೂಪೀ ಯೋಗಾಗ್ನಿಯಲ್ಲಿ ಹೋಮ ಮಾಡುತ್ತಾರೆ||೨೭|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  26
ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ|
ಶಬ್ದಾದೀನ್ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ||26||
ಇನ್ನು ಬೇರೆ ಯೋಗಿಗಳು ಶ್ರೋತ್ರಾದಿಗಳಾದ ಇಂದ್ರಿಯಗಳನ್ನೆಲ್ಲಾ ಸಂಯಮ ಅರ್ಥಾತ್ ಸ್ವಾಧೀನತಾರೂಪೀ ಅಗ್ನಿಯಲ್ಲಿ ಹೋಮ ಮಾಡುತ್ತಾರೆ. ಅಂದರೆ ಇಂದ್ರಿಯಗಳನ್ನು ವಿಷಯಗಳಿಂದ ತಡೆದು ತಮ್ಮ ವಶಮಾಡಿಕೊಳ್ಳುತ್ತಾರೆ.ಮತ್ತೆ ಹಲವಾರು ಯೋಗಿಗಳು ಶಬ್ದಾದಿ ವಿಷಯಗಳನ್ನು ಇಂದ್ರಿಯರೂಪೀ ಅಗ್ನಿಯಲ್ಲಿ ಹೋಮ ಮಾಡುತ್ತಾರೆ ಅರ್ಥಾತ್ ರಾಗ-ದ್ವೇಷ ರಹಿತವಾದ ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸುತ್ತಿದ್ದರೂ ಸಹ ಭಸ್ಮರೂಪ ಮಾಡುತ್ತಾರೆ||೨೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  25
ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ|
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ||೨೫||
ಕೆಲವು ಯೋಗಿಗಳು ದೇವತೆಗಳ ಉಪಾಸನಾ ರೂಪೀ ಯಜ್ಞವನ್ನೇ ಚೆನ್ನಾಗಿ ಅನುಷ್ಠಾನ ಮಾಡುತ್ತಾರೆ ಮತ್ತೆ ಕೆಲವರು ಜ್ಞಾನಿಗಳಾದವರು ಪರಬ್ರಹ್ಮ ಪರಮಾತ್ಮರೂಪೀ ಅಗ್ನಿಯಲ್ಲಿ ಯಜ್ಞದ ಮೂಲಕವೇ ಯಜ್ಞವನ್ನು ಹೋಮ ಮಾಡುತ್ತಾರೆ.||೨೫|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  24
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್|
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮಸಮಾಧಿನಾ||೨೪||
ಯಜ್ಞಕ್ಕಾಗಿಯೇ ಆಚರಣೆ ಮಾಡುವವರಲ್ಲಿ ಕೆಲವರು ಈ ಭಾವನೆಯಿಂದಲೇ ಯಜ್ಞ ಮಾಡುತ್ತಾರೆ - ಅರ್ಪಣವು ಅರ್ಥಾತ್ ಸ್ರುವ(ತುಪ್ಪದ ಪಾತ್ರೆ ಹಾಗೂ ಉದ್ಧರಣೆ ಇತ್ಯಾದಿಗಳು) ಸಹ ಬ್ರಹ್ಮ ಮತ್ತು ಹವಿಸ್ಸು ಅರ್ಥಾತ್ ಹವನ ಮಾಡುವ ಯೋಗ್ಯ ದ್ರವ್ಯಗಳೂ ಸಹ ಬ್ರಹ್ಮ ಹಾಗೂ ಬ್ರಹ್ಮರೂಪೀ ಅಗ್ನಿಯಲ್ಲಿ ಬ್ರಹ್ಮರೂಪೀ ಕರ್ತೃವಿನಿಂದ ಯಾವುದು ಹೋಮ ಮಾಡಲಾಗಿದೆಯೋ ಅದೂ ಸಹ ಬ್ರಹ್ಮವೇ ಆದುದರಿಂದ ಬ್ರಹ್ಮರೂಪೀ ಕರ್ಮದಲ್ಲಿ ಸಮಾಧಿಸ್ಥನಾಗಿರುವ ಆ ಪುರುಷನಿಂದ ಯಾವುದು ಪಡೆಯುವುದು ಯೋಗ್ಯಫಲವಾಗಿದೆಯೋ ಅದೂ ಸಹ ಬ್ರಹ್ಮವೇ ಆಗಿದೆ.||೨೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  23
ಗತಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ|
ಯಜ್ಞಯಾಚರತಃ ಕರ್ಮ ಸಮಗ್ರಂ ಪ್ರವಿಲೀಯತೇ||೨೩||
ಆಸಕ್ತಿಯಿಲ್ಲದವನು, ದೇಹಾಭಿಮಾನ ಮತ್ತು ಮಮತೆ ಇಲ್ಲದವನು ನಿರಂತರ ಪರಮಾತ್ಮನ ಜ್ಞಾನದಲ್ಲಿ ಸ್ಥಿರವಾದ ಮನಸ್ಸುಳ್ಳವನು ಈ ರೀತಿ ಕೇವಲ ಯಜ್ಞಕ್ಕಾಗಿಯೇ ಆಚರಣೆ ಮಾಡುತ್ತಾ ಇರುವವನ ಎಲ್ಲಾ ಕರ್ಮಗಳೂ ಚೆನ್ನಾಗಿ ಲೀನಗೊಳ್ಳುತ್ತವೆ||೨೩|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  22
ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ|
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ||22||
ತಾನಾಗಿಯೇ ಏನು ದೊರೆಯುತ್ತದೆಯೋ ಅದರಲ್ಲಿ ಸಂತುಷ್ಟನಾಗಿರುವವನು ಮತ್ತು ಹರ್ಷ ಶೋಕಾದಿ ದ್ವಂದ್ವಗಳಿಂದ ದೂರಾದವನು ಹಾಗೂ ಮತ್ಸರ ಅರ್ಥಾತ್ ಅಸೂಯೆಯಿಲ್ಲದವನು ಮತ್ತು ಸಿದ್ಧಿ ಹಾಗೂ ಅಸಿದ್ಧಿಯಲ್ಲಿ ಸಮಾನ ಭಾವನೆಯುಳ್ಳ ಪುರುಷನು ಕರ್ಮಗಳನ್ನು ಮಾಡಿದರೂ ಸಹ ಬಂಧಿತನಾಗುವುದಿಲ್ಲ.
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  21
ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ|
ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್||೨೧||
ಅಂತಃಕರಣ ಶರೀರಾದಿಗಳನ್ನು ಜಯಿಸಿರುವವನು ಹಾಗೂ ಎಲ್ಲಾ ಭೋಗವಸ್ತುಗಳನ್ನೂ ತ್ಯಜಿಸಿರುವವನೂ ಅಂತಹ ಆಸೆ-ಆಕಾಂಕ್ಷೆಗಳನ್ನು ಬಿಟ್ಟವರು ಕೇವಲ ಶರೀರ ನಿರ್ವಹಣೆಗಾಗಿ ಕರ್ಮವನ್ನು ಮಾಡುತ್ತಾ ಇದ್ದರೂ ಸಹ ಪಾಪವನ್ನು ಪಡೆಯುವ ದೋಷಕ್ಕೆ ಗುರಿಯಾಗುವುದಿಲ್ಲ||೨೧|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  20
ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ|
ಕರ್ಮಣ್ಯಭಿಪ್ರವೃತ್ತೋsಪಿ ನೈವ ಕಿಂಚಿತ್ಕರೋತಿ ಸಃ||
ಯಾವ ಪುರುಷನು ಸಂಸಾರದ ಸಂಬಂಧವಿಲ್ಲದೆ ಸದಾ ಪರಮಾನಂದ ಪರಮಾತ್ಮನಲ್ಲಿಯೇ ನಿತ್ಯತೃಪ್ತನಾಗಿರುವವನು ಕರ್ಮ ಮತ್ತು ಅದರ ಆಸಕ್ತಿಯನ್ನು ತ್ಯಜಿಸಿ ಕರ್ಮದಲ್ಲಿ ಚೆನ್ನಾಗಿ ನಿರತನಾಗಿದ್ದರೂ ಸಹ ವಾಸ್ತವದಲ್ಲಿ ಏನನ್ನೂ ಮಾಡುವುದಿಲ್ಲ||೨೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  19
ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪ ವರ್ಜಿತಾಃ|
ಜ್ನಾನಾಗ್ನದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ||19||
ಯಾರ ಕರ್ಮಗಳೆಲ್ಲಾ ಸಂಪೂರ್ಣವಾಗಿ ಶಾಸ್ತ್ರ ಸಮ್ಮತವಾಗಿದ್ದು ಆಸೆ- ಆಕಾಂಕ್ಷೆ ಮತ್ತು ಸಂಕಲ್ಪಗಳಿಂದ ರಹಿತವಾಗಿರುತ್ತದೆಯೋ ಅಂತಹ ಆ ಜ್ಞಾನರೂಪೀ ಅಗ್ನಿಯಿಂದ ಅವನ ಕರ್ಮಗಳೆಲ್ಲಾ ಭಸ್ಮವಾಗಿರುವ ಪುರುಷನನ್ನು ಜ್ಞಾನಿಗಳೂ ಸಹ ಪಂಡಿತ ಎಂದು ಹೇಳುತ್ತಾರೆ||೧೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  18
ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ|
ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್||೧೮||
ಯಾವ ಪುರುಷನು ಕರ್ಮದಲ್ಲಿ ಅರ್ಥಾತ್ ಅಹಂಕಾರವಿಲ್ಲದೆ ಮಾಡಲ್ಪಟ್ಟ ಎಲ್ಲಾ ಪ್ರಯತ್ನಗಳಲ್ಲಿ ಮತ್ತು ಅಕರ್ಮ ಅರ್ಥಾತ್ ವಾಸ್ತವವಾಗಿ ಅವುಗಳ ಕರ್ತೃತ್ವದ ಅಭಾವವನ್ನು ನೋಡುತ್ತಾನೆಯೋ ಹಾಗೂ ಯಾವ ಪುರುಷನು ಅಕರ್ಮದಲ್ಲಿ ಅರ್ಥಾತ್ ಅಜ್ಞಾನೀ ಪುರುಷರಿಂದ ಮಾಡಲ್ಪಟ್ಟ ಎಲ್ಲಾ ಕ್ರಿಯೆಗಳ ತ್ಯಾಗದಲ್ಲಿಯೂ ಸಹ ಕರ್ಮವನ್ನು ಅರ್ಥಾತ್ ತ್ಯಾಗರೂಪೀ ಕ್ರಿಯೆಯನ್ನು ನೋಡುವನೋ ಆ ಪುರುಷನು ಮನುಷ್ಯರಲ್ಲಿ ಬುದ್ಧಿವಂತನು ಮತ್ತು ಯೋಗಿಯು ಎಲ್ಲಾ ಕರ್ಮಗಳನ್ನು ಮಾಡುವವನು ||೧೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  17
ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ |
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ||೧೭||
ಕರ್ಮದ ಸ್ವರೂಪವನ್ನೂ, ಅಕರ್ಮದ ಸ್ವರೂಪವನ್ನೂ ಮತ್ತು ವಿಕರ್ಮ ಅರ್ಥಾತ್ ನಿಷಿದ್ಧ ಕರ್ಮಗಳ ಸ್ವರೂಪವನ್ನೂ ಸಹ ತಿಳಿದುಕೊಳ್ಳಬೇಕು, ಏಕೆಂದರೆ ಕರ್ಮದ ಗತಿಯು ಗಹನವಾಗಿದೆ ||೧೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  16
ಕಿಂ ಕರ್ಮ ಕಿಮಕರ್ಮೇತಿ ಕವಯೋsಪ್ಯತ್ರ ಮೋಹಿತಾಃ |
ತತ್ತೇ ಕರ್ಮ ಪ್ರವಕ್ಷಾಮಿ ಯಜ್ಞಾತ್ವಾ ಮೋಕ್ಷಸೇsಶುಭಾತ್||೧೬||
ಕರ್ಮ ಯಾವುದು? ಅಕರ್ಮ ಯಾವುದು? ಹೀಗೆ ವಿಷಯಗಳಲ್ಲಿ ಕುಶಲಮತಿಗಳೂ ಸಹ ಮತಿಭ್ರಮೆಗೊಳಗಾಗಿದ್ದಾರೆ. ಆದುದರಿಂದ ನಾನು ಆ ಕರ್ಮ ಅರ್ಥಾತ್ ಕರ್ಮಗಳ ತತ್ವವನ್ನು ನಿನಗೋಸ್ಕರ ಚೆನ್ನಾಗಿ ಹೇಳುವೆನು.ಅದನ್ನು ತಿಳಿದುಕೊಂಡು ನೀನು ಅಶುಭ ಅರ್ಥಾತ್ ಕರ್ಮಬಂಧನದಿಂದ ಬಿಡುಗಡೆ ಹೊಂದುವೆ ||೧೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  15
ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ|
ಕುರು ಕರ್ಮೈವ ತಸ್ಮಾತ್ವಂ ಪೂರ್ವೈಃ ಪೂರ್ವತರಂ ಕೃತಮ್||
ಈ ರೀತಿ ತಿಳಿದುಕೊಂಡೇ ಪೂರ್ವಕಾಲದವರಾದ ಮುಮುಕ್ಷು ಪುರುಷರಿಂದಲೂ ಸಹ ಕರ್ಮ ಮಾಡಲ್ಪಟ್ಟಿದೆ.ಆದುದರಿಂದ ನೀನೂ ಸಹ ಪೂರ್ವಜರಿಂದ ನಿರಂತರ ಮಾಡಲ್ಪಟ್ಟ ಕರ್ಮವನ್ನೇ ಮಾಡು ||೧೫ ||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  14
ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ |
ಇತಿ ಮಾಂ ಯೋsಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ||೧೪||
ಕರ್ಮಗಳ ಫಲದಲ್ಲಿ ನನಗೆ ಇಚ್ಛೆಯಿರುವುದಿಲ್ಲ, ಆದುದರಿಂದ ನನ್ನನ್ನು ಕರ್ಮಗಳು ಅಂಟಿಕೊಳ್ಳುವುದಿಲ್ಲ ಎಂದು ಯಾರು ನನ್ನನ್ನು ಯಥಾರ್ಥವಾಗಿ ತಿಳಿದುಕೊಳ್ಳುತ್ತಾನೆಯೋ ಅವನೂ ಸಹ ಕರ್ಮಗಳಿಂದ ಬಂಧಿಸಲ್ಪಡುವುದಿಲ್ಲ||೧೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  13
ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ|
ತಸ್ಯ ಕರ್ತಾರಮಪಿ ಮಾಂ ವಿಧ್ಯ ಕರ್ತಾರಮವ್ಯಯಮ್||೧೩||
ಗುಣ ಮತ್ತು ಕರ್ಮಗಳ ವಿಭಾಗದಿಂದ ಬ್ರಾಹ್ಮಣ, ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎಂದು ನನ್ನ ಮೂಲಕ ರಚಿಸಲ್ಪಟ್ಟಿವೆ. ಅವುಗಳ ಕರ್ತೃವಾದರೂ ಸಹ ಅವಿನಾಶೀ ಪರಮೇಶ್ವರನಾದ ನನ್ನನ್ನು ನೀನು ವಾಸ್ತವವಾಗಿಯೂ ಕರ್ತೃವಲ್ಲವೆಂದೇ ತಿಳಿದುಕೋ||೧೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  12
ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ |
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ ||೧೨||
(ಮತ್ತು ಯಾರು ನನ್ನನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲವೋ ಅವರು )
ಈ ಮಾನವ ಲೋಕದಲ್ಲಿ ಕರ್ಮಗಳ ಫಲವನ್ನು ಬಯಸುತ್ತಾ ದೇವತೆಗಳನ್ನು ಆರಾಧಿಸುತ್ತಾರೆ. ಏಕೆಂದರೆ ಅವರ ಕರ್ಮಗಳಿಂದ ಉತ್ಪತ್ತಿಯಾದ ಸಿದ್ಧಿಯೂ ಸಹ ಬಹು ಬೇಗ ಉಂಟಾಗುತ್ತದೆ. ಆದರೆ ಅವರಿಗೆ ನನ್ನ ಸಾಕ್ಷಾತ್ಕಾರ ಪ್ರಾಪ್ತಿಯಾಗುವುದಿಲ್ಲ. ಪ್ರಯುಕ್ತ ನೀನು ನನ್ನನ್ನು ಎಲ್ಲಾ ರೀತಿಯಿಂದಲೂ ಭಜಿಸು||೧೨||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  11
ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ||೧೧||
ಎಲೈ ಅರ್ಜುನ ! ಯಾರು ನನ್ನನ್ನು ಹೇಗೆ ಭಜಿಸುತ್ತಾರೆಯೋ, ನಾನೂ ಸಹ ಅವರನ್ನು ಅದೇ ರೀತಿ ಭಜಿಸುತ್ತೇನೆ. ಈ ರಹಸ್ಯವನ್ನು ತಿಳಿದುಕೊಂಡ ಬುದ್ಧಿವಂತರಾದ ಮಾನವರು ಸಮೂಹವು ಎಲ್ಲಾ ರೀತಿಯಿಂದಲೂ ನನ್ನ ಮಾರ್ಗಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ||೧೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  10
ವೀತರಾಗಭಯಕ್ರೋಧಾಃ ಮನ್ಮಯಾ ಮಾಮುಪಾಶ್ರಿತಾಃ|
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ||10||
ಮೊದಲು ಯಾರ ರಾಗ,ಭಯ ಮತ್ತು ಕ್ರೋಧ ಸರ್ವಥಾ ನಷ್ಟವಾಗಿದೆಯೋ ಮತ್ತು ಯಾರು ನನ್ನಲ್ಲಿ ಅನನ್ಯ ಪ್ರೇಮಪೂರ್ವಕ ಸ್ಥಿತರಾಗಿರುತ್ತಾರೋ ಅಂತಹ ನನ್ನ ಆಶ್ರಿತರಾಗಿರುವ , ಅನೇಕ ಭಕ್ತರು (ಹಿಂದಿನ ಶ್ಲೋಕದಲ್ಲಿ ತಿಳಿಸಿರುವ) ಜ್ಞಾನರೂಪೀ ತಪಸ್ಸಿನಿಂದ ಪವಿತ್ರರಾಗಿ ನನ್ನ ಸ್ವರೂಪವನ್ನು ಹೊಂದಿದ್ದಾರೆ.||೧೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  9
ಜನ್ಮ ಕರ್ಮ ಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ವತಃ|
ತ್ಯಕ್ತ್ವಾದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋ$ರ್ಜುನ||೯||
ಹೇ ಅರ್ಜುನನೇ! ನನ್ನ ಜನ್ಮ ಮತ್ತು ಕರ್ಮಗಳು ದಿವ್ಯ ಅರ್ಥಾತ್ ನಿರ್ಮಲ ಹಾಗೂ ಅಲೌಕಿಕವಾಗಿವೆ. ಈ ಪ್ರಕಾರವಾಗಿ ಯಾವ ಮನುಷ್ಯನು ತತ್ವದಿಂದ ತಿಳಿಯುತ್ತಾನೋ ಅವನು ಶರೀರವನ್ನು ತ್ಯಜಿಸಿ ಪುನರ್ಜನ್ಮವನ್ನು ಪಡೆಯುವುದಿಲ್ಲ. ಆದರೆ ನನ್ನನ್ನೇ ಹೊಂದುತ್ತಾನೆ.||೯||

(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  8
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರತಾಮ್ |
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||೮||
ಸಾಧು ಸತ್ಪುರುಷರನ್ನು ಉದ್ಧಾರ ಮಾಡುವುದಕ್ಕಾಗಿಯೂ, ದುಷ್ಕರ್ಮಿಗಳನ್ನು ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮವನ್ನು ಸಂಸ್ಥಾಪನೆ ಮಾಡುವುದಕ್ಕಾಗಿಯೂ ಯುಗ-ಯುಗಳಲ್ಲಿ ಅವತಾರ ತಾಳುತ್ತೇನೆ ||೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  7
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||೭||
ಎಲೈ ಅರ್ಜುನ ! ಧರ್ಮಕ್ಕೆ ಚ್ಯುತಿ ಉಂಟಾದಾಗಲೆಲ್ಲಾ ಮತ್ತು ಅಧರ್ಮವು ಹೆಚ್ಚಿದಾಗಲೆಲ್ಲಾ ನಾನು ನನ್ನ ರೂಪವನ್ನು ರಚಿಸಿಕೊಳ್ಳುತ್ತೇನೆ ಅರ್ಥಾತ್ ಅವತಾರ ತಾಳುತ್ತೇನೆ.ಸಾಕಾರ ರೂಪದಿಂದ ಎಲ್ಲರಿಗೂ ಗೋಚರಿಸುತ್ತೇನೆ||೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  6
ಅಜೋsಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋsಪಿ ಸನ್ |
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ ||೬||
ನಾನು ಅವಿನಾಶೀ ಸ್ವರೂಪೀ,ಜನ್ಮ ರಹಿತ, ಆದಾಗ್ಯೂ ಸಹ ಹಾಗೂ ಸಮಸ್ತ ಪ್ರಾಣಿಗಳಿಗೂ ಒಡೆಯನಾದರೂ, ನನ್ನ ಪ್ರಕೃತಿಯನ್ನು ಅಧೀನ ಮಾಡಿಕೊಂಡು ನನ್ನ ಯೋಗಮಾಯೆಯಿಂದ ಅವತರಿಸುತ್ತೇನೆ||೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  5
ಶ್ರೀ ಭಗವಾನುವಾಚ
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ |
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ||೫||
ಶ್ರೀ ಕೃಷ್ಣ ಹೇಳಿದನು- ಎಲೈ ಅರ್ಜುನ ! ನನ್ನ ಮತ್ತು ನಿನ್ನ ಅನೇಕ ಜನ್ಮಗಳು ಆಗಿ ಹೋಗಿವೆ. ಆದರೆ ಎಲೈ ಅರ್ಜುನ ! ಅವುಗಳನ್ನೆಲ್ಲಾ ನೀನು ತಿಳಿಯಲಾರೆ ಮತ್ತು ನಾನುತಿಳಿದಿರುತ್ತೇನೆ.||೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  4
ಅರ್ಜುನ ಉವಾಚ
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ |
ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ||೪||
ಅರ್ಜುನ ಹೇಳಿದನು- ನಿನ್ನ ಜನ್ಮವಾದರೋ ಇತ್ತೀಚಿನದು ಮತ್ತು ಸೂರ್ಯನ ಜನ್ಮವು ಬಹಳ ಪುರಾತನವಾದದ್ದು.ಆದುದರಿಂದ ಈ ಯೋಗವನ್ನು ಕಲ್ಪದ ಆದಿಯಲ್ಲಿ ಹೇಳಿದ್ದೆ ಎಂದು ಹೇಗೆ ತಿಳಿದುಕೊಳ್ಳಲಿ?||೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  3
ಸ ಏವಾಯಂ ಮಯಾ ತೇsದ್ಯ ಯೋಗಃ ಪ್ರೋಕ್ತಃ ಪುರಾತನಃ|
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್||೩||
ಅದೇ ಈ ಪುರಾತನವಾದ ಯೋಗವನ್ನು ಈಗ ನಾನು ನಿನಗೋಸ್ಕರವಾಗಿ ವರ್ಣಿಸಿದ್ದೇನೆ,ಏಕೆಂದರೆ ನೀನು ನನ್ನ ಭಕ್ತನೂ ಮತ್ತು ಪ್ರಿಯ ಸ್ನೇಹಿತನೂ ಆಗಿರುವುದರಿಂದ ಹಾಗೂ ಈ ಯೋಗ ಬಹಳ ಉತ್ತಮ ಮತ್ತು ರಹಸ್ಯ ಅರ್ಥಾತ್ ಮಾರ್ಮಿಕವಾದ ವಿಷಯವಾಗಿದೆ.||೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  2
ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ|
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ||೨||
ಈ ರೀತಿ ಪರಂಪರೆಯಿಂದ ಬಂದಿರುವ ಈ ಯೋಗವನ್ನು ರಾಜರ್ಷಿಗಳು ತಿಳಿದುಕೊಂಡಿದ್ದರು.ಆದರೆ ಎಲೈ ಅರ್ಜುನ ! ಆ ಯೋಗವು ಬಹಳ ಕಾಲದಿಂದ ಈ ಭೂಲೋಕದಲ್ಲಿ ಪ್ರಾಯಶಃ ನಶಿಸಿ ಹೋಗಿತ್ತು||೨|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  4
ಶ್ಲೋಕ  1
ಶ್ರೀ ಪರಮಾತ್ಮನೇ ನಮಃ ಅಥ ಚತುರ್ಥೋಧ್ಯಾಯಃ ಜ್ಞಾನ ಕರ್ಮ ಸಂನ್ಯಾಸಯೋಗಃ- ಶ್ರೀ ಭಗವಾನುವಾಚ
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್|
ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇsಬ್ರವೀತ್||೧||
ಶ್ರೀ ಕ್ರಷ್ಣಪರಮಾತ್ಮ ಹೇಳಿದನು - ಎಲೈ ಅರ್ಜುನ ! ನಾನು ಈ ಅವಿನಾಶಿಯಾದ ಯೋಗವನ್ನು ಕಲ್ಪದ ಆದಿಯಲ್ಲಿ ಸೂರ್ಯನಿಗೆ ಹೇಳಿದೆನು ಮತ್ತು ಸೂರ್ಯನು ತನ್ನ ಮಗ ವೈವಸ್ವತ ಮನುವಿಗೆ ಹೇಳಿದನು ಮತ್ತು ಮನು ತನ್ನ ಮಗ ರಾಜಾ ಇಕ್ಷ್ವಾಕುವಿಗೆ ಹೇಳಿದನು||೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  43
ಏವಂ ಬುದ್ಧೇಃ ಪರಂ ಬುದ್ಧ್ವಾ ಸಂಸ್ತಭ್ಯಾತ್ಮಾನಮಾತ್ಮನಾ|
ಜಹಿ ಶತ್ರುಂ ಮಹಾಬಾಹೋ ಕಾಮರೂಪಂ ದುರಾಸದಮ್||೪೩||
ಈ ಪ್ರಕಾರ ಬುದ್ಧಿಗಿಂತ ಹೆಚ್ಚಿನದು ಅರ್ಥಾತ್ ಸೂಕ್ಷ್ಮ ಹಾಗೂ ಎಲ್ಲಾ ರೀತಿಯಿಂದಲೂ ಬಲಾಢ್ಯ ಮತ್ತು ಶ್ರೇಷ್ಠವಾದುದು ನಿನ್ನ ಆತ್ಮವೆಂದು ತಿಳಿದುಕೊಂಡು ಬುದ್ಧಿಯ ಮೂಲಕ ಮನಸ್ಸನ್ನು ವಶಮಾಡಿಕೊಂಡು ಎಲೈ ಮಹಾಬಾಹುವೇ ! ನಿನ್ನ ಶಕ್ತಿಯನ್ನು ಅರಿತುಕೊಂಡು ಈ ದುರ್ಜಯವಾದ ಕಾಮರೂಪೀ ಶತ್ರುವನ್ನು ನಾಶಮಾಡು||೪೩|| ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮ ವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಕರ್ಮಯೋಗೋ ನಾಮ ತೃತೀಯೋಧ್ಯಾಯಃ||೩||
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  42
ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ|
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ ||೪೨||
(ಇಂದ್ರಿಯಗಳನ್ನು ನಿಗ್ರಹಿಸಿ ಕಾಮರೂಪೀ ವೈರಿಯನ್ನು ಸಂಹಾರ ಮಾಡಲು ನನ್ನಲ್ಲಿ ಶಕ್ತಿಯಿಲ್ಲ ಎಂದು ನೀನು ಭಾವಿಸಿಕೊಂಡರೆ ಅದು ನಿನ್ನ ತಪ್ಪು; ಏಕೆಂದರೆ ಈ ಶರೀರಕ್ಕಿಂತ-)ಇಂದ್ರಿಯಗಳನ್ನು ಹೆಚ್ಚಿನವು ಶ್ರೇಷ್ಠ, ಬಲಯುತ ಮತ್ತು ಸೂಕ್ಷ್ಮ ಎಂದು ಹೇಳುತ್ತಾರೆ ಮತ್ತು ಯಾವುದು ಬುದ್ಧಿಗಿಂತಲೂ ಸಹ ಅತ್ಯಂತ ಹೆಚ್ಚಿನದಾಗಿದೆಯೋ ಅದೇ ಆತ್ಮ ||೪೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  41
ತಸ್ಮಾತ್ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ|
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನ ನಾಶನಮ್||೪೧||
ಆದುದರಿಂದ, ಎಲೈ ಅರ್ಜುನ ! ನೀನು ಮೊದಲು ಇಂದ್ರಿಯಗಳನ್ನು ವಶಮಾಡಿಕೊಂಡು ಜ್ಞಾನ ಮತ್ತು ವಿಜ್ಞಾನಗಳನ್ನು ನಾಶಮಾಡುವ ಈ ಕಾಮರೂಪೀ ಪಾಪಿಯನ್ನು ಖಂಡಿತವಾಗಿಯೂ ನಾಶಮಾಡು.||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  40
ಇಂದ್ರಿಯಾಣಿ ಮನೋ ಬುದ್ದಿರಸ್ಯಾಧಿಷ್ಠಾನಮುಚ್ಯತೇ|
ಏತೈರ್ವಿಮೋಹಯತ್ಯೇಷ ಜ್ಞಾನಮಾವೃತ್ಯ ದೇಹಿನಮ್||೪೦||
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇದರ ವಾಸಸ್ಥಾನಗಳು ಎಂದು ಹೇಳಲ್ಪಟ್ಟಿದೆ. ಈ ಕಾಮವು ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳ ಮೂಲಕ ಜ್ಞಾನವನ್ನು ಆವರಿಸಿಕೊಂಡು ಜೀವಾತ್ಮನನ್ನು ಮೋಹಗೊಳಿಸುತ್ತದೆ.||೪೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  39
ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯ ವೈರಿಣಾ|
ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ||೩೯||
ಎಲೈ ಅರ್ಜುನ ಈ ಅಗ್ನಿಯಂತೆ ಪೂರ್ಣಗೊಳ್ಳದ ಅರ್ಥಾತ್ ಎಂದೆಂದಿಗೂ ತ್ರಪ್ತಿಗೊಳ್ಳದ ಕಾಮರೂಪಿಯಾದ ಜ್ಞಾನಿಗಳ ನಿತ್ಯ ವೈರಿಯಾದ ಇದರಿಂದ ಜ್ಞಾನವು ಮುಚ್ಚಲ್ಪಟ್ಟಿದೆ.||೩೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  38
ಧೂಮೇನಾವ್ರಿಯತೇ ವಹ್ನಿರ್ಯಥಾದರ್ಶೋ ಮಲೇನ ಚ|
ಯಥೋಲ್ಬೇನಾವೃತೋ ಗರ್ಭಸ್ತಥಾ ತೇನೇದಮಾವೃತಮ್||೩೮||
ಯಾವ ರೀತಿ ಹೊಗೆಯಿಂದ ಅಗ್ನಿಯು ಮತ್ತು ಕೊಳೆಯಿಂದ ಕನ್ನಡಿಯು ಜರಾಯುವೆಂಬ ಪೊರೆಯಿಂದ ಗರ್ಭವೂ ಮುಚ್ಚಲ್ಪಡುತ್ತವೆಯೋ ಅದರಂತೆ ಆ ಕಾಮದಿಂದ ಈ ಜ್ಞಾನವು ಮುಚ್ಚಲ್ಪಟ್ಟಿದೆ||೩೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  37
ಶ್ರೀ ಭಗವಾನುವಾಚ
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ|
ಮಹಾಶನೋ ಮಹಾಪಾಪ್ಮಾ ವಿಧ್ಯೇನಮಿಹ ವೈರಿಣಮ್||೩೭||
ಭಗವಂತ ಹೇಳಿದನು - ಎಲೈ ಅರ್ಜುನ ! ರಜೋಗುಣದಿಂದ ಉತ್ಪತ್ತಿಯಾದ ಈ ಕಾಮವೇ ಕ್ರೋಧ. ಇದು ಮಹಾಶನ ಅರ್ಥಾತ್ ಅಗ್ನಿಯಂತೆ ತ್ರಪ್ತಿಯನ್ನೇ ಕಾಣದಿರುವುದು (ಸುಖ ಭೋಗಗಳಿಂದ ಎಂದಿಗೂ ತ್ರಪ್ತಿ ಪಡೆಯದುದು) ಮತ್ತು ಮಹಾಪಾಪಿಯಾದದ್ದು.ಈ ವಿಷಯದಲ್ಲಿ ಇದನ್ನೇ ನೀನು ವೈರಿ ಎಂದೂ ಸಹ ತಿಳಿದುಕೋ||೩೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  36
ಅರ್ಜುನ ಉವಾಚ
ಅಥ ಕೇನ ಪ್ರಯುಕ್ತೋ$ಯಂ
ಪಾಪಂ ಚರತಿ ಪೂರುಷಃ |
ಅನಿಚ್ಛನ್ನಪಿ ವಾರ್ಷ್ಣೇಯ
ಬಲಾದಿವ ನಿಯೋಜಿತಃ ||೩೬
ಅರ್ಜುನನು ಹೇಳಿದನು- ಹೇ ಕೃಷ್ಣ! ಹಾಗಾದರೆ ಈ ಮನುಷ್ಯನು ಸ್ವತಃ ಇಚ್ಛಿಸದಿದ್ದರೂ ಕೂಡ ಬಲವಂತವಾಗಿ ತೊಡಗಿಸಲ್ಪಟ್ಟವನಂತೆ ಯಾವುದರಿಂದ ಪ್ರೇರಿತನಾಗಿ ಪಾಪದ ಆಚರಣೆಯನ್ನು ಮಾಡುತ್ತಾನೆ?
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  35
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾನ್|
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ||೩೫||
ಚೆನ್ನಾಗಿ ಆಚರಿಸಲ್ಪಟ್ಟ ಪರಧರ್ಮಕ್ಕಿಂತ ಗುಣವಿಲ್ಲದಿರುವ ತನ್ನ ಧರ್ಮವೇ ಶ್ರೇಯಸ್ಕರ.ತನ್ನ ಧರ್ಮದಲ್ಲಿ ಸಾಯುವುದೂ ಸಹ ಶ್ರೇಯಸ್ಕರ ಹಾಗೂ ಪರಧರ್ಮವು ಭಯವನ್ನುಂಟುಮಾಡುವುದು||೩೫
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  34
ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ|
ತಯೋರ್ನ ವಶಮಾಗಚ್ಛೇತ್ತೌ ಹ್ಯಸ್ಯ ಪರಿಪಂಥಿನೌ||೩೪||
ಇಂದ್ರಿಯಗಳು ಇಂದ್ರಿಯಗಳ ಅರ್ಥದಲ್ಲಿ ಅರ್ಥಾತ್ಎಲ್ಲಾ ಇಂದ್ರಿಯಗಳ ಭೋಗಗಳಲ್ಲಿ ರಾಗದ್ವೇಷಗಳು ಮನೆ ಮಾಡಿಕೊಂಡಿರುತ್ತವೆ. ಮನುಷ್ಯ ಅವೆರಡರ ವಶವರ್ತೀ ಆಗಬಾರದು. ಏಕೆಂದರೆ ಇವನಿಗೆ ಅವೆರಡೂ ಪುರೋಭಿವ್ರದ್ಧಿಯ ಮಾರ್ಗದಲ್ಲಿ ವಿಘ್ನವನ್ನುಂಟುಮಾಡುವ ಮಹಾಶತ್ರುಗಳು||೩೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  33
ಸದ್ರಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ|
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ||೩೩||
ಎಲ್ಲಾ ಪ್ರಾಣಿಗಳೂ ಪ್ರಕೃತಿದತ್ತವಾದ ಸ್ವಾಭಾವಿಕ ಶಕ್ತಿಯನ್ನು ಪಡೆದು ಸ್ವಭಾವಗತ ಕರ್ಮ ಮಾಡುತ್ತವೆ. ಜ್ಞಾನಿಯೂ ಸಹ ತನ್ನ ಪ್ರಕೃತಿಗೆ ಅನುಸಾರವಾಗಿ ಪ್ರಯತ್ನಿಸುತ್ತಾನೆ, ಇದರಲ್ಲಿ ಯಾವ ನಿಗ್ರಹವು ಏನು ಮಾಡಬಲ್ಲದು?||೩೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  32
ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಮ್|
ಸರ್ವಜ್ಞಾನವಿಮೂಢಾಂಸ್ತಾನ್ವಿದ್ಧಿ ನಷ್ಟಾನಚೇತಸಃ||೩೨||
ಯಾವ ಮನುಷ್ಯರಾದರೂ ಸಹ ದ್ವೇಷಾಸೂಯೆ ಬುದ್ಧಿಯಿಲ್ಲದೆ, ಶ್ರದ್ಧಾವಂತರಾಗಿ ಮತ್ತು ದೋಷಪೂರ್ಣ ದ್ರಷ್ಟಿಯುಳ್ಳ ಯಾವ ಮೂರ್ಖರಾದ ಜನರು ಈ ನನ್ನ ಅಭಿಪ್ರಾಯದಂತೆ ನಡೆದುಕೊಳ್ಳುವುದಿಲ್ಲವೋ ಆ ಎಲ್ಲಾ ಜ್ಞಾನಗಳಲ್ಲಿ ಮೋಹವಶವಾದ ಮನಸ್ಸಿನವರನ್ನು ನೀನು ಭ್ರಷ್ಟರಾದವರೆಂದೇ ತಿಳಿದುಕೋ||೩೨
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  31
ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ|
ಶ್ರದ್ಧಾವಂತೋsನಸೂಯಂತೋ ಮುಚ್ಯಂತೇ ತೇsಪಿ ಕರ್ಮಭಿಃ||೩೧||
ಯಾವಾಗಲೂ ನನ್ನ ಈ ಮತಕ್ಕೆ ಅರ್ಥಾತ್ ಅಭಿಪ್ರಾಯಕ್ಕೆ ಅನುಸಾರವಾಗಿ ನಡೆದುಕೊಳ್ಳುತ್ತಾರೆಯೋ ಆ ಮನುಷ್ಯರು ಎಲ್ಲಾ ಕರ್ಮಗಳಿಂದಲೂ ಬಿಡುಗಡೆ ಪಡೆಯುತ್ತಾರೆ||೩೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  30
ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ ಚೇತಸಾ|
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ||೩೦||
ಧ್ಯಾನ ನಿಷ್ಠೆಯ ಮನಸ್ಸುಳ್ಳವನಾಗಿ ಎಲ್ಲಾ ಕರ್ಮಗಳನ್ನೂ ನನಗೆ ಸಮರ್ಪಿಸಿ ಆಶಾರಹಿತನಾಗಿ ಮತ್ತು ಮಮತಾರಹಿತನಾಗಿ ಸಂತಾಪ ಪಡದಂತೆ ಯುದ್ಧ ಮಾಡು||೩೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  29
ಪ್ರಕೃತೇರ್ಗುಣಸಂಮೂಢಾಃ ನಸಜ್ಜತೇ ಗುಣಕರ್ಮಸು|
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್||೨೯||
ಪ್ರಕೃತಿಯ ಗುಣಗಳಿಂದ ಮೋಹಪರವಶರಾದವರು ಗುಣ ಮತ್ತು ಕರ್ಮಗಳಲ್ಲಿ ಆಸಕ್ತರಾಗಿರುತ್ತಾರೆ . ಚೆನ್ನಾಗಿ ತಿಳಿದುಕೊಂಡಿರದ ಆ ಮೂರ್ಖರನ್ನು ಚೆನ್ನಾಗಿ ತಿಳಿದವರಾದ ಪ್ರಾಜ್ಞರು ಅಧೀರರನ್ನಾಗಿ ಮಾಡಿ ಚಂಚಲಗೊಳಿಸಬಾರದು||೨೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  28
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ |
ಗುಣಾ ಗುಣೇಷು ವರ್ತಂತ ಇತಿ ಮತ್ವಾನ ಸಜ್ಜತೇ ||
ಆದರೆ ಮಹಾಬಾಹುವೇ ! ಗುಣವಿಭಾಗ ಮತ್ತು ಕರ್ಮ ವಿಭಾಗಗಳ ತತ್ತ್ವವನ್ನು ತಿಳಿದ ಜ್ಞಾನಯೋಗಿಯು ಎಲ್ಲ ಗುಣಗಳು ಗುಣಗಳಲ್ಲೇ ವರ್ತಿಸುತ್ತಿವೆ ಎಂದು ಅರಿತುಕೊಂಡು ಅವುಗಳಲ್ಲಿ ಆಸಕ್ತನಾಗುವುದಿಲ್ಲ. ||೨೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  27
ಪ್ರಕ್ರತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ|
ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ||೨೭||
ವಾಸ್ತವವಾಗಿಯೂ, ಸಂಪೂರ್ಣವಾಗಿ ಕರ್ಮಗಳೆಲ್ಲಾ ಪ್ರಕೃತಿಯ ಗುಣಗಳ ಮೂಲಕ ಮಾಡಲ್ಪಟ್ಟಿವೆ. ಆದಾಗ್ಯೂ ಸಹ ಅಹಂಕಾರದಿಂದ ಮೋಹವಶವಾದ ಅಂತಃಕರಣವುಳ್ಳವನು ನಾನು ಕರ್ತೃವಾಗಿದ್ದೇನೆ ಎಂಬುದಾಗಿ ತಿಳಿದುಕೊಳ್ಳುತ್ತಾನೆ||೨೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  26
ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್|
ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ಯುಕ್ತಃ ಸಮಾಚರನ್||೨೬||
ಜ್ಞಾನಿಗಳಾದವರು ಕರ್ಮಗಳಲ್ಲಿ ಆಸಕ್ತಿಯುಳ್ಳ ಅಜ್ಞಾನಿಗಳ ಬುದ್ಧಿಯಲ್ಲಿ ಭ್ರಮೆ ಅರ್ಥಾತ್ ಕರ್ಮಗಳಲ್ಲಿ ಅಶ್ರದ್ಧೆಯನ್ನು ಉಂಟುಮಾಡಬಾರದು. ಆದರೆ ಸ್ವತಃ ಪರಮಾತ್ಮನ ಸ್ವರೂಪದಲ್ಲಿ ತಲ್ಲೀನರಾಗಿ ಹಾಗೂ ಎಲ್ಲಾ ಕರ್ಮಗಳನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತಾ ಅವರುಗಳಿಂದಲೂ ಹಾಗೆಯೇ ಮಾಡಿಸಬೇಕು||೨೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  25
ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ|
ಕುರ್ಯಾದ್ವಿದ್ವಾಂಸ್ತಥಾಸಕ್ತಶ್ಚಿಕೀರ್ಷುಲೋಕಸಂಗ್ರಹಮ್||೨೫||
ಎಲೈ ಭಾರತ(ಅರ್ಜುನ) ಕರ್ಮದಲ್ಲಿ ಆಸಕ್ತರಾಗಿ ಅಜ್ಞಾನಿಗಳಾದವರು ಯಾವ ರೀತಿ ಕರ್ಮ ಮಾಡುತ್ತರೆಯೋ ಅದರಂತಯೇ ಅನಾಸಕ್ತವಾದ ವಿಧ್ವಾಂಸನೂ ಸಹ ಲೋಕೋದ್ಧಾರವನ್ನು ಬಯಸುತ್ತಾ ಕರ್ಮ ಮಾಡಬೇಕು||೨೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  24
ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್|
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ||೨೪||
ಆದರೆ, ನಾನು ಕರ್ಮವನ್ನು ಮಾಡದೇಹೋದಲ್ಲಿ ಈ ಎಲ್ಲಾ ಲೋಕಗಳೂ ನಷ್ಟ - ಭ್ರಷ್ಟ ವಾಗುವುವು ಮತ್ತು ನಾನು ವರ್ಣಸಂಕರಕ್ಕೆ ಕಾರಣಕರ್ತನಾಗುವೆನು ಹಾಗೂ ಈ ಎಲ್ಲಾ ಪ್ರಜೆಗಳ ನಾಶಕ್ಕೆ ಕಾರಣನಾಗುವೆನು||೨೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  23
ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ|
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ||೨೩||
ಎಲೈ ಪಾರ್ಥ ನಾನು ಜಾಗರೂಕನಾಗಿ ಯಾವಾಗಲಾದರೂ ಕರ್ಮದಲ್ಲಿ ಪ್ರವ್ರತ್ತನಾಗದಿದ್ದರೆ ಬಹಳ ಹಾನಿಯಾಗುತ್ತದೆ.ಏಕೆಂದರೆ, ಎಲ್ಲಾ ರೀತಿಯಿಂದಲೂ ಮಾನವರೆಲ್ಲಾ ನನ್ನ ನಡವಳಿಕೆಯನ್ನೇ ಅನುಸರಿಸುತ್ತಾರೆ ಅರ್ಥಾತ್ ಅದರಂತೆ ನಡೆದುಕೊಳ್ಳಲು ಪ್ರಾರಂಭಿಸುವರು||೨೩||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  22
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ|
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ||೨೨||
ಎಲೈ ಅರ್ಜುನ ನನಗೆ ಈ ಮೂರು ಲೋಕಗಳಲ್ಲಿ ಕಿಂಚಿತ್ತೂ ಸಹ ಕರ್ತವ್ಯವಿಲ್ಲ. ಪಡೆಯಬೇಕಾದ ಯೋಗ್ಯವಸ್ತು ಏನೂ ದೊರೆಯದೆಯೂ ಇಲ್ಲ. ಅದಾಗ್ಯೂ ಸಹ ನಾನು ಕರ್ಮದಲ್ಲಿಯೇ ಪ್ರವ್ರತ್ತನಾಗಿರುತ್ತೇನೆ||೨೨||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  21
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||೨೧||
ಶ್ರೇಷ್ಠ ಪುರುಷನು ಯಾವ ಯಾವ ಆಚರಣೆ ಮಾಡುತ್ತಾನೋ ಇನ್ನಿತರೇ ಜನರೂ ಸಹ ಅದರಂತೆಯೇ ನಡೆದುಕೊಳ್ಳುತ್ತಾರೆ. ಆ ಪುರುಷನು ಯಾವ-ಯಾವುದನ್ನು ಪ್ರಮಾಣವಾಗಿ ಅರ್ಥಾತ್ ಆಧಾರವಾಗಿಟ್ಟುಕೊಂಡು ಮಾಡುತ್ತಾನೆಯೋ ಜನ ಸಮುದಾಯವೂ ಸಹ ಅದಕ್ಕೆ ಅನುಸಾರವಾಗಿ ವರ್ತಿಸುತ್ತದೆ||೨೧
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  20
ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ|
ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ||೨೦||
ಜನಕಾದಿ ಜ್ಞಾನಿಗಳೂ ಸಹ ಆಸಕ್ತಿಯಿಲ್ಲದೆ ಕರ್ಮದ ಆಚರಣೆಯಿಂದ ಪರಮ ಸಿದ್ಧಿಯನ್ನು ಪಡೆದಿದ್ದಾರೆ. ಆದುದರಿಂದ ಲೋಕಹಿತದ ದ್ರಷ್ಟಿಯಿಂದಲಾದರೂ ಸಹ ನೀನು ಕರ್ಮವನ್ನು ಮಾಡಲು ಯೋಗ್ಯನಾಗಿರುವೆ||೨೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  19
ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ|
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ||೧೯||
ಆದುದರಿಂದ ನೀನು ಅನಾಸಕ್ತವಾಗಿ ಕರ್ತವ್ಯ ಕರ್ಮಗಳನ್ನು ಚೆನ್ನಾಗಿ ಆಚರಿಸು. ಏಕೆಂದರೆ ಅನಾಸಕ್ತ ಪುರುಷನು ಕರ್ಮವನ್ನು ಆಚರಿಸುತ್ತಾ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ|| (ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  18
ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ|
ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥವ್ಯಪಾಶ್ರಯಃ||೧೮||
ಈ ಪ್ರಪಂಚದಲ್ಲಿ ಆ ಮಹಾಪುರುಷರಿಗೆ ಕರ್ಮ ಮಾಡುವುದರಿಂದಾಗಲೀ,ಮಾಡದೇ ಇರುವುದರಿಂದಾಗಲೀ ಯಾವ ಪ್ರಯೋಜನವೂ ಇಲ್ಲ ಮತ್ತು ಇವರಿಗೆ ಎಲ್ಲಾ ಜೀವಿಗಳೊಡನೆ ಒಂದಿಷ್ಟೂ ಸಹ ಸ್ವಾರ್ಥದ ಸಂಬಂಧವಿರುವುದಿಲ್ಲ. ಅದಾಗ್ಯೂ ಸಹ ಅವರಿಂದ ಕೇವಲ ಲೋಕಹಿತಾರ್ಥಕ್ಕಾಗಿ ಕರ್ಮ ಮಾಡಲ್ಪಡುತ್ತವೆ||೧೮||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  17
ಯಸ್ತ್ವಾತ್ಮರತಿರೇವ ಸ್ಯಾದಾತ್ಮತೃಪ್ತಶ್ಚ ಮಾನವಃ |
ಆತ್ಮನ್ಯೇವ ಚ ಸಂತುಷ್ಟಸ್ತಸ್ಯ ಕಾರ್ಯಂ ನ ವಿದ್ಯತೇ||೧೭||
ಆದರೆ ಯಾವ ಮನುಷ್ಯನು ಆತ್ಮನಲ್ಲಿಯೇ ಪ್ರೀತಿಯುಳ್ಳವನಾಗಿ , ಆತ್ಮನಲ್ಲಿಯೇ ತೃಪ್ತನಾಗಿ ಹಾಗೂ ಆತ್ಮನಲ್ಲಿಯೇ ಸಂತುಷ್ಟನಾಗಿರುವನೋ ಅವನಿಗೆ ಯಾವ ಕರ್ತವ್ಯವೂ ಇರುವುದಿಲ್ಲ||೧೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  16
ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ|
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ||೧೬||
ಎಲೈ ಪಾರ್ಥ ಯಾರು ಈ ಲೋಕದಲ್ಲಿ ಈ ಪ್ರಕಾರ ಪ್ರವರ್ತಿಸಲ್ಪಟ್ಟ ಸ್ರಷ್ಟಿ ಚಕ್ರವನ್ನು ಅನುಸರಿಸಿ ನಡೆದುಕೊಳ್ಳುವದಿಲ್ಲವೋ ಅರ್ಥಾತ್ ತನ್ನ ಕರ್ತವ್ಯ ಕರ್ಮಗಳನ್ನು ಮಾಡುವುದಿಲ್ಲವೋ ಆ ಇಂದ್ರಿಯ-ಸುಖಗಳನ್ನು ಅನುಭವಿಸುವ ಪಾಪಾಯುವಾದ ಪುರುಷನು ವ್ಯರ್ಥವಾಗಿಯೇ ಜೀವಿಸುತ್ತಾನೆ.||೧೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  15
ಕರ್ಮಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರಸಮುದ್ಭವಮ್|
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಂ||೧೫||
ಹಾಗೂ ಆ ಕರ್ಮವನ್ನು ನೀನು ವೇದದಿಂದ ಉತ್ಪತ್ತಿಯಾಯಿತೆಂದು ತಿಳಿದುಕೋ.ವೇದವು ಅವಿನಾಶೀ ಪರಮಾತ್ಮನಿಂದ ಉತ್ಪತ್ತಿಯಾಗಿದೆ. ಆದುದರಿಂದ ಸರ್ವವ್ಯಾಪೀ ಪರಮ ಅಕ್ಷರ(ಪರಮಾತ್ಮ) ಯಾವಾಗಲೂ ಯಜ್ಞದಲ್ಲಿ ಪ್ರತಿಷ್ಠಿತನಾಗಿರುತ್ತಾನೆ||೧೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  14
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ|
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಃ||೧೪||
ಜೀವಿಗಳೆಲ್ಲಾ ಅನ್ನದಿಂದ ಉತ್ಪತ್ತಿಯಾಗುತ್ತದೆ ಮತ್ತು ಅನ್ನದ ಉತ್ಪತ್ತಿಯು ಮಳೆಯಿಂದಾಗುತ್ತದೆ ಮತ್ತು ಮಳೆಯು ಯಜ್ಞದಿಂದ ಉಂಟಾಗುತ್ತದೆ ಹಾಗೂ ಆ ಯಜ್ಞ ಕರ್ಮಗಳಿಂದ ಉತ್ಪತ್ತಿಯಾಗುತ್ತದೆ||೧೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  13
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ|
ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್||೧೩||
ಯಜ್ಞ ಪ್ರಸಾದವನ್ನು ಸೇವಿಸುವ ಶ್ರೇಷ್ಠ ಪುರುಷರು ಎಲ್ಲಾ ಪಾಪಗಳಿಂದಲೂ ಬಿಡುಗಡೆ ಪಡೆಯುತ್ತಾರೆ ಮತ್ತು ಯಾವ ಪಾಪಿಗಳು ತಮಗೋಸ್ಕರವಾಗಿಯೇ ಶರೀರ ಪೋಷಣೆಗೆ ಅಡುಗೆ ಮಾಡಿಕೊಳ್ಳುತ್ತಾರೆಯೋ ಅವರು ಪಾಪವನ್ನೇ ತಿನ್ನುತ್ತಾರೆ ಅರ್ಥಾತ್ ಅನುಭವಿಸುತ್ತಾರೆ||೧೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  12
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ಇಷ್ಟಾನ್‌ಭೋಗಾನ್ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ |
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ||
ಯಜ್ಞದಿಂದ ಪುಷ್ಟರಾದ ದೇವತೆಗಳು ನಿಮಗೆ ಬೇಡದಿದ್ದರೂ ಬಯಸಿದ ಭೋಗಗಳನ್ನು ನಿಶ್ಚಯವಾಗಿ ಕೊಡುತ್ತಾ ಇರುವರು. ಹೀಗೆ ಆ ದೇವತೆಗಳು ಕರುಣಿಸಿದ ಭೋಗಗಳನ್ನು ಅವರಿಗೆ ಅರ್ಪಿಸದೆ ತಾನೇ ತಿನ್ನುವ ಮನುಷ್ಯನು ಕಳ್ಳನೇ ಆಗಿದ್ದಾನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  11
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ದೇವಾನ್ಭಾವಯತಾನೇನ ತೇ ದೇವಾ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ ||
ನೀವು ಈ ಯಜ್ಞದಿಂದ ದೇವತೆಗಳನ್ನು ತೃಪ್ತಿಪಡಿಸಿರಿ. ಆ ದೇವತೆಗಳು ನಿಮ್ಮ ಉನ್ನತಿಮಾಡಲಿ. ಹೀಗೆ ನಿಃಸ್ವಾರ್ಥದಿಂದ ಪರಸ್ಪರ ತೃಪ್ತಿಯನ್ನು ಹೊಂದಿ, ನೀವು ಪರಮ ಶ್ರೇಯಸ್ಸನ್ನು ಪಡೆಯಿರಿ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  10
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ಸಹಯಜ್ಞಾಃ ಪ್ರಜಾಃ ಸೃಷ್ಛ್ವಾ ಪುರೋವಾಚ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಮೇಷ ವೊ$ಸ್ತ್ವಿಷ್ಟಕಾಮಧುಕ್ ||
ಪ್ರಜಾಪತಿ ಬ್ರಹ್ಮದೇವರು ಕಲ್ಪದ ಆದಿಯಲ್ಲಿ ಯಜ್ಞದೊಂದಿಗೆ ಪ್ರಜೆಗಳನ್ನು ಸೃಷ್ಟಿಸಿ ಅವರಿಗೆ-’ನೀವು ಈ ಯಜ್ಞದಿಂದ ಉತ್ಕರ್ಷ ಮಾಡಿಕೊಳ್ಳಿ ಹಾಗೂ ಈ ಯಜ್ಞವು ನಿಮಗೆ ಇಚ್ಛಿಸಿದ ಮನೋರಥಗಳನ್ನು ಪೂರ್ಣಗೊಳಿಸುವಂತಾಗಲಿ’ ಎಂದು ಹೇಳಿದನು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  9
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ಯಜ್ಞಾರ್ಥಾತ್ಕರ್ಮಣೋ$ನ್ಯತ್ರ ಲೋಕೋ$ಯಂ ಕರ್ಮಬಂಧನಃ |
ತದರ್ಥಂ ಕರ್ಮ ಕೌಂತೇಯ ಮುಕ್ತಸಂಗಃ ಸಮಾಚರ ||
ಯಜ್ಞದ ನಿಮಿತ್ತವಾಗಿ ಮಾಡಲಾಗುವ ಕರ್ಮಗಳಲ್ಲದೆ ಇತರ ಕರ್ಮಗಳಲ್ಲಿ ತೊಡಗಿದ ಈ ಮನುಷ್ಯ ಸಮುದಾಯವು ಕರ್ಮಗಳಿಂದ ಬಂಧಿತವಾಗಿದೆ. ಆದ್ದರಿಂದ ಅರ್ಜುನನೇ ! ನೀನು ಆಸಕ್ತರಹಿತನಾಗಿ ಯಜ್ಞಕ್ಕಾಗಿಯೇ ಚೆನ್ನಾಗಿ ಕರ್ತವ್ಯ ಕರ್ಮವನ್ನು ಮಾಡು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  8
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ |
ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇದಕರ್ಮಣಃ ||
ನೀನು ಶಾಸ್ತ್ರವಿಹಿತವಾದ ಕರ್ತವ್ಯ ಕರ್ಮಗಳನ್ನು ಮಾಡು, ಏಕೆಂದರೆ ಕರ್ಮ ಮಾಡದೇ ಇರುವುದಕ್ಕಿಂತ ಕರ್ಮ ಮಾಡುವುದು ಶ್ರೇಷ್ಠವಾಗಿದೆ. ಹಾಗೆಯೇ ಕರ್ಮ ಮಾಡದೇ ನಿನ್ನ ಶರೀರ ನಿರ್ವಾಹವೂ ನಡೆಯಲಾರದು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  7
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇ$ರ್ಜುನ |
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ||
ಆದರೆ ಅರ್ಜುನನೇ ! ಮನಸ್ಸಿನಿಂದ ಇಂದ್ರಿಯಗಳನ್ನು ವಶಪಡಿಸಿಕೊಂಡು ಅನಾಸಕ್ತನಾಗಿ ಎಲ್ಲ ಇಂದ್ರಿಯಗಳ ಮೂಲಕ ಕರ್ಮಯೋಗವನ್ನು ಆಚರಿಸುವ ಮನುಷ್ಯನೇ ಶ್ರೇಷ್ಠನಾಗಿದ್ದಾನೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  6
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ |
ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ||
ಮೂಢಬುದ್ಧಿಯುಳ್ಳ ಮನುಷ್ಯನು ಎಲ್ಲ ಇಂದ್ರಿಯಗಳನ್ನು ಮೇಲ್ನೋಟಕ್ಕೆ ತಡೆದು, ಮನಸ್ಸಿನಲ್ಲಿ ಆ ಇಂದ್ರಿಯಗಳ ವಿಷಯಗಳನ್ನು ಚಿಂತಿಸುತ್ತಿರುವವನನ್ನು ಮಿಥ್ಯಾಚಾರಿ, ಅಂದರೆ ಡಾಂಭಿಕನೆಂದು ಹೇಳುತ್ತಾರೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  5
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ||
ನಿಸ್ಸಂದೇಹವಾಗಿ ಯಾವುದೇ ಮನುಷ್ಯನು ಯಾವುದೇ ಸಮಯದಲ್ಲಿ ಕ್ಷಣಮಾತ್ರವೂ ಕರ್ಮವನ್ನೂ ಮಾಡದೆ ಇರಲಾರನು; ಏಕೆಂದರೆ ಎಲ್ಲ ಮನುಷ್ಯ ಸಮುದಾಯವು ಪ್ರಕೃತಿಜನ್ಯ ಗುಣಗಳಿಂದಾಗಿ ಪರಾಧೀನವಾಗಿರುವುದರಿಂದ ಕರ್ಮಮಾಡಲು ಬಾಧ್ಯವಾಗುತ್ತದೆ.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  4
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ತೃತಿಯೋಧ್ಯಾಯಃ-ಕರ್ಮಯೋಗಃ
ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋ$ಶ್ನುತೇ |
ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ||
ಮನುಷ್ಯನು ಕರ್ಮಗಳನ್ನು ಮಾಡದೆ ನಿಷ್ಕಾಮತೆಯನ್ನು ಅಂದರೆ ಯೋಗ ನಿಷ್ಠೆಯನ್ನು ಪಡೆಯಲಾರರು ಮತ್ತು ಕೇವಲ ಕರ್ಮಗಳನ್ನು ತ್ಯಾಗ ಮಾಡುವುದರಿಂದ ಸಿದ್ಧಿಯನ್ನು ಅಂದರೆ ಸಾಂಖ್ಯನಿಷ್ಠೆಯನ್ನು ಪಡೆಯಲಾರೆನು.
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  3
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಅಥ ತ್ರತಿಯೋಧ್ಯಾಯಃ ಕರ್ಮಯೋಗ-ಶ್ರೀ ಭಗವಾನುವಾಚ
ಲೋಕೇ$ಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ||
ಶ್ರೀ ಭಗವಂತನು ಹೇಳಿದನು- ಎಲೈ ನಿಷ್ಪಾಪನೇ ! ಈ ಲೋಕದಲ್ಲಿ ಎರಡು ಪ್ರಕಾರದ ನಿಷ್ಠೆಗಳನ್ನು ನಾನೇ ಹಿಂದೆ ಹೇಳಿರುವೆನು. ಅವುಗಳಲ್ಲಿ ಸಾಂಖ್ಯಯೋಗಿಗಳ ನಿಷ್ಠೆಯು ಜ್ಞಾನಯೋಗದಿಂದ ಹಾಗೂ ಯೋಗಿಗಳ ನಿಷ್ಠಯು ಕರ್ಮ ಯೋಗದಿಂದ ಇರುತ್ತದೆ. ||
(ಸಂಗ್ರಹ: ಶ್ರೀ ಸ್ವರ್ಣವಲ್ಲೀ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  2
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಅಥ ತ್ರತಿಯೋಧ್ಯಾಯಃ ಕರ್ಮಯೋಗ-ಅರ್ಜುನ ಉವಾಚ
ವ್ಯಾಮಿಶ್ರೇಣೇವ ವಾಕ್ಯೇನ ಬುದ್ಧಿಂ ಮೋಹಯಸೀವ ಮೇ |
ತದೇಕಂ ವದ ನಿಶ್ಚತ್ಯ ಯೇನ ಶ್ರೇಯೋ$ಹಮಾಪ್ನುಯಾಮ್ ||
ಗೊಂದಲದಂತಿರುವ ನಿನ್ನ ಮಾತಿನಿಂದ ನನ್ನ‌ ಬುದ್ಧಿಯನ್ನು ಮೋಹ ಗೊಳಿಸುತ್ತಿರುವಂತೆ ಕಾಣುತ್ತದೆ. ಆದ್ದರಿಂದ ನಾನು ಶ್ರೇಯಸ್ಸನ್ನು ಪಡೆಯುವಂತಹ ಒಂದು ಮಾತನ್ನು ನಿಶ್ಚಯಿಸಿ ಹೇಳು.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  3
ಶ್ಲೋಕ  1
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಅಥ ತ್ರತಿಯೋಧ್ಯಾಯಃ ಕರ್ಮಯೋಗ-ಅರ್ಜುನ ಉವಾಚ
ಜ್ಯಾಯಸೀ ಚೇತ್ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದಶ |
ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ ||
ಅರ್ಜುನನು ಹೇಳಿದನು-ಎಲೈ ಜನಾರ್ದನ ! ನಿನಗೆ ಕರ್ಮಕ್ಕಿಂತ ಜ್ಞಾನವು ಶ್ರೇಷ್ಠವೆಂದು ಎನಿಸಿದರೆ ಹೇ ಕೇಶವ ! ಮತ್ತೇಕೆ ನನ್ನನ್ನು ಭಯಂಕರ ಕರ್ಮಮಾಡಲು ತೊಡಗಿಸುತ್ತಿಯೇ?
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  72
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ|
ಸ್ಥಿತ್ವಾಸ್ಯಾಮಂತಕಾಲೇsಪಿ ಬ್ರಹ್ಮ ನಿರ್ವಾಣಮ್ರಚ್ಛತಿ||೭೨||
ಎಲೈ ಅರ್ಜುನ ಇದು ಬ್ರಹ್ಮಜ್ಞಾನಿಯಾದ ಪುರುಷನ ಸ್ಥಿತಿಯಾಗಿದೆ.ಇದನ್ನು ಪಡೆದುಕೊಂಡವನು ಮೋಹವಶನಾಗುವದಿಲ್ಲ ಮತ್ತು ಅಂತ್ಯ ಕಾಲದಲ್ಲಿಯೂ ಸಹ ಈ ನಿಷ್ಠೆಯಲ್ಲಿ ಸ್ಥಿರವಾಗಿದ್ದು ಬ್ರಹ್ಮಾನಂದವನ್ನು ಪಡೆದುಕೊಳ್ಳುತ್ತಾನೆ||೭೨||

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮ ವಿದ್ಯಾಯಾಂ ಯೋಗಶಾಸ್ತ್ರೇ ಶ್ರೀ ಕ್ರಷ್ಣಾರ್ಜುನಸಂವಾದೇ ಸಾಂಖ್ಯಯೋಗೋ ನಾಮ ದ್ವಿತೀಯೋsಧ್ಯಾಯಃ ||೨||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  71
ವಿಹಾಯ ಕಾಮಾನ್ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪ್ರಹಃ|
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ||೭೧||
ಯಾವ ಪುರುಷನು ಎಲ್ಲಾ ಆಸೆ-ಆಕಾಂಕ್ಷೆಗಳನ್ನು ತ್ಯಜಿಸಿ ಮಮತಾರಹಿತ ಮತ್ತು ಅಹಂಕಾರ ರಹಿತ ಹಾಗೂ ಇಚ್ಛಾರಹಿತನಾಗಿ ವರ್ತಿಸುತ್ತಾನೆಯೋ ಅವನು ಶಾಂತಿಯನ್ನು ಪಡೆಯುತ್ತಾನೆ||೭೧||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  70
ಆಪೂರ್ಯಮಾಣಮಚಲಪ್ರತಿಷ್ಠಂ
ಸಮುದ್ರಮಾಪಃ ಪ್ರವಿಶಂತಿ ಯದ್ವತ್|
ತದ್ವತ್ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ||೭೦||
ಹೇಗೆ ಎಲ್ಲಾ ಕಡೆಗಳಿಂದಲೂ ಪರಿಪೂರ್ಣವಾಗಿಯೂ ಮತ್ತು ಅಚಲವಾಗಿಯೂ ಇರುವ ಸಮುದ್ರಕ್ಕೆ ಅನೇಕ ನದಿಗಳ ನೀರು ಅದನ್ನು ಚಂಚಲಗೊಳಿಸದೇ ವಿಲೀನಗೊಳ್ಳುತ್ತವೆಯೋ ಅದರಂತೆಯೇ ಯಾವ ಸ್ಥಿರಬುದ್ಧಿಯ ವ್ಯಕ್ತಿಯಲ್ಲಿ ಎಲ್ಲಾ ಭೋಗಗಳೂ ಯಾವ ರೀತಿಯ ವಿಕಾರಗಳನ್ನೂ ಉಂಟು ಮಾಡದೇ ವಿಲೀನಗೊಳ್ಳುತ್ತವೆಯೋ ಆ ಪುರುಷನು ಪರಮ ಶಾಂತಿಯನ್ನು ಪಡೆಯುತ್ತಾನೆಯೇ ಹೊರತು ಭೋಗಾಪೇಕ್ಷಿಯಲ್ಲ||೭೦||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  69
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ|
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೆಃ||೬೯||
ಎಲ್ಲಾ ಪ್ರಾಣಿಗಳಿಗೂ ಯಾವುದು ರಾತ್ರಿಯೋ ಆಗ ನಿತ್ಯ ಶುದ್ಧ ಭೋಧಸ್ವರೂಪೀ ಪರಮಾನಂದದಲ್ಲಿ ಭಗವಂತನ ಸಾಕ್ಷಾತ್ಕಾರ ಪಡೆದ ಯೋಗಿಯು ಎಚ್ಚೆತ್ತಿರುತ್ತಾನೆ ಮತ್ತು ನಾಶವಾದ ಕ್ಷಣಭಂಗುರವಾದ ಸಾಂಸಾರಿಕ ಸುಖಗಳಲ್ಲಿ ಎಲ್ಲಾ ಪ್ರಾಣಿಗಳೂ ಎಚ್ಚರಗೊಂಡಿರುತ್ತವೆ,ತತ್ವಜ್ಞಾನಿಯಾದ ಮುನಿಗೆ ಅದು ರಾತ್ರಿಯಾಗುತ್ತದೆ||೬೯||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  68
ತಸ್ಮಾದ್ಯಸ್ಯ ಮಹಾಬಾಹೋ ನಿಗ್ರಹೀತಾನಿ ಸರ್ವಶಃ|
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ||೬೮||
ಆದುದರಿಂದ ಎಲೈ ಮಹಾಬಾಹುವೇ ಯಾವ ಪುರುಷನ ಇಂದ್ರಿಯಗಳು ಎಲ್ಲಾರೀತಿಯಿಂದಲೂ ಇಂದ್ರಿಯಗಳ ವಿಷಯಗಳಿಂದ ವಶಮಾಡಿಕೊಳ್ಳಲ್ಪಟ್ಟಿವೆಯೋ ಅವನ ಬುದ್ದಿ ಸ್ಥಿರವಾಗಿರುತ್ತದೆ||೬೮
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  67
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋsನು ವಿಧೀಯತೇ|
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ||೬೭||
ಏಕೆಂದರೆ, ನೀರಿನ ಮೇಲೆ ಚಲಿಸುವ ದೋಣಿಯನ್ನು ಗಾಳಿಯು ಹೇಗೆ ತಳ್ಳಿಕೊಂಡು ಹೋಗಿ ಗುರಿ ತಪ್ಪಿಸುವುದೋ ಹಾಗೆಯೇ ವಿಷಯಗಳಲ್ಲಿ ಪ್ರವ್ರತ್ತವಾಗಿರುವ ಇಂದ್ರಿಯಗಳಲ್ಲಿ ಯಾವ ಇಂದ್ರಿಯದ ಸಂಗಡ ಮನಸ್ಸು ಬೆರೆತಿರುತ್ತದೆಯೋ ಆ ಒಂದೇ ಇಂದ್ರಿಯವು ಈ ಸಾಧನಹೀನ ಪುರುಷನ ಬುದ್ಧಿಯನ್ನು ಅಪಹರಿಸಿಕೊಳ್ಳುತ್ತದೆ ||೬೭||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  66
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್||
ಮನಸ್ಸು ಮತ್ತು ಇಂದ್ರಿಯಗಳನ್ನು ಜಯಿಸದೇ ಇರುವ ಮತ್ತು ಸಾಧನೆಯನ್ನೂ ಮಾಡದೇ ಇರುವ ಪುರುಷನ ಅಂತಃಕರಣದಲ್ಲಿ ಶ್ರೇಷ್ಠವಾದ ಬುದ್ಧಿಯಿರುವದಿಲ್ಲ ಮತ್ತು ಆ ಸಾಧನಾಹೀನ ಪುರುಷನ ಅಂತಃಕರಣದಲ್ಲಿ ಆಸ್ತಿಕಭಾವನೆಯೂ ಸಹ ಇರುವದಿಲ್ಲ.ಆಸ್ತಿಕಭಾವನೆಯಿಲ್ಲದ ಪುರುಷನಿಗೆ ಶಾಂತಿಯೂ ಸಹ ಇರುವುದಿಲ್ಲ ಹಾಗೂ ಶಾಂತಿಯಿಲ್ಲದ ಪುರುಷನಿಗೆ ಸುಖವು ಹೇಗೆ ತಾನೇ ದೊರೆಯುವುದು?||೬೬||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  65
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ|
ಪ್ರಸನ್ನಚೇತನೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತೇ||೬೫||
ಅಂತಹ ನಿರ್ಮಲತೆಯುಂಟಾದರೆ ಇವನ ಸಮಸ್ತ ದುಃಖಗಳೂ ನಾಶವಾಗಿ ಹೋಗುತ್ತವೆ ಮತ್ತು ಆ ಪ್ರಸನ್ನಚಿತ್ತವುಳ್ಳ ಪುರುಷನ ಬುದ್ಧಿಯು ಬಹು ಶೀಘ್ರವಾಗಿ ಒಳ್ಳೆಯ ರೀತಿಯಲ್ಲಿ ಪರಮಾತ್ಮನಲ್ಲಿ ಸ್ಥಿರವಾಗಿ ಬಿಡುವುದು||೬೫||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  64
ರಾಗದ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್|
ಆತ್ಮ ವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ||೬೪||
ಆದರೆ ಅಂತಃಕರಣವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವ ಪುರುಷನು ರಾಗ-ದ್ವೇಷಗಳಿಂದ ಮುಕ್ತನಾಗಿ ತನ್ನ ವಶಮಾಡಿಕೊಂಡಿರುವ ಇಂದ್ರಿಯಗಳ ಮೂಲಕ ವಿಷಯಗಳನ್ನು ಅನುಭವಿಸುತ್ತಾ ಅಂತಃಕರಣದಲ್ಲಿ ಪ್ರಸನ್ನತೆ ಅರ್ಥಾತ್ ಸ್ವಚ್ಛತೆಯನ್ನು ಪಡೆಯುತ್ತಾನೆ.||೬೪||
(ಸಂಗ್ರಹಃ ಸ್ವರ್ಣವಲ್ಲೀ ಭಕ್ತವ್ರಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  63
ಕ್ರೋಧಾದ್ಬವತಿ ಸಮ್ಮೋಹಃ
ಸಮ್ಮೋಹಾತ್ಸ್ಮೃತಿವಿಭ್ರಮಃ|
ಸ್ಮೃತಿ ಭ್ರಂಶಾದ್ ಬುದ್ಧಿ ನಾಶಃ
ಬುದ್ಧಿ ನಾಶತ್ಪ್ರಣಶ್ಯತಿ||
ಕ್ರೋಧದಿಂದ ಅತ್ಯಂತ ಮೂಢಭಾವವು ಉಂಟಾಗುತ್ತದೆ, ಮೂಢಭಾವದಿಂದ ಸ್ಮ್ರತಿಯಲ್ಲಿ ಭ್ರಮೆಯುಂಟಾಗುತ್ತದೆ, ಭ್ರಮೆಯುಂಟಾಗುವುದರಿಂದ ಬುದ್ಧಿ ಅರ್ಥಾತ್ ಜ್ಞಾನ ಶಕ್ತಿಯು ನಾಶವಾಗಿ ಹೊಗುತ್ತದೆ ಮತ್ತು ಬುದ್ಧಿ ನಾಶವಾಗುವುದರಿಂದ ಈ ಪುರುಷನು ತನ್ನ ಸ್ಥಿತಿಯಿಂದ ಜಾರಿ ಬೀಳುತ್ತಾನೆ. ||೬೩||
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  62
ಧ್ಯಾಯತೋ ವಿಷಯಾನ್ ಪುಂಸಃ
ಸಂಗಸ್ತೇಷೂಪಜಾಯತೇ |
ಸಂಗಾತ್ಸಂಜಾಯತೇ ಕಾಮಃ
ಕಾಮಾತ್ಕ್ರೋಧೋ$ಭಿಜಾಯತೇ||
ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆ ಉಂಟಾಗುತ್ತದೆ. ಮತ್ತು ಕಾಮನೆಯಲ್ಲಿ ವಿಘ್ನವುಂಟಾಗುವುದರಿಂದ ಕ್ರೋದವು ಉತ್ಪನ್ನವಾಗುತ್ತದೆ.
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  61
ತಾನಿ ಸರ್ವಾಣಿ ಸಂಯಮ್ಯ
ಯುಕ್ತ ಆಸೀತಮತ್ಪರಃ
ವಶೇ ಹಿ ಯಸ್ಯೇಂದ್ರಿಯಾಣಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ||
ಅದಕ್ಕಾಗಿ ಸಾಧಕನು ಆ ಸಂಪೂರ್ಣ ಇಂದ್ರಿಯಗಳನ್ನು ವಶಪಡಿಸಿಕೊಂಡು, ಸಮಹಿತಚಿತ್ತನಾಗಿ ನನ್ನ ಪರಾಯಣನಾಗಿ, ಧ್ಯಾನದಲ್ಲಿ ಕುಳಿತುಕೊಳ್ಳಲಿ. ಏಕೆಂದರೆ,ಯಾವ ಪುರುಷನ ಇಂದ್ರಿಯಗಳು ವಶದಲ್ಲಿ ಇರುತ್ತವೆಯೋ ಅವನ ಬುದ್ಧಿಯು ಸ್ಥಿರವಾಗಿರುತ್ತದೆ.||೬೧||
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  60
ಯತತೋ ಹ್ಯಪಿ ಕೌಂತೇಯ
ಪುರುಷಸ್ಯ ವಿಪಶ್ಚಿತಃ| ಇಂದ್ರಿಯಾಣಿ ಪ್ರಮಾಥೀನಿ
ಹರಂತಿ ಪ್ರಸಭಂ ಮನಃ||
ಹೇ ಅರ್ಜುನನೇ! ಆಸಕ್ತಿಯು ನಾಶವಾಗದಿರುವ ಕಾರಣ ಈ ಪ್ರಮಥನ ಸ್ವಭಾವವುಳ್ಳ ಇಂದ್ರಿಯಗಳು ಪ್ರಯತ್ನಿಸುತ್ತಿರುವ ಬುದ್ದಿವಂತನಾದ ಪುರುಷನ ಮನಸ್ಸನ್ನು ಕೂಡ ಬಲವಂತನಾಗಿ ಅಪಹರಿಸಿಕೊಳ್ಳುತ್ತವೆ||೬೦||
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  59
ವಿಷಯಾ ವಿನಿವರ್ತಂತೇ
ನಿರಾಹಾರಸ್ಯ ದೇಹಿನಃ|
ರಸವರ್ಜಂ ರಸೋ$ಪ್ಯಸ್ಯ
ಪರಂದೃಷ್ಟ್ವಾನಿವರ್ತತೇ||
ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸದಿರುವ ಪುರುಷರಲ್ಲಿ ಕೂಡ ಕೇವಲ ವಿಷಯಗಳಾದರೋ ನಿವೃತ್ತಿಯಾಗಿ ಬಿಡುತ್ತವೆ, ಆದರೆ ಅವುಗಳಲ್ಲಿರುವ ಆಸಕ್ತಿಯು ನಿವೃತ್ತಿಯಾಗುವುದಿಲ್ಲ.ಆದರೆ ಈ ಸ್ಥಿತಪ್ರಜ್ಞಪುರುಷನ ಆಸಕ್ತಿಯು ಕೂಡ ಪರಮಾತ್ಮನ ಸಾಕ್ಷಾತ್ಕರಮಾಡಿಕೊಂಡು ನಿವೃತ್ತಿ ಹೊಂದುತ್ತದೆ.||೫೯||
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  58
ಯದಾ ಸಂಹರತೇ ಚಾಯಂ
ಕೂರ್ಮೋ$ಂಗಾನೀವ ಸರ್ವಶಃ |
ಇಂದೀಯಾಣೀಂದ್ರಿಯಾರ್ಥೇಭ್ಯಃ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||
ಮತ್ತು ಆಮೆಯು ಎಲ್ಲ ಕಡೆಯಿಂದ ತನ್ನ ಅಂಗಗಳನ್ನು ಹೇಗೆ ಒಳಕ್ಕೆ ಸೆಳೆದುಕೊಳ್ಳುತ್ತದೆಯೋ ಹಾಗೆಯೇ ಯಾವಾಗ ಈ ಪುರುಷನು ಇಂದ್ರಿಯಗಳ ವಿಷಯಗಳಿಂದ ಇಂದ್ರಿಯಗಳನ್ನು ಎಲ್ಲ ಪ್ರಕಾರದಿಂದ ಹಿಂದಕ್ಕೆಳೆದು ಕೊಳ್ಳುತಾನೆಯೋ ಆಗ ಅವನ ಬುದ್ಧಿಯು ಸ್ಥಿರವಾಗಿದೆಯೆಂದು ತಿಳಿಯಬೇಕು. ||೫೮||
(ಸಂಗ್ರಹ: ಸ್ವರ್ಣವಲ್ಲೀಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  57
ಯಃ ಸರ್ವತ್ರಾನಭಿಸ್ನೇಹಃ
ತತ್ತತ್ಪ್ರಾಪ್ಯ ಶುಭಾಶುಭಮ್| ನಾಭಿನಂದತಿ ನ ದ್ವೇಷ್ಟಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ||
ಯಾವ ಪುರುಷನು ಸರ್ವತ್ರ ಸ್ನೇಹರಹಿತನಾಗಿದ್ದು ಆಯಾಯಾ ಶುಭಾಶುಭ ವಸ್ತುಗಳನ್ನು ಪಡೆದುಕೊಂಡು ಪ್ರಸನ್ನನಾಗುವುದಿಲ್ಲವೋ ಮತ್ತು ದ್ವೇಷಿಸುವುದಿಲ್ಲವೋ ಅವನ ಬುದ್ದಿಯು ಸ್ಥಿರವಾಗಿದೆ||೫೭||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  56
ದುಃಖೇಷ್ವನುದ್ವಿಗ್ನಮನಾಃ
ಸುಖೇಷು ವಿಗತಸ್ಪೃಹಃ |
ವೀತರಾಗಭಯಕ್ರೋಧಃ
ಸ್ಥಿತಧೀರ್ಮುನಿರುಚ್ಯತೇ ||
ದುಃಖಗಳು ಪ್ರಾಪ್ತಿಯಾದ ಮೇಲೆ ಯಾರ ಮನಸ್ಸಿನಲ್ಲಿ ಉದ್ವೇಗವು ಉಂಟಾಗುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರು ಸರ್ವಥಾ ನಿಸ್ಪೃಹರಾಗಿರುತ್ತಾರೋ ಹಾಗೂ ಯಾರ ರಾಗ, ಭಯ, ಮತ್ತು ಕ್ರೋಧಗಳು, ನಷ್ಟವಾಗಿ ಹೋಗಿವೆಯೋ ಅಂತಹ ಮುನಿಯು ಸ್ಥಿರಬುದ್ಧಿಯವನೆಂದು ಹೇಳಲ್ಪಡುತ್ತಾನೆ.||೫೬||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  55
ಶ್ರೀ ಭಗವಾನುವಾಚ
ಪ್ರಜಹಾತಿ ಯದಾ ಕಾಮಾನ್
ಸರ್ವಾನ್ ಪಾರ್ಥ ಮನೋಗತಾನ್|
ಆತ್ಮನ್ಯೇವಾತ್ಮನಾ ತುಷ್ಟಃ
ಸ್ಥಿತಪ್ರಜ್ಞಸ್ತದೋಚ್ಯತೇ ||
ಭಗವಂತನು ಹೇಳಿದನು- ಹೇ ಅರ್ಜುನನೇ !ಯಾವ ಕಾಲದಲ್ಲಿ ಈ ಪುರುಷನು ಮನಸ್ಸಿನಲ್ಲಿರುವ ಎಲ್ಲ ಕಾಮನೆಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾನೋ ಮತ್ತು ಅತ್ಮನಲ್ಲಿಯೇ ಸಂತುಷ್ಟನಾಗಿರುತ್ತಾನೋ ಆ ಕಾಲದಲ್ಲಿ ಅವನು ಸ್ಥಿತಪ್ರಜ್ಞನೆಂದು ಹೇಳಲ್ಪಡುತ್ತಾನೆ. ||೫೫||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  54
ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ
ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಂ ಪ್ರಭಾಷೇತ
ಕಿಮಾಸೀತ ವ್ರಜೇತ ಕಿಮ್ ||
ಅರ್ಜುನನು ಹೇಳಿದನು- ಹೇ ಕೇಶವ! ಸಮಾಧಿಸ್ಥನಾಗಿ ಪರಮಾತ್ಮನನ್ನು ಪಡೆದಿರುವ ಸ್ಥಿರಬುದ್ಧಿಯುಳ್ಳ ಪುರುಷನ ಲಕ್ಷಣಗಳೇನು? ಆ ಸ್ಥಿರಬುದ್ಧಿಯ ಪುರುಷನು ಹೇಗೆ ಮಾತನಾಡುತ್ತಾನೆ, ಹೇಗೆ ಕುಳಿತಿರುತ್ತಾನೆ. ಮತ್ತು ಹೇಗೆ ನಡೆಯುತ್ತಾನೆ? ||೫೪||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  53
ಶ್ರುತಿವಿಪ್ರತಿಪನ್ನಾ ತೇ
ಯದಾ ಸ್ಥಾಸ್ಯತಿ ನಿಶ್ಚಲಾ|
ಸಮಧಾವಚಲಾ ಬುದ್ಧಿಃ
ತದಾ ಯೋಗಮವಾಪ್ಸ್ಯಸಿ||
ಬಗೆ ಬಗೆಯ ವಚನಗಳನ್ನು ಕೇಳಿ
ವಿಚಲಿತವಾದ ನಿನ್ನ ಬುದ್ಧಿಯು ಪರಮಾತ್ಮನಲ್ಲಿ ಅಚಲವಾಗಿ ಸ್ಥಿರವಾದಾಗ ನೀನು ಯೋಗವನ್ನು ಪಡೆಯುವೆ.ಅಂದರೆ ಪರಮಾತ್ಮನೊಂದಿಗೆ ನಿನಗೆ ನಿತ್ಯ ಸಂಯೋಗ
ಉಂಟಾಗುವುದು.||೫೩||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  52
ಯದಾ ತೇ ಮೋಹಕಲಿಲಂ
ಬುದ್ಧಿರ್ವ್ಯತಿತರಿಷ್ಯತಿ|
ತದಾ ಗಂತಾಸಿ ನಿರ್ವೇದಂ
ಶೋತ್ರವ್ಯಸ್ಯ ಶ್ರುತಸ್ಯ ಚ||
ಯಾವಾಗ ನಿನ್ನ ಬುದ್ದಿಯು ಮೋಹರೂಪೀ ಕೆಸರನ್ನು ಪುರ್ಣವಾಗಿ ದಾಟಿಹೋಗುವುದೋ,ಆಗ ನೀನು ಕೇಳಿದ ಕೇಳುವಂತಹ ಇಹ- ಪರಲೋಕಗಳ ಸಮಸ್ತ ಭೊಗಗಳಿಂದ ವಿರಕ್ತನಾಗುವೆ.||೫೨||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  51
ಕರ್ಮಜಂ ಬುದ್ಧಿಯುಕ್ತಾ ಹಿ
ಫಲಂ ತ್ಯಕ್ತ್ವಾ ಮನೀಷಿಣಃ|
ಜನ್ಮಬಂಧವಿನಿರ್ಮುಕ್ತಾಃ
ಪದಂ ಗಚ್ಛಂತ್ಯನಾಮಯಮ್||
ಏಕೆಂದರೆ,ಸಮಬದ್ಧಿಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಜಿಸಿ, ಜನ್ಮರೂಪಿ ಬಂಧನದಿಂದ ಮುಕ್ತರಾಗಿ ನಿರ್ವಿಕಾರ ಪರಮ ಪದವನ್ನು ಹೊಂದುವರು.||೫೧||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  50
ಬುದ್ಧಿಯುಕ್ತೋ ಜಹಾತೀಹ
ಉಭೇ ಸುಕೃತದುಷ್ಕೃತೇ|
ತಸ್ಮಾದ್ಯೋಗಾಯ ಯುಜ್ಯಸ್ವ
ಯೋಗಃ ಕರ್ಮಸು ಕೌಶಲಮ್||
ಸಮ ಬುದ್ಧಿಯುಳ್ಳ ಪುರುಷನು ಪುಣ್ಯ ಮತ್ತು ಪಾಪಗಳೆರಡನ್ನೂ ಇದೇ ಲೋಕದಲ್ಲಿ ತ್ಯಜಿಸುತ್ತಾನೆ, ಅಂದರೆ ಅವುಗಳಿಂದ ಮುಕ್ತನಾಗುತ್ತಾನೆ.ಆದ್ದರಿಂದ ನೀನು ಸಮತ್ವ ರೂಪೀ ಯೋಗಕ್ಕೆ ಅಂಟಿಕೊಂಡಿರು.ಈ ಸಮತ್ವರೂಪೀ ಯೋಗವೇ ಕ್ರಮಗಳಲ್ಲಿ ಕುಶಲತೆಯಾಗಿದೆ.ಅಂದರೆ ಕರ್ಮಬಂಧನದಿಂದ ಬಿಡುಗಡೆ ಹೊಂದುವ ಉಪಾಯವಾಗಿದೆ.||೫೦||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಈ ಸಮತ್ವರೂಪೀ ಬುದ್ಧಿಯೋಗಕ್ಕಿಂತ ಸಕಾಮ ಕರ್ಮವು ಅತ್ಯಂತ ತುಚ್ಛವಾಗಿದೆ.ಆದ್ದರಿಂದ ಧನಂಜಯನೇ! ನೀನು ಸಮಬುದ್ಧಿಯಲ್ಲಿಯೇ ರಕ್ಷಣೆಯ ಉಪಾಯವನ್ನು ಹುಡುಕು.ಅಂದರೆ ಬುದ್ಧಿಯೋಗವನ್ನೇ ಆಶ್ರಯಿಸು.ಏಕೆಂದರೆ ಫಲದ ಇಚ್ಛೆಯುಳ್ಳವರು ಅತ್ಯಂತ ದೀನರಾಗಿದ್ದಾರೆ.||೪೯||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)">
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  49
ದೂರೇಣ ಹ್ಯವರಂ ಕರ್ಮ
ಬುದ್ಧಿಯೋಗಾದ್ಧನಂಜಯ|
ಬುದ್ದೌ ಶರಣಮನ್ವಿಚ್ಛ
ಕೃಪಣಾಃ ಫಲಹೇತವಃ||
ಯಾವ ಕರ್ಮವನ್ನೇ ಮಾಡಲಿ ಅದು ಪೂರ್ಣವಾಗಲಿ ಅಥವಾ ಅಪೂರ್ಣವಾಗಲಿ ಹಾಗೂ ಅದರ ಫಲದಲ್ಲಿ ಸಮಾನವಾದ ಭಾವವಿರುವುದೇ "ಸಮತ್ವ" ಎನ್ನಲಾಗಿದೆ.
ಈ ಸಮತ್ವರೂಪೀ ಬುದ್ಧಿಯೋಗಕ್ಕಿಂತ ಸಕಾಮ ಕರ್ಮವು ಅತ್ಯಂತ ತುಚ್ಛವಾಗಿದೆ.ಆದ್ದರಿಂದ ಧನಂಜಯನೇ! ನೀನು ಸಮಬುದ್ಧಿಯಲ್ಲಿಯೇ ರಕ್ಷಣೆಯ ಉಪಾಯವನ್ನು ಹುಡುಕು.ಅಂದರೆ ಬುದ್ಧಿಯೋಗವನ್ನೇ ಆಶ್ರಯಿಸು.ಏಕೆಂದರೆ ಫಲದ ಇಚ್ಛೆಯುಳ್ಳವರು ಅತ್ಯಂತ ದೀನರಾಗಿದ್ದಾರೆ.||೪೯||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  48
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ|
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೆ||
ಎಲೈ ಧನಂಜಯ! ನೀನು ಆಸಕ್ತಿಯನ್ನು ತ್ಯಜಿಸಿ, ಸಿದ್ದಿ ಅಸಿದ್ಧಿಗಳಲ್ಲಿ ಸಮಬುದ್ಧಿಯುಳ್ಳವನಾಗಿ ,ಯೋಗದಲ್ಲಿ ನೆಲೆನಿಂತು ಕರ್ತವ್ಯ ಕರ್ಮಗಳನ್ನು ಮಾಡು. ಸಮತ್ವವನ್ನೇ ಯೋಗ ಎಂದು ಹೇಳಲಾಗಿದೆ.||೪೮||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  47
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋ$ಸ್ತ್ವಕರ್ಮಣಿ||
ನಿನಗೆ ಕರ್ಮಮಾಡಲು ಮಾತ್ರ ಅಧಿಕಾರವಿದೆ.ಅದರ ಫಲದ ವಿಷಯದಲ್ಲಿ ಎಂದಿಗೂ ಇಲ್ಲ.ಆದ್ದರಿಂದ ನೀನು ಕರ್ಮಗಳ ಫಲಗಳನ್ನು ಇಚ್ಛಿಸುವವನಾಗಬೇಡ.ಹಾಗೆಯೇ ಕರ್ಮಮಾಡದೇ ಇರುವ ಆಗ್ರಹವನ್ನು ಇಟ್ಟುಕೊಳ್ಳಬೇಡ.
||೪೭||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  46
ಯಾವಾನರ್ಥ ಉದಪಾನೇ
ಸರ್ವತಃ ಸಂಪ್ಲುತೋದಕೇ|
ತಾವಾನ್ ಸರ್ವೇಷು ವೇದೇಷು
ಬ್ರಾಹ್ಮಣಸ್ಯ ವಿಜಾನತಃ||
ಎಲ್ಲ ಕಡೆಗಳಿಂದಲೂ ತುಂಬಿತುಳುಕುವ ಜಲಾಶವು ದೊರಕಿದಾಗ ಚಿಕ್ಕ ಜಲಾಶಯದಿಂದ ಮನುಷ್ಯನಿಗೆ ಎಷ್ಟು ಪ್ರಯೋಜನವಾಗುತ್ತದೆಯೋ, ಬ್ರಹ್ಮವನ್ನು ತತ್ವಶಃ ತಿಳಿದಿರುವ ಬ್ರಾಹ್ಮಣನಿಗೆ ಸಮಸ್ತ ವೇದಗಳಲ್ಲಿ ಅಷ್ಟೇ ಪ್ರಯೋಜನವಿರುತ್ತದೆ;(ಹೇಗೆಂದರೆ ಬ್ರಹ್ಮಾನಂದ ಪ್ರಪ್ತಿಯಾದ ಮೇಲೆ ಆನಂದಕ್ಕಾಗಿ ವೇದಗಳ ಅವಶ್ಯಕತೆ ಇರುವುದಿಲ್ಲ. )||೪೬||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  45
ತ್ರೈಗುಣ್ಯವಿಷಯಾ ವೇದಾಃ
ನಿಸ್ರೈಗುಣ್ಯೋ ಭವಾರ್ಜುನ|
ನಿರ್ದ್ವಂದ್ವೋ ನಿತ್ಯಸತ್ವಸ್ಥೋ
ನಿರ್ಯೋಗಕ್ಷೇಮ ಆತ್ಮವಾನ್|
ಹೇ ಅರ್ಜುನನೇ!ವೇದಗಳು ಮೇಲೆ ಹೇಳಿದ ಪ್ರಕಾರ ಮೂರು ಗುಣಗಳ ಕಾರ್ಯರೂಪವಾದ ಸಮಸ್ತ ಭೋಗಗಳನ್ನು ಮತ್ತು ಅವುಗಳ ಸಾಧನೆಗಳನ್ನು ಪ್ರತಿಪಾದಿಸುತ್ತವೆ; ಆದ್ದರಿಂದ ನೀನು ಆ ಭೋಗಗಳು ಮತ್ತು ಅವುಗಳ ಸಾಧನೆಗಳಲ್ಲಿ ಆಸಕ್ತಿಹೀನನಾಗಿ, ಹರ್ಷ-ಶೋಕಾದಿ ದ್ವಂದ್ವಗಳಿಂದ ರಹಿತನಾಗಿ, ನಿತ್ಯವಸ್ತುವಾದ ಪರಮಾತ್ಮನಲ್ಲಿ ಸ್ಥಿತನಾಗಿ ಯೋಗ ಕ್ಷೇಮವನ್ನು ಬಯಸದವನೂ ಮತ್ತು ಸ್ವಾಧೀನ ಅಂತಃಕರಣ ವುಳ್ಳವನೂ ಆಗು. ||೪೫||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  44
ಭೋಗೈಶ್ವರ್ಯಪ್ರಸಕ್ತಾನಾಂ
ತಯಾಪಹೃತಚೇತಸಾಮ್ |
ವ್ಯವಸಾಯಾತ್ಮಿಕಾ ಬುದ್ಧಿಃ
ಸಮಾಧೌ ನ ವಿಧೀಯತೇ||
ಆ ವಾಣಿಯ ಮೂಲಕ ಯಾರ ಚಿತ್ತವು ಅಪಹರಿಸಲ್ಪಟ್ಟಿದೆಯೋ, ಯಾರು ಭೋಗ ಮತ್ತು ಐಶ್ವರ್ಯದಲ್ಲಿ ಅತ್ಯಂತ ಪ್ರಸಕ್ತರಾಗಿದ್ದಾರೋ - ಆ ಪುರುಷರಿಗೆ ಪರಮಾತ್ಮನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ.||೪೪||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  43
ಕಾಮಾತ್ಮಾನಃ ಸ್ವರ್ಗಪರಾಃ
ಜನ್ಮಕರ್ಮಫಲಪ್ರದಾಮ್|
ಕ್ರಿಯಾವಿಶೇಷಬಹುಲಾಂ
ಭೋಗೈಶ್ವರ್ಯಗತಿಂ ಪ್ರತಿ||
ಯಾರಬುದ್ಧಿಯಲ್ಲಿ ಸ್ವರ್ಗವೇ ಪರಮಪ್ರಾಪ್ಯವಸ್ತುವಾಗಿದೆಯೋ ಮತ್ತು ಸ್ವರ್ಗಕ್ಕಿಂ ಮಿಗಿಲಾದ ಎರಡನೇ ವಸ್ತುವೇ ಇಲ್ಲ- ಹೀಗೆ ಹೇಳುವವರಿದ್ದಾರೋ ಆ ಅವಿವೇಕಿ ಜನರು ಈ ಪ್ರಕಾರದ ಯಾವ ಪುಷ್ಪಿತವಾದ ಅರ್ಥಾತ್ ತೋರಿಕೆಗೆ ಮಾತ್ರ ಶೋಭೆಯಿಂದ ಕೂಡಿದ ವಾಣಿಯನ್ನು ಹೇಳುತ್ತಿರುತ್ತಾರೋ, ಅದು ಜನ್ಮ-ರೂಪೀ-ಕರ್ಮಫಲವನ್ನು ಕೊಡುವುದಾಗಿಯೂ ಮತ್ತು ಭೋಗ ಹಾಗೂ ಐಶ್ವರ್ಯದ ಪ್ರಾಪ್ತಿಗಾಗಿ ನಾನಾ ಪ್ರಕಾರದ, ಬಹಳಷ್ಟು ಕ್ರಿಯೆಗಳ ವರ್ಣನೆಯನ್ನು ಮಾಡುವುದಾಗಿದೆಯೋ - ಆ ಪುರುಷರಿಗೆ ಪರಮಾತ್ಮನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ.
{೪೪ ನೇ ಶ್ಲೋಕದೊಂದಿಗೆ ಅನ್ವಯಮಾಡಲಾಗಿದೆ.}
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  42
ಯಾಮಿಮಾಂ ಪುಷ್ಪಿತಾಂ ವಾಚಂ
ಪ್ರವದ್ಯಂತವಿಪಶ್ಚಿತಃ|
ವೇದವಾದರತಾಃ ಪಾರ್ಥ
ನಾನ್ಯದಸ್ತೀತಿ ವಾದಿನಃ ||
ಹೇ ಅರ್ಜುನನೇ! ಯಾರು ಭಾಗಗಳಲ್ಲಿ ತನ್ಮಯರಾಗಿದ್ದಾರೋ, ಯಾರು ಕರ್ಮಫಲವನ್ನು ಪ್ರಶಂಸಿಸುವ ವೇದವಾಕ್ಯಗಳಲ್ಲಿ ಪ್ರೀತಿಯನ್ನಿಡುತ್ತಾರೋ, - ಆ ಪುರುಷರಿಗೆ ಪರಮಾತ್ಮನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ. ||೪೨||

{೪೪ ನೇ ಶ್ಲೋಕದೊಂದಿಗೆ ಅನ್ವಯಮಾಡಲಾಗಿದೆ.}
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  41
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ |
ಬಹುಶಾಖಾ ಹ್ಯನಂತಾಶ್ಚ ಬುದ್ಧಯೋ$ವ್ಯವಸಾಯಿನಾಮ್ ||
ಎಲೈ ಅರ್ಜುನ ! ಈ ಕರ್ಮಯೋಗದಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಒಂದೇ ಇರುತ್ತದೆ. ಆದರೆ ಅಸ್ಥಿರ ವಿಚಾರವುಳ್ಳ ಅವಿಚಾರಿ ಸಕಾಮರಾದ ಮನುಷ್ಯರ ಬುದ್ಧಿಯು ನಿಶ್ಚಯವಾಗಿ ಅನೇಕ ಕವಲುಗಳಿಂದ ಕೂಡಿದ್ದು, ಅನಂತವಾಗಿರುತ್ತದೆ. ||೪೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  40
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ನೇಹಾಭಿಕ್ರಮನಾಶೋ$ಸ್ತಿ ಪ್ರತ್ಯವಾಯೋ ನ ವಿದ್ಯತೇ |
ಸ್ವಲ್ಪಮಷ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ||
ಈ ಕರ್ಮಯೋಗದಲ್ಲಿ ಉಪಕ್ರಮದ ಅರ್ಥಾತ್ ಬೀಜದ ನಾಶವಾಗುವುದಿಲ್ಲ. ಹಾಗೂ ಇದರಲ್ಲಿ ವಿರುದ್ಧವಾದ ಫಲರೂಪೀ ದೋಷವೂ ಇಲ್ಲ. ಇಷ್ಟೇ ಅಲ್ಲ ಈ ಕರ್ಮಯೋಗರೂಪ ಧರ್ಮದ ಸ್ವಲ್ಪ ಸಾಧನವೂ ಜನ್ಮ-ಮೃತ್ಯುರೂಪ ದೊಡ್ಡ ಭಯದಿಂದ ರಕ್ಷಿಸುತ್ತದೆ. ||೪೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  39
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಏಷಾ ತೇ$ಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು |
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ ||
ಎಲೈ ಪಾರ್ಥ ! ಈ ವಿಚಾರವನ್ನು ಜ್ಞಾನಯೋಗದ ಸಂದರ್ಭದಲ್ಲಿ ನಿನಗೆ ಹೇಳಲಾಯಿತು. ಇನ್ನು ಈಗ ಕರ್ಮಯೋಗದ ವಿಷಯವಾಗಿ ಕೇಳು. ಈ ಬುದ್ಧಿಯಿಂದ ಕೂಡಿದ್ದರೆ ನೀನು ಕರ್ಮ ಬಂಧನಗಳನ್ನು ಚೆನ್ನಾಗಿ ಕಳಚಿಕೊಳ್ಳುವೆ. ||೩೯||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  38
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಜಯೌ |
ತತೋ ಯುದ್ಧಾಯ ಯುಜ್ಯಸ್ವನೈವಂ ಪಾಪಮವಾಪ್ಸ್ಯಸಿ ||
ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ-ದುಃಖ ಇವುಗಳನ್ನು ಸಮಾನವಾಗಿ ತಿಳಿದುಕೊಂಡು, ಯುದ್ಧಕ್ಕೆ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡಿದರೆ ನಿನಗೆ ಪಾಪವು ತಟ್ಟಲಾರದು. ||೩೮||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  37
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯ ಸೇ ಮಹೀಮ್ |
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ ||
ಯುದ್ಧದಲ್ಲಿ ನೀನು ಸತ್ತರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಅನುಭವಿಸುವೆ. ಆದ್ದರಿಂದ ಹೇ ಅರ್ಜುನ ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ||೩೭||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  36
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ |
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್ ||
ನಿನ್ನ ವೈರಿಗಳು ನಿನ್ನ ಸಾಮರ್ಥವನ್ನು ನಿಂದಿಸುತ್ತಾ ನಿನ್ನ ಬಗ್ಗೆ ಹೇಳಬಾರದ ಅನೇಕ ಮಾತುಗಳನ್ನು ನುಡಿಯುವರು. ಇದಕ್ಕಿಂತ ಹೆಚ್ಚಿನದಾದ ದುಃಖವು ಮತ್ತೆ ಯಾವುದಿರಬಹುದು? ||೩೬||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  35
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ |
ಯೇಷಾಂ ಚ ತ್ವಂ ಬಹುಮತೋ ಭೂತ್ವಾಯಾಸ್ಯಸಿ ಲಾಘವಮ್ ||
ಅಲ್ಲದೆ ಯಾರ ದೃಷ್ಟಿಯಲ್ಲಿ ನೀನು ಮೊದಲು ಬಹಳ ಸಮ್ಮಾನಿತನಾಗಿದ್ದೆಯೋ ಅವರು ನಿನ್ನನ್ನು ತುಚ್ಛವಾಗಿ ಕಾಣುವರು, ಅಷ್ಟೇ ಅಲ್ಲ ಆ ಮಹಾರಥರು ನಿನ್ನನ್ನು ಭಯದ ಕಾರಣದಿಂದಾಗಿ ಯುದ್ಧದಿಂದ ಹಿಮ್ಮೆಟ್ಟಿದವನೆಂದು ತಿಳಿಯುವರು. ||೩೫||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  34
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇ$ವ್ಯಯಾಮ್ |
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ||
ಹಾಗೆಯೇ ಎಲ್ಲ ಜನರು ನಿನ್ನ ಅಪಕೀರ್ತಿಯನ್ನು ಬಹುಕಾಲದವರೆಗೆ ಆಡಿಕೊಳ್ಳುವರು ಮತ್ತು ಮಾನವಂತನಿಗೆ ಈ ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚಿನದಾಗಿದೆ. ||೩೪||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  33
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅಥ ಚೇತ್ತ್ವಮಿಮಂ ಧರ್ಮ್ಯಂ ಸಂಗ್ರಾಮಂ ನ ಕರಿಷ್ಯಸಿ |
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||
ಆದರೂ ನೀನು ಈ ಧರ್ಮಯುಕ್ತವಾದ ಯುದ್ಧವನ್ನು ಮಾಡದಿದ್ದರೆ ಸ್ವಧರ್ಮವನ್ನು ಮತ್ತು ಕೀರ್ತಿಯನ್ನು ಕಳೆದುಕೊಂಡು ಪಾಪವನ್ನು ಪಡೆಯುವೆ. ||೩೩||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  32
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ |
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ||
ಹೇ ಪಾರ್ಥ ! ತನ್ನಿಂದ ತಾನೇ ಪ್ರಾಪ್ತವಾದ, ತೆರೆದಿರುವ ಸ್ವರ್ಗದ ದ್ವಾರದಂತಿರುವ ಇಂತಹ ಯುದ್ಧವನ್ನು ಭಾಗ್ಯಶಾಲಿ ಕ್ಷತ್ರಿಯರೇ ಪಡೆಯುತ್ತಾರೆ. ||೩೨||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  31
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ |
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋ$ನ್ಯತ್‌ಕ್ಷತ್ರಿಯಸ್ಯ ನ ವಿದ್ಯತೇ ||
ಹಾಗೆಯೇ ಸ್ವಧರ್ಮವನ್ನು ನೋಡಿದರೂ ನೀನು ಭಯಪಡಬಾರದು. ಏಕೆಂದರೆ ಕ್ಷತ್ರಿಯನಾದವನಿಗೆ ಧರ್ಮಯುಕ್ತ ಯುದ್ಧಕ್ಕಿಂತ ಮಿಗಿಲಾದ ಶ್ರೇಯಸ್ಕರವಾದ ಕರ್ತವ್ಯವು ಯಾವುದೂ ಇರುವುದಿಲ್ಲ. ||೩೧||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  30
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ದೇಹೀ ನಿತ್ಯಮವಧ್ಯೋ$ಯಂ ದೇಹೇ ಸರ್ವಸ್ಯ ಭಾರತ |
ತಸ್ಮಾತ್ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸೀ ||
ಹೇ ಅರ್ಜುನ ! ಈ ಆತ್ಮನು ಎಲ್ಲರ ಶರೀರಗಳಲ್ಲಿ ಸದಾ ಅವಧ್ಯವಾಗಿದ್ದಾನೆ. ಆದ್ದರಿಂದ ಸಮಸ್ತ ಪ್ರಾಣಿಗಳಿಗಾಗಿ ನೀನು ಶೋಕಿಸುವುದು ಸರಿಯಲ್ಲ. ||೩೦||
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  29
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಆಶ್ಚರ್ಯವತ್ಪಶ್ಯತಿ ಕಶ್ಚಿದೇನಮಾಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾಷ್ಯೇನಂ ವೇದ ನ ಚೈವ ಕಶ್ಚಿತ್ ||
ಯಾರೋ ಒಬ್ಬ ಮಹಾಪುರುಷನು ಈ ಆತ್ಮವನ್ನು ಆಶ್ಚರ್ಯದಂತೆ ನೋಡುತ್ತಾನೆ ಮತ್ತು ಹಾಗೆಯೇ ಬೇರೆ ಯಾರೋ ಮಹಾಪುರುಷನು ಇದರ ತತ್ವವನ್ನು ಆಶ್ಚರ್ಯದಂತೆ ವರ್ಣಿಸುತ್ತಾನೆ, ಬೇರೆ ಯಾರೋ ಅಧಿಕಾರಿ ಪುರುಷನು ಇದನ್ನು ಆಶ್ಚರ್ಯದಂತೆ ಕೇಳುತ್ತಾನೆ ಮತ್ತು ಕೆಲವರಾದರೋ ಕೇಳಿಯೂ ಕೂಡ ಇದನ್ನು ಅರಿಯಲಾರರು. ||೨೯||
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  28
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ

ಅವ್ಯಕ್ತಾದೀನ ಭೂತಾನಿ ವ್ಯಕ್ತಮಧ್ಯಾನಿ ಭಾರತ |
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ ||
ಹೇ ಅರ್ಜುನ ! ಸಮಸ್ತ ಪ್ರಾಣಿಗಳು ಹುಟ್ಟುವ ಮೊದಲು ಅಪ್ರಕಟವಾಗಿರುತ್ತವೆ ಮತ್ತು ಸತ್ತ ನಂತರವೂ ಅಪ್ರಕಟವಾಗುತ್ತವೆ, ಕೇವಲ ಮಧ್ಯದಲ್ಲಿ ಮಾತ್ರ ಪ್ರಕಟವಾಗಿರುತ್ತವೆ. ಇಂತಹ ಸ್ಥಿತಿಯಲ್ಲಿ ಏಕೆ ಶೋಕಿಸಬೇಕು? ||೨೮||
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  27
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ

ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾದಪರಿಹಾರ್ಯೇ$ರ್ಥೇ ನ ತ್ವಂ ಶೋಚಿತು ಮರ್ಹಸಿ ||
ಏಕೆಂದರೆ ಈ ಅಭಿಪ್ರಾಯಕ್ಕನುಸಾರವಾಗಿ ಹುಟ್ಟಿದವನ ಸಾವು ನಿಶ್ಚಿತವಾಗಿದೆ ಮತ್ತು ಸತ್ತವನ ಹುಟ್ಟು ನಿಶ್ಚಿತವಾಗಿದೆ. ಆದ್ದರಿಂದ ಈ ಉಪಾಯವಿಲ್ಲದ ವಿಷಯದಲ್ಲಿ ನೀನು ಶೋಕಿಸುವುದು ಯೋಗ್ಯವಲ್ಲ. ||೨೭||
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  26
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ

ಅಥ ಚೈನಂ ನಿತ್ಯಜಾತಂ ನಿತ್ಯಂ ವಾ ಮನಸ್ಯೇ ಮೃತಮ್ |
ತಥಾಪಿ ತ್ವಂ ಮಹಾಬಾಹೋ ನೈವಂ ಶೋಚಿತು ಮರ್ಹಸಿ ||
ಆದರೂ ಒಂದು ವೇಳೆ ನೀನು ಈ ಆತ್ಮನು ಸದಾ ಹುಟ್ಟುವವನು ಹಾಗೂ ಸದಾ ಸಾಯುವವನೂ ಎಂದು ತಿಳಿದಿದ್ದರೂ ಕೂಡ ಹೇ ಮಹಾಬಾಹುವೇ! ನೀನು ಈ ಪ್ರಕಾರವಾಗಿ ಶೋಕಿಸುವುದಕ್ಕೆ ಯೋಗ್ಯನಲ್ಲ. ||೨೬||
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  25
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ

ಅವ್ಯಕ್ತೋ$ಯಮಚಿಂತ್ಯೋ$ಯಮವಿಕಾಯೋ$ಯ ಮುಚ್ಯತೇ |
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ||
ಈ ಆತ್ಮನು ಅವ್ಯಕ್ತವೂ, ಅಚಿಂತ್ಯವೂ, ಮತ್ತು ವಿಕಾರರಹಿತವೂ ಆಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಹೇ ಅರ್ಜುನಾ ! ಈ ಆತ್ಮನನ್ನು ಮೇಲೆ ಹೇಳಿದ ಪ್ರಕಾರವಾಗಿ ತಿಳಿದುಕೊಂಡು ನೀನು ಶೋಕಿಸುವುದು ಉಚಿತವಲ್ಲ. ||೨೫||
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  24
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅಚ್ಛೇದ್ಯೋ$ಯಮದಾಹ್ಯೋ$ಯಮಕ್ಲೇದ್ಯೋ$ಶೋಷ್ಯ ಏವ ಚ |
ನಿತ್ಯಃ ಸರ್ವಗತಃ ಸ್ಥಾಣುರಚಲೋ$ಯಂ ಸನಾತನಃ ||
ಏಕೆಂದರೆ, ಈ ಆತ್ಮವು ಕತ್ತರಿಸಲಾಗದ, ಸುಡಲಾರದ, ನೆನೆಯದ ಮತ್ತು ನಿಸ್ಸಂದೇಹವಾಗಿ ಒಣಗಲಾರದ್ದಾಗಿದೆ. ಹಾಗೆಯೇ ಈ ಆತ್ಮನು ನಿತ್ಯ, ಸರ್ವವ್ಯಾಪ್ತೀ, ಅಚಲ, ಸ್ಥಿರವಾಗಿರುವ ಸನಾತನವಾಗಿದೆ. ||೨೪||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  23
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ನೈನಂ ಛಿಂದಂತಿ ಶಶ್ತ್ರಾಣಿ ನೈನಂ ದಹತಿ ಪಾವಕಃ |
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||
ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಇದನ್ನು ಬೆಂಕಿಯು ಸುಡಲಾರದು, ಇದನ್ನು ನೀರು ತೋಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು. ||೨೩||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  22
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ
ನವಾನಿ ಗೃಹ್ಣಾತಿ ನರೋ$ಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾ
ನ್ಯನ್ಯಾನಿ ಸಂಯಾತಿ ನವಾನಿ ದೇಹೀ ||
ಮನುಷ್ಯನು ಹಳೆಯ ವಸ್ತ್ರಗಳನ್ನು ಬಿಸುಟು ಬೇರೆ ಹೊಸ ವಸ್ತ್ರಗಳನ್ನು ಧರಿಸುವಂತೆಯೇ, ಜೀವಾತ್ಮನು ಹಳೆಯ ಶರೀರಗಳನ್ನು ಬಿಸಿಟು ಬೇರೆ ಹೊಸ ಶರೀರಗಳನ್ನು ಪಡೆಯುತ್ತಾನೆ. ||೨೨||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  21
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ |
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ||
ಹೇ ಪಾರ್ಥಾ! ಈ ಆತ್ಮನನ್ನು ನಾಶರಹಿತನೂ, ನಿತ್ಯನೂ ಅಜನ್ಮನೂ ಮತ್ತು ಅವ್ಯಯನೆಂದೂ ತಿಳಿಯುವ ಪುರುಷನು ಯಾರನ್ನಾದರೂ ಹೇಗೆ ಕೊಲ್ಲಿಸುತ್ತಾನೆ ಅಥವಾ ಯಾರನ್ನು ಹೇಗೆ ಕೊಲ್ಲುತ್ತಾನೆ? ||೨೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  20
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ನ ಜಾಯತೇ ಮ್ರಿಯತೇ ವಾ ಕದಾಚಿತ್
ನಾಯಂ ಭೂತ್ವಾಭ ವಿತಾ ವಾ ನ ಭೂಯಃ|
ಅಜೋ ನಿತ್ಯಃ ಶಾಶ್ವತೋ$ಯಂ ಪುರಾಣೋ
ನ ಹನ್ಯತೇ ಹನ್ಯಮಾನೇ ಶರೀರೇ ||
ಈ ಆತ್ಮನು ಎಂದೂ ಹುಟ್ಟುವುದಿಲ್ಲ. ಸಾಯುವುದೂ ಇಲ್ಲ. ಹಾಗೆಯೇ ಒಮ್ಮೆ ಉತ್ಪತ್ತಿಯಾಗಿ ಮತ್ತೆ ಇರುತ್ತಾನೆ ಎಂಬುದೂ ಇಲ್ಲ. ಏಕೆಂದರೆ ಇವನು ಜನ್ಮ ರಹಿತನೂ ನಿತ್ಯನೂ, ಸನಾತನನೂ ಮತ್ತು ಪುರಾತನನೂ ಆಗಿದ್ದಾನೆ, ಶರೀರವು ನಾಶವಾದರೂ ಇವನು ನಾಶವಾಗುವುದಿಲ್ಲ. ||೨೦||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  19
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ |
ಉಭೌ ತೌ ನ ವಿಜಾನಿತೋ ನಾಯಂ ಹಂತಿ ನ ಹತ್ಯತೇ ||
ಈ ಆತ್ಮನನ್ನು ಕೊಲ್ಲುವವನೆಂದು ತಿಳಿಯುವವನು ಹಾಗೂ ಇವನು ಸತ್ತವನೆಂದು ತಿಳಿಯುವವನು ಇವರಿಬ್ಬರೂ ತಿಳಿದವರಲ್ಲ. ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ ಕೊಲ್ಲುವುದಿಲ್ಲ ಮತ್ತು ಯಾರಿಂದಲೂ ಸಾಯುವುದಿಲ್ಲ. ||೧೯||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  18
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ |
ಅನಾಶಿನೋ$ಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ ||
ಈ ನಾಶರಹಿತ ಎಣಿಸಲಾರದ, ನಿತ್ಯ ಸ್ವರೂಪನಾದ ಜೀವಾತ್ಮನ ಈ ಶರೀರಗಳು ನಾಶವುಳ್ಳವುಗಳೆಂದು ಹೇಳಲಾಗಿದೆ. ಅದಕ್ಕಾಗಿ ಹೇ ಭರತವಂಶೀ ಅರ್ಜುನನೇ! ನೀನು ಯುದ್ಧಮಾಡು. ||೧೮||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  17
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್ |
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ ||
ಯಾವುದರಿಂದ ಈ ಸಂಪೂರ್ಣ ದೃಶ್ಯ ಜಗತ್ತು ವ್ಯಾಪ್ತವಾಗಿದೆಯೋ ಅದನ್ನು ನೀನು ನಾಶರಹಿತವಾದುದೆಂದು ತಿಳಿ. ಈ ಅವಿನಾಶಿಯ ವಿನಾಶವನ್ನು ಯಾರೂ ಮಾಡಲಾರರು. ||೧೭||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  16
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ನಾಸತೋವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟೋ$ಂತಸ್ತ್ವನಯೋಸ್ತತ್ವದರ್ಶಿಭಿಃ ||
ಅಸದ್ವಸ್ತುವಿಗೆ ಇರುವಿಕೆ ಇಲ್ಲ ಮತ್ತು ಸದವಸ್ತುವಿಗೆ ಅಭಾವವಿಲ್ಲ. ಇವೆರಡರ ತತ್ತ್ವವನ್ನು ತತ್ತ್ವಜ್ಞಾನೀ ಪುರುಷರು ನೋಡಿದ್ದಾರೆ. ||೧೬||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  15
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ |
ಸಮದುಃಖಸುಖಂ ಧೀರಂ ಸೋ$ಮೃತತ್ಪಾಯ ಕಲ್ಪತೇ ||
ಏಕೆಂದರೆ, ಹೇ ಪುರುಷಶ್ರೇಷ್ಠನೇ ! ಸುಖದುಃಖಗಳನ್ನು ಸಮಾನವಾಗಿ ತಿಳಿಯುವ ಧೀರ ಪುರುಷನನ್ನು ಈ ಇಂದ್ರಿಯ ಮತ್ತು ವಿಷಯಗಳ ಸಂಯೋಗವು ವ್ಯಾಕುಲಗೊಳಿಸುವುದಿಲ್ಲ; ಅವನು ಮೋಕ್ಷಕ್ಕೆ ಯೋಗ್ಯನಾಗುತ್ತಾನೆ. ||೧೫||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  14
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾಃ |
ಆಗಮಾಯಿನೋ$ನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ||೧೪||
ಎಲೈ ಕುಂತೀ ಪುತ್ರನೇ! ಶೀತ-ಉಷ್ಣ, ಸುಖ-ದುಃಖ ಮುಂತಾದ ವಿಷಯಗಳು ಇಂದ್ರಿಯಗಳೊಡನೆ ಸಂಯೋಗವಾಗುತ್ತವೆ. ಅನಿತ್ಯವಾದ ಅವು ಉತ್ಪನ್ನವಾಗುತ್ತವೆ ಹಾಗೂ ನಾಶವಾಗುತ್ತವೆ, ಆದ್ದರಿಂದ ಅರ್ಜುನನೇ ! ಅವುಗಳನ್ನು ನೀನು ಸಹಿಸು.||೧೪||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  13
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಶ್ರೀಭಗವಾನುವಾಚ
ದೇಹಿನೋ$ಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ||
ಜೀವಾತ್ಮನಿಗೆ ಈ ದೇಹದಲ್ಲಿ ಬಾಲ್ಯ, ಯೌವನ ಮತ್ತು ವೃದ್ಧಾವಸ್ಥೆಗಳುಂಟಾಗುವಂತೆಯೇ ಬೇರೆ ಶರೀರವು ದೊರೆಯುತ್ತದೆ. ಆ ವಿಷಯದಲ್ಲಿ ಧೀರ ಪುರುಷನು ಮೋಹಿತ ನಾಗುವುದಿಲ್ಲ.||೧೩||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  12
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಶ್ರೀಭಗವಾನುವಾಚ
ನ ತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ |
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್ ||
ನಾನು ಯಾವುದೇ ಕಾಲದಲ್ಲಿ ಇರಲಿಲ್ಲ, ನೀನು ಇರಲಿಲ್ಲ, ಅಥವಾ ಈ ರಾಜರು ಇರಲಿಲ್ಲ ಎಂಬುದಿಲ್ಲ. ಮುಂದೆಯೂ ನಾವೆಲ್ಲರೂ ಇರಲಾರೆವು ಎಂಬೂದು ಇಲ್ಲ.||೧೨||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  11
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ ||
ಶ್ರೀ ಭಗವಂತನು ಹೇಳಿದನು- ಹೇ ಅರ್ಜುನ! ನೀನು ಯಾರಿಗಾಗಿ ಶೋಕಿಸಬಾರದೋ ಅವರಿಗಾಗಿ ಶೋಕಿಸುತ್ತಿರುವೆ ಹಾಗೂ ಪಂಡಿತರಂತೆ ಮಾತುಗಳನ್ನಾಡುತ್ತಿರುವೆ, ಆದರೆ ಯಾರ ಪ್ರಾಣಗಳು ಹೋಗಿರುವವೋ ಅವರಿಗಾಗಿ ಮತ್ತು ಯಾರ ಪ್ರಾಣಗಳು ಹೋಗಿಲ್ಲವೋ ಅವರಿಗಾಗಿಯೂ ಪಂಡಿತರು ಶೋಕಿಸುವುದಿಲ್ಲ. ||೧೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  10
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಸಂಜಯ ಉವಾಚ
ತಮುವಾಚ ಹೃಷಿಕೇಶಃ ಪ್ರಹಸನ್ನಿವ ಭಾರತ|
ಸೇನಯೋರುಭಯೋರ್ಮಧ್ಯೆ ವಿಷೀದಂತಮಿದಂ ವಚಃ ||
ಹೇ ಭರತವಂಶೀ ಧೃತರಾಷ್ಟ್ರ! ಅಂತರ್ಯಾಮಿ ಭಗವಾನ್ ಶ್ರೀಕೃಷ್ಣನು ಎರಡೂ ಸೈನ್ಯಗಳ ಮಧ್ಯದಲ್ಲಿ ಶೋಕಿಸುತ್ತಿರುವ ಆ ಅರ್ಜುನನಿಗೆ ನಗುತ್ತಿರುವವನಂತೆ ಈ ಮಾತುಗಳನ್ನು ಹೇಳಿದನು. ||೧೦||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  9
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಸಂಜಯ ಉವಾಚ
ಏವಮುಕ್ತ್ವಾ ಹೃಷಿಕೇಶಂ ಗುಡಾಕೇಶಃ ಪರಂತಪ |
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ ||
ಸಂಜಯನಯ ಹೇಳಿದನು- ಹೇ ರಾಜಾ! ನಿದ್ರೆಯನ್ನು ಗೆದ್ದ ಅರ್ಜುನನು ಅಂತರ್ಯಾಮಿ ಭಗವಾನ್ ಶ್ರೀಕೃಷ್ಣನಲ್ಲಿ ಹೀಗೆ ಹೇಳಿ ’ನಾನು ಯುದ್ಧ ಮಾಡುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿ ಸುಮ್ಮನಾದನು. ||೯||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  8
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅರ್ಜುನ ಉವಾಚ
ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್
ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ |
ಅವಾಪ್ಯ ಭೂಮಾವಸಪತ್ನಮೃದ್ಧಂ
ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ ||
ಏಕೆಂದರೆ ಪೃಥಿಯ ಶತ್ರುರಹಿತವಾದ, ಧನ-ಧ್ಯಾನ ಸಮೃದ್ಧವಾದ ರಾಜ್ಯ ದೊರೆತರೂ ಅಥವಾ ದೇವತೆಗಳ ಒಡೆತನವನ್ನು ಪಡೆದರೂ ನನ್ನ ಇಂದ್ರಿಯಗಳನ್ನು ಸೊರಗಿಸುತ್ತಿರುವ ಶೋಕವನ್ನು ದೂರಮಾಡಬಲ್ಲ ಯಾವ ಉಪಾಯವು ನನಗೆ ಕಾಣುವುದಿಲ್ಲ. ||೮||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  7
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅರ್ಜುನ ಉವಾಚ
ಕಾರ್ಪಣ್ಯದೋಷೋಪಹತಸ್ವಭಾವಃ
ಪೃಚ್ಛಾಮಿ ತ್ವಾಂ ಧರ್ಮಸಂಮೂಢಚೇತಾಃ |
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇ$ಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ||
ಆದ್ದರಿಂದ ಹೇಡಿತನ ರೂಪೀ ದೋಷದಿಂದ ನಷ್ಟವಾಗಿರುವ ಸ್ವಭಾವವುಳ್ಳವನೂ ಹಾಗೂ ಧರ್ಮದ ವಿಷಯದಲ್ಲಿ ಮೋಹಿತ ಚಿತ್ತನಾಗಿರುವ ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ-ನಿಶ್ಚಯವಾಗಿ ಶ್ರೇಯಸ್ಕರವಾದ ಸಾಧನೆಯನ್ನು ನನಗಾಗಿ ಹೇಳು. ನಾನು ನಿನ್ನ ಶಿಷ್ಯನಾಗಿದ್ದೇನೆ. ಆದುದರಿಂದ, ನಿನ್ನಲ್ಲಿ ಶರಣಾಗಿರುವ ನನಗೆ ಉಪದೇಶವನ್ನು ಮಾಡು.||೭||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  6
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅರ್ಜುನ ಉವಾಚ
ನ ಚೈತದ್ವಿದ್ಮಃ ಕತರನ್ನೋ ಗರೀಯೋ
ಯದ್ವಾ ಜಯೇಮ ಯದಿ ವಾನೋ ಜಯೇಯುಃ |
ಯಾನೇವ ಹತ್ವಾ ನ ಜಿಜೀವಿಷಾಮ-
ಸ್ತೇ$ವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ||
ಯುದ್ಧಮಾಡುವುದು ಅಥವಾ ಮಾಡದಿರುವುದು, ಇವೆರಡರಲ್ಲಿ ಯಾವುದು ಶ್ರೇಷ್ಠವೆಂಬುದನ್ನು ನಾವು ಅರಿಯೆವು, ಅಥವಾ ಅವರನ್ನು ನಾವು ಗೆಲ್ಲವೆವೋ, ನಮ್ಮನ್ನು ಅವರು ಗೆಲ್ಲುವರೋ ಎಂಬುದೂ ಅರಿಯೆವು. ಅಲ್ಲದೆ ಯಾರನ್ನು ಕೊಂದು ನಾವು ಜೀವಿಸಿರಲು ಇಷ್ಟಪಡುವುದಿಲ್ಲವೋ ಅವರೇ ನಮ್ಮ ಆತ್ಮೀಯರಾದ ಧೃತರಾಷ್ಟ್ರನ ಪುತ್ರರು ನಮ್ಮ ಎದುರು ಪ್ರತಿ ಸ್ಪರ್ಧಿಗಳಾಗಿ ನಿಂತಿದ್ದಾರೆ. ||೬||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  5
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅರ್ಜುನ ಉವಾಚ
ಗುರೂನಹತ್ವಾಹಿ ಮಹಾನುಭಾವಾನ್ ಶ್ರೇಯೋ
ಭೋಕ್ತುಂ ಭೈಕ್ಷ್ಯಮಪೀಹ ಲೋಕೇ |
ಹತ್ವಾರ್ಥಕಾಮಾಂಸ್ತು ಗುರೂನಿಹೈವ
ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ||
ಅದಕ್ಕಾಗಿ ಈ ಮಹಾನುಭಾವರಾದ ಗುರುಜನರನ್ನು ಕೊಲ್ಲದೆ, ನಾನು ಈ ಲೋಕದಲ್ಲಿ ಭಿಕ್ಷೆಬೇಡಿ ತಿನ್ನುವುದು ಶ್ರೇಯಸ್ಕರವೆಂದು ಭಾವಿಸುತ್ತೇನೆ. ಏಕೆಂದರೆ ಗುರುಜನರನ್ನು ಕೊಲ್ಲುವುದರಿಂದ ಈ ಲೋಕದಲ್ಲಿ ರಕ್ತದಿಂದ ತೊಯ್ದಿರುವ ಅರ್ಥ ಮತ್ತು ಕಾಮರೂಪೀ ಭೋಗಗಳನ್ನೇ ಭೋಗಿಸುವುದಲ್ಲ! ||೫||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  4
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಅರ್ಜುನ ಉವಾಚ
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ |
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ ||
ಅರ್ಜುನನು ಹೇಳಿದನು- ಹೇ ಮಧುಸೂದನ ! ಯುದ್ಧದಲ್ಲಿ ನಾನು ಭೀಷ್ಮಪಿತಾಮಹರ ಮತ್ತು ದ್ರೋಣಾಚಾರ್ಯರ ವಿರುದ್ಧ ಬಾಣಗಳಿಂದ ಹೇಗೆ ಯುದ್ಧ ಮಾಡಲಿ? ಏಕೆಂದರೆ, ಹೇ ಅರಿಸೂದನನೇ! ಅವರಿಬ್ಬರೂ ಪೂಜನೀಯರಾಗಿದ್ದಾರೆ. ||೪||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  3
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಶ್ರೀಭಗವಾನುವಾಚ
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ||
ಹೇ ಪಾರ್ಥ ! ನಪುಂಸಕತ್ವವನ್ನು ಹೊಂದಬೇಡ. ನಿನಗೆ ಇದು ಉಚಿತವಲ್ಲ. ಹೇ ಪರಂತಪ! ಹೃದಯದ ತುಚ್ಛವಾದ ಈ ದೌರ್ಬಲ್ಯವನ್ನು ತ್ಯಜಿಸಿ ಯುದ್ಧಕ್ಕಾಗಿ ಎದ್ದು ನಿಲ್ಲು. ||೩||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 2 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  2
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಶ್ರೀಭಗವಾನುವಾಚ
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ |
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ||
ಭಗವಂತ ಹೇಳಿದನು- ಹೇ ಅರ್ಜುನ ! ನಿನಗೆ ಈ ಯುದ್ಧಾರಂಬದ ಈ ವಿಷಮ ಸಮಯದಲ್ಲಿ ಇಂತಹ ಮೋಹವು ಯಾವ ಕಾರಣದಿಂದ ಉಂಟಾಯಿತು? ಏಕೆಂದರೆ, ಇದು ಶ್ರೇಷ್ಠ ಪುರುಷರಿಂದ ಆಚರಿಸದ, ಸ್ವರ್ಗವನ್ನು ಕೊಡದಿರುವ, ಮತ್ತು ಕೀರ್ತಿಕಾರಕವೂ ಅಲ್ಲ.||೨||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  2
ಶ್ಲೋಕ  1
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ
ಸಂಜಯ ಉವಾಚ
ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ |
ವಿಪೀದಂತಮಿದಂ ವಾಕ್ಯಮುವಾಚ ಮಧುಸೂದನಃ ||
ಸಂಜಯನು ಹೇಳಿದನು-ಹೀಗೆ ಕರುಣೆಯಿಂದ ವ್ಯಾಪ್ತನಾದ ಕಂಬನಿತುಂಬಿ ವ್ಯಾಕುಲ ಕಣ್ಣುಗಳುಳ್ಳವನಾದ, ಶೋಕಿಸುತ್ತಿರುವ ಅರ್ಜುನನಲ್ಲಿ ಭಗವಾನ್ ಮಧುಸೂದನನು ಹೀಗೆ ಹೇಳಿದನು. ||೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  47
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಸಂಜಯ ಉವಾಚ
ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ |
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ||೪೭||
ಸಂಜಯನು ಹೇಳಿದನು-ರಣಭೂಮಿಯಲ್ಲಿ ಶೋಕದಿಂದ ಉದ್ವಿಗ್ನ ಮನಸ್ಸುಳ್ಳವನಾದ ಅರ್ಜುನನು ಈ ಪ್ರಕಾರವಾಗಿ ಹೇಳಿ ಬಾಣಸಹಿತ ಧನಸ್ಸನ್ನು ತ್ಯಾಗಮಾಡಿ ರಥದ ಹಿಂಭಾಗದಲ್ಲಿ ಕುಳಿತು ಬಿಟ್ಟನು. ||೪೭||

ಓಂ ತತ್ಸದಿತಿ ಶ್ರೀಮದ್ಬಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ ಅರ್ಜುನ ವಿಷಾದಯೋಗೋ ನಾಮ ಪ್ರಥಮೋ$ಧ್ಯಾಯಃ ||೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  46
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಯಃ |
ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ ||
ಶಸ್ತ್ರರಹಿತನೂ, ಪ್ರತಿಕಾರ ತೋರದಿರುವ ನನ್ನನ್ನು ಶಸ್ತ್ರಗಳನ್ನು ದರಿಸಿರುವ ಧೃತರಾಷ್ಟ್ರನ ಪುತ್ರರು ಯುದ್ಧದಲ್ಲಿ ಕೊಂದು ಹಾಕಿದರೂ ಅದು ನನಗೆ ಹೆಚ್ಚು ಶ್ರೇಯಸ್ಕರವಾದೀತು.||೪೬||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  45
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ |
ಯದ್ರಾ ಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ||೪೫||
ಅಯ್ಯೋ, ಕಷ್ಟ-ಕಷ್ಟ! ನಾವು ಬುದ್ಧಿವಂತರಾಗಿದ್ದರೂ, ರಾಜ್ಯ ಮತ್ತು ಸುಖಗಳ ಲೋಭದಿಂದ ಸ್ವಜನರನ್ನು ಕೊಲ್ಲಲು ತೊಡಗಿದ್ದೇವಲ್ಲ. ಇಂತಹ ಡೊಡ್ಡದಾದ ಪಾಪವನ್ನು ಮಾಡಲು ಸಿದ್ಧರಾಗಿದ್ದೆವಲ್ಲ! ||೪೫||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  44
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗ
ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ |
ನರಕೇ$ನಿಯತಂ ವಾಸೋ ಭವತೀತ್ಯನುಶುಶ್ರುಮ ||೪೪||
ಹೇ ಜನಾರ್ದನನೇ! ಯಾರ ಕುಲಧರ್ಮಗಳು ನಾಶವಾಗಿವೆಯೋ ಅಂತಹ ಮನುಷ್ಯರು ಅನಿಶ್ಚಿತಕಾಲದವರೆಗೆ ನರಕದಲ್ಲಿ ವಾಸಿಸುತ್ತಾರೆಂದು ನಾವು ಕೇಳುತ್ತಾ ಬಂದಿದ್ದೇವೆ. ||೪೪||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  43
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ |
ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ||೪೩||
ಈ ವರ್ಣಸಂಕರ ಕಾರಕವಾದ ದೋಷಗಳಿಂದ ಕುಲಘಾತುಕರ ಸನಾತನವಾದ ಕುಲಧರ್ಮಗಳು ಮತ್ತು ಜಾತಿಧರ್ಮಗಳು ನಾಶವಾಗಿ ಬಿಡುತ್ತವೆ. ||೪೩||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 2 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  42
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ |
ಪತಂತಿ ಪಿತರೋ ಹೇಷ್ಯಾಂ ಲುಪ್ತಪಿಂಡೋದಕಕ್ರಿಯಾಃ ||೪೨||
ವರ್ಣಸಾಂಕರ್ಯವು ಕುಲಘಾತುಕರನ್ನೂ ಮತ್ತು ಕುಲವನ್ನು ನರಕಕ್ಕೆ ಕೊಂಡೊಯ್ಯಲೆಂದೇ ಆಗುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್ ಶ್ರಾದ್ಧ ಮತ್ತು ಪಿತೃತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡ ಅಧೋಗತಿಯನ್ನು ಪಡೆಯುತ್ತಾರೆ.||೪೨||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  41
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಅಧರ್ಮಾಭಿಭವಾತ್‌ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ |
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ||
ಹೇ ಕೃಷ್ಣ ! ಪಾಪವು ಅಧಿಕವಾಗಿ ಬೆಳೆಯುವುದರಿಂದ ಕುಲದ ಸ್ತ್ರೀಯರು ಅತ್ಯಂತ ದೂಷಿತರಾಗಿ ಬಿಡುತ್ತಾರೆ. ಮತ್ತು ಹೇ ವಾರ್ಷ್ಣೇಯನೇ! ಸ್ತ್ರೀಯರು ದೂಷಿತರಾದ ಬಳಿಕ ವರ್ಣಸಾಂಕರ್ಯವು ಉಂಟಾಗುತ್ತದೆ. ||೪೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  40
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ |
ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋ$ಭಿಭವತ್ಯುತ ||೪೦||
ಕುಲದ ನಾಶದಿಂದ ಸನಾತನವಾದ ಕುಲಧರ್ಮಗಳು ನಷ್ಟವಾಗುತ್ತವೆ, ಧರ್ಮವು ನಾಶವಾದನಂತರ ಸಂಪೂರ್ಣ ಕುಲದಲ್ಲಿ ಪಾಪವು ಕೂಡ ಬಹಳವಾಗಿ ಆವರಿಸಿಕೊಳ್ಳುತ್ತದೆ.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  38
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ |
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ||೩೮||
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ |
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ||೩೯||
ಒಂದು ವೇಳೆ ಲೋಭದಿಂದ ಭ್ರಷ್ಟಚಿತ್ತರಾದ ಈ ಜನರು ಕುಲಕ್ಷಯದಿಂದ ಉತ್ಪನ್ನವಾಗುವ ದೋಷವನ್ನೂ ಮತ್ತು ಮಿತ್ರ ದ್ರೋಹದ ಪಾಪವನ್ನು ನೋಡುವುದಿಲ್ಲವಾದರೂ, ಹೇ ಜನಾರ್ದನನೇ! ಕುಲದ ನಾಶದಿಂದ ಉತ್ಪನ್ನವಾಗುವ ದೋಷವನ್ನು ತಿಳಿದಿರುವ ನಾವುಗಳು ಈ ಪಾಪದಿಂದ ಹಿಂಜರಿಯಲು ಏಕೆ ವಿಚಾರಮಾಡಬಾರದು?||೩೮-೩೯||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  37
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ತಸ್ಮಾನ್ನಾರ್ಹಾ ವಯಂ ಹಂತಂ ಧಾರ್ತರಾಷ್ಟ್ರಾನ್ ಸ್ವಬಾಂಧಾವಾನ್ |
ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ||೩೭||
ಆದುದರಿಂದ ಹೇ ಮಾಧವನೇ! ನಮ್ಮ ಬಾಂಧವರೇ ಆದ ಧೃತರಾಷ್ಟ್ರನ ಮಕ್ಕಳನ್ನು ಕೊಲ್ಲುವುದು ನಮಗೆ ಯೋಗ್ಯವಲ್ಲ, ಏಕೆಂದರೆ ನಮ್ಮದೇ ಆದ ಕುಟುಂಬವನ್ನು ಕೊಂದು ನಾವು ಹೇಗೆ ಸುಖಿಗಳಾಗುವೆವು?||೩೭||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  36
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ |
ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ||೩೬||
ಹೇ ಜನಾರ್ದನ! ಧೃತರಾಷ್ಟ್ರನ ಪುತ್ರರನ್ನು ಕೊಲ್ಲುವುದರಿಂದ ನಮಗೆ ಯಾವ ಸಂತೋಷವುಂಟಾಗುವುದು? ಈ ಆತತಾಯಿಗಳನ್ನು ಕೊಲ್ಲುವುದರಿಂದಲಾದರೋ ನಮಗೆ ಪಾಪವೇ ತಟ್ಟುವುದು.||೩೬||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  35
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಏತಾನ್ನ ಹಂತುಮಿಚ್ಛಾಮಿ ಘ್ನತೋ$ಪಿ ಮಧುಸೂದನ |
ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ||
ಹೇ ಮಧುಸೂದನ! ನನ್ನನ್ನು ಕೊಂದರೂ ಅಥವಾ ಮೂರು ಲೋಕಗಳ ರಾಜ್ಯ ದೊರಕಿದರೂ ಸಹ ನಾನು ಇವರೆಲ್ಲರನ್ನು ಕೊಲ್ಲಲು ಇಚ್ಛಿಸುವುದಿಲ್ಲ. ಮತ್ತೆ ಭೂಮಂಡಲದ ರಾಜ್ಯಕ್ಕಾಗಿಯಾದರೋ ಹೇಳುವುದೇನಿದೆ?

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  34
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಅಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ |
ಮಾತುಲಾಃ ಶ್ವಶುರಾಃ ಪೌತ್ರಾಃಶ್ಯಾಲಾಃ ಸಂಬಂಧಿನಸ್ತಥಾ ||
ಗುರುಗಳೂ, ದೊಡ್ಡಪ್ಪ-ಚಿಕ್ಕಪ್ಪಂದಿರೂ, ಪುತ್ರರು ಮತ್ತು ಅದೇ ಪ್ರಕಾರವಾಗಿ ಅಜ್ಜಂದಿರು, ಸೋದರ ಮಾವಂದಿರೂ, ಮಾವಂದಿರೂ ಮೊಮ್ಮಕ್ಕಳೂ, ಭಾವಮೈದುನರೂ ಹಾಗೆಯೇ ಇನ್ನು ಅನೇಕ ಸಂಬಂಧಿಗಳೂ ಇದ್ದಾರೆ ||೩೪||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  33
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ |
ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ ||
ನಾವು ಯಾರಿಗಾಗಿ ರಾಜ್ಯವನ್ನು, ಭೋಗಗಳನ್ನು ಮತ್ತು ಸುಖಾದಿಗಳನ್ನು ಇಚ್ಚಿಸುತ್ತೇವೆಯೋ, ಅಂತಹವರೇ ಆದ ಇವರೆಲ್ಲರೂ ಧನ ಮತ್ತು ಜೀವನದ ಆಸೆಯನ್ನು ತ್ಯಜಿಸಿ ಯುದ್ಧಕ್ಕಾಗಿ ನಿಂತಿದ್ದಾರೆ. ||೩೩||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  32
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ |
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ||
ಹೇ ಕೃಷ್ಣನೇ! ನನಗಾದರೋ ವಿಜಯದ, ರಾಜ್ಯದ ಹಾಗೂ ಸುಖದ ಇಚ್ಛೆ ಇಲ್ಲ. ಹೇ ಗೋವಿಂದನೇ! ನಮಗೆ ಇಂತಹ ರಾಜ್ಯದಿಂದ ಯಾವ ಪ್ರಯೋಜನವಿದೆ? ಮತ್ತು ಇಂತಹ ಭೋಗಗಳಿಂದ, ಜೀವನದಿಂದ ಯಾವ ಲಾಭವಿದೆ? ||೩೨||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  31
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ |
ನ ಚ ಶ್ರೇಯೋ$ನುಪಶ್ಯಾಮಿ ಹತ್ವಾ ಸ್ವಜನಮಾಹವೇ ||
ಹೇ ಕೇಶವ! ನನಗೆ ಲಕ್ಷಣಗಳು ವಿಪರೀತ ಕಾಣುತ್ತಿವೆ. ಹಾಗೂ ಯುದ್ಧದಲ್ಲಿ ಸ್ವಜನ ಸಮುದಾಯವನ್ನು ಕೊಂದು ಯಾವ ಶ್ರೇಯಸ್ಸನ್ನೂ ನೋಡುವುದಿಲ್ಲ. ||೩೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  30
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಗಾಂಡೀವಂ ಸ್ರಂಸತೇ ಹಸಾತ್ತ್ವ್ವಕ್ಚೈವ ಪರಿದಹ್ಯತೇ |
ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ ||
ಕೈಯಿಂದ ಗಾಂಡೀವ ಧನಸ್ಸು ಜಾರಿ ಬೀಳುತ್ತಿದೆ ಹಾಗೂ ನನ್ನ ಮನಸ್ಸು ಭ್ರಮಿಸಿದಂತೆ ತೋರುತ್ತಿದೆ. ಆದ್ದರಿಂದ ನಾನು ನಿಂತುಕೊಂಡಿರಲೂ ಸಹ ಸಮರ್ಥನಾಗಿಲ್ಲ. ||೩೦||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  28
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ಅರ್ಜುನ ಉವಾಚ
ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ||೨೮||
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ |
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ||೨೯||
ಅರ್ಜುನನು ಹೇಳಿದನು- ಹೇ ಕೃಷ್ಣ! ಯುದ್ಧಕ್ಷೇತ್ರದಲ್ಲಿ ಸಿದ್ಧರಾಗಿ ನಿಂತಿರುವ ಯುದ್ಧಾಭಿಲಾಷಿಗಳಾದ ಈ ಸ್ವಜನ ಸಮುದಾಯವನ್ನು ನೋಡಿ ನನ್ನ ಅಂಗಾಂಗಗಳು ಶಿಥಿಲವಾಗಿ ಹೋಗುತ್ತಿವೆ. ಮುಖವು ಒಣಗಿ ಹೋಗುತ್ತಿದೆ. ಹಾಗೂ ನನ್ನ ಶರೀರ ರೋಮಾಂಚನವಾಗುತ್ತಿದೆ. (೨೮ರ ಉತ್ತರಾರ್ಧ ಹಾಗೂ ೨೯)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  27
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ತಾನ್ ಸಮೀಕ್ಷ್ಯಸ ಕೌಂತೇಯಃ ಸರ್ವಾನ್ಬಂಧೂನವಸ್ಥಿತಾನ್ ||
ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ ||
ಅಲ್ಲಿ ಉಪಸ್ಥಿತರಿದ್ದ ಎಲ್ಲ ಬಂಧುಗಳನ್ನು ನೋಡಿ ಆ ಕುಂತೀಪುತ್ರ ಅರ್ಜುನನು ಅತ್ಯಂತ ಕರುಣಾಪರವಶನಾಗಿ ಶೋಕಿಸುತ್ತ ಹೀಗೆ ಹೇಳಿದನು.
(೨೭ರ ಉತ್ತರಾರ್ಧ-೨೮ರ ಪೂರ್ವಾರ್ಧ)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  26
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ
ತತ್ರಾಪಶ್ಯತ್ಸ್ಥಿತಾನ್ ಪಾರ್ಥಃ ಪಿತೃನಥ ಪಿತಾಮಹಾನ್ |
ಆಚಾರ್ಯಾನ್ಮಾ ತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ||
ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ |
ಇದಾದ ನಂತರ ಪಾರ್ಥನು ಆ ಎರಡೂ ಸೈನ್ಯಗಳಲ್ಲಿ ಸೇರಿದ್ದ ದೊಡ್ಡಪ್ಪ-ಚಿಕ್ಕಪ್ಪಂದಿರನ್ನು, ಅಜ್ಜ-ಮುತ್ತಜ್ಜರನ್ನು, ಗುರುಗಳನ್ನು, ಸೋದರಮಾವಂದಿರನ್ನು, ಸಹೋದರರನ್ನು, ಮಕ್ಕಳು-ಮೊಮ್ಮಕ್ಕಳನ್ನು, ಹಾಗೂ ಮಿತ್ರರನ್ನು, ಮಾವಂದಿರನ್ನು ಮತ್ತು ಸಹೃದಯರನ್ನೂ ನೋಡಿದನು.
(೨೬ ಮತ್ತು ೨೭ರ ಪೂರ್ವಾರ್ಧ)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  24
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಸಂಜಯ ಉವಾಚ
ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ |
ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ||೨೪||
ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ |
ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||೨೫||

ಸಂಜಯನು ಹೇಳಿದನು- ಹೇ ಧೃತರಾಷ್ಟ್ರನೇ! ಅರ್ಜುನನು ಹೀಗೆ ಹೇಳಿದಾಗ ಭಗವಾನ್ ಶ್ರೀಕೃಷ್ಣನು ಎರಡೂ ಸೈನ್ಯಗಳ ಮಧ್ಯದಲ್ಲಿ ಭೀಷ್ಮ, ಮತ್ತು ದ್ರೋಣಾಚಾರ್ಯರ ಎದುರಿಗೆ ಹಾಗೂ ಸಂಪೂರ್ಣ ರಾಜರುಗಳೆದುರಿನಲ್ಲಿ ಉತ್ತಮವಾದ ರಥವನ್ನು ನಿಲ್ಲಿಸಿ, ’ಪಾರ್ಥನೇ! ಯುದ್ಧಕ್ಕಾಗಿ ನೆರೆದಿರುವ ಈ ಕೌರವರನ್ನು ನೋಡು’ ಎಂದು ಹೇಳಿದನು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  23
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಯೋತ್ಸ್ಯಮಾನಾನವೇಕ್ಷೇ$ಹಂ ಯ ಏತೇ$ತ್ರ ಸಮಾಗತಾಃ |
ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃಯುದ್ಧೇ ಪ್ರಿಯಚಿಕೀರ್ಷವಃ ||೨೩||
ದುಷ್ಟಬುದ್ಧಿಯ ದುರ್ಯೋಧನನಿಗೆ ಯುದ್ಧದಲ್ಲಿ ಹಿತವನ್ನು ಬಯಸುವ ಯಾವ ಯಾವ ರಾಜರುಗಳು ಈ ಸೈನ್ಯದಲ್ಲಿ ಬಂದಿದ್ದಾರೋ ಆ ಯೋಧರನ್ನು ನಾನು ನೋಡುವೆನು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  22
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಯಾವದೇತಾನ್ನಿರೀಕ್ಷೇ$ಹಂ ಯೋದ್ಧುಕಾಮಾನವಸ್ಥಿತಾನ್ |
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||೨೨||
ನಾನು ಯುದ್ಧಕ್ಷೇತ್ರದಲ್ಲಿ ಸನ್ನದ್ಧರಾಗಿರುವ ಯುದ್ಧದ ಅಭಿಲಾಷೆಯುಳ್ಳ ಈ ವಿಪಕ್ಷದ ಯೋಧರನ್ನು ಚೆನ್ನಾಗಿ ನೋಡಿಕೊಂಡು, ಈ ಯುದ್ಧರೂಪವಾದ ವ್ಯಾಪಾರದಲ್ಲಿ ನಾನು ಯಾರ-ಯಾರೊಡನೆ ಯುದ್ದಮಾಡುವುದು ಯೋಗ್ಯ ವೆಂಬುದನ್ನು ತಿಳಿದುಕೊಳ್ಳುವವರೆಗೆ ರಥವನ್ನು ನಿಲ್ಲಿಸಿಕೊಂಡಿರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  21
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಹೃಷೀಕೇಶಂ ತದಾ ವಾಕ್ಯಂಇದಮಾಹ ಮಹೀಪತೇ |
ಅರ್ಜುನ ಉವಾಚ
ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ$ಚ್ಯುತ ||೨೧||
ಹೇ ಭೂಪತಿಯೇ! ಇದಾದನಂತರ ಕಪಿಧ್ವಜನಾದ ಅರ್ಜುನನು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿರುವ ಧೃತರಾಷ್ಟ್ರನ ಸಂಬಂಧಿಗಳನ್ನು ನೋಡಿದವನಾಗಿ ಆ ಶಸ್ತ್ರಪ್ರಯೋಗ ಸಿದ್ಧತೆಯ ಸಮಯದಲ್ಲಿ ಧನುಸ್ಸನ್ನು ಎತ್ತಿಕೊಂಡು ಹೃಷೀಕೇಶನಾದ ಭಗವಾನ್ ಶ್ರೀಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು. ಹೇ ಅಚ್ಯುತನೇ! ನನ್ನ ರಥವನ್ನು ಎರಡೂ ಸೈನ್ಯಗಳ ಮಧ್ಯದಲ್ಲಿ ನಿಲ್ಲಿಸು.
(೨೦ನೇ ಶ್ಲೋಕವನ್ನೂ ಸೇರಿಸಿ ಅನ್ವಯಿಸಿಲಾಗಿದೆ.)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  20
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ |
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ ||೨೦||
ಹೇ ಭೂಪತಿಯೇ! ಇದಾದ ನಂತರ ಕಪಿಧ್ವಜನಾದ ಅರ್ಜುನನು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿರುವ ಧೃತರಾಷ್ಟ್ರನ ಸಂಬಂಧಿಗಳನ್ನು ನೋಡಿದವನಾಗಿ ಆ ಶಸ್ತ್ರಪ್ರಯೋಗ ಸಿದ್ಧತೆಯ ಸಮಯದಲ್ಲಿ ಧನುಸ್ಸನ್ನು ಎತ್ತಿಕೊಂಡು ಹೃಷಿಕೇಶನಾದ ಭಗವಾನ್ ಶ್ರೀಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು.
( ೨೧ನೇ ಶ್ಲೋಕದ ಮೊದಲಾರ್ಧವನ್ನೂ ಸೇರಿಸಿ ಅನ್ವಯಿಸಿಲಾಗಿದೆ.)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  19
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ |
ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ ||೧೯||
ಮತ್ತು ಆ ಭಯಾನಕವಾದ ಶಬ್ದವು ಆಕಾಶ ಮತ್ತು ಪೃಥ್ವಿಯನ್ನು ಸಹ ಪ್ರತಿಧ್ವನಿಗೊಳಿಸುತ್ತಾ ದುರ್ಯೋಧನಾದಿಗಳ ಅಂದರೆ ನಿಮ್ಮ ಪಕ್ಷದವರ ಹೃದಯಗಳನ್ನು ಭೇದಿಸಿತು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  18
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವಿಪತೇ |
ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ಪೃಥಕ್ ||೧೮||
ರಾಜನಾದ ದ್ರುಪದನು, ದ್ರೌಪದಿಯ ಐವರು ಪುತ್ರರು ಮತ್ತು ಮಹಾಬಾಹುವಾದ ಸುಭದ್ರಾಪುತ್ರ ಅಭಿಮನ್ಯುವು-ಇವರೆಲ್ಲರೂ ಹೇ! ರಾಜನೇ! ಎಲ್ಲ ಕಡೆಗಳಿಂದ ಬೇರೆ-ಬೇರೆಯಾಗಿ ಶಂಖಗಳನ್ನು ಊದಿದರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  17
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ |
ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ ||೧೭||
ಶ್ರೇಷ್ಠವಾದ ಧನುಸ್ಸುಳ್ಳ ಕಾಶೀರಾಜನು ಮತ್ತು ಮಾಹಾರಥಿಯಾದ ಶಿಖಂಡೀ ಹಾಗೂ ಧೃಷ್ಟದ್ಯುಮ್ನ, ರಾಜಾ ವಿರಾಟನು ಮತ್ತು ಅಜೇಯನಾದ ಸಾತ್ಯಕಿಯು, ಇವರೆಲ್ಲರೂ ಹೇ! ರಾಜನೇ! ಎಲ್ಲ ಕಡೆಗಳಿಂದ ಬೇರೆ-ಬೇರೆಯಾಗಿ ಶಂಖಗಳನ್ನು ಊದಿದರು.(೧೭/೧೮ ಶ್ಲೋಕಗಳನ್ನು ಒಟ್ಟಿಗೇ ಅನ್ವಯ ಮಾಡಬೇಕು.)

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  16
ಭಗವದ್ಗೀತಾ ಅಭಿಯಾನ ಅಧ್ಯಾಯ ೧ ಶ್ಲೋಕ ೧೬

ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ

ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ||೧೬||

ಕುಂತಿಯ ಪುತ್ರನಾದ ರಾಜಾ ಯುಧಿಷ್ಠಿರನು ಅನಂತ ವಿಜಯವೆಂಬ ಹೆಸರಿನ ಮತ್ತು ನಕುಲ ಹಾಗೂ ಸಹದೇವರು ಸುಘೋಷ ಮತ್ತು ಮಣಿಪುಷ್ಪಕವೆಂಬ ಹೆಸರಿನ ಶಂಖಗಳನ್ನು ಊದಿದರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
ಭಗವದ್ಗೀತಾ ಅಭಿಯಾನ ಅಧ್ಯಾಯ ೧ ಶ್ಲೋಕ ೧೬

ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ

ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ |
ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ ||೧೬||

ಕುಂತಿಯ ಪುತ್ರನಾದ ರಾಜಾ ಯುಧಿಷ್ಠಿರನು ಅನಂತ ವಿಜಯವೆಂಬ ಹೆಸರಿನ ಮತ್ತು ನಕುಲ ಹಾಗೂ ಸಹದೇವರು ಸುಘೋಷ ಮತ್ತು ಮಣಿಪುಷ್ಪಕವೆಂಬ ಹೆಸರಿನ ಶಂಖಗಳನ್ನು ಊದಿದರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  15
ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 15
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ |
ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ ||೧೫||
ಭಗವಾನ್ ಶ್ರೀಕೃಷ್ಣನು ಪಾಂಚಜನ್ಯವೆಂಬ ಹೆಸರಿನ ಶಂಖವನ್ನೂ ,ಅರ್ಜುನನು ದೇವದತ್ತವೆಂಬ ಹೆಸರಿನ ಶಂಖವನ್ನೂ ಮತ್ತು ಭಯಾನಕ ಕರ್ಮಗಳನ್ನು ಮಾಡುವ ಭೀಮಸೇನನು ಪೌಂಡ್ರವೆಂಬ ಮಹಾಶಂಖವನ್ನು ಊದಿದರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  14
ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 14
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದಧ್ಮತುಃ ||೧೪||
ಇದಾದ ನಂತರ ಬಿಳಿಯ ಬಣ್ಣದ ಕುದುರೆಗಳಿಂದ ಯುಕ್ತವಾದ ಉತ್ತಮ ರಥದಲ್ಲಿ ಕುಳಿತಿದ್ದ ಭಗವಾನ್ ಶ್ರೀಕೃಷ್ಣನು ಮತ್ತು ಅರ್ಜುನನೂ ಅಲೌಕಿಕವಾದ ಶಂಖಗಳನ್ನು ಊದಿದರು.

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  13
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ |
ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋ$ಭವತ್ ||೧೩||
ಅನಂತರ ಶಂಖಗಳು, ನಗಾರಿಗಳು ಹಾಗೂ ಡೋಲು, ಮೃದಂಗ, ಕಹಳೆ ಮೊದಲಾದ ವಾದ್ಯಗಳು ಒಟ್ಟಿಗೆ ಮೊಳಗಿದವು. ಅವುಗಳ ಆ ಶಬ್ದವು ಬಹಳ ಭಯಂಕರವಾಯಿತು.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  12
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ |
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ||೧೨||
ಕೌರವರಲ್ಲಿ ವೃದ್ಧರಾದ, ಬಹಳ ಪ್ರತಾಪಿಯಾದ ಪಿತಾಮಹ ಭೀಷ್ಮರು ಆ ದುರ್ಯೋಧನನ ಹೃದಯದಲ್ಲಿ ಹರ್ಷವನ್ನುಂಟು ಮಾಡುತ್ತಾ ಉಚ್ಚ ಸ್ವರದಲ್ಲಿ ಸಿಂಹದಂತೆ ಗರ್ಜಿಸಿ ಶಂಖವನ್ನು ಊದಿದರು.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  11
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ |
ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ ||೧೧||
ಆದ್ದರಿಂದ ಎಲ್ಲಾ ವ್ಯೂಹದ್ವಾರಗಳ ನಿಮ್ಮ ನಿಮ್ಮ ಜಾಗಗಳಲ್ಲಿ ಸ್ಥಿರವಾಗಿರುತ್ತ ನೀವೆಲ್ಲರೂ ನಿಸ್ಸಂದೇಹರಾರಿ ಭೀಷ್ಮಪಿತಾಮಹರನ್ನು ಎಲ್ಲ ಕಡೆಯಿಂದ ರಕ್ಷಿಸಿರಿ. ||೧೧||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  10
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ |
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ||೧೦||
ಭೀಷ್ಮಪಿತಾಮಹರಿಂದ ರಕ್ಷಿತವಾದ ನಮ್ಮ ಆ ಸೈನ್ಯವು ಅಪರಿಮಿತವಾಗಿದೆ ಅರ್ಥಾತ್ ಎಲ್ಲ ಪ್ರಕಾರದಿಂದ ಅಜೇಯವಾಗಿದೆ ಮತ್ತು ಭೀಮನಿಂದ ರಕ್ಷಿತವಾಗಿರುವ ಇವರ ಈ ಸೈನ್ಯವು ಪರಿಮಿತ ಅರ್ಥಾತ್ ಗೆಲ್ಲಲು ಸುಗಮವಾಗಿದೆ.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 1 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  9
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ |
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ||೯||
ನನಗೋಸ್ಕರ ಜೀವನದ ಆಸೆಯನ್ನು ತ್ಯಾಗಮಾಡಿರುವ ಇನ್ನೂ ಅನೇಕ ಶೂರವೀರರು ನಾನಾ ಪ್ರಕಾರದ ಶಸ್ತ್ರಾಸ್ತ್ರಗಳಿಂದ ಸುಸಜ್ಜಿತರಾಗಿದ್ದಾರೆ ಮತ್ತು ಅವರೆಲ್ಲರೂ ಯುದ್ಧದಲ್ಲಿ ನಿಪುಣರಾಗಿದ್ದಾರೆ.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  8
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ |
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಧೈವ ಚ ||೮||
ದ್ರೋಣಾಚಾರ್ಯರಾದ ತಾವು ಮತ್ತು ಪಿತಾಮಹ ಭೀಷ್ಮರು ಹಾಗೂ ಕರ್ಣ ಮತ್ತು ಸಂಗ್ರಾಮ ವಿಜಯೀ ಕೃಪಾಚಾರ್ಯರು, ಅಂತೆಯೇ ಅಶ್ವತ್ಥಾಮ, ವಿಕರ್ಣ ಮತ್ತು ಸೋಮದತ್ತನ ಪುತ್ರನಾದ ಭೂರಿಶ್ರವ.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  7
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ |
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ ||೭||
ಎಲೈ ಬ್ರಾಹ್ಮಣಶ್ರೇಷ್ಠರೇ! ನಮ್ಮ ಪಕ್ಷದಲ್ಲಿಯೂ ಇರುವ ಪ್ರಧಾನರಾದ ಯೋಧರನ್ನು ನೀವು ತಿಳಿದುಕೊಳ್ಳಿರಿ. ತಮ್ಮ ಅರಿವಿಗಾಗಿ ನನ್ನ ಸೈನ್ಯದಲ್ಲಿ ಇರುವ ಸೇನಾಧಿಪತಿಯನ್ನು ತಿಳಿಸುತ್ತೇನೆ.
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  6
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ |
ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ || ೬||
ಪರಾಕ್ರಮಿಯಾದ ಯುಧಾಮನ್ಯುವು, ಬಲಶಾಲಿಯಾದ ಉತ್ತಮೌಜನೂ, ಸುಭದ್ರಾಸುತನಾದ ಅಭಿಮನ್ಯವು, ಹಾಗೂ ದ್ರೌಪದಿಯ ಐವರು ಪುತ್ರರು ಇವರೆಲ್ಲರೂ ಮಹಾರಥಿಗಳಾಗಿದ್ದಾರೆ. (೪/೫/೬ ಶ್ಲೋಕಗಳನ್ನು ಒಟ್ಟಿಗೆ ಅನ್ವಯಿಸಬೇಕು)
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  5
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ |
ಪುರುಜಿತ್ಕುಂತಿಭೋಜಶ್ಚ ಶೈಭ್ಯಶ್ಚ ನರಪುಂಗವಃ ||೫||
ಧೃಷ್ಟಕೇತು ಮತ್ತು ಚೇಕಿತಾನನು ಹಾಗೂ ಬಲಶಾಲಿಯಾದ ಕಾಶಿರಾಜನು, ಪುರುಜಿತ್, ಕುಂತಿಭೋಜನೂ, ಮನುಷ್ಯಶ್ರೇಷ್ಠನಾದ ಶೈಭ್ಯನೂ ಇವರೆಲ್ಲರೂ ಮಹಾರಥಿಗಳಾಗಿದ್ದಾರೆ. (೪/೫/೬ ಶ್ಲೋಕಗಳನ್ನು ಒಟ್ಟಿಗೆ ಅನ್ವಯಿಸಬೇಕು)
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  4
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ||೪||
ಈ ಸೈನ್ಯದಲ್ಲಿ ದೊಡ್ಡ ದೊಡ್ಡ ಧನುಸ್ಸುಳ್ಳ ಹಾಗೂ ಯುದ್ಧದಲ್ಲಿ ಭೀಮಾರ್ಜುನರಿಗೆ ಸಮಾನರಾದ ಶೂರ-ವೀರ ಸಾತ್ಯಕಿಯೂ, ವಿರಾಟನೂ, ಮಹಾರಥದ್ರುಪದನು, ಇವರೆಲ್ಲರೂ ಮಹಾರಥಿಗಳಾಗಿದ್ದಾರೆ. (೪/೫/೬ ಶ್ಲೋಕಗಳನ್ನು ಒಟ್ಟಿಗೆ ಅನ್ವಯಿಸಬೇಕು)
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  3
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ
ಪಶ್ಯೈತಾಂ ಪಾಂಡುಪುತ್ರಾಣಾಂ ಆಚಾರ್ಯ ಮಹತೀಂ ಚಮೂಮ್ |
ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ||
ಹೇ ಆಚಾರ್ಯರೇ ! ತಮ್ಮ ಬುದ್ಧಿವಂತನಾದ ಶಿಷ್ಯ ದ್ರುಪದಪುತ್ರ ದೃಷ್ಟದ್ಯುಮ್ನನ ಮೂಲಕ ವ್ಯೂಹಾಕಾರಾವಾಗಿ ನಿಲ್ಲಿಸಲ್ಪಟ್ಟ ಪಾಂಡುಪುತ್ರರ ಈ ಬಹಳ ದೊಡ್ಡದಾದ ಸೈನ್ಯವನ್ನು ನೋಡಿರಿ.||೩||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  2
ಪರಮಾತ್ಮನೇ ನಮಃ
ಶ್ರೀಮದ್ಭಗವದ್ಗೀತಾ ಅಥ ಪ್ರಥಮೋಧ್ಯಾಯಃ -ಅರ್ಜುನ ವಿಷಾದಯೋಗಃ ಸಂಜಯ ಉವಾಚ
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ |
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ||
ಸಂಜಯನು ಹೇಳಿದನು- ಯುದ್ಧಾರಂಭದ ಸಮಯದಲ್ಲಿ ದುರ್ಯೋಧನನು ವ್ಯೂಹರಚನಾ ಯುಕ್ತವಾದ ಪಾಂಡವರ ಸೈನ್ಯವನ್ನು ನೋಡಿ ದ್ರೋಣಾಚಾರ್ಯರ ಬಳಿಗೆ ಹೋಗಿ ಈ ಮಾತನ್ನು ಹೇಳಿದನು.||೨||
(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
ಭಗವದ್ಗೀತಾ ಅಭಿಯಾನ ಅಧ್ಯಾಯ  1
ಶ್ಲೋಕ  1
ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಅಥ ಪ್ರಥಮೋಧ್ಯಾಯಃ- ಅರ್ಜುನ ವಿಷಾದಯೋಗಃ ಧೃತರಾಷ್ಟ್ರ ಉವಾಚ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||
ಧೃತರಾಷ್ಟ್ರನು ಹೇಳಿದನು- ಹೇ ಸಂಜಯ! ಧರ್ಮ ಭೂಮಿಯಾದ ಕುರುಕ್ಷೇತ್ರದಲ್ಲಿ ಸೇರಿದ ಯುದ್ಧದ ಇಚ್ಛೆ ಉಳ್ಳ ನನ್ನವರು ಹಾಗೂ ಪಾಂಡುವಿನ ಪುತ್ರರು ಏನು ಮಾಡಿದರು? ||೧||

(ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)
like 0 Comment 0
Share on Google+
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved