ವಿನಾಶೇ ಬಹವೋ ದೋಷಾಃ ಜೀವನ್ ಭದ್ರಾಣಿ ಪಶ್ಯತಿ| ತಸ್ಮಾತ್ ಪ್ರಾಣಾನ್ ಧರಿಷ್ಯಾಮಿ ಧ್ರುವೋ ಜೀವತಿ ಸಂಗಮಃ || -ಸುಂದರಕಾಂಡ. ರಾಮಾಯಣ |
ಆತ್ಮ ಹತ್ಯೆಯಲ್ಲಿ ಬಹಳ ದೋಷಗಳಿವೆ. ಬದಿಕಿದ್ದರೆ ಮಾತ್ರ ಒಳ್ಳೆಯದನ್ನು ಕಾಣಬಹುದು. ಆದ್ದರಿಂದ ಆತ್ಮ ಹತ್ಯೆ ಮಾಡಿಕೊಳ್ಳದೇ ಬದುಕಿರುತ್ತೇನೆ. ಬದುಕಿದ್ದರೆ ಶ್ರೇಯಸ್ಸು ನಿಶ್ಚಿತ. (ಇದು ಸೀತೆಯನ್ನು ಕಾಣದೇ ವಿಷಣ್ಣನಾದ ಹನುಮಂತನ ಆಲೋಚನೆ) (ಸಂಗ್ರಹ :ಸ್ವರ್ಣವಲ್ಲೀ ಭಕ್ತವೃಂದ) |
ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್ | ಏವಂ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ || |
ಹೇಗೆ ಒಂದೇ ಚಕ್ರದಿಂದ ರಥವು ಮುಂದೆ ಚಲಿಸಲಾರದೋ, ಹಾಗೆಯೇ ಪುರುಷ ಪ್ರಯತ್ನವಿಲ್ಲದೇ ದೈವವು / ಅದೃಷ್ಟವು ಸಿದ್ಧಿಸುವುದಿಲ್ಲ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಅನಭ್ಯಾಸೇ ವಿಷಂ ವಿದ್ಯಾ ಅಜೀರ್ಣೇ ಭೋಜನಂ ವಿಷಮ್ | ವಿಷಂ ಸಭಾ ದರಿದ್ರಸ್ಯ ವೃದ್ಧಸ್ಯ ತರುಣೀ ವಿಷಮ್ || ಹಿತೋಪದೇಶ: |
ಅದ್ಯಯನ ಮಾಡದ ವಿದ್ಯಾರ್ಥಿಗೆ ವಿದ್ಯೆಯು ವಿಷ. ಅಜೀರ್ಣರೋಗ ಇರುವ ಮನುಷ್ಯನಿಗೆ ಭೋಜನವು ವಿಷ. ಬಡ ಮನುಷ್ಯನಿಗೆ ರಾಜನ ಭವನವು ವಿಷ. ವಯಸ್ಸಾದ ಪತಿಗೆ ತರುಣಿ ಪತ್ನಿಯೇ ವಿಷ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಕಾಕತಾಲೀಯವತ್ಪ್ರಾಪ್ತಂ ದೃಷ್ಟ್ವಾಪಿ ನಿಧಿಮಗ್ರತಃ | ನ ಸ್ವಯಂ ದೈವಮಾದತ್ತೇ ಪುರುಷಾರ್ಥಮಪೇಕ್ಷತೇ || |
ಕಾಕತಾಲೀಯವಾಗಿ ಎಂದರೆ ಅಕಸ್ಮಾತ್ತಾಗಿ ಎದುರಿಗೆ ಪ್ರತ್ಯಕ್ಷವಾದ ನಿಧಿಯನ್ನು ಸ್ವಪ್ರಯತ್ನದಿಂದ ವಶದಲ್ಲಿ ಇರಿಸಿಕೊಳ್ಳದಿದ್ದರೆ ಆತನಿಗೆ ಸಿಗುವುದಿಲ್ಲ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪೂರ್ವಜನ್ಮಕೃತಂ ಕರ್ಮ ತದ್ದೈವಮಿತಿ ಕಥ್ಯತೇ | ತಸ್ಮಾತ್ಪುರುಷಕಾರೇಣ ಯತ್ನಂ ಕುರ್ಯಾದತಂದ್ರಿತಃ || |
ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮವೇ ದೈವವೆಂದು ಹೇಳಲ್ಪಡುತ್ತದೆ. ಆದ್ದರಿಂದ ಕ್ರಿಯಾಶೀಲನಾಗಿ ಪುರುಷನು ಸತ್ಕಾರ್ಯಪ್ರವೃತ್ತನಾಗಬೇಕು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಕಾಕತಾಲೀಯವತ್ಪ್ರಾಪ್ತಂ ದೃಷ್ಟ್ವಾಪಿ ನಿಧಿಮಗ್ರತಃ | ನ ಸ್ವಯಂ ದೈವಮಾದತ್ತೇ ಪುರುಷಾರ್ಥಮಪೇಕ್ಷತೇ || |
ಕಾಕತಾಲೀಯವಾಗಿ ಎಂದರೆ ಅಕಸ್ಮಾತ್ತಾಗಿ ಎದುರಿಗೆ ಪ್ರತ್ಯಕ್ಷವಾದ ನಿಧಿಯನ್ನು ಸ್ವಪ್ರಯತ್ನದಿಂದ ವಶದಲ್ಲಿ ಇರಿಸಿಕೊಳ್ಳದಿದ್ದರೆ ಆತನಿಗೆ ಸಿಗುವುದಿಲ್ಲ. |
ಯಥಾ ಮೃತ್ಪಿಂಡತಃ ಕರ್ತಾ ಕುರುತೇ ಯದ್ಯದಿಚ್ಛತಿ | ಏವಮಾತ್ಮಕೃತಂ ಕರ್ಮ ಮಾನವಃ ಪ್ರತಿಪದ್ಯತೇ || |
ಹೇಗೆ ಕುಂಬಾರನು ಮಣ್ಣಿನ ಮುದ್ದೆಯಿಂದ ಏನೇನು ಬೇಕೋ ಅದೆಲ್ಲವನ್ನೂ ಮಾಡುವಂತೇ ಸ್ವಯಂ ಕೃತ ಕರ್ಮವನ್ನು ಮಾನವನು ಹೊಂದುತ್ತಾನೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವೇತ್ | ಏವಂ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ || |
ಹೇಗೆ ಒಂದೇ ಚಕ್ರದಿಂದ ರಥವು ಮುಂದೆ ಚಲಿಸಲಾರದೋ, ಹಾಗೆಯೇ ಪುರುಷಪ್ರಯತ್ನವಿಲ್ಲದೇ ದೈವವು / ಅದೃಷ್ಟವು ಸಿದ್ಧಿಸುವುದಿಲ್ಲ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪದ್ಮಾಕರಂ ದಿನಕರೋ ವಿಕಚಂ ಕರೋತಿ ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್ | ನಾಭ್ಯರ್ಥಿತೋ ಜಲಧರೋಽಪಿ ಜಲಂ ದದಾತಿ ಸಂತಃ ಸ್ವಯಂ ಪರಹಿತೇ ವಿಹಿತಾಭಿಯೋಗಾಃ || |
ಸೂರ್ಯನು ಕಮಲವನ್ನು ಅರಳಿಸುತ್ತಾನೆ. ಚಂದ್ರನು ನೈದಿಲೆಯ ಸಮೂಹವನ್ನೇ ಅರಳಿಸುತ್ತಾನೆ. ಪ್ರಾರ್ಥಿಸದಿದ್ದರೂ ಮೋಡವು ತಾನಾಗಿಯೇ ನೀರನ್ನು ನೀಡುತ್ತದೆ. ಸಜ್ಜನರು ತಾವಾಗಿಯೇ ಇತರರಿಗೆ ಸಹಾಯ ಮಾಡುವುದರಲ್ಲಿ ನಿರತರಾಗಿರುತ್ತಾರೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಯದಭಾವಿ ನ ತದ್ಭಾವಿ ಭಾವಿ ಚೇನ್ನ ತದನ್ಯಥಾ | ಇತಿ ಚಿಂತಾವಿಷಘ್ನೋಯ ಮಗದಃ ಕಿಂ ನ ಪೀಯತೇ || |
ಯಾವುದು ಆಗಬಾರದೋ ಅದು ಆಗುವುದಿಲ್ಲ, ಯಾವುದು ಆಗಬೇಕೋ ಅದೂ ಕೂಡ ವಿಪರೀತವಾಗಲಾರದು ಎಂಬ ಚಿಂತೆಯೆಂಬ ಈ ವಿಷನಾಶಕ ಔಷಧಿಯು ಏಕೆ ಕುಡಿಯಲ್ಪಡುವುದಿಲ್ಲ? (ಎಂದರೆ ಮನುಷ್ಯನು ಚಿಂತೆಯನ್ನು ಮಾಡಬಾರದು, ಅದೊಂದು ರೋಗ. ಆ ರೋಗಕ್ಕೆ ಔಷಧಿಯು ಮನಸ್ಸಿನಲ್ಲಿಯೇ ಇದೆ. ಮನಸ್ಸಿನಲ್ಲಿ ಒಳ್ಳೆಯದೇ ಆಗುತ್ತೆ ಎಂಬ ಭಾವನೆ ಇಟ್ಟುಕೊಂಡು ಬದುಕಿದರೆ ಅದೇ ಆ ಚಿಂತೆಯೆಂಬ ವಿಷವನ್ನು ನಾಶಮಾಡುವ ಔಷಧಿ. ಇದನ್ನು ಏಕೆ ಯಾರೂ ಕುಡಿಯುವುದಿಲ್ಲ?) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಭಿರ್ನರಾಣಾಮ್ |ಧರ್ಮೋ ಹಿ ತೇಷಾಮಧಿಕೋ ವಿಶೇಷೋ ಧರ್ಮೇಣ ಹೀನಾಃ ಪಶುಭಿಃ ಸಮಾನಾಃ || |
ಆಹಾರ, ನಿದ್ರೆ, ಭಯ ಮತ್ತು ಮೈಥುನ ಇವುಗಳು ಪ್ರಾಣಿಗಳಿಂದ ಹಿಡಿದು ಮನುಷ್ಯರಿಗೆಲ್ಲರಿಗೂ ಸಮಾನವಾಗಿ ಇರುವ ಕಾರ್ಯಗಳು. ಆದರೆ ಒಂದೇ ವಿಶೇಷಕಾರ್ಯವಾದ ಧರ್ಮವು ಈ ಪ್ರಾಣಿ ಮತ್ತು ಮಾನವರನ್ನು ಬೇರೆಯಾಗಿಸುತ್ತದೆ. ಯಾವನು ಧರ್ಮಾಚರಣೆ ಮಾಡುವುದಿಲ್ಲವೋ ಅವನು ಪಶು-ಪ್ರಾಣಿಗಳಂತೇ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಧರ್ಮಾರ್ಥಕಾಮಮೋಕ್ಷಾಣಾಂ ಯಸ್ಯೈಕೋಽಪಿ ನ ವಿದ್ಯತೇ | ಅಜಾಗಲಸ್ತನಸ್ಯೈವ ತಸ್ಯ ಜನ್ಮ ನಿರರ್ಥಕಮ್ || ಹಿತೋಪದೇಶ: |
ಯಾರಿಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕರಲ್ಲಿ ಯಾವುದಾದರೂ ಒಂದು ಕೂಡ ಇಲ್ಲವೋ, ಆತನ ಜನ್ಮವು ಆಡಿನ ಕುತ್ತಿಗೆಯಲ್ಲಿ ನೇತಾಡುವ ಸ್ತನಗಳಂತೇ ನಿರರ್ಥಕವಾಗುತ್ತದೆ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಅನಭ್ಯಾಸೇ ವಿಷಂ ವಿದ್ಯಾ ಅಜೀರ್ಣೇ ಭೋಜನಂ ವಿಷಮ್ | ವಿಷಂ ಸಭಾ ದರಿದ್ರಸ್ಯ ವೃದ್ಧಸ್ಯ ತರುಣೀ ವಿಷಮ್ || ಹಿತೋಪದೇಶ: |
ಅದ್ಯಯನ ಮಾಡದ ವಿದ್ಯಾರ್ಥಿಗೆ ವಿದ್ಯೆಯು ವಿಷ. ಅಜೀರ್ಣರೋಗ ಇರುವ ಮನುಷ್ಯನಿಗೆ ಭೋಜನವು ವಿಷ. ಬಡ ಮನುಷ್ಯನಿಗೆ ರಾಜನ ಭವನವು ವಿಷ. ವಯಸ್ಸಾದ ಪತಿಗೆ ತರುಣಿ ಪತ್ನಿಯೇ ವಿಷ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಕೋ ಧನ್ಯೋ ಬಹುಭಿಃ ಪುತ್ರೈಃ ಕುಶೂಲಾಪೂರಣಾಢಕೈಃ | ವರಮೇಕಃ ಕುಲಾಲಂಬೀ ಯತ್ರ ವಿಶ್ರೂಯತೇ ಪಿತಾ || ಹಿತೋಪದೇಶ |
ಕಣಜಗಳನ್ನು ತುಂಬಿಸುವ ಅಳತೆಪಾತ್ರೆಯಂತಿರುವ ಅನೇಕ ಪುತ್ರರಿಂದ ಯಾವ ಪಿತನು ಧನ್ಯನು? ಯಾವ ಪುತ್ರನಿಂದ ತಂದೆಯ ಕೀರ್ತಿಯು ಹಬ್ಬುವುದೋ ಅವನೇ ಶ್ರೇಷ್ಠಪುತ್ರನು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || |
ನೀರನ್ನು ಚೆನ್ನಾಗಿ ಕುದಿಸಿದರೂ ಅದು ಹೇಗೆ ಪುನಃ ತಣ್ಣಗಾಗುತ್ತದೆಯೋ ಹಾಗೆಯೇ ಉಪದೇಶಮಾಡುವದರಿಂದ ಒಬ್ಬನ ಸ್ವಭಾವ(ಹುಟ್ಟುಗುಣ) ವನ್ನು ಬದಲಾಯಿಸಲು ಸಾಧ್ಯವಿಲ್ಲ . |
ಗುಣಿಗಣಗಣನಾರಂಭೇ ನ ಪತತಿ ಕಠಿನೀ ಸುಸಂಭ್ರಮಾದ್ಯಸ್ಯ | ತೇನಾಂಬಾ ಯದಿ ಸುತಿನೀ ವದ ವಂಧ್ಯಾ ಕೀದೃಶೀ ನಾಮ || ಹಿತೋಪದೇಶ |
ಒಬ್ಬ ಗುಣರಹಿತವ್ಯಕ್ತಿಯ ಹೆಸರನ್ನು ಗುಣಯುಕ್ತ ವ್ಯಕ್ತಿಗಳ ಪಟ್ಚಿಯಲ್ಲಿ ಬರೆಯುವಾಗ ಬರೆಯುವವರಿಗೆ ಕಠಿಣತೆಯು ಏನೂ ಅನಿಸುವುದಿಲ್ಲ. ಅಂತಹ ಗುಣರಹಿತ ವ್ಯಕ್ತಿಯಿಂದ ಆತನ ತಾಯಿಯು ಪುತ್ರವತಿ ಎಂದೆನಿಸಿದರೆ ಬಂಜೆಗೆ ಏನೆಂದು ಕರೆಯಬೇಕು..?? ಎಂದರೆ ಗುಣರಹಿತಪುತ್ರನ ತಾಯಿಯೂ ಬಂಜೆಯಂತೇ ಎಂದು ಸುಭಾಷಿತದ ಅರ್ಥ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಅಜಾತಮೃತಮೂರ್ಖಾಣಾಂ ವರಾವಾದ್ಯೌ ನ ಚಾಂತಿಮಃ| ಸಕೃದ್ದುಃಖಕರಾವಾದ್ಯಾ-ವಂತಿಮಸ್ತು ಪದೇ ಪದೇ || |
ಹಿತೋಪದೇಶ ಮಗು ಜನಿಸಲಿಲ್ಲ, ಜನಿಸಿ ಕ್ಷಣದಲ್ಲಿ ಸತ್ತಿತು, ಹುಟ್ಟಿ ಮೂರ್ಖವಾಯಿತು - ಈ ಮೂರರಲ್ಲಿ ಮೊದಲೆರಡು ಒಮ್ಮೆ ಮಾತ್ರ ದುಃಖವನ್ನುಂಟುಮಾಡುವುದರಿಂದ ಶ್ರೇಷ್ಠ (ಪರವಾಗಿಲ್ಲ). ಆದರೆ ಮಗು ಹುಟ್ಟಿ ಮೂರ್ಖವಾದರೆ ಅದು ತಂದೆ ತಾಯಿಗಳಿಗೆ ಪ್ರತಿಕ್ಷಣವೂ ದುಃಖವನ್ನು ಕೊಡುವುದು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ವರಂ ಗರ್ಭಸ್ರಾವೋ ವರಮಪಿ ಚ ನೈವಾಭಿಗಮನಂ ವರಂ ಜಾತಃ ಪ್ರೇತೋ ವರಮಪಿ ಚ ಕನ್ಯೈವ ಜನಿತಾ | ವರಂ ವಂಧ್ಯಾ ಭಾರ್ಯಾ ವರಮಪಿ ಚ ಗರ್ಭೇಷು ವಸತಿರ್ನ ಚಾವಿದ್ವಾನ್ ರೂಪದ್ರವಿಣಗುಣಯಕ್ತೋಽಪಿ ತನಯಃ || |
ಹಿತೋಪದೇಶ ಸೌಂದರ್ಯ, ಸಂಪತ್ತುಗಳಿದ್ದರೂ ವಿದ್ಯೆ ಇರದ ಮಗುವು ಆಗುವುದು ಅತ್ಯಂತ ಕೆಟ್ಟದ್ದು. ಅದಕ್ಕಿಂತಗರ್ಭಸ್ರಾವವಾಗುವುದು, ಸ್ತ್ರೀಸಂಸರ್ಗವಿಲ್ಲದಿರುವುದು, ಜನಿಸಿದ ತಕ್ಷಣ ಮೃತವಾಗುವುದು, ಹೆಣ್ಣುಮಗುವಿನ ಜನನ, ಸ್ತ್ರೀಯ ಬಂಜೆತನ ಅಥವಾ ಗರ್ಭದಲ್ಲಿಯೇ ಚಿರಕಾಲವಾಸವೇ ಅತ್ಯಂತ ಶ್ರೇಷ್ಠ.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸ್ನಾಸ್ಯತೋವರುಣಃ ಕಾಂತಿಂ ಜುಹ್ವತೋಽಗ್ನಿಃ ಶ್ರಿಯಂ ಹರೇತ್ | ಅಶ್ನತೋ ಮೃತ್ಯುರಾಯುಷ್ಯಂ ತಸ್ಮಾತ್ ಮೌನಂ ತ್ರಿಷು ಸ್ಮೃತಮ್ || |
ಸ್ನಾನ ಮಾಡುವಾಗ ಮಾತನಾಡಿದರೆ ವರುಣನು ಕಾಂತಿಯನ್ನು, ಹೋಮ ಮಾಡುವಾಗ ಮಾತನಾಡಿದರೆ ಅಗ್ನಿಯು ಸಂಪತ್ತನ್ನು, ಊಟ ಮಾಡುವಾಗ ಮಾತನಾಡಿದರೆ ಮೃತ್ಯುವು ಆಯುಷ್ಯವನ್ನೂ ಕಳೆಯುವರು. ಆದ್ದರಿಂದ ಈ ಮೂರು ಕಾಲದಲ್ಲಿಯೂ ಮೌನವನ್ನು ಆಚರಿಸಬೇಕು.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸಂಗಃ ಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾ ಧೀಯತಾಂ ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸಂತ್ಯಜ್ಯತಾಮ್ | ಸದ್ವಿದ್ವಾನುಪಸರ್ಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || |
ಸಜ್ಜನರ ಸಹವಾಸ ಮಾಡು, ಭಗವಂತನಲ್ಲಿ ದೃಢವಾದ ಭಕ್ತಿ ಇಡು, ಶಾಂತಿ ಮೊದಲಾದ ಸದ್ಗುಣಗಳನ್ನು ತುಂಬಿಕೋ, ಬಲವಾದ ಪಾಪ ಕರ್ಮಗಳನ್ನೆಲ್ಲ ಕಿತ್ತೊಗೆ, ಒಳ್ಳೆಯ ವಿದ್ವಾಂಸರನ್ನು ಪ್ರತಿದಿನವೂ ಅನುಸರಿಸು, ಅವರ ಪಾದುಕೆಗಳನ್ನು ಸೇವಿಸು, ಅವರಿಂದ ಜ್ಞಾನ-ವೇದಾಂತ ವಾಕ್ಯಗಳನ್ನು ಕೇಳು, "ಬ್ರಹ್ಮ"ಎಂಬ ದೈವ ಶಕ್ತಿಯನ್ನು ಹುಡುಕು. ಜೀವನ ಸಾಫಲ್ಯ ಇವುಗಳಲ್ಲಿದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ವೇದೋಕ್ತಃ ಪ್ರಥಮೋ ಧರ್ಮೋ ಧರ್ಮಶಾಸ್ತ್ರೇಷು ಚಾಪರಃ | ಶಿಷ್ಟಾಚಾರಸ್ತೃತೀಯಸ್ತು ತ್ರಿವಿಧಂ ಧರ್ಮಲಕ್ಷಣಮ್ || |
ವೇದಗಳಲ್ಲಿ ಹೇಳಿದ ಧರ್ಮವೇ ಮುಖ್ಯ. ಅದಕ್ಕೆ ಪ್ರಥಮ ಪ್ರಾಶಸ್ತ್ಯ. ಧರ್ಮ ಶಾಸ್ತ್ರಗಳಲ್ಲಿ ಹೇಳಿರುವುದಕ್ಕೆ ಎರಡನೇ ಪ್ರಾಶಸ್ತ್ಯ. ಶಿಷ್ಟಾಚಾರಕ್ಕೆ ಮೂರನೇ ಪ್ರಾಶಸ್ತ್ಯ. ಈ ಮೂರು ಧರ್ಮದ ಲಕ್ಷಣವಾಗಿದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ನ ದೈವಮಪಿ ಸಂಚಿಂತ್ಯ ತ್ಯಜೇದುದ್ಯೋಗಮಾತ್ಮನಃ | ಅನುದ್ಯೋಗೇನ ಕಸ್ತೈಲಂ ತಿಲೇಭ್ಯಃ ಪ್ರಾಪ್ತುಮರ್ಹತಿ || |
ದೈವದ ಮೇಲೆ ಭಾರ ಹಾಕಿ ಕೈಯಲ್ಲಿದ್ದ ಯಾವ ಕೆಲಸವನ್ನೂ ಬಿಡಬಾರದು. ಏಕೆಂದರೆ ಯಾವ ಪ್ರಯಾಸವೂ ಇಲ್ಲದೇ ಎಳ್ಳಿನಿಂದ ತೈಲವು ಪ್ರಾಪ್ತವಾಗುವುದೇ? (ಪ್ರಯತ್ನದಿಂದ ಕೆಲಸ ಮಾಡಿದರೆ ಎಳ್ಳಿನಿಂದ ಎಣ್ಣೆಯನ್ನು ತೆಗೆದು ಶೇಖರಿಸಬಹುದು. ಹಾಗೆಯೇ ಜೀವನದಲ್ಲಿ ದೈವ ಅಥವಾ ಅದೃಷ್ಟದ ಮೇಲೆ ಭಾರ ಹಾಕದೇ ಪ್ರಯತ್ನಪಟ್ಟು ಕಾರ್ಯವನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಹಣ ಸಂಗ್ರಹವಾಗಿ ಜೀವನೋಪಾಯಕ್ಕೆ ದಾರಿಯಾಗುತ್ತದೆ.) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ದುರ್ಜನೇನ ಸಮಂ ವೈರಂ ಪ್ರೀತಿಂ ಚಾಪಿ ನ ಕಾರಯೇತ್ | ಉಷ್ಣೋ ದಹತಿ ಚಾಂಗಾರಃ ಶೀತಃ ಕೃಷ್ಣಾಯತೇ ಕರಮ್ || |
ದುರ್ಜನರೊಂದಿಗೆ ಸ್ನೇಹವನ್ನಾಗಲಿ ದ್ವೇಷವನ್ನಾಗಲಿ ಮಾಡಬಾರದು. ಬಿಸಿಯಾದ ಇದ್ದಿಲನ್ನು ಮುಟ್ಟಿದರೆ ಸುಡುತ್ತದೆ, ತಣ್ಣನೆಯದನ್ನು ಮುಟ್ಟಿದರೆ ನಮ್ಮ ಕೈಯನ್ನು ಕಪ್ಪು ಮಾಡುತ್ತದೆ ಆದ್ದರಿಂದ ಇದ್ದಿಲಿನಂತಹ ದುರ್ಜನರಿಂದ ದೂರವಿರುವುದೇ ಒಳ್ಳೆಯದು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ದುರ್ಜನಃ ಪರಿಹರ್ತವ್ಯೋ ದ್ಯಯಾಲಂಕೃತೋಪಿ ಸನ್ | ಮಣಿನಾ ಭೂಷಿತಃ ಸರ್ಪಃ ಕಿಮಸೌ ನ ಭಯಂ ಕರಃ|| |
ವಿದ್ಯೆಯಿಂದ ಅಲಂಕರಿಸಲ್ಪಟ್ಟರೂ ದುರ್ಜನರಾದವರನ್ನ ಬಿಟ್ಟುಬಿಡಬೇಕು. ರತ್ನದಿಂದ ಅಲಂಕೃತವಾದ ಮಾತ್ರಕ್ಕೆ ಹಾವು ಭಯಂಕರವಲ್ಲವೇ? |
ಉಕ್ಷಾ ರಥೋ ಭೂಷಣಮಸ್ಥಿಮಾಲಾ ಭಸ್ಮಾಂಗರಾಗೋ ಗಜಚರ್ಮವಾಸಃ | ಏಕಾಲಯಸ್ಥೇsಪಿ ಧನಾಧಿನಾಥೇ ಸಖ್ಯೌ ದಶೇಯಂ ತ್ರಿಪುರಾಂತಕಸ್ಯ || |
(ತ್ರಿಪುರ-ತ್ರಿಪುರಾಸುರ ಸಂಹಾರ ಮಾಡಿದ ಶಂಭುವಿನ ಸ್ಥಿತಿ ಎಂತಹುದು?) (ತ್ರಿಪುರ-ತ್ರಿಪುರಾಸುರ ಸಂಹಾರ ಮಾಡಿದ ಶಂಭುವಿನ ಸ್ಥಿತಿ ಎಂತಹುದು?) ವೃಷಭ ವಾಹನ, ತಲೆಬುರುಡೆಯ ರುಂಡಮಾಲೆಯ ಅಲಂಕಾರ, ಶರೀರಕ್ಕೆ ಬೂದಿಯ ಲೇಪನ, ಆನೆಯ ಚರ್ಮದ ಬಟ್ಟೆ, ಭಿಕ್ಷಾಟನೆಯ ವೃತ್ತಿ! ಧನಾಧಿಪತಿ ಕುಬೇರನೊಂದಿಗೆ ಒಂದೇ ಸ್ಥಳದಲ್ಲಿದ್ದರೂ ಶಿವನಿಗೇ ಈ ದುಃಸ್ಥಿತಿ ತಪ್ಪಿದ್ದಲ್ಲವೆಂದಮೇಲೆ ಭುವಿಯಲ್ಲಿ ಜನಿಸಿರುವ ಹುಲುಮಾನವರ ಪಾಡು ಹೇಗಿರಬಹುದು? (ಸಂಗ್ರಹ:ಶ್ರೀ ಸ್ವರ್ಣವಲ್ಲೀ ಭಕ್ತವೃಂದ) |
ಉದರ ನಿಮಿತ್ತಂ ಬಹುಕೃತ ವೇಷಃ ಕದನ ನಿಮಿತ್ತಂ ನಿಷ್ಠುರ ಭಾಷಾ | ಜ್ಞಾನ ನಿಮಿತ್ತಂ ಗುರುಕುಲ ವಾಸಃ ಮರಣ ನಿಮಿತ್ತಂ ಗುಣ ವಿಪರೀತಮ್ || |
ಹೊಟ್ಟೆಯನ್ನು ತುಂಬಿಸಿಕೊಳ್ಳಲು ಮನುಷ್ಯನು ವಿವಿಧ ವೇಷ ಧರಿಸಬೇಕಾಗುತ್ತದೆ. ನಿಷ್ಠುರ ಮತ್ತು ಕಠೋರವಾಗಿ ಮಾತನಾಡಿದಾಗ ಜಗಳ ಏರ್ಪಡುತ್ತದೆ. ಗುರುಕುಲದಲ್ಲಿ ವಾಸಮಾಡಿ, ಶ್ರದ್ಧೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಜ್ಞಾನ, ವಿದ್ಯೆ ಸಿದ್ಧಿಸುತ್ತವೆ. ದೇಹದ ಸಹಜ ಗುಣಗಳಾದ ವಾತ-ಪಿತ್ಥ-ಕಫಗಳಲ್ಲಿ ವ್ಯತ್ಯಾಸವಾದರೆ ರೋಗಗ್ರಸ್ತರಾಗಿ ಮರಣ ಸನ್ನಿಹಿತವಾಗುತ್ತದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ನ ಸಾಹಸೈಕಾಂತರಸಾನುವರ್ತಿನಾ ನ ಚಾಪ್ಯುಪಾಯೋಪಹತಾಂತರಾತ್ಮನಾ । ವಿಭೂತಯಃ ಶಕ್ಯಮವಾಪ್ತುಮೂರ್ಜಿತಾಃ ನಯೇ ಚ ಶೌರ್ಯೇ ಚ ವಸಂತಿ ಸಂಪದಃ ॥ ಹಿತೋಪದೇಶ, ವಿಗ್ರಹ-೧೧೩ |
ಕೇವಲ ಸಾಹಸವೊಂದನ್ನೇ ಅನುಸರಿಸುವವನಿಂದಾಗಲೀ, ಅಥವಾ ಉಪಾಯಗಳ ಪ್ರಭಾವಕ್ಕೊಳಗಾದ ಮನಸ್ಸಿನವನಿಂದಾಗಲೀ ಉನ್ನತೋನ್ನತವಾದ ಐಶ್ವರ್ಯಗಳನ್ನು ಪಡೆಯುವುದು ಸಾಧ್ಯವಿಲ್ಲ. ಸಂಪತ್ತೆಂಬುದು ಉಪಾಯ ಹಾಗೂ ಶೌರ್ಯ ಇವೆರಡರಲ್ಲಿಯೂ ನೆಲಸಿದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಯಥಾ ಹಿ ಭರತೋ ವರ್ಣೇವರ್ಣಯತ್ಯಾತ್ಮನಸ್ತನುಂ| ನಾನಾ ರೂಪಾಣಿ ಕುರ್ವಾಣಸ್ತಥಾತ್ಮಾ ಕರ್ಮಜಾಸ್ತನೂಃ|| |
ಹೇಗೆ ನಟನು ನಾಟಕದಲ್ಲಿ ಬಣ್ಣಗಳಿಂದ ಅನೇಕ ವೇಷಗಳನ್ನು ಧರಿಸುತ್ತಾನೆಯೋ ,ಹಾಗೆ ಆತ್ಮನು ಕರ್ಮದಿಂದ ಅನೇಕ ರೂಪಗಳನ್ನು ಪಡೆಯುತ್ತದೆ . |
ನ ಕಾಲಸ್ಯ ಪ್ರಿಯಃ ಕಶ್ಚಿತ್ ನ ದ್ವ್ಯೇಷ್ಯಃ ಕುರುಸತ್ತಮ| ನ ಮಧ್ಯಸ್ಥಃ ಕ್ವಚಿತ್ ಕಾಲಃ ಸರ್ವಂ ಕಾಲಃ ಪ್ರಕರ್ಷತಿ|| - |
ಮಹಾಭಾರತ, ಸ್ತ್ರೀ- ೨-೨೩ ಯುಧಿಷ್ಠಿರ, ಕಾಲನಿಗೆ ಪ್ರಿಯನೂ ಇಲ್ಲ; ವೈರಿಯೂ ಇಲ್ಲ. ಅವನು ಎಂದಿಗೂ ಮಧ್ಯಸ್ಥನೂ ಅಲ್ಲ. ಕಾಲನು ಸರ್ವರನ್ನೂ ಎಳೆದುಕೊಂಡು ಹೋಗುತ್ತಾನೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ವಿನಾಶೇ ಬಹವೋ ದೋಷಾಃ ಜೀವನ್ ಭದ್ರಾಣಿ ಪಶ್ಯತಿ| ತಸ್ಮಾತ್ ಪ್ರಾಣಾನ್ ಧರಿಷ್ಯಾಮಿ ಧ್ರುವೋ ಜೀವತಿ ಸಂಗಮಃ || -ಸುಂದರಕಾಂಡ. ರಾಮಾಯಣ |
ಆತ್ಮ ಹತ್ಯೆಯಲ್ಲಿ ಬಹಳ ದೋಷಗಳಿವೆ. ಬದಿಕಿದ್ದರೆ ಮಾತ್ರ ಒಳ್ಳೆಯದನ್ನು ಕಾಣಬಹುದು. ಆದ್ದರಿಂದ ಆತ್ಮ ಹತ್ಯೆ ಮಾಡಿಕೊಳ್ಳದೇ ಬದುಕಿರುತ್ತೇನೆ. ಬದುಕಿದ್ದರೆ ಶ್ರೇಯಸ್ಸು ನಿಶ್ಚಿತ. (ಇದು ಸೀತೆಯನ್ನು ಕಾಣದೇ ವಿಷಣ್ಣನಾದ ಹನುಮಂತನ ಆಲೋಚನೆ) (ಸಂಗ್ರಹ :ಸ್ವರ್ಣವಲ್ಲೀ ಭಕ್ತವೃಂದ) |
ನಷ್ಟಂ ಮೃತಮತಿಕ್ರಾಂತಂ ನಾನುಶೋಚಂತಿ ಪಂಡಿತಾಃ| ಪಂಡಿತಾನಾಂ ಚ ಮೂರ್ಖಾಣಾಂ ವಿಶೇಷೋsಯಂ ಯತಃ ಸ್ಮೃತಃ|| |
ನಷ್ಟವಾದುದಕ್ಕಾಗಿ, ಮೃತನಾದವನಿಗೆ, ಮತ್ತು ಕಾಲ ಮಿಂಚಿಹೋದುದಕ್ಕೆ ,ಬುದ್ಧಿವಂತರು ದುಃಖಿಸುವುದಿಲ್ಲ ..ಬುದ್ಧಿವಂತರಿಗೂ ಮೂರ್ಖರಿಗೂ ಇರುವ ವಿಶೇಷವು ಇದೇ ಎಂದು ಹೇಳಿದೆ. |
ಅರೇ ಭಜ ಹರೇರ್ನಾಮ ಕ್ಷೇಮಧಾಮ ಕ್ಷಣೇ ಕ್ಷಣೇ | ಬಹಿಸ್ಸರತಿ ನಿಃಶ್ವಾಸೇ ವಿಶ್ವಾಸಃ ಕಃ ಪ್ರವರ್ತತೇ || -ಗುರುಕೌಮುದೀ |
ಅಯ್ಯಾ, ಮಂಗಳಾಯತನಾದ ಶ್ರೀಹರಿಯ ನಾಮವನ್ನು ಪ್ರತಿಕ್ಷಣವೂ ಭಜಿಸು. ಹೊರಗೆ ಹೊರಟ ಉಸಿರು ಮತ್ತೆ ಒಳಗೆ ಬರುತ್ತದೆ ಎಂಬ ನಂಬಿಕೆ ಎಲ್ಲಿದೆ? |
ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ | ತಸ್ಮಾದ್ಧರ್ಮೊ ನ ಹಂತವ್ಯಃ ಮಾನೋ ಧರ್ಮೋ ಹತೋವಧೀತ್|| |
ಧರ್ಮವನ್ನು ಮೀರಿದರೆ ಅದು ನಮಗೆ ಹಾನಿಯನ್ನುಂಟುಮಾಡುತ್ತದೆ. ಧರ್ಮವನ್ನಾಚರಿಸಿ ಅದನ್ನು ರಕ್ಷಿಸಿದರೆ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಧರ್ಮವನ್ನು ಮೀರಬಾರದು. ಧರ್ಮಮೀರಿ ಹಾಳಾಗುವುದು ಬೇಡ (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ | ಚಿಂತನೀಯಾ ಹಿ ವಿಪದಾಂ ಆದಾವೇವ ಪ್ರತಿಕ್ರಿಯಾ || |
ಮನೆಗೆ ಬೆಂಕಿಬಿದ್ದಾಗ ಬಾವಿತೆಗೆಸು ಹೊರಡುವದು ಸರಿಯಲ್ಲ. ಮುಂದೆ ಬರಬಹುದಾದ ವಿಪತ್ತುಗಳಿಗೆ ಮೊದಲೇ ಪರಿಹಾರವನ್ನು ಆಲೋಚಿಸಿಕೊಂಡಿರಬೇಕು. ( ಸಂಗ್ರಹ : ಸ್ವರ್ಣವಲ್ಲೀ ಭಕ್ತವೃಂದ) |
ನ ಸ್ನಾನಮಾಚರೇದ್ಭುಕ್ತ್ವಾ ನಾತುರೋ ನ ಮಹಾನಿಶಿ | ನ ವಾಸೋಭಿಃ ಸಹಾಜಸ್ರಂ ನಾವಿಜ್ಞಾತೇ ಜಲಾಶಯೇ || -ಮನುಸ್ಮೃತಿ, ೪-೧೨೯ |
ಊಟವಾದ ಕೂಡಲೇ ಸ್ನಾನ ಮಾಡಬಾರದು. ಅಂತೆಯೇ ರೋಗಿಯೂ ಸ್ನಾನ ಮಾಡಕೂಡದು. ಅರ್ಧರಾತ್ರಿಯಲ್ಲೂ , ಅದೇ ರೀತಿ ಉಟ್ಟ ಬಟ್ಟೆಯಲ್ಲಿಯೂ ಸ್ನಾನ ಮಾಡಬಾರದು. ಪರಿಚಯವಿಲ್ಲದ {ಆಳ, ಸುಳಿ ಮುಂತಾದ} ಕೊಳ, ಬಾವಿ , ಕೆರೆಗಳಲ್ಲಿಳಿದು ಸ್ನಾನ ಮಾಡಬಾರದು. |
ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ | ಗೃಹಂ ತು ಗೃಹಿಣೀ ಹೀನಂ ಅರಣ್ಯ ಸದೃಶಂ ಭವೇತ್ || - ಮಹಾಭಾರತ |
ಕಟ್ಟಡವನ್ನು ಗೃಹವೆಂದು ತಿಳಿದವರು ಹೇಳುವದಿಲ್ಲ. ಗೃಹಿಣಿಯಿಂದ ಕಟ್ಟಡವು ಗೃಹವೆನಿಸಿಕೊಳ್ಳುತ್ತದೆ. ಗೃಹಿಣಿಯಿಲ್ಲದ ಮನೆ ಅರಣ್ಯಕ್ಕೆ ಸದೃಶವಾದದ್ದು |
ಅನಾಗತವಿಧಾನಂ ತು ಕರ್ತವ್ಯಂ ಶುಭಮಿಚ್ಛತಾಂ | ಆಪದಾಶಂಕಮಾನೇನ ಪುರುಷೇಣ ವಿಪಶ್ಛಿತಾ || |
ಮುಂದೆ ಅನರ್ಥವು ಸಂಭವಿಸಬಹುದೆಂಬ ಶಂಕೆಯಿದ್ದಾಗ ಶುಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು. |
ಅಲ್ಪಾನಾಮಪಿ ವಸ್ತೂನಾಂ ಸಂಗತಿಃ ಕಾರ್ಯಸಾಧಿಕಾ | ತೃಣೈರ್ಗುಣತ್ವಮಾಪನ್ನೈಃ ಬಧ್ಯಂತೇ ಮತ್ತದಂತಿನಃ || |
ಅರ್ಥ - ಅಲ್ಪವಾಗಿರುವ ವಸ್ತುಗಳೂ ಸಹ ಒಗ್ಗೂಡಿದಾಗ ಕಾರ್ಯವನ್ನು ಸಾಧಿಸುತ್ತವೆ.ಹುಲ್ಲುಗಳನ್ನ ಒಗ್ಗೂಡಿಸಿ ಹೊಸೆಯಲ್ಲಟ್ಟ ಹಗ್ಗದಿಂದ ಮದ್ದಾನೆಗಳೂ ಬಂಧಿಸಲ್ಪಡುತ್ತವೆ. |
ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || |
ನೀರನ್ನು ಚೆನ್ನಾಗಿ ಕುದಿಸಿದರೂ ಅದು ಹೇಗೆ ಪುನಃ ತಣ್ಣಗಾಗುತ್ತದೆಯೋ ಹಾಗೆಯೇ ಉಪದೇಶಮಾಡುವದರಿಂದ ಒಬ್ಬನ ಸ್ವಭಾವ(ಹುಟ್ಟುಗುಣ) ವನ್ನು ಬದಲಾಯಿಸಲು ಸಾಧ್ಯವಿಲ್ಲ . |
ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || |
ನೀರನ್ನು ಚೆನ್ನಾಗಿ ಕುದಿಸಿದರೂ ಅದು ಹೇಗೆ ಪುನಃ ತಣ್ಣಗಾಗುತ್ತದೆಯೋ ಹಾಗೆಯೇ ಉಪದೇಶಮಾಡುವದರಿಂದ ಒಬ್ಬನ ಸ್ವಭಾವ(ಹುಟ್ಟುಗುಣ) ವನ್ನು ಬದಲಾಯಿಸಲು ಸಾಧ್ಯವಿಲ್ಲ . |
ಭಾರೋsವಿವೇಕಿನಃ ಶಾಸ್ತ್ರಂ ಭಾರೋ ಜ್ಞಾನಂ ಚ ರಾಗಿಣಃ| ಅಶಾಂತಸ್ಯ ಮನೋ ಭಾರಃ ಭಾರೋsನಾತ್ಮವಿದೋ ವಪುಃ|| -ಯೋಗವಾಸಿಷ್ಠ,ವೈರಾಗ್ಯ.೧೩-೧೩ |
ವಿಚಾರವಿಲ್ಲದ ಅವಿವೇಕಿಗೆ ಶಾಸ್ತ್ರವು ಹೊರೆ. ಸಂಸಾರದ ವ್ಯಾಮೋಹ ಇರತಕ್ಕವನಿಗೆ ತತ್ವಜ್ಞಾನ ಹೊರೆ. ಶಾಂತಿಯಿಲ್ಲದವನಿಗೆ ಮನಸ್ಸೇ ಹೊರೆ.ಆತ್ಮಜ್ಞಾನಿಯಲ್ಲದವನಿಗೆ ದೇಹವೇ ಹೊರೆ. |
ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೆ | ನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ || ಭವತಿ ಹಿ ಪುನರ್ಭೂಯಾನ್ ಭೇದಃ ಫಲಂ ಪ್ರತಿ ತದ್ಯಥಾ ||| ಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾದಯಃ |||| -ಉತ್ತರರಾಮಚರಿತ೨-೪ |
ಗುರುವು ದಡ್ಡನಿಗೂ ಬುದ್ದಿವಂತನಿಗೂ ಸಮಾನವಾಗಿ ಬೋಧಿಸುತ್ತಾನೆ. ಅವರ ಜ್ಞಾನ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಯಾವ ವಿಶೇಷವಾದ ಯತ್ನವೂ ಇಲ್ಲ. ಆದರೆ ಪರಿಣಾಮದಲ್ಲಿ ಬಹಳ ಅಂತರ ಕಂಡುಬರುತ್ತದೆ. ಶುಭ್ರವಾದ ಮಣಿಯು ಪ್ರತಿಬಿಂಬವನ್ನು ಗ್ರಹಿಸುವುದು. ಮಣ್ಣು ಗ್ರಹಿಸಲಾರದು. |
ಅಂಧಃ ಸ ಏವ ಶ್ರುತವರ್ಜಿತೋ ಯಃ ಶಠಃ ಸ ಏವಾರ್ಥಿ ನಿರರ್ಥಕೋ ಯಃ ಮೃತಃ ಸ ಏವಾಸ್ತಿ ಯಶೋ ನ ಯಸ್ಯ ಧರ್ಮೇ ನ ಧೀರ್ಯಸ್ಯ ಸ ಏವ ಶೋಚ್ಯಃ |
ವಿದ್ಯೆ ಇಲ್ಲದವನೇ ಕುರುಡ. ಯಾಚಕರಿಗೇ ಏನನ್ನೂ ಕೊಡದವನೇ ದುಷ್ಟ. ಯಶಸ್ಸು ಕೀರ್ತಿಯನ್ನು ಗಳಿಸದವನು ಮೃತನೇ ಸರಿ. ಧರ್ಮದಲ್ಲಿ ಯಾರಿಗೆ ಆಸಕ್ತಿ ಇಲ್ಲವೋ ಅವನು ಶೋಚನೀಯ. |
ಸ ಬಂಧುರ್ಯೋ ವಿಪನ್ನಾನಾಂ ಆಪದುದ್ಧರಣಕ್ಷಮಃ | ನ ತು ದುರ್ವಿಹಿತಾತೀತವಸ್ತೂಪಾಲಂಭಪಂಡಿತಃ || -ಹಿತೋಪದೇಶ, ಮಿತ್ರಲಾಭ-೨೩ |
ಕಷ್ಟದಲ್ಲಿ ಸಿಲುಕಿದವರನ್ನು ಆಪತ್ತಿನಿಂದ ಉದ್ಧರಿಸಲು ಯಾರು ಸಮರ್ಥರೋ ಅವರೇ ನಿಜವಾದ ಬಂಧುಗಳು, ಸರಿಯಾಗಿ ನಿರ್ವಹಿಸದ ಅಥವಾ ಹಿಂದೆ ಸಂಭವಿಸಿದ ವಿಷಯವನ್ನು ಕುರಿತು ನಿಂದಿಸುವವನು ಬಂಧುವೇ ಅಲ್ಲ. |
ನೈವಾಕೃತಿಃ ಫಲತಿ ನೈವ ಕುಲಂ ನ ಶೀಲಮ್ | ವಿದ್ಯಾಪಿನೈವ ನ ಚ ಯತ್ನಕೃತಾಪಿ ಸೇವಾ|| ಭಾಗ್ಯಾನಿ ಪೂರ್ವತಪಸಾ ಖಲು ಸಂಚಿತಾನಿ ||| ಕಾಲೇ ಫಲಂತಿ ಪುರುಷಸ್ಯ ಯಥೈವ ವೃಕ್ಷಾಃ|||| -ನೀತಿಶತಕ |
ಪುರುಷನ ಸುಂದರ ಆಕಾರ, ಉತ್ತಮ ಕುಲ, ದುಷ್ಟವಲ್ಲದ ಶೀಲ,ಹೆಚ್ಚಿನವಿದ್ಯೆ, ಪ್ರಯತ್ನದಿಂದ ಮಾಡಿದ ಸೇವೆ ಇವು ಯಾವವೂ ಫಲಕಾರಿಯಾಗುವದಿಲ್ಲ. ಹಿಂದೆ ಆಚರಿಸಿದ ತಪಸ್ಸಿನಿಂದ ಸಂಗ್ರಹವಾದ ಭಾಗ್ಯಗಳು ಸಕಾಲದಲ್ಲಿ ವೃಕ್ಷಗಳಂತೆ ಫಲಕೊಡುತ್ತವೆ. (ಆದ್ದರಿಂದ ಪ್ರಯತ್ನ ಪೂರ್ವಕವಾಗಿ ಒಳ್ಳೆಯ ಕರ್ಮವನ್ನು ಮಾಡಬೇಕು.) |
ತೃಷ್ಣಯಾ ಚೇತ್ಪರಿತ್ಯಕ್ತಃ ಕೋ ದರಿದ್ರಃ ಕ ಈಶ್ವರಃ | ತಸ್ಯಾಶ್ಚೇತ್ಪ್ರಸರೋ ದತ್ತಃ ದಾಸ್ಯಂ ಚ ಶಿರಸಿ ಸ್ಥಿತಮ್ || ಹಿತೋಪದೇಶ ,ಮಿತ್ರಲಾಭ |
ಅಸೆಯೊಂದರಿಂದ ಬಿಡಲ್ಪಟ್ಟರೆ ಬಡವನಾರು? ದೊಡ್ಡವನಾರು? ಆ ಆಸೆಯನ್ನು ಹರಡಲು ಬಿಟ್ಟಿದ್ದೇ ಆದರೆ ದಾಸ್ಯವನ್ನು ತಲೆಯ ಮೇಲೆ ಇಟ್ಟುಕೊಂಡಂತೆಯೇ? |
ಸುಖಸ್ಯ ದುಃಖಸ್ಯ ನ ಕೋsಪಿ ದಾತಾ ಪರೋ ದದಾತೀತಿ ಕುಬುದ್ಧಿರೇಷಾ l ಅಹಂ ಕರೋಮೀತಿ ವೃಥಾಭಿಮಾನಃ ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ll |
ಸುಖ, ದುಃಖಗಳನ್ನು ಯಾರೂ ಉಂಟುಮಾಡುವುದಿಲ್ಲ. ಇನ್ನೊಬ್ಬನು ಉಂಟುಮಾಡುತ್ತಾನೆ ಎಂಬುದು ಕೆಟ್ಟಬುದ್ಧಿ. ತಾನೇ ಅವುಗಳಿಗೆ ಕಾರಣ ಎಂಬುದು ಅಹಂಕಾರ. ಈ ಲೋಕವೆಂಬುದು ತನ್ನ ಕರ್ಮವೆಂಬ ಸೂತ್ರದಿಂದ ಬಂಧಿತವಾಗಿದೆಯಷ್ಟೇ. |
ಶಾಠ್ಯೇನ ಮಿತ್ರಂ ಕಪಟೇನ ಧರ್ಮಂ ಪರೋಪತಾಪೇನ ಸಮೃದ್ಧಭಾವಮ್| ಸುಖೇನ ವಿದ್ಯಾಂ ಪರುಷೇಣ ನಾರೀಂ ವಾಂಛಂತಿ ಯೇ ನೂನಮಪಂಡಿತಾಸ್ತೇ|| |
ಮೋಸದಿಂದ ಸ್ನೇಹಿತನನ್ನು, ವಂಚನೆಯಿಂದ ಧರ್ಮವನ್ನೂ, ಇತರರಿಗೆ ಹಿಂಸೆಕೊಡುವದರಿಂದ ಸಮೃದ್ಧಿಯನ್ನು, ಸುಖದಿಂದ ವಿದ್ಯೆಯನ್ನೂ,ಒರಟುತನದಿಂದ ಹೆಂಗಸರನ್ನು ಯಾರು ಪಡೆಯಲು ಬಯಸುವರೋ ಅವರು ನಿಜವಾಗಿ ಪಂಡಿತರಲ್ಲ (ಅವಿವೇಕಿಗಳು) |
ನ ದೈರ್ಯೇಣ ವಿನಾ ಲಕ್ಷ್ಮೀಃ ನ ಶೌರ್ಯೇಣ ವಿನಾ ಜಯಃ| ನ ಜ್ಞಾನೇನ ವಿನಾ ಮೋಕ್ಷೋ ನ ದಾನೇನ ವಿನಾ ಯಶಃ|| -ಸಭಾರಂಜನಶತಕ |
ಧೈರ್ಯವಿಲ್ಲದೇ ಸಂಪತ್ತಿಲ್ಲ, ಶೌರ್ಯವಿಲ್ಲದೇ ಜಯವಿಲ್ಲ, ಜ್ಞಾನವಿಲ್ಲದೇ ಮೋಕ್ಷ ಲಭಿಸದು, ದಾನಮಾಡದೇ ಯಶಸ್ಸು ಸಿಗದು |
ಯತ್ ಶ್ರುತಂ ನ ವಿರಾಗಾಯ ನ ಧರ್ಮಾಯ ನ ಶಾಂತಯೇ || ಸುಬದ್ಧಿಮಪಿ ಶಬ್ದೇನ ಕಾಕವಾಶಿತಮೇವ ತತ್ || |
ವೈರಾಗ್ಯ, ಧರ್ಮ, ಅಥವಾ ಶಾಂತಿಗೆ ಉಪಯುಕ್ತವಾಗದ ವಿಚಾರವು ಎಷ್ಟು ಶಬ್ದ ಜಾಲದಿಂದ ರಚಿತವಾಗಿದ್ದರೂ ಅದು ಕಾಗೆಯ ಕೈಗೆ ಸರಿ |
ಪರಚ್ಛಿದ್ರೇಷು ಹೃದಯಂ ಪರವಾರ್ತಾಸು ಚ ಶ್ರವಃ| ಪರಮರ್ಮಣಿ ವಾಚಂ ಚ ಖಲನಾಮಸೃಜದ್ವಿಧಿಃ || |
ಇನ್ನೊಬ್ಬರ ದೋಷವನ್ನು ಹುಡುಕುವದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. |
ಪ್ರಾಯಃ ಸಂಪ್ರತಿ ಕೋಪಾಯ*ಸನ್ಮಾರ್ಗಸ್ಯೋಪದೇಶನಮ್| ವಿಲೂನನಾಸಿಕಸ್ಯೇವ ಯದ್ವದಾದರ್ಶದರ್ಶನಮ್ || |
ಒಳ್ಳೆಯ ಮಾರ್ಗದಲ್ಲಿ ನೆಡೆದುಕೋ ಎಂದು ಉಪದೇಶಿಸುವದು ಕೋಪವನ್ನುಂಟು ಮಾಡುತ್ತದೆ. ಮೂಗುಕಳೆದುಕೊಂಡವನಿಗೆ ಕನ್ನಡಿ ತೋರಿಸುವದು ಅಪರಾಧವಾಗುತ್ತದೆ. |
ದುರ್ಜನಃ ಪರಿಹರ್ತವ್ಯೋ* ದ್ಯಯಾಲಂಕೃತೋಪಿ ಸನ್ | ಮಣಿನಾ ಭೂಷಿತಃ ಸರ್ಪಃ ಕಿಮಸೌ ನ ಭಯಂಕರಃ|| |
ವಿದ್ಯೆಯಿಂದ ಅಲಂಕರಿಸಲ್ಪಟ್ಟರೂ ದುರ್ಜನರಾದವರನ್ನ ಬಿಟ್ಟುಬಿಡಬೇಕು. ರತ್ನದಿಂದ ಅಲಂಕೃತವಾದ ಮಾತ್ರಕ್ಕೆ ಹಾವು ಭಯಂಕರವಲ್ಲವೇ? |
ಯಥಾ ಹಿ ಭರತೋ ವರ್ಣೇವರ್ಣಯತ್ಯಾತ್ಮನಸ್ತನುಂ| ನಾನಾ ರೂಪಾಣಿ ಕುರ್ವಾಣಸ್ತಥಾತ್ಮಾ ಕರ್ಮಜಾಸ್ತನೂಃ|| |
ಹೇಗೆ ನಟನು ನಾಟಕದಲ್ಲಿ ಬಣ್ಣಗಳಿಂದ ಅನೇಕ ವೇಷಗಳನ್ನು ಧರಿಸುತ್ತಾನೆಯೋ ,ಹಾಗೆ ಆತ್ಮನು ಕರ್ಮದಿಂದ ಅನೇಕ ರೂಪಗಳನ್ನು ಪಡೆಯುತ್ತದೆ . |
ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್| ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾಃ || |
ಗುರುವಿನ ಆಕೃತಿಯು ಧ್ಯಾನಕ್ಕೆ ಮೂಲ. ಗುರುಪಾದಗಳು ಪೂಜಾಸ್ಥಾನ. ಗುರುವಚನ ಮಂತ್ರತುಲ್ಯವಾದದು. ಹಾಗೆಯೇ ಎಲ್ಲಕ್ಕೂ ಮಿಗಿಲಾದ ಮೋಕ್ಷಕ್ಕೆ ಗುರು ಕೃಪೆಯೇ ಮೂಲವಾಗಿದೆ. |
ವಿಷಂ ವಿಷೇಣ ವ್ಯಥತೇ ವಜ್ರಂ ವಜ್ರೇಣ ಭಿದ್ಯತೇ| ಗಜೇಂದ್ರೋ ದೃಷ್ಟಸಾರೇಣ ಗಜೇಂದರೇಣೈವ ಬಧ್ಯತೇ|| - ನೀತಿಸಾರ |
ವಿಷವನ್ನು ವಿಷದಿಂದಲೇ ಪರಿಹರಿಸಬೇಕು. ವಜ್ರವನ್ನು ವಜ್ರದಿಂದಲೇ ಸೀಳಬೇಕು. ಬಲಿಷ್ಠವಾದ ಆನೆಯಿಂದಲೇ ಆನೆಯನ್ನು ಹಿಡಿಯಲು ಸಾಧ್ಯ. |
ಖಿನ್ನಂ ಚಾಪಿ ಸುಭಾಷಿತೇನ ರಮತೇ ಸ್ವೀಯಂ ಮನಃ ಸರ್ವದಾ| ಶ್ರುತ್ವಾನ್ಯಸ್ಯ ಸುಭಾಷಿತಂ ಖಲು ಮನಃ ಶ್ರೋತುಂ ಪುನರ್ವಾಂಛತಿ| | ಅಜ್ಞಾನ್ ಜ್ಞಾನವತೋ$ಪ್ಯನೇನ ಹಿ ವಶೀಕರ್ತುಂ ಸಮರ್ಥೋ ಭವೇತ್| ಕರ್ತವ್ಯೋಹಿ ಸುಭಾಷಿತಸ್ಯ ಮನುಜೈರಾವಶ್ಯಕಃ ಸಂಗ್ರಹಃ|| || -ಸುಭಾಷಿತ ರತ್ನಭಾಂಡಾಗಾರ |
ದುಃಖದಿಂದ ಕೂಡಿದ್ದರೂ ಮನಸ್ಸು ಸುಭಾಷಿತವನ್ನು ಕೇಳಿ ನಲಿಯುತ್ತದೆ. ಬೇರೆಯವರು ಹೇಳಿದ ಸುಭಾಷಿತವನ್ನು ಕೇಳಿ ಮತ್ತೆ ಕೇಳಬೇಕೆಂದು ಹಂಬಲಿಸುತ್ತದೆ. ಮೂರ್ಖರನ್ನೂ ಪಂಡಿರನ್ನೂ ಸುಭಾಷಿತಗಳಿಂದ ವಶಪಡಿಸಿಕೊಳ್ಳುವದು ಸಾಧ್ಯ. ಆದುದರಿಂದ ಮಾನವರು ಹೇಗಾದರೂ ಸುಭಾಷಿತದ ಸಂಗ್ರಹವನ್ನು ಮಾಡಲೇ ಬೇಕು. |
ಆತ್ಮಾ ಜೇಯ: ಸದಾ ರಾಜ್ಞಾ ತತೋ ಜೇಯಾಶ್ಚ ಶತ್ರವ:| ಅಜಿತಾತ್ಮಾ ನರಪತಿ: ವಿಜಯೇತ ಕಥಂ ರಿಪೂನ್|| ಮಹಾಭಾರತ, ಶಾಂತಿಪರ್ವ ೧೨ -೧೨ |
ರಾಜನು ಮೊದಲು ತನ್ನನ್ನು ತಾನು ಗೆಲ್ಲಬೇಕು. ಆಮೇಲೆ ವೈರಿಗಳನ್ನು ಗೆಲ್ಲಬೇಕು. ತನ್ನನ್ನೇ ಗೆಲ್ಲಲಾರದ ಅಜಿತೇಂದ್ರಿಯನಾದ ರಾಜನು ವೈರಿಗಳನ್ನು ಹೇಗೆ ಗೆದ್ದಾನು? |
ನಿಷ್ಣಾತೋsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ | ಚಿರಂ ಜಲನಿಧೌ ಮಗ್ನಃ ಮೈನಾಕ ಇವ ಮಾರ್ದವಮ್ || |
ಎಷ್ಟೇ ವೇದಾಂತಶಾಸ್ತ್ರದಲ್ಲಿ ನಿಪುಣನಾಗಿದ್ದರೂ ಕೆಟ್ಟ ಸ್ವಭಾವವುಳ್ಳವನು ಒಳ್ಳೆಯವನಾಗುವುದಿಲ್ಲ. ಬಹಳ ಕಾಲ ಸಮುದ್ರದಲ್ಲಿ ಮುಳುಗಿದ್ದರೂ ಮೈನಾಕಪರ್ವತ ಮೆತ್ತಗಾಗಿಲ್ಲ. |
ಏಕಃ ಸ್ವಾದು ನ ಭುಂಜೀತ ನೈಕಃ ಕಾರ್ಯಂ ವಿಚಿಂತಯೇತ್ | ಏಕೋ ನ ಗಚ್ಛೇದಧ್ವಾನಂ ನೈಕಃ ಸುಪ್ತೇಷು ಜಾಗೃಯಾತ್ || -ಸುಭಾಷಿತ ಸುಧಾನಿಧಿ |
ರುಚಿಕರ ಆಹಾರವನ್ನು ತಾನೊಬ್ಬನೇ ತಿನ್ನಬಾರದು, ಕಾರ್ಯಾಕಾರ್ಯಾಗಳನ್ನು ಪರ್ಯಾಲೋಚಿಸಬಾರದು. ಒಬ್ಬನೇ ಪ್ರಯಾಣ ಮಾಡಬಾರದು. ಎಲ್ಲರೂ ನಿದ್ರಿಸಿರುವಾಗ ಒಬ್ಬನೇ ನಿದ್ರಿಸದೇ ಕುಳಿತಿರಬಾರದು. |
ಆಪತ್ಸು ಮಿತ್ರಂ ಜಾನೀಯಾತ್ ಯುದ್ಧೇ ಶೂರಂ ಧನೇ ಶುಚಿಮ್ | ಭಾರ್ಯಾಂ ಕ್ಷೀಣೇಷು ವಿತ್ತೇಷು ವ್ಯಸನೇಷು ಚ ಬಾಂಧವಾನ್ || -ಹಿತೋಪದೇಶ, ಮಿತ್ರಲಾಭ ,೫೪ |
ಕಷ್ಟಕಾಲದಲ್ಲಿ ಸ್ನೇಹಿತನನ್ನೂ, ಯುದ್ಧದಲ್ಲಿ ಶೂರನ ಶೂರತ್ವವನ್ನು, ಹಣ ಬಂದಾಗ ಪ್ರಾಮಾಣಿಕನನ್ನೂ, ಬಡತನದಲ್ಲಿ ಹೆಂಡತಿಯನ್ನೂ , ಅಂಟಿ ಕೊಂಡ ವ್ಯಸನಗಳನ್ನು ಬಿಡುವಲ್ಲಿ ಬಂಧುಗಳನ್ನು ಪರೀಕ್ಷಿಸಿ (ಅವರ ನೈಜತೆಯನ್ನು) ಅರಿಯಬೇಕು. |
ಜ್ಞಾನಂ ನ ಶೀಲಂ ನ ಗುಣೋ ನ ಧರ್ಮ:| ತೇ ಮರ್ತ್ಯಲೋಕೇ ಭುವಿಭಾರ ಭೂತಾ: ಮನುಷ್ಯರೂಪೇಣ ಮೃಗಾಶ್ಚರಂತಿ|| ನೀತಿಶತಕ - ೧೩ |
ವಿದ್ಯೆ, ತಪಸ್ಸು, ದಾನ, ಜ್ಞಾನ, ಶೀಲಾದಿಗುಣ, ಧರ್ಮಗಳಿಲ್ಲದ ಮಾನವರು ಈ ಭೂಲೋಕದಲ್ಲಿ ಕೇವಲ ಪಶುಗಳಂತೆ ತಿರುಗಾಡುತ್ತಿದ್ದಾರಷ್ಟೇ ಅಲ್ಲದೇ ಈ ಭೂಮಿತಾಯಿಗೆ ಭಾರವೂ ಆಗಿದ್ದಾರೆ. |
ಅರ್ಥಸ್ಯ ನಿಶ್ಚಯೋ ದೃಷ್ಟಃ ವಿಚಾರೇಣ ಹಿತೋಕ್ತಿತಃ| ನ ಸ್ನಾನೇನ ನ ದಾನೇನ ಪ್ರಾಣಾಯಾಮಶತೇನ ವಾ|| -ವಿವೇಕಚೂಡಾಮಣಿ |
ತತ್ತ್ವಾರ್ಥನಿರ್ಣಯವು ವಿಚಾರಮಂಥನದಿಂದ ಹಾಗೂ ಆಪ್ತವಾಕ್ಯದಿಂದ ಸಿದ್ಧಿಸುತ್ತದೆಯೇ ಹೊರತು ಸ್ನಾನದಿಂದಾಗಲೀ, ದಾನದಿಂದಾಗಲೀ, ನೂರಾರು ಪ್ರಾಣಾಯಾಮದಿಂದಾಗಲೀ ಸಿದ್ಧಿಸುವುದಿಲ್ಲ. |
ಶರ್ಕರಾಸ್ವಾದಮತ್ತೇನ ಮಕ್ಷಿಕಾ ಚೇದುಪೇಕ್ಷ್ಯತೇ| ಸಾಕಂ ಪ್ರವಿಶ್ಯ ಜಠರಂ ವಿಪತ್ತಿಂ ತನುತೇ ನ ಕಿಮ್|| |
ಸಕ್ಕರೆಯನ್ನು ರುಚಿನೋಡುವ ಸಂತೋಷದಲ್ಲಿ ನೊಣವನ್ನು ಗಮನಿಸದೇಹೋದರೆ,ಅದು ಹೊಟ್ಟೆಯೊಳಗೆ ಹೋಗಿ ತೊಂದರೆ ಕೊಡುವುದಿಲ್ಲವೇ? |
ಮನಃಪ್ರೀತಿಕರಃ ಸ್ವರ್ಗಃ ನರಕಸ್ತದ್ವಿಪರ್ಯಯಃ| ನರಕಸ್ವರ್ಗಸಂಜ್ಞೇ ವೈ ಪಾಪಪುಣ್ಯೇ ದ್ವಿಜೋತ್ತಮ|| |
ಮನಸ್ಸಿಗೆ ಆನಂದ ಉಂಟುಮಾಡುವದೇ ಸ್ವರ್ಗ. ದುಃಖವೇ ನರಕ. ನರಕ ಸ್ವರ್ಗಗಳಿಗೆ ಪಾಪ ಪುಣ್ಯವೆಂದು ಹೆಸರು |
ಕಶ್ಚಿದಾಮ್ರವನಂ ಛಿತ್ವಾ ಪಾಲಾಶಾಂಶ್ಚ ನಿಷಿಂಚತಿ | ಪುಷ್ಪಂ ದೃಷ್ಟ್ವಾ ಫಲೇ ಗೃಧ್ನುಃ ಸ ಶೋಚತಿ ಫಲಾಗಮೇ || |
ಹೂವಿನ ಆಡಂಬರವನ್ನು ಕಂಡು ಒಳ್ಳೆಯ ಹಣ್ಣುದೊರೆಯುವುದೆಂಬ ಆಸೆಯಿಂದ ಮಾವಿನ ತೋಪುಗಳನ್ನು ಕಡಿದು ಮುತ್ತುಗದ ಮರಗಳನ್ನು ಬೆಳೆಸಿ ಅದಕ್ಕೆ ನೀರೆರೆದರೆ ಏನಾಗುವುದು ? ಅದು ಹಣ್ಣುಬಿಡುವ ಕಾಲದಲ್ಲಿ ಹಣ್ಣಿಲ್ಲವೆಂದು ವ್ಯಥೆ ಪಡಬೇಕಾಗುವುದು. |
ಜೀರ್ಯಂತಿ ಜೀರ್ಯತಃ ಕೇಶಾ ದಂತಾ ಜೀರ್ಯಂತಿ ಜೀರ್ಯತಃ | ಚಕ್ಷುಃಶ್ರೋತ್ರೇ ಚ ಜೀರ್ಯೇತೇ ತೃಷ್ಣೈಕಾ ತು ನ ಜೀರ್ಯತೇ || ಮಹಾಭಾರತ, ಅನು, ೭-೨೪ |
ವಯಸ್ಸಾದಂತೆ ಕೇಶಗಳು ಕ್ಷಯಿಸುತ್ತವೆ. ಹಲ್ಲುಗಳು ಉದುರುತ್ತವೆ. ಕಣ್ಣು ಕಿವಿಗಳ ಶಕ್ತಿ ನಶಿಸುತ್ತದೆ. ಆದರೆ ಆಸೆಯೊಂದೇ ಕ್ಷೀಣಿಸುವುದಿಲ್ಲ. |
ಭದ್ರಂ ಭದ್ರಮಿತಿ ಬ್ರೂಯಾತ್ ಭದ್ರಮಿತ್ಯೆವ ವಾ ವದೇತ್ | ಶುಷ್ಕವೈರಂ ವಿವಾದಂ ಚ ನ ಕುರ್ಯಾತ್ ಕೇನಚಿತ್ ಸಹ || -ಮನುಸ್ಮೃತಿ,೪-೧೩೯ |
ಒಳ್ಳೆಯದು, ಶುಭವಾಗಲಿ ಒಳ್ಳೆಯದಾಗಲಿ ಎಂದು ಯಾವಾಗಲೂ ಎಲ್ಲಾ ಸಂದರ್ಭದಲ್ಲಿಯೂ ಹೇಳುತ್ತಿರಬೇಕು (ಬಯಸುತ್ತಿರಬೇಕು) ಕಾರಣವಿಲ್ಲದೆ ಶುಷ್ಕವಾದ ವೈರತ್ವ ಮತ್ತು ಕೆಲಸಕ್ಕೆ ಬಾರದ ಚರ್ಚೆ (ವಿವಾದ) ವನ್ನು ಯಾರಲ್ಲೂ ಮಾಡಬಾರದು. |
ಯಃ ಸುಂದರಃ ತದ್ವನಿತಾ ಕುರೂಪಾ ಯಾ ಸುಂದರೀ ಸಾ ಪತಿರೂಪಹೀನಾ l ಯತ್ರೋಭಯಂ ತತ್ರ ದರಿದ್ರತಾ ಚ ವಿಧೇರ್ವಿಚಿತ್ರಾಣಿ ವಿಚೇಷ್ಟಿತಾನಿ ll |
ಸಾಮಾನ್ಯವಾಗಿ ಸುಂದರಾಂಗನ ಮಡದಿ ಸುಂದರಿಯಾಗಿರುವುದಿಲ್ಲ ,ಹಾಗೆ ಸುಂದರಾಂಗಿಗೆ ಸುಂದರ ಪುರುಷನು ಸಿಗುವುದು ಅಪರೂಪ,ಅಪರೂಪವಾಗಿ ಸುಂದರವಾದ ದಂಪತಿಯನ್ನು ಕಾಣಬಹುದು,ಹಾಗಾಗಿದ್ದರೆ ಸಾಮಾನ್ಯವಾಗಿ ಅವರು ಕಡುಬಡವರಾಗಿರುತ್ತಾರೆ .ಇದೇ ವಿಧಾತನ ಆಟ |
ಕರಸ್ಥ ಮುದಕಮ್ ತ್ಯಕ್ತ್ವಾ ಘನಸ್ಥಮಭಿವಾಂಛತಿ| ಸಿದ್ಧಮನ್ನಂ ಪರಿತ್ಯಜ್ಯ ಭಿಕ್ಷಾಮಟತಿ ದುರ್ಮತಿಃ|| |
ಕೈಯಲ್ಲಿರುವ ನೀರನ್ನು ಬಿಟ್ಟು ಮೋಡದಲ್ಲಿರುವ ನೀರನ್ನು ಅಪೇಕ್ಷಿಸುವುದಾದರೆ ಸಿದ್ಧವಾಗಿರುವ ಅನ್ನವನ್ನು ಬಿಟ್ಟು ಭಿಕ್ಷೆ ಬೇಡಿದಂತೆ. |
ಕೇಷಾಂಚಿದ್ ವಾಚಿ ಶುಕವತ್ ಕೇಷಾಂಚಿದ್ ಹೃದಿ ಮೂಕವತ್ | ಹೃದಿ ವಾಚಿ ತಥಾನ್ಯೇಷಾಂ ವಲ್ಗು ವಲ್ಗಂತಿ ಸೂಕ್ತಯಃ || |
ಗಿಳಿಗಳಂತೆ ಕೆಲವರಿಗೆ ಮಾತಿನಲ್ಲಿ ಮಾತ್ರ ಸೂಕ್ತಿಗಳು. ಮೂಕರಂತೆ ಕೆಲವರಿಗೆ ಹೃದಯದಲ್ಲೇ ಸುಭಾಷಿತಗಳು. ಇನ್ನು ಕೆಲವರಿಗೆ ಹೃದಯದಲ್ಲೂ, ಮಾತಿನಲ್ಲೂ ಸುಂದರವಾಗಿ ಮೂಡುವ ಒಳ್ಳೆಯ ಮಾತುಗಳು. |
ಕೇಷಾಂಚಿದ್ ವಾಚಿ ಶುಕವತ್ ಕೇಷಾಂಚಿದ್ ಹೃದಿ ಮೂಕವತ್ | ಹೃದಿ ವಾಚಿ ತಥಾನ್ಯೇಷಾಂ ವಲ್ಗು ವಲ್ಗಂತಿ ಸೂಕ್ತಯಃ || |
ಗಿಳಿಗಳಂತೆ ಕೆಲವರಿಗೆ ಮಾತಿನಲ್ಲಿ ಮಾತ್ರ ಸೂಕ್ತಿಗಳು. ಮೂಕರಂತೆ ಕೆಲವರಿಗೆ ಹೃದಯದಲ್ಲೇ ಸುಭಾಷಿತಗಳು. ಇನ್ನು ಕೆಲವರಿಗೆ ಹೃದಯದಲ್ಲೂ, ಮಾತಿನಲ್ಲೂ ಸುಂದರವಾಗಿ ಮೂಡುವ ಒಳ್ಳೆಯ ಮಾತುಗಳು. |
ಹೇಮ ಹೇಮ್ನ್ಯೂರ್ಮಿಕಾಂ ಚ ತ್ವಂ ಗೃಹಾಣೇತ್ಯುಧಿತೋ ಯದಿ | ಯದ್ದೀಯತೇ ಸೋರ್ಮಿಕೇಣ ತತ್ತದಸ್ತಿ ನ ಸಂಶಯಃ || |
ವ್ಯಾಪಾರಿಯು ಚಿನ್ನದ ತೂಕಕ್ಕೂ ಬಣ್ಣಕ್ಕೂ ತಕ್ಕಷ್ಟು ಬೆಲೆಯನ್ನು ಕೊಡುವನೇ ಹೊರತು ಆಭರಣದ ರೂಪಕ್ಕೆ ಬೆಲೆ ಕೊಡುವುದಿಲ್ಲ. ಹೀಗೆ ಪ್ರಪಂಚದಲ್ಲಿ ಕ್ರಯ-ವಿಕ್ರಯಾದಿ ವ್ಯವಹಾರಗಳಲ್ಲಿ ಸುವರ್ಣವಾದರೆ ಅದಕ್ಕೆ ಬೆಲೆಯುಂಟು. ಅಷ್ಟೇ ಹೊರತು ಸುವರ್ಣದ ರೂಪಾಂತರಗಳಿಗೆ ಮತ್ತು ಹೆಸರುಗಳಿಗೆ ಅಸ್ತಿತ್ವವೂ ಇಲ್ಲ, ಬೆಲೆಯೂ ಇಲ್ಲ. |
ಕೃಪಾಲುರಕೃತದ್ರೋಹಃ ತಿತಿಕ್ಷುಃ ಸರ್ವದೇಹಿನಾಮ್ | ಸತ್ಯಸಾರೋಽನವದ್ಯಾತ್ಮಾ ಸಮಃ ಸರ್ವೋಪಕಾರಕಃ || |
ಸಜ್ಜನನು ಕೃಪೆಯ ಸಾಕಾರನಾಗಿರುತ್ತಾನೆ. ಅವನು ಯಾರ ಬಗ್ಗೆಯೂ ವೈರಭಾವ ಹೊಂದದೆ ಇನ್ನೊಬ್ಬರ ಸದ್ಗುಣಗಳನ್ನು ಎಲ್ಲರಿಗೂ ತಿಳಿಸುತ್ತಾನೆ. ಅಸಹನೀಯ ದುಃಖ ಉಂಟಾದರೂ ತೋರ್ಪಡಿಸದೆ ಸಹಿಸುತ್ತ ದೇವರನ್ನು ನೆನೆಯುತ್ತ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಪಾಪಕೃತ್ಯಗಳಿಂದ ದೂರವಾಗಿರುತ್ತಾನೆ. ಮನಸ್ಸಿನಲ್ಲಿಯೂ ಅಂಥ ವಿಚಾರ ಮಾಡದೆ ಎಲ್ಲರಿಗೂ ಒಳಿತಾಗಲೆಂದು ಸದಾ ಆಶಿಸುತ್ತಾನೆ. |
ತೇಜಸ್ವಿನೀ ಕ್ಷಮೋಪೇತೇ ನಾತಿ ಕರ್ಕಶಮಾನಯೇತ್ | ಅತಿನಿರ್ಮಥನಾದಗ್ನಿಃ ಚಂದನಾದಪಿ ಜಾಯತೇ || |
ಎಷ್ಟೇ ಸಹನಶೀಲ, ಶಾಂತಮೂರ್ತಿಗಳಾಗಿದ್ದರೂ, ಉಪೇಕ್ಷಿಸಿ ಅತಿಯಾಗಿ ಪೀಡಿಸಿದರೆ, ಅಂಥವರಿಗೂ ಕೋಪ ಬರುವುದು ಸಹಜ. ಹೇಗೆ ಅತಿ ತಂಪು ಎನಿಸಿಕೊಂಡ ಚಂದನದ ಮರವನ್ನು ಮತ್ತೆ ಮತ್ತೆ ಮಥಿಸಿದರೆ ಅದರಲ್ಲಿ ಅಗ್ನಿ ಉತ್ಪತ್ತಿಯಾಗುತ್ತದೆಯೊ ಹಾಗೆ. |
ಲೋಹದಾರುಮಯೈಃ ಪಾಶೈಃ ಪುಮಾನ್ ಬದ್ಧೋ ವಿಮುಚ್ಯತೇ| ಪುತ್ರದಾರಮಯೈಃ ಪಾಶೈಃ ಮುಚ್ಯತೇ ನ ಕದಾಚನ|| |
ಕಬ್ಬಿಣದ ಲೋಹದಿಂದ ನಿರ್ಮಿತವಾದ ಸಲಾಕೆ, ಸರಳುಗಳು, ಮರದಿಂದ ಮಾಡಿದ ದಂಡಾದಿಗಳು, ಕಠೋರಪಾಶ (ಹಗ್ಗ) ಮುಂತಾದ ಬಂಧನಗಳಿಂದ ಮನುಜನು ಮುಕ್ತನಾಗಬಹುದು ಆದರೆ ಹೆಂಡತಿ ಮಕ್ಕಳು ಎಂಬ ಪಾಶದಿಂದ ಬಿಡಿಸಿಕೊಳ್ಳುವುದು ಅಸಾಧ್ಯ |
ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ |ಕಾರ್ಯಸಿದ್ಧಿಕರಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ || ರಾಮಾಯಣ, ಕಿಷ್ಕಿಂದಾಕಾಂಡ-೪೬-೬ |
ಕಾರ್ಯಸಿದ್ಧಿ ಆಗಬೇಕಾದರೆ ಬೇಸರವಿಲ್ಲದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪಿಕೊಳ್ಳದ ಮನೋಭಾವ ಇವು ಮನುಷ್ಯನಲ್ಲಿ ಇರಬೇಕಾದುದು ಅತ್ಯವಶ್ಯಕ ಎಂದು ಜ್ಞಾನಿಗಳು ಹೇಳಿದ್ದಾರೆ. ಸೀತಾನ್ವೇಷಣೆಗೆ ಹೊರಟ ವಾನರರಿಗೆ ಅಂಗದನು ಈ ಮಾತನ್ನು ಹೇಳಿದ್ದನು. |
ದ್ವಾವಿಮೌ ಪುರುಷೇ ಲೋಕೇ ಸ್ವರ್ಗಸ್ಯೋಪರಿ ತಿಷ್ಠತಃ | ಪ್ರಭುಶ್ಚ ಕ್ಷಮಯಾ ಯುಕ್ತೋ ದರಿದ್ರಶ್ಚ ಪ್ರದಾನವಾನ್ || |
ಯಜಮಾನನಾಗಿದ್ದೂ ಕ್ಷಮಾಗುಣವಿರುವವನೂ, ಬಡವನಾಗಿದ್ದೂ ದಾನಗುಣವಿರುವವನೂ - ಈ ಇಬ್ಬರು ಮಾನವರೂ ಜಗತ್ತಿನಲ್ಲಿ ಸ್ವರ್ಗಕ್ಕಿಂತಲೂ ಎತ್ತರವಾದ ಸ್ಥಳದಲ್ಲಿರುತ್ತಾರೆ. |
ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || |
ನೀರನ್ನು ಚೆನ್ನಾಗಿ ಕುದಿಸಿದರೂ ಅದು ಹೇಗೆ ಪುನಃ ತಣ್ಣಗಾಗುತ್ತದೆಯೋ ಹಾಗೆಯೇ ಉಪದೇಶಮಾಡುವದರಿಂದ ಒಬ್ಬನ ಸ್ವಭಾವ(ಹುಟ್ಟುಗುಣ) ವನ್ನು ಬದಲಾಯಿಸಲು ಸಾಧ್ಯವಿಲ್ಲ . |
ಅಲ್ಪಾನಾಮಪಿ ವಸ್ತೂನಾಂ ಸಂಗತಿಃ ಕಾರ್ಯಸಾಧಿಕಾ | ತೃಣೈರ್ಗುಣತ್ವಮಾಪನ್ನೈಃ ಬಧ್ಯಂತೇ ಮತ್ತದಂತಿನಃ || |
ಅರ್ಥ - ಅಲ್ಪವಾಗಿರುವ ವಸ್ತುಗಳೂ ಸಹ ಒಗ್ಗೂಡಿದಾಗ ಕಾರ್ಯವನ್ನು ಸಾಧಿಸುತ್ತವೆ.ಹುಲ್ಲುಗಳನ್ನ ಒಗ್ಗೂಡಿಸಿ ಹೊಸೆಯಲ್ಲಟ್ಟ ಹಗ್ಗದಿಂದ ಮದ್ದಾನೆಗಳೂ ಬಂಧಿಸಲ್ಪಡುತ್ತವೆ. |
ಪೃಥವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಶಿತಂ | ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ || |
ಅರ್ಥ : ಭೂಮಿಯಲ್ಲಿ ಸರ್ವಶ್ರೇಷ್ಥವಾದ ರತ್ನಗಳು ಕೇವಲ ಮೂರೇ ಇರುವುದು. ಜಲ,ಆಹಾರ, ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನ ರತ್ನ ಎನ್ನುತ್ತಾರೆ. |
ಪರದ್ರವ್ಯಂ ಬಲಾತ್ ಹೃತ್ವಾ ಚಿರಂ ಧೂರ್ತೋ ನ ವರ್ಧತೇ| ಅಂಕಮಾರೋಪ್ಯ ಸಪ್ತಾರ್ಚಿಂ ಸ್ವಪಿತ್ಯತ್ರ ಸುಖೇನ ಕಃ || |
ಬೆಂಕಿಯನ್ನು ತೊಡೆಯ ಮೇಲೆ ಇಟ್ಟುಕೊಂಡು ಮಲಗಿದ ವ್ಯಕ್ತಿಯು, ನಿಶ್ಚಿಂತೆಯಿಂದ ಸುಖವಾಗಿ ನಿದ್ರಿಸಲು ಸಾಧ್ಯವೇ? ಹಾಗೆಯೇ, ಬೇರೆಯವರ ಸಂಪತ್ತನ್ನು ಬಲಾತ್ಕಾರವಾಗಿ ಅಪಹರಿಸುವ ಧೂರ್ತನು, ತಾತ್ಕಾಲಿಕವಾಗಿ ಸಂತೋಷವನ್ನು ಹೊಂದಬಹುದೇ ಹೊರತು, ಬಹಳಕಾಲ ಅಭಿವೃದ್ಧಿಯನ್ನು ಹೊಂದಲಾರನು. (ಪರದ್ರವ್ಯ ಯಾವಾಗಲೂ ಬೆಂಕಿಯಂತೆ) |
ಇಹ ಲೋಕೇಽಪಿ ಧನಿನಾಂ ಪರೋಽಪಿ ಸ್ವಜನಾಯತೇ | ಸ್ವಜನೋಽಪಿ ದರಿದ್ರಾಣಾಂ ಸರ್ವದಾ ದುರ್ಜನಾಯತೇ || ಪಂಚತಂತ್ರ. ಮಿತ್ರಭೇದ - ೫ |
ಈ ಪ್ರಪಂಚದಲ್ಲಿ ಧನವಿದ್ದವರಿಗೆ ಶತ್ರುವೂ ಆಪ್ತನಾಗುತ್ತಾನೆ. ಬಡವರಿಗೆ ಸ್ವಂತ ಜನರೂ ಸಹ ಎಂದೆಂದೂ ಕೆಟ್ಟವರಾಗುತ್ತಾರೆ. |
ಭದ್ರಂ ಭದ್ರಮಿತಿ ಬ್ರೂಯಾತ್ ಭದ್ರಮಿತ್ಯೆವ ವಾ ವದೇತ್ | ಶುಷ್ಕವೈರಂ ವಿವಾದಂ ಚ ನ ಕುರ್ಯಾತ್ ಕೇನಚಿತ್ ಸಹ || -ಮನುಸ್ಮೃತಿ,೪-೧೩೯ |
ಒಳ್ಳೆಯದು, ಶುಭವಾಗಲಿ ಒಳ್ಳೆಯದಾಗಲಿ ಎಂದು ಯಾವಾಗಲೂ ಎಲ್ಲಾ ಸಂದರ್ಭದಲ್ಲಿಯೂ ಹೇಳುತ್ತಿರಬೇಕು (ಬಯಸುತ್ತಿರಬೇಕು) ಕಾರಣವಿಲ್ಲದೆ ಶುಷ್ಕವಾದ ವೈರತ್ವ ಮತ್ತು ಕೆಲಸಕ್ಕೆ ಬಾರದ ಚರ್ಚೆ (ವಿವಾದ) ವನ್ನು ಯಾರಲ್ಲೂ ಮಾಡಬಾರದು. |
ಹೇ ಜಿಹ್ವೇ! ರಸಸಾರಜ್ಞೇ! ಸರ್ವದಾ ಮಧುರಪ್ರಿಯೇ! ಭಗವನ್ನಾಮಪೀಯೂಷಂ ಪಿಬ ತ್ವಮನಿಶಂ ಸಖೇ! |
ಓ ನನ್ನ ನಾಲಗೆಯೇ ರುಚಿ ನೋಡುವುದರಲ್ಲಿ ನೀನು ನಿಪುಣ ಅಲ್ಲದೆ ಸಿಹಿ ಮತ್ತು ಒಳ್ಳೆಯ ರಸವನ್ನು ಸ್ವಾಧಿಸಬಯಸುವವನು,ನಿನಗೊಂದು ಸಲಹೆ ಯಾಕೆ ನೀನು ದೇವರ ನಾಮಸ್ಮರಣೆಯ ಮಕರಂದವನ್ನು ಆಹ್ಲಾದಿಸಬಾರದು. |
ಅಹೋ ಧನಮದಾಂಧಸ್ತು ಪಶ್ಯನ್ನಪಿ ನ ಪಶ್ಯತಿ l ಯದಿ ಪಶ್ಯತ್ಯಾತ್ಮಹಿತಂ ಸ ಪಶ್ಯತಿ ನ ಸಂಶಯಃ ll |
ತಮ್ಮ ಸಂಪತ್ತಿನ ಅಮಲು ಏರಿದ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸದೇ ಕುರುಡರಂತಿರುತ್ತಾರೆ . ಆದ್ರೆ ಅದರಿಂದ ತಮಗೆ ಅನುಕೂಲ ಇದ್ದಲ್ಲಿ ಅದರಲ್ಲಿ ಆಸಕ್ತಿ ತೋರಿಸುತ್ತಾರೆ. ಸಂಪತ್ತಿನ ಅಮಲು ಮನುಷ್ಯನನ್ನು ಕುರುಡನನ್ನಾಗಿಸುತ್ತದೆ. |
ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || |
ನೀರನ್ನು ಚೆನ್ನಾಗಿ ಕುದಿಸಿದರೂ ಅದು ಹೇಗೆ ಪುನಃ ತಣ್ಣಗಾಗುತ್ತದೆಯೋ ಹಾಗೆಯೇ ಉಪದೇಶಮಾಡುವದರಿಂದ ಒಬ್ಬನ ಸ್ವಭಾವ(ಹುಟ್ಟುಗುಣ) ವನ್ನು ಬದಲಾಯಿಸಲು ಸಾಧ್ಯವಿಲ್ಲ . |
ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್| ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್|| |
ಗಿಳಿಯಂತೆ ಮಾತಾಡಬೇಕು. ಬಕದಂತೆ ಧ್ಯಾನಮಾಡಬೇಕು. ಮೇಕೆಯಂತೆ ಅಗಿಯಬೇಕು. ಆನೆಯಂತೆ ಸ್ನಾನಮಾಡಬೇಕು. |
ಅಸ್ತೀತ್ಯೇವ ಕೃಷಿಂ ಕುರ್ಯಾತ್ ಅಸ್ತಿ ನಾಸ್ತೀತಿ ವಾಣಿಜಮ್ | ನಾಸ್ತೀತ್ಯೇವ ಋಣಂ ದದ್ಯಾತ್ ನಾಹಮಸ್ಮೀತಿ ಸಾಹಸಮ್ || ವಿಧುರನೀತಿ |
ಧಾನ್ಯ ಲಾಭದ ದೃಷ್ಟಿಯಲ್ಲಿಟ್ಟುಕೊಂಡು ಕೃಷಿ. ಲಾಭ-ನಷ್ಟಗಳನ್ನು ಅಂದಾಜು ಮಾಡಿಕೊಂಡೇ ವ್ಯಾಪಾರ. ಹಿಂದುರಿಗಿ ಬಾರದು ಎಂದುಕೊಂಡೇ ಸಾಲ ಕೊಡುವುದು. ಮರಣ ನಿಶ್ಚಿತ ಎಂದುಕೊಂಡು ಸಾಹಸಕಾರ್ಯ ಮಾಡಬೇಕು. |
ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್ ಭೂಮಿಸ್ತೋಯಂ ಖನ್ಯಮಾನಾ ದದಾತಿ |ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ || ಪ್ರತಿಜ್ಞಾಯೌಗಂಧರಾಯಣ |
ಮರದ ತುಂಡುಗಳನ್ನು ಕಡೆದರೆ ಬೆಂಕಿಯು ಉತ್ಪತ್ತಿಯಾಗುತ್ತದೆ. ಭೂಮಿಯನ್ನು ಆಳದವರೆಗೆ ಅಗೆದರೆ ನೀರು ಲಭಿಸುತ್ತದೆ. ಉತ್ಸಾಹದಿಂದ ಕೆಲಸ ಮಾಡುವ ಯಾವ ಮನುಷ್ಯನಿಗೂ "ಅಸಾಧ್ಯ" ಎನ್ನುವ ಯಾವುದೂ ಇಲ್ಲ. ಸರಿಯಾದ ರೀತಿಯಲ್ಲಿ ಆರಂಭಿಸಿದ ಎಲ್ಲ ಕೆಲಸಗಳೂ ಫಲ ನೀಡುತ್ತವೆ |
ನಾಗುಣೀ ಗುಣಿನಂ ವೇತ್ತಿ ಗುಣೀ ಗುಣಿಷು ಮತ್ಸರೀ | ಗುಣೀ ಚ ಗುಣರಾಗೀ ಚ ಸರಲೋ ವಿರಲೋ ಜನಃ || |
ಗುಣಹೀನನು ಗುಣವಂತನನ್ನು ಮೆಚ್ಚಲಾರ. ಗುಣವಂತನಿಗೆ ಗುಣಹೀನನನ್ನು ಕಂಡರೆ ಮತ್ಸರ. ಗುಣವಂತನೂ ಗುಣಾನುರಾಗಿಯೂ ಆಗಿರುವವರು ಬಹಳ ವಿರಳ. |
ನಿರ್ಧನಂ ಪುರುಷಂ ವೇಶ್ಯಾ ಪ್ರಜಾ ಭಗ್ನಂ ನೃಪಂ ತ್ಯಜೇತ್ | ಖಗಾ ವೀತಫಲಂ ವೃಕ್ಷಂ ಭುಕ್ತ್ವಾಚಾಭ್ಯಾಗತಾ ಗೃಹಮ್ || |
ಹಣವಿಲ್ಲದ ಪುರುಷನನ್ನು ವೇಶ್ಯೆ. ಸೋತ ರಾಜನನ್ನು ಪ್ರಜೆಗಳು. ಹಣ್ಣು ಬಿಡದ ಮರಗಳನ್ನು ಪಕ್ಷಿಗಳು. ಊಟವಾದ ನಂತರ ಅತಿಥಿಗಳು ಆತಿಥೇಯನ ಮನೆಯನ್ನು ತ್ಯಜಿಸುತ್ತಾರೆ. (ಪ್ರಪಂಚದಲ್ಲಿ ಎಲ್ಲರೂ ತಮ್ಮ ಲಾಭವನ್ನೇ ನೋಡುತ್ತಾರೆ.) |
ಅಲ್ಪತೋಯಃ ಚಲತ್ಕುಂಭಃ ಅಲ್ಪದುಗ್ಧಾಃ ಚ ಧೇನವಃ | ಅಲ್ಪವಿದ್ಯಾಮಹಾಗರ್ವೀ ಕುರೂಪೀ ಬಹುಚೇಷ್ಟಿತಃ || |
ಬಿಂದಿಗೆಯಲ್ಲಿ ಸ್ವಲ್ಪವೇ ನೀರಿದ್ದರೆ ತುಳುಕುವ ಶಬ್ದ ಹೆಚ್ಚು. ಸ್ವಲ್ಪ ಹಾಲು ಕೊಡುವ ಹಸುಗಳು ಸಿಡುಕು ಸ್ವಭಾವದವುಗಳಾಗಿರುತ್ತವೆ. ಅಲ್ಪವಿದ್ಯೆಯುಳ್ಳವನಿಗೆ ಗರ್ವ ಹೆಚ್ಚು. ಕುರೂಪಿಯು ಚೇಷ್ಟೆ ಮಾಡುವುದು ಹೆಚ್ಚು. |
ಅವಿರುದ್ಧಂ ಸುಖಸ್ಥಂ ಯೋ ದುಃಖಮಾರ್ಗೇ ನಿಯೋಜಯೇತ್ | ಜನ್ಮಜನ್ಮಾಂತರೇ ದುಃಖೀ ಸ ನರಃ ಸ್ಯಾತ್ ಅಸಂಶಯಮ್ || |
ಸುಖವಾಗಿರುವ ಶಾಂತ ಸ್ವಭಾವದವರನ್ನು ಯಾರು ತೊಂದರೆಗೆ ಈಡುಮಾಡುವರೋ, ಅಂತಹವರು ನಿಸ್ಸಂಶಯವಾಗಿ ಜನ್ಮಜನ್ಮಾಂತರಗಳಲ್ಲಿ ದುಃಖದಿಂದ ನರಳುತ್ತಾರೆ. |
ಅಯಾಚಿತಃ ಸುಖಂ ದತ್ತೇ ಯಾಚಿತಶ್ಚ ನ ಯಚ್ಛತಿ | ಸರ್ವಸ್ವಂ ಚಾಪಿ ಹರತೇ ವಿಧಿರುಚ್ಛೃಂಖಲೋ ನೃಣಾಮ್ || ರಸಗಂಗಾಧರ |
ವಿಧಿಯು ಬೇಡದಿದ್ದಾಗ ಸುಖವನ್ನು ಕೊಡುತ್ತಾನೆ. ಬೇಡಿದಾಗ ಕೊಡುವುದಿಲ್ಲ. ಅಷ್ಟಲ್ಲದೆ ಜನರ ಸರ್ವಸ್ವವನ್ನೂ ಕೆಲವೊಮ್ಮೆ ಅಪಹರಿಸುತ್ತಾನೆ. ವಿಧಿಯು ಯಾವ ನಿಯಮಕ್ಕೂ ಒಳಪಡದ ಸ್ವೇಚ್ಛಾಚಾರಿಯಂತೆ. |
ಯಥಾ ರಾಜನ್ ಪ್ರಜಾಃ ಸರ್ವಾಃ ಸೂರ್ಯಃ ಪಾತಿ ಗಭಸ್ತಿಭಿಃ | ಹಂತಿ ಚೈವ ತಥೈವ ತ್ವಂ ಸವಿತುಃ ಸದೃಶೋ ಭವ || |
ಸರ್ವ ಕಾಲದಲ್ಲಿಯೂ ಸೌಮ್ಯ ಅಥವಾ ಅಹಿಂಸಾ ಭಾವ ಉಚಿತವಾಗಲಾರದು. ದುಷ್ಟರ, ಉಗ್ರರ ವಿಷಯದಲ್ಲಿ ಇವು ನಿಷ್ಪ್ರಯೋಜಕ. ಇಲ್ಲಿ ಶಿಕ್ಷೆಯೇ ಸರಿಯಾದ ಕ್ರಮ. ಸೂರ್ಯನು ಮುಂಜಾನೆ, ಸಂಜೆ, ತನ್ನ ಕೋಮಲ, ಹೊಂಗಿರಣಗಳಿಂದ ನಮ್ಮನ್ನು ಸಂತೋಷಪಡಿಸಿದರೂ, ಮಧ್ಯಾಹ್ನ ಪ್ರಖರ ಕಿರಣಗಳಿಂದ ತನ್ನ ಅಸ್ತಿತ್ವವನ್ನು ತೋರ್ಪಡಿಸುತ್ತಾನೆ. ಉಗ್ರ ದಮನವಾಗದೆ, ಶಾಂತಿ, ಧರ್ಮ ಸ್ಥಾಪನೆಯಾಗದು. |
ತಿಲೇ ತೈಲಂ ಗವಿ ಕ್ಷೀರಂ ಕಾಷ್ಠೇ ವಾ ಪಾವಕಂ ತಥಾ | ಧಿಯಾ ಧೀರೋ ವಿಜಾನೀಯಾತ್ ಉಪಾಯಾಶ್ಚಾರ್ಥ ಸಿದ್ಧಯೇ || |
ಎಳ್ಳಿನಲ್ಲಿ ಎಣ್ಣೆ ಇದೆ. ಅದನ್ನು ಪಡೆಯಲು ಗಾಣ, ಅಥವಾ ಯಂತ್ರದ ಉಪಯೋಗ ನಮಗೆ ತಿಳಿದಿರಬೇಕು. ಹಸುವಿನ ಕೆಚ್ಚಲಿನಲ್ಲಿ ಹಾಲು ಇದೆ. ಹಾಲು ಪಡೆಯಲು ನಮಗೆ ಕೆಚ್ಚಲಿನಿಂದ ಹಾಲು ಕರೆಯುವ ಕಲೆ ಗೊತ್ತಿರಬೇಕು. ಕಟ್ಟಿಗೆಯಲ್ಲಿ ಬೆಂಕಿ ಇದೆ. ಬೆಂಕಿಯನ್ನು ಪಡೆಯಲು ನಾವು ಮಥಿಸಬೇಕು. ಸಾಧಕ ಧೀರರು ಕಾರ್ಯಸಿದ್ಧಿಗಾಗಿ ಈ ಉಪಾಯಗಳನ್ನು ಮೊದಲೇ ತಿಳಿದುಕೊಂಡಿರುತ್ತಾರೆ. |
ಅಪಿ ನಿಪುಣತರಮಧೀತಂ ಧುರ್ವಿನಯಾರೂಢಚೇತಸಃ ಪುಂಸಃ| ಮಣಿರಿವ ಫಣಿಫಣವರ್ತೀ ಪ್ರಭವತಿ ಶೋಕಾಯ ಲೋಕಾನಾಮ್|| -ಹರಿಹರ ಸುಭಾಷಿತ |
ಚೆನ್ನಾಗಿ ಕಲಿತಿರುವ ಉತ್ತಮ ವಿದ್ಯೆಯಾದರೂ ದುಷ್ಟನಲ್ಲಿದ್ದರೆ,ಹಾವಿನ ಹೆಡೆಯಲ್ಲಿರುವ ರತ್ನದಂತೆ ಜನರ ಶೋಕಕ್ಕೆ ಕಾರಣವಾಗುತ್ತದೆ. |
ಅಸಾರೇ ಖಲು ಸಂಸಾರೇ ಸುಖಭ್ರಾಂತಿಃ ಶರೀರಿಣಾಮ್ | ಲಾಲಾಪಾನಮಿವಾಂಗುಷ್ಟೇ ಬಾಲಾನಾಂ ಸ್ತನ್ಯ ವಿಭ್ರಮಃ|| |
ಮಕ್ಕಳು ಬಾಯಲ್ಲಿ ಹೆಬ್ಬೆರಳನ್ನಿಟ್ಟು ಚೀಪುತ್ತಾ ಜೊಲ್ಲನ್ನೇ ಸ್ತನ್ಯವೆಂದು ಭ್ರಮಿಸುವಂತೆ, ನಿಸ್ಸಾರವಾದ ಸಂಸಾರದಲ್ಲಿ ಸುಖವಿದೆ ಎಂಬ ಭ್ರಮೆಯಲ್ಲಿ ಜನರಿದ್ದಾರೆ. |
ದುರಾತ್ಮಾ ಗರ್ಹ್ಯತೇ ವಿಜ್ಞೈಃ ನಿರ್ದೋಷಸ್ತು ಪ್ರಶಂಸ್ಯತೇ | ವೃಶ್ಚಿಕಾ ಹನ್ಯತೇ ಲೋಕೈಃ ಗರುಡಸ್ತು ಪ್ರಣಮ್ಯತೇ || |
ಸಜ್ಜನರು ದುರ್ಜನರನ್ನು ನಿಂದಿಸಿದರೂ, ದೋಷಯುಕ್ತ ವ್ಯವಹಾರದಿಂದ ದೂರ ಇರುವವರನ್ನು ಗೌರವಿಸಿ, ಅವರ ಸದ್ಗುಣಗಳನ್ನು ಕಂಡು ಸಂತೋಷಪಡುತ್ತಾರೆ. ಚೇಳು ಕಾರಣವಿಲ್ಲದೆಯೂ ಕಡಿದು ಹಿಂಸಿಸುವುದರಿಂದ ಜನರು ಅದನ್ನು ಕೊಲ್ಲುತ್ತಾರೆ. ವಿಷಹರಣ ಮಾಡಿ ಜನೋಪಕಾರಿಯಾದ ಗರುಡನನ್ನು ಭಕ್ತಿಯಿಂದ ನಮಿಸುತ್ತಾರೆ. |
ಪತ್ಯುರಾಜ್ಞಾಂ ವಿನಾ ನಾರೀ ಉಪೋಷ್ಯ ವ್ರತಚಾರಿಣೀ | ಆಯುಷ್ಯಂ ಹರತೇ ಭರ್ತುಃ ಸಾ ನಾರೀ ನರಕಂ ವೃಜೇತ್ || |
ಗೃಹಿಣಿಯು ಪತಿಯ ಅನುಮತಿ ಇಲ್ಲದೆ, ವ್ರತ ಉಪಾಸನೆ ಉಪವಾಸಗಳನ್ನು ಮಾಡಬಾರದು. ಪತಿಗೆ ತಿಳಿಸಿ, ಶಾಸ್ತ್ರ ಸಮ್ಮತವಾದ ಉಪವಾಸಾದಿ ವ್ರತಗಳನ್ನು ಮಾತ್ರ ಆಚರಿಸಬೇಕು. ಇದಕ್ಕೆ ವಿರುದ್ಧವಾಗಿ ಮಾಡಿದರೆ ಪತಿಯ ಆಯುಷ್ಯವು ಕ್ಷೀಣಿಸುತ್ತದೆ. ಆ ನಾರಿಯು ನರಕಕ್ಕೆ ಹೋಗುತ್ತಾಳೆ. |
ಸರ್ವೌಷಧೀನಾಮಮೃತಾ ಪ್ರಧಾನಾ ಸರ್ವೇಷು ಸೌಖ್ಯೇಷ್ವಶನಂ ಪ್ರಧಾನಂ |ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಸರ್ವೇಷು ಗಾತ್ರೇಷು ಶಿರಃ ಪ್ರಧಾನಂ || |
ಎಲ್ಲ ಔಷಧಿಗಳಲ್ಲಿ ಅಮೃತವು ಸರ್ವಶ್ರೇಷ್ಠವಾಗಿದೆ. ಎಲ್ಲ ಸುಖವನ್ನು ನೀಡುವ ವಸ್ತುಗಳಲ್ಲಿ ಭೋಜನವು ಅಗ್ರಗಣ್ಯವಾಗಿದೆ. ಎಲ್ಲ ಇಂದ್ರಿಯಗಳಲ್ಲಿ ಕಣ್ಣು ಪ್ರಧಾನವಾಗಿದೆ. ಹಾಗೆಯೇ ದೇಹಕ್ಕೆ ಶಿರವು ಕಲಶಪ್ರಾಯವಾಗಿ ಪ್ರಧಾನವಾಗಿದೆ. |
ಜರಾ ರೂಪಂ ಹರತಿ ಹಿ ಧೈರ್ಯಮಾಶಾ ಮೃತ್ಯುಃ ಪ್ರಾಣಾನ್ ಧರ್ಮಚರ್ಯಾಮಸೂಯಾ | ಕಾಮೋ ಹ್ರಿಯಂ ವೃತ್ತಮನಾರ್ಯಸೇವಾ ಕ್ರೋಧಃ ಶ್ರಿಯಂ ಸರ್ವಮೇವಾಭಿಮಾನಃ || |
ವೃದ್ಧಾಪ್ಯ ವ್ಯಕ್ತಿಯ ಸೌಂದರ್ಯ ಕಿತ್ತುಕೊಳ್ಳುತ್ತದೆ , ಅದೇ ರೀತಿಯಲ್ಲಿ ಅತಿಯಾದ ತಾಳ್ಮೆ ಭರವಸೆಯನ್ನು ದೂರಮಾಡುತ್ತದೆ. ಸಾವು ಜೀವನದ ಉಸಿರು ತೆಗೆದುಕೊಳ್ಳುತ್ತದೆ,ಧಾರ್ಮಿಕ ಪ್ರಜ್ಞೆಯಿಂದ ಅಸೂಯೆ ದೂರವಾಗುತ್ತದೆ,ಅತಿಯಾದ ಕಾಮ ಲೈಂಗಿಕ ಚಟುವಟಿಕೆ ಮನಸಿನ ಶಾಂತಿಯನ್ನು ದೂರಮಾಡುತ್ತದೆ, ಕೆಟ್ಟವ್ಯಕ್ತಿಯ ಸಹವಾಸ ಕೆಲಸಕ್ಕೆ ಸಂಚಕಾರ, ಯಾವಾಗಲೂ ಕೋಪ ಸಮೃದ್ಧಿ ಮತ್ತು ಸಂತೋಷವನ್ನು ದೂರಮಾಡುತ್ತದೆ,ಅಹಂಕಾರ ಮತ್ತು ಹೆಮ್ಮೆ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡುತ್ತದೆ. |
ನ ಚಾಗಮಾದೃತೇ ಧರ್ಮಸ್ತರ್ಕೇಣ ವ್ಯವತಿಷ್ಠತೇ| ಋಷೀಣಾಮಪಿ ಯಜ್ಞಾನಂ ತದಪ್ಯಾಗಮಪೂರ್ವಕಮ್ || |
ಶಾಸ್ತ್ರದ ನೆರವಿಲ್ಲದೆ ಬರಿಯ ತರ್ಕದಿಂದ ಧರ್ಮವು ವ್ಯವಸ್ಥೆಗೊಳ್ಳುವುದಿಲ್ಲ. ಋಷಿಗಳ (ಧರ್ಮ) ಜ್ಞಾನವೂ ಸಹ ಶಾಸ್ತ್ರಪೂರ್ವಕವಾದದ್ದು. |
ಚಾರೋ ಯಸ್ಯ ವಿಚಾರಶ್ಚ ರಾಜ್ಞೋ ನಾಸ್ತೀಕ್ಷಣದ್ವಯಂ | ತಸ್ಯಾಂಧದುಗ್ಧವದ್ರಾಜ್ಯಂ ಮಂತ್ರಿಮಾರ್ಜಾಲಗೋಚರಮ್|| |
ಗೂಢಚಾರ,ವಿಚಾರ,ಇವೆರಡು ರಾಜನ ಎರಡು ಕಣ್ಣುಗಳು. ಅವು ಇಲ್ಲದಿದ್ದರೆ ಆ ರಾಜನ ರಾಜ್ಯವು, ಕುರುಡನೆದುರಿಗಿನ ಹಾಲಿನಂತೆ, ಮಂತ್ರಿಯೆಂಬ ಬೆಕ್ಕಿನ ಪಾಲಾಗುತ್ತದೆ. |
ಆಶಾಯಾ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ । ಆಶಾ ಯೇಶಾಂ ದಾಸೀ ತೇಷಾಂ ದಾಸಾಯತೇ ಲೋಕಃ ॥ |
ಆಸೆಗೆ ಯಾರು ದಾಸರಾಗಿರುತ್ತಾರೋ ಅವರು ಸಕಲಲೋಕಕ್ಕೂ ದಾಸರೇ. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸನಾಗಿರುತ್ತದೆ. |
ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ । ನಾಸ್ತ್ಯುದ್ಯಮಸಮೋ ಬಂಧುಃ ಕುರ್ವಾಣೋ ನಾವಸೀದತಿ ॥ |
ಆಲಸ್ಯವು ಮನುಷ್ಯರ ಶರೀರದೊಳಗೇ ಇರುವ ದೊಡ್ಡ ಶತ್ರು. ಹಾಗೆಯೇ ಉದ್ಯೋಗಕ್ಕೆ ಸಮನಾದ ಬಂಧುವೂ ಇಲ್ಲ. ಕೆಲಸವನ್ನು ಮಾಡುತ್ತಿರುವವನು ಎಂದಿಗೂ ಕೆಡುವುದಿಲ್ಲ. |
ತದಾತ್ವೇ ನೂತನಂ ಸರ್ವಂ ಆಯತ್ಯಾಂ ಚ ಪುರಾತನಂ | ನ ದೋಷಾಯೈ ತದುಭಯಂ ನ ಗುಣಾಯ ಚ ಕಲ್ಪತೇ || |
ಪ್ರತಿಯೊಂದೂ ಸಹ ಅದರ ಕಾಲಕ್ಕೆ ಅದು ಹೊಸದಾಗಿರುತ್ತದೆ, ಕಾಲ ಕಳೆದರೆ ಹಳೆಯದಾಗುತ್ತದೆ. ಆದುದರಿಂದ ಹೊಸತನವಾಗಲೀ ಹಳೆಯತನವಾಗಲೀ ಗುಣದೋಷಗಳಿಗೆ ಕಾರಣವಾಗುವುದಿಲ್ಲ. |
ಶುಷ್ಕೇಣೈಕೇನ ವೃಕ್ಷೇಣ ವನಂ ಪುಷ್ಪಿತ ಪಾದಪಂ । ಕುಲಂ ಚಾರಿತ್ರ ಹೀನೇನ ಪುರುಷೇಣೇವ ದಹ್ಯತೇ ॥ |
ಒಂದೇ ಒಂದು ಒಣಗಿದ ಮರವಿದ್ದರೂ ಕಾಡುಗಿಚ್ಚಿನಿಂದ ತಾನು ಉರಿದು ಹೂಗಳಿಂದ ತುಂಬಿರುವ ಹಸಿರು ಮರಗಳ ವನವನ್ನೇ ದಹಿಸಿ ಬಿಡುತ್ತದೆ. ಒಬ್ಬನೇ ಒಬ್ಬ ಕೆಟ್ಟನಡತೆಯುಳ್ಳ ಮನುಷ್ಯನಿಂದ ಇಡೀ ಕುಲವು ಕೆಟ್ಟ ಹೆಸರನ್ನು ಪಡೆಯುತ್ತದೆ. |
ಕಶ್ಚಿದಾಮ್ರವನಂ ಛಿತ್ವಾ ಪಾಲಾಶಾಂಶ್ಚ ನಿಷಿಂಚತಿ | ಪುಷ್ಪಂ ದೃಷ್ಟ್ವಾ ಫಲೇ ಗೃಧ್ನುಃ ಸ ಶೋಚತಿ ಫಲಾಗಮೇ || |
ಹೂವಿನ ಆಡಂಬರವನ್ನು ಕಂಡು ಒಳ್ಳೆಯ ಹಣ್ಣುದೊರೆಯುವುದೆಂಬ ಆಸೆಯಿಂದ ಮಾವಿನ ತೋಪುಗಳನ್ನು ಕಡಿದು ಮುತ್ತುಗದ ಮರಗಳನ್ನು ಬೆಳೆಸಿ ಅದಕ್ಕೆ ನೀರೆರೆದರೆ ಏನಾಗುವುದು ? ಅದು ಹಣ್ಣುಬಿಡುವ ಕಾಲದಲ್ಲಿ ಹಣ್ಣಿಲ್ಲವೆಂದು ವ್ಯಥೆ ಪಡಬೇಕಾಗುವುದು. |
ಜಾತ ಮಾತ್ರಂ ನ ಯಃ ಶತ್ರುಂ ವ್ಯಾಧಿಂ ಚ ಪ್ರಶಮಂ ನಯೇತ್ | ಮಹಾಬಲೋsಪಿ ತೇನೈವ ವೃದ್ಧಿಂ ಪ್ರಾಪ್ಯ ಸ ಹನ್ಯತೇ || |
ಯಾರು ಶತ್ರುವನ್ನೂ ರೋಗವನ್ನೂ ಹುಟ್ಟಿದ ಕೂಡಲೇ ನಾಶಗೊಳಿಸುವುದಿಲ್ಲವೋ ಅಂಥವನು ಎಷ್ಟೇ ಬಲಶಾಲಿಯಾಗಿದ್ದರೂ ವೃದ್ಧಿ ಹೊಂದಿದ ಶತ್ರು ಹಾಗೂ ರೋಗ ದಿಂದಲೇ ಕೊಲ್ಲಲ್ಪಡುತ್ತಾನೆ. |
ಸ್ವರ್ಗೋ ಧನಂ ವಾ ಧಾನ್ಯಂ ವಾ ವಿದ್ಯಾಃ ಪುತ್ರಾಸ್ಸುಖಾನಿ ಚ| ಗುರುವೃತ್ತನುರೋಧೇನ ನ ಕಿಂಚಿದಪಿ ದುರ್ಲಭಮ್|| |
ಸ್ವರ್ಗವಾಗಲೀ,ಹಣವಾಗಲೀ,ಧಾನ್ಯವಾಗಲೀ,ವಿದ್ಯೆಯಾಗಲೀ,ಮಕ್ಕಳಾಗಲೀ, ಸುಖವಾಗಲೀ,ಯಾವುದೇ ಆಗಲೀ ಗುರುಭಕ್ತಿಯುಳ್ಳವನಿಗೆ ದುರ್ಲಭವಲ್ಲ. |
ಲೋಭಮೂಲಾನಿ ಪಾಪಾನಿ ವ್ಯಾಧಯೋ ರಸಮೂಲಕಾಃ | ಸ್ನೇಹಮೂಲಾನಿ ದುಃಖಾನಿ ತ್ರೀಣಿ ತ್ಯಕ್ತ್ವಾ ಸುಖೀ ಭವೇತ್ || |
ಪಾಪಗಳಿಗೆ ಆಸೆ ಮೂಲ.ರೋಗಗಳಿಗೆ ರಸವು ಮೂಲ. ದುಃಖಕ್ಕೆ ಆಸಕ್ತಿಯೇ ಮೂಲ. ಆದ್ದರಿಂದ ಈ ಮೂರನ್ನೂ ತ್ಯಜಿಸಿ ಸುಖಿಯಾಗಿರಬೇಕು. |
ನಷ್ಟಂ ಮೃತಮತಿಕ್ರಾಂತಂ ನಾನುಶೋಚಂತಿ ಪಂಡಿತಾಃ| ಪಂಡಿತಾನಾಂ ಚ ಮೂರ್ಖಾಣಾಂ ವಿಶೇಷೋsಯಂ ಯತಃ ಸ್ಮೃತಃ|| |
ನಷ್ಟವಾದುದಕ್ಕಾಗಿ, ಮೃತನಾದವನಿಗೆ, ಮತ್ತು ಕಾಲ ಮಿಂಚಿಹೋದುದಕ್ಕೆ ,ಬುದ್ಧಿವಂತರು ದುಃಖಿಸುವುದಿಲ್ಲ ..ಬುದ್ಧಿವಂತರಿಗೂ ಮೂರ್ಖರಿಗೂ ಇರುವ ವಿಶೇಷವು ಇದೇ ಎಂದು ಹೇಳಿದೆ. |
ಗಚ್ಛತ್ಪಿಪೀಲಿಕಾಯಾತಿ ಯೋಜನಾನಾಂಶತಾನ್ಯಪಿ ಅಗಚ್ಛನ್ವೈನತೇಯೋಪಿ ಪದಮೇಕಂನಗಚ್ಛತಿ |
ಚಲಿಸುತ್ತ ಇರುವ ಇರುವೆ ನೂರಾರು ಮೈಲಿ ಚಲಿಸಬಲ್ಲದು ಚಲಿಸದೇ ಇರುವುದು ಗರುಡವೇ ಆದರೂ ಒಂದೇ ಒಂದು ಹಜ್ಜೆ ಮುಂದೆ ಹೋಗಲೂ ಸಾಧ್ಯವಿಲ್ಲ. |
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ | ನಿತ್ಯಂ ಸಂನಿಹಿತೋ ಮೃತ್ಯುಃ ಕರ್ತವ್ಯೋ ಧರ್ಮಸಂಗ್ರಹಃ || |
ದೇಹವು ನಶ್ವರವಾದವು,ಸಂಪತ್ತೂ ಶಾಶ್ವತವಲ್ಲ. ಮೃತ್ಯು ಸದಾ ಸಮೀಪದಲ್ಲೇ ಇರುತ್ತದೆ. ಆದ್ದರಿಂದ ಒಳ್ಳೆಯ ಕೆಲಸವನ್ನು ಮಾಡಿ ಧರ್ಮ ಸಂಪಾದಿಸಬೇಕು |
ಬಾಲ್ಯೇ ಕ್ರೀಡನಕಾಸಕ್ತಾ ಯೌವನೇ ವಿಷಯೋನ್ಮುಖಾಃ | ಅಜ್ಞಾ ನಯಂತ್ಯಶಕ್ತ್ಯಾ ಚ ವಾರ್ಧಕ್ಯಂ ಸಮುಪಸ್ಥಿತಮ್ || -ವಿಷ್ಣುಪುರಾಣ |
ಮೂರ್ಖರು ಬಾಲ್ಯದಲ್ಲಿ ಕ್ರೀಡಾಸಕ್ತರಾಗಿಯೂ, ತಾರುಣ್ಯದಲ್ಲಿ ವಿಷಯಾಸಕ್ತರಾಗಿಯೂ ಮದಿತನವನ್ನು ಶಕ್ತಯಿಲ್ಲವೆಂದೂ ಕಳೆಯುತ್ತಾರೆ. |
ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಂ | ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್ಕ್ಷತಮ್|| - ಮಹಾಭಾರತ |
ಬಾಣಗಳಿಂದಾದ ಗಾಯ ಗುಣವಾಗುತ್ತದೆ. ಕೊಡಲಿಯಿಂದ ಕಡಿದ ವನವು ಚಿಗುರುತ್ತದೆ. ಆದರೆ ಕೆಟ್ಟ ಮಾತುಗಳಿಂದ ಹೃದಯಕ್ಕಾದ ಗಾಯ ತೀವ್ರವಾಗಿದ್ದು ಅದು ಗುಣವಾಗದು... |
ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ | ಗೃಹಂ ತು ಗೃಹಿಣೀ ಹೀನಂ ಅರಣ್ಯ ಸದೃಶಂ ಭವೇತ್ || - ಮಹಾಭಾರತ |
ಕಟ್ಟಡವನ್ನು ಗೃಹವೆಂದು ತಿಳಿದವರು ಹೇಳುವದಿಲ್ಲ. ಗೃಹಿಣಿಯಿಂದ ಕಟ್ಟಡವು ಗೃಹವೆನಿಸಿಕೊಳ್ಳುತ್ತದೆ. ಗೃಹಿಣಿಯಿಲ್ಲದ ಮನೆ ಅರಣ್ಯಕ್ಕೆ ಸದೃಶವಾದದ್ದು |
ಪ್ರಾಯೋ ಮುಮುಕ್ಷವಸ್ತೇಷಾಂ ಕೇಚನೈವ ದ್ವಿಜೋತ್ತಮ| ಮುಮುಕ್ಷೂಣಾಂ ಸಹಸ್ರೇಷು ಕಶ್ಚಿನ್ಮುಚ್ಯೇತ ಸಿಧ್ಯತಿ|| ಬಾಗವತ-೬-೧೪-೪ |
ಎಲೈ ಬ್ರಾಹ್ಮಣ, ಪ್ರಾಯಶಃ ಮನುಷ್ಯರೇ ಮೊದಲಾದವರಲ್ಲಿ ಮೋಕ್ಷವನ್ನು ಬಯಸುವವರು ಕೆಲವೇ ಕಲವರು! ಮೋಕ್ಷವನ್ನು ಬಯಸುವ ಸಾವಿರಾರು ಜನರಲ್ಲಿ ಯಾವನೋ ಒಬ್ಬ ಮುಕ್ತನಾಗುತ್ತಾನೆ; ಸಿದ್ಧಿಯನ್ನು ಪಡೆಯತ್ತಾನೆ. |
ಸಾಹಿತ್ಯವಿದ್ಯಾಹೀನಾನಾಂ ಸರ್ವಶಾಸ್ತ್ರವಿದಾಮಪಿ | ಸಮಾಜಂ ಪರಿಪಶ್ಯಂತಿ ಸಮಜಂ ಬುದ್ಧಿಶಾಲಿನಃ || -ಸಭಾರಂಜನಶತಕ |
ಸರ್ವಶಾಸ್ತ್ರವನ್ನು ಬಲ್ಲವರಾದರೂ ಸಾಹಿತ್ಯಜ್ಞಾನ ಇಲ್ಲದಿದ್ದರೆ ಅವರ ಸಮಾಜವನ್ನು ಪಶುಗಳ ಗುಂಪು ಎಂದು ಬುದ್ಧಿಶಾಲಿಗಳು ತಿಳಿಯುತ್ತಾರೆ. |
ಸಂಗ್ರಹೈಕಪರಃ ಪ್ರಾಯಃ ಸಮುದ್ರೋsಪಿ ರಸಾತಲೇ | ದಾತಾರಂ ಜಲದಂ ಪಶ್ಯ ಗರ್ಜಂತಂ ಭುವನೋಪರಿ || -ಭೋಜಪ್ರಬಂಧ |
ಕೇವಲ ಕೂಡಿಹಾಕುವವನು ಸಮುದ್ರನಾದರೂ ಪಾತಾಳದಲ್ಲಿರುತ್ತಾನೆ. ನೀರನ್ನು ಕೊಡುವ ಮೋಡವನ್ನು ನೋಡು ಭುಮಿಯ ಮೇಲ್ಭಾಗದಲ್ಲಿ ಗರ್ಜಿಸುತ್ತಾನೆ. |
ಸತ್ಯಪಿ ಚ ಸುಕೃತಕರ್ಮಾಣಿ ದುರ್ನೀತಿಶ್ಚೇತ್ ಶ್ರಿಯಂ ಹರತ್ಯೇವ | ತೈಲೈಃ ಸದೋಪಯುಕ್ತಾಂ ದೀಪಶಿಖಾಂ ವಿದಲಯತಿ ಹಿ ವಾತಾಲಿಃ || - ಸುಭಾಷಿತರತ್ನಭಾಂಡಾಗಾರ |
ಪುಣ್ಯದ ಬಲವಿದ್ದರೂ ಪಾಪಕರ್ಮವನ್ನು ಮಾಡಿದರೆ ಅದು ಸಂಪತ್ತನ್ನು ನಾಶಮಾಡುತ್ತದೆ. ದೀಪಕ್ಕೆ ಎಣ್ಣೆಯ ಬಲವಿದ್ದರೂ ಬಿರುಗಾಳಿಯು ದೀಪವನ್ನು ಆರಿಸಿಬಿಡುತ್ತದೆ. |
ಸಂತೋಷಕ್ಷತಯೇ ಪುಂಸಾಮಾಕಸ್ಮಿಕಧನಾಗಮಃ | ಸರಸಾಂ ಸೇತುಭೇದಾಯ ವರ್ಷೌಘಃ ಸ ಚ ನ ಸ್ಥಿರಃ || -ಸುಭಾಷಿತರತ್ನಭಾಂಡಾಗಾರ |
ಮನುಷ್ಯರಿಗೆ ಆಕಸ್ಮಿಕವಾಗಿ ಸಂಪತ್ತುಬಂದರೆ ಸಂತೋಷ ಹೋಗಿಬಿಡುತ್ತದೆ. ಅನಿರೀಕ್ಷಿತವಾಗಿ ಬಂದ ಭಾರೀ ಮಳೆಯಿಂದ ಕೆರೆಗಳ ಕಟ್ಟೆ ಒಡೆದುಹೋಗುತ್ತದೆ ಮತ್ತು ಅದು ಸ್ಥಿರವಾಗಿಯೂ ಇರುವುದಿಲ್ಲ. |
ಜನ್ಮೇದಂ ವಂಧ್ಯತಾಂ ನೀತಂ ಭವಭೋಗೋಪಲಿಪ್ಸಯಾ | ಕಾಚಮೂಲ್ಯೇನ ವಿಕ್ರೀತಃ ಹಂತ ಚಿಂತಾಮಣಿರ್ಮಯಾ|| -ಶಾಂತಿ ಶತಕ |
ಸಂಸಾರದ ಸುಖಭೋಗದ ಆಸಕ್ತಿಯಿಂದ ಈ ಜನ್ಮವನ್ನು ವ್ಯರ್ಥಮಾಡಿದೆನು. ಅಯ್ಯೋ, ಚಿಂತಾಮಣಿಯನ್ನು ಗಾಜಿನ ಬೆಲೆಗೆ ಮಾರಿಬಿಟ್ಟೆನು. |
ಪ್ರದೋಷೇ ದೀಪಕಶ್ಚಚಂದ್ರಃ ಪ್ರಭಾತೆ ದೀಪಕೋ ರವಿ | ತ್ರೈಲೋಕ್ಯೇ ದೀಪಕೋ ಧರ್ಮಃ ಸುಪುತ್ರೋ ಕುಲದೀಪಕಃ | |
ಸಾಯಂಕಾಲವನ್ನು ಚಂದ್ರ ಬೆಳಗುತ್ತಾನೆ ಬೆಳಗನ್ನು ಸೂರ್ಯ ಬೆಳಗುತ್ತಾನೆ ಮೂರು ಲೋಕಗಳನ್ನು ಧರ್ಮ ಬೆಳಗುತ್ತದೆ ಹಾಗೆಯೇ ಒಬ್ಬ ಸುಪುತ್ರ ಕುಲವನ್ನೇ ಬೆಳಗುತ್ತಾನೆ |
ಆಪದರ್ಥಂ ಧನಂ ರಕ್ಷೇತ್ ದಾರಾನ್ರಕ್ಷೇದ್ಧನೈರಪಿ | ಆತ್ಮಾನಂ ಸತತಂ ರಕ್ಷೇತ್ ದಾರೈರಪಿ ಧನೈರಪಿ|| |
ಕಷ್ಟಕಾಲಕ್ಕೆಂದು ಹಣವನ್ನು ರಕ್ಷಿಸಿಡಬೇಕು. ಹಣದಿಂದ ಹೆಂಡತಿಯನ್ನು ರಕ್ಷಿಸಬೇಕು. ಹಣ, ಹೆಂಡತಿ ಇವುಗಳಿಂದ ತನ್ನನ್ನು ಕಾಪಾಡಿಕೊಳ್ಳಬೇಕು. |
ಕಿಂ ದಾತುರಖಿಲೈರ್ದೋಷೈಃ ಕಿಂ ಲುಬ್ಧಸ್ಯಾಖಿಲೈರ್ಗುಣೈಃ | ನಲೋಭಾದಧಿಕೋ ದೋಷೋ ನದಾನಾದಧಿಕೋ ಗುಣಃ || |
ದಾನಿಯಲ್ಲಿ ಎಷ್ಟು ದೋಷಗಳಿದ್ದರೇನು? ಲೋಭಿಯಲ್ಲಿ ಎಷ್ಟು ಗುಣಗಳಿದ್ದರೇನು? ಲೋಭಕ್ಕಿಂತ ಹೆಚ್ಚಿನ ದೋಷವಿಲ್ಲ ದಾನಕ್ಕಿಂತ ಹೆಚ್ಚಿನ ಗುಣವಿಲ್ಲ. |
ವೈರಾಗ್ಯಮಿವ ವೃದ್ಧಾನಾಂ ಔಚಿತ್ಯಂ ಮಹತಾಮಿವ | ಶುಚಿಶೀಲಮಿವಾರ್ಯಾಣಾಂ ಸತ್ಯಂ ರಾಜ್ಞಾಂ ವಿಭೂಷಣಮ್ || ರಾಮಾಯಣ ಮಂಜರೀ,ಅರಣ್ಯ-೨೭ |
ವೃದ್ಧರಿಗೆ ವೈರಾಗ್ಯವೂ, ಮಹಾತ್ಮನಿಗೆ ಔಚಿತ್ಯವೂ , ಪೂಜ್ಯರಿಗೆ ಶುದ್ಧವಾದ ನಡತೆಯೂ ಭೂಷಣ. ಹಾಗೆಯೇ ರಾಜನಿಗೆ ಸತ್ಯವೇ ಭೂಷಣ. |
ಕಿಂ ದಾತುರಖಿಲೈರ್ದೋಷೈಃ ಕಿಂ ಲುಬ್ಧಸ್ಯಾಖಿಲೈರ್ಗುಣೈಃ | ನಲೋಭಾದಧಿಕೋ ದೋಷೋ ನದಾನಾದಧಿಕೋ ಗುಣಃ || |
ದಾನಿಯಲ್ಲಿ ಎಷ್ಟು ದೋಷಗಳಿದ್ದರೇನು? ಲೋಭಿಯಲ್ಲಿ ಎಷ್ಟು ಗುಣಗಳಿದ್ದರೇನು? ಲೋಭಕ್ಕಿಂತ ಹೆಚ್ಚಿನ ದೋಷವಿಲ್ಲ ದಾನಕ್ಕಿಂತ ಹೆಚ್ಚಿನ ಗುಣವಿಲ್ಲ. |
ಅನಾಗತವಿಧಾನಂ ತು ಕರ್ತವ್ಯಂ ಶುಭಮಿಚ್ಛತಾಂ | ಆಪದಾಶಂಕಮಾನೇನ ಪುರುಷೇಣ ವಿಪಶ್ಛಿತಾ || |
ಮುಂದೆ ಅನರ್ಥವು ಸಂಭವಿಸಬಹುದೆಂಬ ಶಂಕೆಯಿದ್ದಾಗ ಶುಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್ | ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ ನ್ಯಾಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ || |
ನೀತಿನಿಪುಣರು ನಿಂದಿಸಲಿ ಹೊಗಳಲಿ, ಸಂಪತ್ತು ಬರಲಿ ಅಥವಾ ಹೊರಟುಹೋಗಲಿ, ಸಾವು ಈಗಲೇ ಬರಲಿ ಅಥವಾ ಯುಗಾಂತರದಲ್ಲಿ ಉಂಟಾಂಗಲಿ, ಧೀರರಾದವರು ನ್ಯಾಯಮಾರ್ಗವನ್ನು ಬಿಟ್ಟು ಸ್ವಲ್ಪವೂ ಕದಲುವದಿಲ್ಲ. |
ಸಂಯೋಗೋ ಹಿ ವಿಯೋಗಸ್ಯ ಸಂಸೂಚಯತಿ ಸಂಭವಮ್ | ಅನತಿಕ್ರಮಣೀಯಸ್ಯ ಜನ್ಮ ಮೃತ್ಯೋರಿವಾಗಮಮ್ || |
ಒಬ್ಬರನ್ನು ಇನ್ನೊಬ್ಬರು ಭೇಟಿಯಾಗುವುದು ವಿಯೋಗವನ್ನು ಸೂಚಿಸುತ್ತದೆ, ತಪ್ಪಿಸಿಕೊಳ್ಳಲಾರದ ಸಾವಿನ ಆಗಮನವನ್ನು ಹುಟ್ಟು ಸೂಚಿಸುವಂತೆ. |
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಸ್ಸದಾ| ನ ಸುಪ್ರತಿಕರಂ ತತ್ತು ಮಾತ್ರಾ ಪಿತ್ರಾ ಚ ಯತ್ಕೃತಮ್|| -ರಾಮಾಯಣ, |
ಅಯೋಧ್ಯಾ೧೧೧-೯ತಾಯಿ ತಂದೆಗಳು ಮಕ್ಕಳನ್ನು ಸಲಹುವುದಕ್ಕಾಗಿ ಎಷ್ಟು ಕಷ್ಟಪಡುತ್ತಾರೆಂಬುದನ್ನು ಗಮನಿಸಿದರೆ, ಯಾವ ಮಗನಿಗೂ ತಂದೆತಾಯಿಯರ ಉಪಕಾರವನ್ನು ತೀರಿಸಲು ಸಾಧ್ಯವಾಗದು. |
ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ | ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾನ್ ಅಹೇತುನಾನ್ಯಾನ್ ಅಪಿ ತಾರಯಂತಃ || |
ಎಲ್ಲರಿಗೂ ಹಿತವನ್ನುಂಟುಮಾಡುವುದು, ಜೀವನೋತ್ಸಾಹವನ್ನು ವರ್ಧಿಸುವುದು ವಸಂತ ಋತು. ಚಳಿಗಾಲದಲ್ಲಿ ಕಳೆದುಕೊಂಡ ಎಲೆಗಳನ್ನೆಲ್ಲ ಹೊಸ ಚಿಗುರಿನೊಂದಿಗೆ ಹಸಿರಾಗಿಸಿ, ನಮ್ಮ ಮನಸ್ಸನ್ನೂ ಹಸಿರಾಗಿಸುತ್ತದೆ. ಸಜ್ಜನರೂ ಸಹ ಹಾಗೆಯೇ. ಭೀಕರವಾದ ಸಂಸಾರಸಾಗರವನ್ನು ಸ್ವತಃ ದಾಟುವುದಲ್ಲದೆ, ತಮ್ಮೊಂದಿಗೆ ಇರುವವರನ್ನೂ ಪಾರು ಮಾಡುತ್ತಾರೆ. ಸಜ್ಜನರು ವಸಂತ ಋತುವಿನಂತೆ ಸದಾ ಲೋಕ ಕಲ್ಯಾಣವನ್ನು ಮಾಡುತ್ತಿರುತ್ತಾರೆ. |
ಶಾಂತಾ ಮಹಾಂತೋ ನಿವಸಂತಿ ಸಂತೋ ವಸಂತವಲ್ಲೋಕಹಿತಂ ಚರಂತಃ | ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾನ್ ಅಹೇತುನಾನ್ಯಾನ್ ಅಪಿ ತಾರಯಂತಃ || |
ಎಲ್ಲರಿಗೂ ಹಿತವನ್ನುಂಟುಮಾಡುವುದು, ಜೀವನೋತ್ಸಾಹವನ್ನು ವರ್ಧಿಸುವುದು ವಸಂತ ಋತು. ಚಳಿಗಾಲದಲ್ಲಿ ಕಳೆದುಕೊಂಡ ಎಲೆಗಳನ್ನೆಲ್ಲ ಹೊಸ ಚಿಗುರಿನೊಂದಿಗೆ ಹಸಿರಾಗಿಸಿ, ನಮ್ಮ ಮನಸ್ಸನ್ನೂ ಹಸಿರಾಗಿಸುತ್ತದೆ. ಸಜ್ಜನರೂ ಸಹ ಹಾಗೆಯೇ. ಭೀಕರವಾದ ಸಂಸಾರಸಾಗರವನ್ನು ಸ್ವತಃ ದಾಟುವುದಲ್ಲದೆ, ತಮ್ಮೊಂದಿಗೆ ಇರುವವರನ್ನೂ ಪಾರು ಮಾಡುತ್ತಾರೆ. ಸಜ್ಜನರು ವಸಂತ ಋತುವಿನಂತೆ ಸದಾ ಲೋಕ ಕಲ್ಯಾಣವನ್ನು ಮಾಡುತ್ತಿರುತ್ತಾರೆ. |
ನ ಕಿಂಚದಪಿ ಕುರ್ವಾಣಃ ಸೌಖ್ಯೈರ್ದುಃಖಾನ್ಯಪೋಹತಿ | ತತ್ರಸ್ಯ ಕಿಮಪಿ ದ್ರವ್ಯಂ ಯೋ ಹಿ ಯಸ್ಯ ಪ್ರಿಯೋ ಜನಃ || ಉತ್ತರರಾಮಚರಿತಮ್ |
ನಮಗೆ ಯಾರು ಪ್ರೀತಿಗೆ ಪಾತ್ರರೋ ಅವರು ನಮಗೆ ಏನನ್ನೂ ಮಾಡದೇ ಇದ್ದರೂ ಕೇವಲ ಸಾಮೀಪ್ಯದಿಂದಲೆ, ಅವರು ನಮ್ಮೊಂದಿಗಿದ್ದಾರೆ ಎಂಬ ಭಾವದಿಂದಲೇ ದುಃಖವನ್ನು ಹೋಗಲಾಡಿಸಬಲ್ಲರು. ಅದೇ ಪ್ರೀತಿಯಲ್ಲಿರುವ ಮಹತ್ತರ ಗುಣ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಕೀರ್ತಿರಕ್ಷಣಮಾದಿಷ್ಟಂ ಕೀರ್ತಿರ್ಹಿ ಪರಮಂ ಧನಮ್| ನಷ್ಟಕೀರ್ತೇರ್ಮನುಷ್ಯಸ್ಯ ಜೀವಿತಂ ನಿಷ್ಫಲಂ ಸ್ಮೃತಮ್|| ಸುಭಾಷಿತಸುಧಾನಿಧಿ |
ಕೀರ್ತಿಯನ್ನು ಕಾಪಾಡಿಕೊಳ್ಳಬೇಕೆಂದು ಹಿರಿಯರು ಆದೇಶಿಸಿದ್ದಾರೆ. ಏಕೆಂದರೆ ಕೀರ್ತಿಯೇ ಹೆಚ್ಚಿನ ಐಶ್ವರ್ಯವಲ್ಲವೇ? ಮನುಷ್ಯನ ಕೀರ್ತಿಯು ಹಾಳಾದರೆ ಅವನ ಜೀವನವು ವ್ಯರ್ಥ. |
ಪ್ರಸಹ್ಯಮಣಿಮುದ್ಧರೇನ್ಮಕರವಕ್ತ್ರದಂಷ್ಟ್ರಾಂತರಾತ್ | ಸಮುದ್ರಮಪಿಸಂತರೇತ್ಪ್ರಚಲದೂರ್ಮಿಮಾಲಾಕುಲಮ್ || ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ||| ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ |||| -ನೀತಿಶತಕ-೨ |
ಮೊಸಳೆಯ ಬಾಯಿಯಲ್ಲಿ ಹಲ್ಲುಗಳ ಮಧ್ಯದಲ್ಲಿ ಸಿಲುಕಿರುವ ರತ್ನವನ್ನೂ ಹಠಾತ್ತಾಗಿ ಹೊರತೆಗೆಯಬಹುದು. ಅಲೆಗಳ ಸಾಲುಗಳು ಏಳುತ್ತಿರುವ ಕ್ಷುಬ್ಧವಾದ ಸಮುದ್ರವನ್ನು ಕೂಡಾ ದಾಟಬಹುದು. ಸಿಟ್ಟಿಗೆದ್ದ ಹಾವನ್ನೂ ಕೂಡಾ ಹೂವಿನಂತೆ ತಲೆಯಲ್ಲಿ ಧರಿಸಬಹುದು. ಆದರೆ ಹಠಮಾರಿಯಾದ ಮೂರ್ಖನ ಮನಸ್ಸನ್ನು ಮೆಚ್ಚಿಸಲಾಗುವದೇ ಇಲ್ಲ. |
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಸ್ಸದಾ| ನ ಸುಪ್ರತಿಕರಂ ತತ್ತು ಮಾತ್ರಾ ಪಿತ್ರಾ ಚ ಯತ್ಕೃತಮ್|| -ರಾಮಾಯಣ, |
ಅಯೋಧ್ಯಾ೧೧೧-೯ತಾಯಿ ತಂದೆಗಳು ಮಕ್ಕಳನ್ನು ಸಲಹುವುದಕ್ಕಾಗಿ ಎಷ್ಟು ಕಷ್ಟಪಡುತ್ತಾರೆಂಬುದನ್ನು ಗಮನಿಸಿದರೆ, ಯಾವ ಮಗನಿಗೂ ತಂದೆತಾಯಿಯರ ಉಪಕಾರವನ್ನು ತೀರಿಸಲು ಸಾಧ್ಯವಾಗದು. |
ಸುಹೃದ್ಭಿರಾಪ್ತೈರಸಕೃದ್ವಿಚಾರಿತಂ ಸ್ವಯಂ ಚ ಬುದ್ಧ್ಯಾ ಪ್ರವಿಚಾರಿತಾಶ್ರಯಂ | ಕರೋತಿ ಕಾರ್ಯಂ ಖಲು ಯಃ ಸ ಬುದ್ಧಿಮಾನ್ ಸ ಏವ ಲಕ್ಷ್ಮ್ಯಾ ಯಶಸಾಂ ಚ ಭಾಜನಮ್ || -ಪಂಚತಂತ್ರ, ಕಾಕೋಲೂಕೀಯ-೧೧೩ |
ತನ್ನ ಆಪ್ತ ಮಿತ್ರರು ಅನೇಕ ಸಲ ವಿಚಾರ ಮಾಡಿದ, ತಾನೂ ಸಹ ಸ್ವಬುದ್ಧಿಯಿಂದ ಚೆನ್ನಾಗಿ ಯೋಚಿಸಿದ ಕೆಲಸವನ್ನು ಬುದ್ಧಿವಂತನಾದ ಯಾರು ಮಾಡುತ್ತಾನೆಯೋ ಅವನು ಸಂಪತ್ತಿಗೂ,ಯಶಸ್ಸಿಗೂ ಪಾತ್ರನಾಗುತ್ತಾನೆ. |
ಅಮಂತ್ರಮಕ್ಷರಂ ನಾಸ್ತಿ ವನಸ್ಪತಿರನೌಷಧಮ್ | ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ || |
-ಸಮಯೋಚಿತಪದ್ಯಮಾಲಿಕಾಮಂತ್ರವಲ್ಲದ ಅಕ್ಷರವಿಲ್ಲ. ಔಷಧವಲ್ಲದ ಮೂಲಿಕೆಯಿಲ್ಲ. ಅಯೋಗ್ಯನಾದ ಮನುಷ್ಯನೂ ಇಲ್ಲ. ಏಕೆಂದರೆ ಹೊಂದಾಣಿಕೆ ಮಾಡುವ ಯೋಜಕನು ದುರ್ಲಭ. |
ಅದತ್ತದಾನಾಚ್ಚ ಭವೇದ್ ದರಿದ್ರಃ ದರಿದ್ರಭಾವಾಚ್ಚ ಕರೋತಿ ಪಾಪಮ್ l ಪಾಪಪ್ರಭಾವಾತ್ ನರಕಂ ಪ್ರಯಾತಿ ಪುನಃ ದರಿದ್ರಃ ಪುನರೇವ ಪಾಪೀ ll |
ದಾನ ಮಾಡದೇ ಇರುವುದರಿಂದ ಬಡವನಾಗುತ್ತಾನೆ. ಬಡತನದಿಂದ ಪಾಪ ಮಾಡುತ್ತಾನೆ. ಪಾಪ ಮಾಡುವುದರಿಂದ ನರಕಪ್ರಾಪ್ತಿಯಾಗುತ್ತದೆ. ನರಕವೆಂದರೆ ಮತ್ತೆ ಬಡವನಾಗಿ ಹುಟ್ಟುವುದು, ಪಾಪಕೆಲಸ ಮಾಡುವುದೇ ಆಗಿದೆ. |
ಬಾಲಸಖಿತ್ವಮಕಾರಣಹಾಸ್ಯಮ್ ಸ್ತ್ರೀಷು ವಿವಾದಮಸಜ್ಜನಸೇವಾ| ಗರ್ದಭಯಾನಮಸಂಸ್ಕೃತವಾಣೀ ಷಡ್ಭಿರ್ನಾ ಲಘುತಾಮುಪಯಾತಿ|| |
ಬಾಲಕರೊಡನೆ ಗೆಳೆತನ, ಕಾರಣವಿಲ್ಲದ ಹಾಸ್ಯ, ಮಹಿಳೆಯರೊಂದಿಗೆ ವೇಳೆ ವಿವಾದ, ದುರ್ಜನರ ಸೇವೆ, ಕತ್ತೆಯ ಸವಾರಿ, ಸುಸಂಸ್ಕೃತವಲ್ಲದ ಮಾತು, ಈ ಆರು ಕಾರ್ಯಗಳನ್ನು ಮಾಡುವ ಮನುಷ್ಯನು ಗೌರವವನ್ನು ಕಳೆದುಕೊಳ್ಳುತ್ತಾನೆ. |
ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಂ | ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಂ || |
ಗುಣವಿಲ್ಲದವನ ರೂಪ, ಶೀಲಕಳೆದುಕೊಂಡವನ ಕುಲ, ಕಲಿತ ವಿದ್ಯೆಯಲ್ಲಿ ಸಿದ್ಧಿಪಡೆದುಕೊಳ್ಳದವನ ವಿದ್ಯೆ, ಸಕಲೈಶ್ವರ್ಯವಿದ್ದೂ ಅನುಭವಿಸದವನ ಸಂಪತ್ತು ಇವೆಲ್ಲ ಇದ್ದೂ ಸತ್ತಂತೆ (ಮೃತಸಮಾನ) |
ಅಕಾರಣಾವಿಷ್ಕೃತವೈರದಾರುಣಾತ್ ಅಸಜ್ಜನಾತ್ಕಸ್ಯ ಭಯಂ ನ ಜಾಯತೇ | ವಿಷಂ ಮಹಾಹೇರಿವ ಯಸ್ಯ ದುರ್ವಚಃ ಸದುಃಸಹಂ ಸನ್ನಿಹಿತಂ ಸದಾ ಮುಖೆ || -ಕಾದಂಬರೀ |
ಕಾರಣವೇ ಇಲ್ಲದೇ ಹಗೆತನವನ್ನು ತೋರುವ ದುಷ್ಟರನ್ನು ನೋಡಿದರೆ ಯಾರಿಗೆ ತಾನೆ ಭಯವಾಗುವದಿಲ್ಲ.! ಸರ್ಪದ ಬಾಯಿಯಲ್ಲಿ ವಿಷವಿರುವಂತೆ ಇವರ ಬಾಯಿಯಲ್ಲಿ ಯಾವಾಗಲೂ ಸಹಿಸಲಾಗದ ದುಷ್ಟಮಾತುಗಳನ್ನು ಇಟ್ಟುಕೊಂಡಿರುತ್ತಾರೆ. |
ಪೃಥವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಶಿತಂ | ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ || |
ಭೂಮಿಯಲ್ಲಿ ಸರ್ವಶ್ರೇಷ್ಥವಾದ ರತ್ನಗಳು ಕೇವಲ ಮೂರೇ ಇರುವುದು. ಜಲ,ಆಹಾರ, ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನ ರತ್ನ ಎನ್ನುತ್ತಾರೆ. |
ನಯಸ್ಯ ವಿನಯೋ ಮೂಲಂ ವಿನಯಃ ಶಾಸ್ತ್ರನಿಶ್ಚಯಃ| ವಿನಯೋ ಹೀಂದ್ರಿಯಜಯಃ ತದ್ಯುಕ್ತಃ ಶಾಸ್ತ್ರಮೃಚ್ಛತಿ|| ಸುಭಾಷಿತಸುಧಾನಿಧಿ |
ನೀತಿಗೆ ಮೂಲ ವಿನಯ, ವಿನಯವೆಂದರೆ ಶಾಸ್ತ್ರಗಳ ಖಚಿತವಾದ ಅರಿವು. ವಿನಯವೆಂದರೆ ಇಂದ್ರಿಯ ಜಯವೂ ಹೌದು. ಅದನ್ನು ಉಳ್ಳವನು ಶಾಸ್ತ್ರವನ್ನು ತಿಳಿಯುತ್ತಾನೆ. |
ಸಂಸದಿ ತದೇವ ಭೂಷಣಮುಪಕಾರಕಮವಸರೇ ಧನಂ ಮುಖ್ಯಮ್| ಸೂಕ್ತಂ ದಧತಿ ಸುವರ್ಣಂ ಕಲ್ಯಾಣಮನರ್ಘಮಿಹ ಧನ್ಯಾಃ|| ಸುಭಾಷಿತರತ್ನ ಭಾಂಡಾಗಾರ |
ಸುಭಾಷಿತವನ್ನು ಸಭೆಯಲ್ಲಿ ಹೇಳಿದಾಗ ಅಲಂಕಾರದಂತೆ ಮೆಚ್ಚಿಗೆಯನ್ನು ಪಡೆಯುತ್ತದೆ. ಇದು ಕಷ್ಟಕಾಲದಲ್ಲಿ ಹಣದಂತೆ ಉಪಕಾರಮಾಡುತ್ತದೆ. ಕಲ್ಯಾಣಕರವಾದ, ಚಿನ್ನದಂತೆ ಬೆಲೆಬಾಳುವ ಸುಭಾಷಿತವನ್ನು ತಿಳಿದವರೆ ಧನ್ಯರು. |
ನ ಕಶ್ಚಿದಪಿ ಜಾನಾತಿ ಕಿಂ ಕಸ್ಯ ಶ್ವೋ ಭವಿಷ್ಯತಿ | ಅತಃ ಶ್ವಃ ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್ || |
ಯಾರಿಗೆ, ಯಾವಾಗ, ಏನಾಗ ಬಹುದೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಆರೋಗ್ಯವಂತನಾದವನಿಗೆ ಕ್ಷಣಮಾತ್ರದಲ್ಲಿ ಮರಣ ಸಂಭವಿಸಬಹುದು. ರೋಗಗ್ರಸ್ತನಾದವನು ದಿನ ಕಳೆಯುವುದರಲ್ಲಿ ಆರೋಗ್ಯವಂತನಾಗಬಹುದು. ಆದ್ದರಿಂದ ಬುದ್ಧಿವಂತನಾದವನು, ಸತ್ ಕೆಲಸಗಳನ್ನು, ಪುಣ್ಯಕಾರ್ಯಗಳನ್ನು ನಾಳೆಗೆ ಎಂದು ಮುಂದೂಡದೆ ಇಂದೇ ಮಾಡಿ ಧನ್ಯನಾಗಬೇಕು. |
ಅನ್ಯವಾದೀ ಕ್ರಿಯಾದ್ವೇಷೀ ನೋಪಸ್ಥಾಯೀ ನಿರುತ್ತರಃ | ಆಹೂತಃ ಪ್ರಪಲಾಯೀ ಚ ಹೀನಃ ಪಂಚವಿಧಃ ಸ್ಮ್ರತಃ || |
ಕೇಳಿದ ವಿಷಯವನ್ನು ಬಿಟ್ಟು ಬೇರೆ ವಿಷಯ ಮಾತನಾಡುವುದು. ಮಾಡಿದ ಕೆಲಸವನ್ನು ದ್ವೇಷಿಸುವುದು. ಉಪಸ್ಥಿತಿ ಇರಬೇಕಾದ ಸ್ಥಳದಲ್ಲಿ ಬಾರದಿರುವುದು. ಯಾರಾದರೂ, ಏನಾದರೂ ಕೇಳಿದರೆ ಉತ್ತರ ಕೊಡದೇ ಇರುವುದು. ಯಾರಾದರೂ ಆಹ್ವಾನಿಸಿದರೆ ಹೋಗದೇ ಇರುವುದು. ಈ ಐದು ಗುಣಹೀನನ ಲಕ್ಷಣಗಳು. |
ಯ ಉದ್ಯತಮನಾದೃತ್ಯ ಕೀನಾಶಮಭಿಯಾಚತೇ | ಕ್ಷೀಯತೇ ತದ್ಯಶಃ ಸ್ಫೀತಂ ಮಾನಶ್ಚಾವಜ್ಞಯಾ ಹತಃ || -ಭಾಗವತ-೩-೨೨-೧೩ |
ಯಾರು ಅಭಿವೃದ್ಧಿಯನ್ನು ಅನಾದರಿಸಿ ನೀಚನನ್ನು ಯಾಚಿಸುತ್ತಾನೋ ಅವನ ವಿಪುಲವಾದ ಕೀರ್ತಿಯು ನಶಿಸುತ್ತದೆ ಮತ್ತು ಅವಮಾನಕ್ಕೊಳಗಾಗಿ ಗೌರವವು ನಶಿಸುತ್ತದೆ. |
ಕಸ್ಮಾದಿಂದುರಸೌ ಧಿನೋತಿ ಜಗತೀಂ ಪೀಯೂಷಗರ್ಭೈಃ ಕರೈಃ | ಕಸ್ಮಾದ್ವಾ ಜಲಧಾರಯೈಷ ಧರಣೀಂ ಧಾರಾಧರಃ ಸಿಂಚತಿ || ಭ್ರಾಮಂ ಭ್ರಾಮಮಯಂ ಚ ನಂದಯತಿ ವಾ ಕಸ್ಮಾತ್ತ್ರಿಲೋಕೀಂ ರವಿಃ ||| ಸಾಧೂನಾಂ ಹಿ ಪರೋಪಕಾರಕರಣೇ ನೋಪಾಧ್ಯಪೇಕ್ಷಂ ಮನಃ |||| -ಭಾವವಿಲಾಸ |
ಯಾವಕಾರಣದಿಂದ ಅಮೃತಮಯವಾದ ಕಿರಣಗಳಿಂದ ಚಂದ್ರನು ಜಗತ್ತನ್ನು ಆನಂದಪಡಿಸುತ್ತಾನೆ? ಮೋಡವು ಜಲಧಾರೆಯಿಂದ ಭೂಮಿಯನ್ನು ಏಕೆ ತೋಯಿಸುತ್ತದೆ? ಸೂರ್ಯನು ಸದಾ ಅಲೆಯುತ್ತ ಮೂರು ಲೋಕವನ್ನು ಏಕೆ ಸಂತೋಷ ಪಡಿಸುತ್ತಾನೆ? ಪರೋಪಕಾರ ಮಾಡುವ ವಿಷಯದಲ್ಲಿ ಸಜ್ಜನರ ಮನಸ್ಸು ಯಾವ ಕಾರಣವನ್ನೂ ಅಪೇಕ್ಷಿಸುವದಿಲ್ಲ. |
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ| ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ|| (ಮನು ಸ್ಮೃತಿ-೪,೧೩೮) |
ಸತ್ಯವನ್ನು ಹೇಳಬೇಕು-ಅದು ಪ್ರಿಯವಾಗಿರಬೇಕು. ಅಪ್ರಿಯವಾದ ಸತ್ಯವನ್ನು ಆಡಬಾರದು. ಪ್ರಿಯವಾಗುತ್ತದೆ ಎಂದು ಸುಳ್ಳನ್ನೂ ಹೇಳಬಾರದು-ಇದು ಸನಾತನ ಧರ್ಮವಾಗಿದೆ. |
ಯತ್ ಕೃತ್ವಾ ಮ ಭವೇದ್ಧರ್ಮೋ ನ ಕೀರ್ತಿರ್ನ ಯಶೋ ಭುವಿ | ಶರೀರಸ್ಯ ಭವೇತ್ ಖೇದಃ ಕಸ್ತತ್ ಕರ್ಮ ಸಮಾಚರೇತ್ || -ರಾಮಾಯಣ ಅರಣ್ಯ ೫೦-೧೯ |
ಯಾವುದನ್ನು ಮಾಡಿದರೆ ಧರ್ಮವಿಲ್ಲವೋ,ಕೀರ್ತಿ ಇಲ್ಲವೋ ಒಳ್ಳೆಯ ಹೆಸರಿಲ್ಲವೋ ಕೇವಲ ದೇಹಾಯಾಸ ಮಾತ್ರ ಆಗುವುದೋ ಅಂಥಹ ಕೆಲಸವನ್ನು ಯಾವನು ಮಾಡಿಯಾನು.. |
ಸಂತಪ್ತಯಸಿ ಸಂಸ್ಥಿ ತಸ್ಯ ಪಯಸೋ ನಾಮಾಪಿ ನ ಜ್ಞಾಯತೇ | ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ || ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ ||| ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ |||| -ನೀತಿಶತಕ-95 |
ಚೆನ್ನಾಗಿ ಬಿಸಿಯಾದ ಕಬ್ಬಿಣದಲ್ಲಿ ನೀರಿನ ಹೆಸರೂ ತಿಳಿಯದಂತೆ ನಾಶವಾಗುತ್ತದೆ. ಅದೇ ಕಮಲದ ಎಲೆಯಮೇಲೆ ಇದ್ದಾಗ ಮುತ್ತಿನಂತೆ ಹೊಳೆಯುತ್ತದೆ. ಅದು ಸ್ವಾತೀಮಳೆಯಲ್ಲಿ ಸಮುದ್ರದಲ್ಲಿನ ಕಪ್ಪೇಚಿಪ್ಪಿನಲ್ಲಿ ಬಿದ್ದಿದ್ದೇ ಆದರೆ ಮುತ್ತೇ ಆಗುತ್ತದೆ. ಆದುದರಿಂದ ಪ್ರಾಯಶಃ ಅಧಮ,ಮಧ್ಯಮ, ಉತ್ತಮ ಗುಣಗಳು ಸಹವಾಸದಿಂದ ಉಂಟಾಗುತ್ತದೆ. |
ಗುಣದೋಷೌ ಬುಧೋ ಗೃಹ್ಣನ್ನಿಂದುಕ್ಷ್ವೇಡಾವಿವೇಶ್ವರಃ ಶಿರಸಃ ಶ್ಲಾಘತೇ ಪೂರ್ವಂ ಪರಂ ಕಂಠೇ ನಿಯಚ್ಛತಿ || |
ವ್ಯಕ್ತಿಯೊಬ್ಬನ ವ್ಯಕ್ತಿತ್ವದ ಒಳಿತು ಕೆಡುಕುಗಳನ್ನು ತಾರತಮ್ಯವಿಲ್ಲದಂತೆ ಏಕಪ್ರಕಾರವಾಗಿ ಗ್ರಹಿಸಬೇಕು. ಸಮುದ್ರಮಥನದ ಕಾಲದಲ್ಲಿ ಶಿವನು ತನ್ನಪಾಲಿಗೆ ಒದಗಿಬಂದ ಆಪ್ಯಾಯಮಾನವಾದ ಚಂದ್ರನನ್ನೂ ಪ್ರಾಣಘಾತುಕವಾದ ವಿಷವನ್ನೂ ಏಕಪ್ರಕಾರವಾಗಿ ಸ್ವೀಕರಿಸಿದನಂತೆ. ಯಾವುದೋ ಒಂದನ್ನು ಮಾತ್ರ ನಿರೀಕ್ಷಿಸುತ್ತೇನೆ ಎಂಬ ಮನೋಲಯವು ಅಸಮಾಧಾನಕ್ಕೆ ಕಾರಣವಾಗುತ್ತದೆ. ಗುಣದೋಷಗಳೆರಡನ್ನೂ ಸ್ವೀಕರಿಸಿಯಾದಬಳಿಕ ಯಾವುದನ್ನು ಎಲ್ಲಿಡಬೇಕೋ ಅಲ್ಲಿಡಬೇಕಾದ್ದು ಕೂಡ ಜಾಣನ ಕರ್ತವ್ಯ. ಶಿವನು ಮೋದಾವಹನಾದ ಚಂದ್ರನನ್ನು ತಲೆಯಲ್ಲಿ ಅಲಂಕಾರಕ್ಕೆಂಬಂತೆ ಧರಿಸಿದರೆ, ವಿಷವನ್ನು ಹೊಟ್ಟೆಗೂ ಹಾಕಿಕೊಳ್ಳದೆ ಅತ್ತ ಬಾಯಲ್ಲೂ ಇಟ್ಟುಕೊಳ್ಳದೆ ಕಂಠದಲ್ಲಿ ಧರಿಸಿದ್ದಾನಲ್ಲವೆ, ಹಾಗೆಯೇ ಬುದ್ಧಿವಂತನಾದವನೂ ನಡೆದುಕೊಳ್ಳಬೇಕು. |
ಖಲಸಖ್ಯಂ ಪ್ರಾಙ್ಮಧುರಂ ವಯೋಂsತರಾಲೇ ನಿದಾಘದಿನಮಂತೇ | ಏಕಾದಿಮಧ್ಯಪರಿಣತಿರಮಣೀಯಾ ಸಾಧುಜನಮೈತ್ರೀ || -ಸಮಯೋಚಿತಪದ್ಯಮಾಲಿಕಾ |
ದುರ್ಜನರ ಸಂಗ ಆರಂಭದಲ್ಲಿ ಮಧುರ, ವಯಸ್ಸು ಮಧ್ಯದಲ್ಲಿ (ತಾರುಣ್ಯದಲ್ಲಿ) ಮಧುರ. ಬೇಸಿಗೆಯಾದರೋ ಅಂತ್ಯದಲ್ಲಿ (ಸಂಜೆಯಲ್ಲಿ) ಮಧುರ, ಸಜ್ಜನರ ಸಂಗವಾದರೋ ಆರಂಭ,ಮಧ್ಯ,ಅಂತ್ಯಗಳಲ್ಲಿ ಒಂದೇ ರೀತಿ ಮಧುರವಾಗಿರುತ್ತದೆ. |
ಸುಹೃದಿ ನಿರಂತರಚಿತ್ತೇ ಗುಣವತಿ ಭೃತ್ಯೇsನುವರ್ತಿನಿ ಕಲತ್ರೇ | ಸ್ವಾಮಿನಿ ಸೌಹೃದಯುಕ್ತೇ ನಿವೇದ್ಯ ದುಃಖಂ ಸುಖೀ ಭವತಿ || -ಪಂಚತಂತ್ರ ಮಿತ್ರಭೇದ-೧೧೦ |
ಸಮಾನ ಮನಸ್ಸುಳ್ಳ ಸ್ನೇಹಿತರಲ್ಲಿ, ಗುಣಶಾಲಿಯಾದ ಸೇವಕನಲ್ಲಿ, ತನ್ನನ್ನು ಅನುಸರಿಸುವ ಮಡದಿಯಲ್ಲಿ ಒಳ್ಳೆಯ ಮನಸ್ಸುಳ್ಳ ಯಜಮಾನನಲ್ಲಿ ತನ್ನ ದುಃಖವನ್ನು ತೋಡಿಕೊಂಡು ಮನುಷ್ಯನು ಸುಖವನ್ನು ಪಡೆಯುತ್ತಾನೆ. |
ಅಮಂತ್ರಮಕ್ಷರಂ ನಾಸ್ತಿ ವನಸ್ಪತಿರನೌಷಧಮ್ | ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ || -ಸಮಯೋಚಿತಪದ್ಯಮಾಲಿಕಾ |
ಮಂತ್ರವಲ್ಲದ ಅಕ್ಷರವಿಲ್ಲ. ಔಷಧವಲ್ಲದ ಮೂಲಿಕೆಯಿಲ್ಲ. ಅಯೋಗ್ಯನಾದ ಮನುಷ್ಯನೂ ಇಲ್ಲ. ಏಕೆಂದರೆ ಹೊಂದಾಣಿಕೆ ಮಾಡುವ ಯೋಜಕನು ದುರ್ಲಭ. |
ಬಾಲಸಖಿತ್ವಮಕಾರಣಹಾಸ್ಯಮ್ ಸ್ತ್ರೀಷು ವಿವಾದಮಸಜ್ಜನಸೇವಾ| ಗರ್ದಭಯಾನಮಸಂಸ್ಕೃತವಾಣೀ ಷಡ್ಭಿರ್ನಾ ಲಘುತಾಮುಪಯಾತಿ|| |
ಬಾಲಕರೊಡನೆ ಗೆಳೆತನ, ಕಾರಣವಿಲ್ಲದ ಹಾಸ್ಯ, ಮಹಿಳೆಯರೊಂದಿಗೆ ವೇಳೆ ವಿವಾದ, ದುರ್ಜನರ ಸೇವೆ, ಕತ್ತೆಯ ಸವಾರಿ, ಸುಸಂಸ್ಕೃತವಲ್ಲದ ಮಾತು, ಈ ಆರು ಕಾರ್ಯಗಳನ್ನು ಮಾಡುವ ಮನುಷ್ಯನು ಗೌರವವನ್ನು ಕಳೆದುಕೊಳ್ಳುತ್ತಾನೆ. |
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಸ್ಸದಾ| ನ ಸುಪ್ರತಿಕರಂ ತತ್ತು ಮಾತ್ರಾ ಪಿತ್ರಾ ಚ ಯತ್ಕೃತಮ್|| -ರಾಮಾಯಣ, ಅಯೋಧ್ಯಾ೧೧೧-೯ |
ತಾಯಿ ತಂದೆಗಳು ಮಕ್ಕಳನ್ನು ಸಲಹುವುದಕ್ಕಾಗಿ ಎಷ್ಟು ಕಷ್ಟಪಡುತ್ತಾರೆಂಬುದನ್ನು ಗಮನಿಸಿದರೆ, ಯಾವ ಮಗನಿಗೂ ತಂದೆತಾಯಿಯರ ಉಪಕಾರವನ್ನು ತೀರಿಸಲು ಸಾಧ್ಯವಾಗದು. |
ನಿರ್ಧನಶ್ಚಾಪಿ ಕಾಮಾರ್ಥೀ ದರಿದ್ರಃ ಕಲಹಪ್ರಿಯಃ| ಮಂದಶಾಸ್ತ್ರೋ ವಿವಾದಾರ್ಥೀ ತ್ರಿವಿಧಂ ಮೂರ್ಖಲಕ್ಷಣಮ್ || -ಸುಭಾಷಿತಸುಧಾನಿಧಿ-೩೩ |
ಹಣವಿಲ್ಲದವನಾದರೂ ಆಸೆಗಳನ್ನರಸುವನು. ಬಡವನಾದರೂ ಜಗಳಕ್ಕೆ ಉತ್ಸುಕನಾಗಿದ್ದಾನೆ. ಶಾಸ್ತ್ರಜ್ಞಾನದ ಕೊರತೆಯಿದ್ದರೂ ವಾದ ಮಾಡಲಿಚ್ಛಿಸುತ್ತಾನೆ. ಇವು ಮೂರೂ ಮೂರ್ಖರ ಚಿಹ್ನೆಗಳು. |
ಸುಹೃದ್ಭಿರಾಪ್ತೈರಸಕೃದ್ವಿಚಾರಿತಂ ಸ್ವಯಂ ಚ ಬುದ್ಧ್ಯಾ ಪ್ರವಿಚಾರಿತಾಶ್ರಯಂ | ಕರೋತಿ ಕಾರ್ಯಂ ಖಲು ಯಃ ಸ ಬುದ್ಧಿಮಾನ್ ಸ ಏವ ಲಕ್ಷ್ಮ್ಯಾ ಯಶಸಾಂ ಚ ಭಾಜನಮ್ || -ಪಂಚತಂತ್ರ, ಕಾಕೋಲೂಕೀಯ-೧೧೩ |
ತನ್ನ ಆಪ್ತ ಮಿತ್ರರು ಅನೇಕ ಸಲ ವಿಚಾರ ಮಾಡಿದ, ತಾನೂ ಸಹ ಸ್ವಬುದ್ಧಿಯಿಂದ ಚೆನ್ನಾಗಿ ಯೋಚಿಸಿದ ಕೆಲಸವನ್ನು ಬುದ್ಧಿವಂತನಾದ ಯಾರು ಮಾಡುತ್ತಾನೆಯೋ ಅವನು ಸಂಪತ್ತಿಗೂ,ಯಶಸ್ಸಿಗೂ ಪಾತ್ರನಾಗುತ್ತಾನೆ. |
ಪರಚ್ಛಿದ್ರೇಷು ಹೃದಯಂ ಪರವಾರ್ತಾಸು ಚ ಶ್ರವಃ| ಪರಮರ್ಮಣಿ ವಾಚಂ ಚ ಖಲಾನಾಮಸೃಜದ್ವಿಧಿಃ || |
ಇನ್ನೊಬ್ಬರ ದೋಷವನ್ನು ಹುಡುಕುವದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು -ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. |
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮ ಕಾರತಃ | ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ || - ಭಗವದ್ಗೀತಾ ೧೬-೨೩ |
ಯಾರು ಶಾಸ್ತ್ರವಿಧಿಗಳನ್ನು ತ್ಯಜಿಸಿ ತನ್ನ ಇಚ್ಛೆಯಿಂದ ಮನಬಂದಂತೆ ಆಚರಣೆ ಮಾಡುತ್ತಾನೋ ಅವನು ಸಿದ್ಧಿಯನ್ನು ಹಾಗು ಪರಮಗತಿಯನ್ನೂ ಪಡೆಯುವದಿಲ್ಲ. ಸುಖವನ್ನೂ ಹೊಂದುವದಿಲ್ಲ. |
ಪ್ರಸಹ್ಯಮಣಿಮುದ್ಧರೇನ್ಮಕರವಕ್ತ್ರದಂಷ್ಟ್ರಾಂತರಾತ್ | ಸಮುದ್ರಮಪಿಸಂತರೇತ್ಪ್ರಚಲದೂರ್ಮಿಮಾಲಾಕುಲಮ್ || ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ||| ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ |||| -ನೀತಿಶತಕ-೨ |
ಮೊಸಳೆಯ ಬಾಯಿಯಲ್ಲಿ ಹಲ್ಲುಗಳ ಮಧ್ಯದಲ್ಲಿ ಸಿಲುಕಿರುವ ರತ್ನವನ್ನೂ ಹಠಾತ್ತಾಗಿ ಹೊರತೆಗೆಯಬಹುದು. ಅಲೆಗಳ ಸಾಲುಗಳು ಏಳುತ್ತಿರುವ ಕ್ಷುಬ್ಧವಾದ ಸಮುದ್ರವನ್ನು ಕೂಡಾ ದಾಟಬಹುದು. ಸಿಟ್ಟಿಗೆದ್ದ ಹಾವನ್ನೂ ಕೂಡಾ ಹೂವಿನಂತೆ ತಲೆಯಲ್ಲಿ ಧರಿಸಬಹುದು. ಆದರೆ ಹಠಮಾರಿಯಾದ ಮೂರ್ಖನ ಮನಸ್ಸನ್ನು ಮೆಚ್ಚಿಸಲಾಗುವದೇ ಇಲ್ಲ. |
ಅದತ್ತದಾನಾಚ್ಚ ಭವೇದ್ ದರಿದ್ರಃ ದರಿದ್ರಭಾವಾಚ್ಚ ಕರೋತಿ ಪಾಪಮ್ l ಪಾಪಪ್ರಭಾವಾತ್ ನರಕಂ ಪ್ರಯಾತಿ ಪುನಃ ದರಿದ್ರಃ ಪುನರೇವ ಪಾಪೀ ll |
ದಾನ ಮಾಡದೇ ಇರುವುದರಿಂದ ಬಡವನಾಗುತ್ತಾನೆ. ಬಡತನದಿಂದ ಪಾಪ ಮಾಡುತ್ತಾನೆ. ಪಾಪ ಮಾಡುವುದರಿಂದ ನರಕಪ್ರಾಪ್ತಿಯಾಗುತ್ತದೆ. ನರಕವೆಂದರೆ ಮತ್ತೆ ಬಡವನಾಗಿ ಹುಟ್ಟುವುದು, ಪಾಪಕೆಲಸ ಮಾಡುವುದೇ ಆಗಿದೆ. |
ಕುಸುಮಸ್ತಬಕಸ್ಯೇವ ವ್ಯಯೀ ವೃತ್ತಿರ್ಮನಸ್ವಿನಃ | ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ || -ನೀತಿಶತಕ-೩೧ |
ಮಾನವಂತನ ಇರುವುಕೆಯಲ್ಲಿ ಹೂವಿನ ಗುಚ್ಛದಂತೆ ಎರಡು ಪ್ರಕಾರವಾದುದು. ಹೇಗೆಂದರೆ ಎಲ್ಲಾ ಜನರ ತಲೆಯ ಮೇಲೆ ಇರುವುದು ಅಥವಾ ಕಾಡಿನಲ್ಲಿಯೇ ನಶಿಸಿಹೋಗುವುದು. |
ಏಹ್ಯಾಗಚ್ಛ ಸಮಾಶ್ರಯಾಸನಮಿದಂ ಕಸ್ಮಾಚ್ಚಿರಾದ್ದೃಶ್ಯಸೇ | ಕಾ ವಾರ್ತಾ ಹೃತಿದುರ್ಬಲೋsಸಿ ಕುಶಲಂ ಪ್ರೀತೋsಸ್ಮಿ ತೇ ದರ್ಶನಾತ್ || ಏವಂ ಯೇ ಸಮುಪಾಗತಾನ್ಪ್ರಣಯಿನಃ ಪ್ರಹ್ಲಾದಯಂತ್ಯಾದರಾತ್ ||| ತೇಷಾಂ ಯುಕ್ತಮಶಂಕಿತೇನ ಮನಸಾ ಹರ್ಮ್ಯಾಣಿ ಗಂತುಂ ಸದಾ |||| -ಪಂಚತಂತ್ರ,ಮಿತ್ರಸಂಪ್ರಾಪ್ತಿ-೯೭ |
ಹೀಗೆ ಬನ್ನಿ, ಈ ಆಸನದಲ್ಲಿ ಕುಳಿತುಕೊಳ್ಳಿ, ಬಹಳ ದಿನದಿಂದ ಏಕೆ ಕಾಣಲಿಲ್ಲ? ಏನು ಸಮಾಚಾರ? ಬಹಳ ದುರ್ಬಲವಾಗಿದ್ದೀರಲ್ಲ, ಕುಶಲವೇ? ನಿಮ್ಮನ್ನು ಕಂಡು ಬಹಳ ಸಂತೋಷವಾಯಿತು. ಹೀಗೆ ಯಾರು ಬಂದ ಮಿತ್ರರನ್ನು ಆದರದಿಂದ ಬರಮಾಡಿಕೊಂಡು ಸಂತೋಷಗೊಳಿಸುವರೋ ಅಂಥವರ ಮನೆಗೆ ಯಾವ ಸಂದೇಹವೂ ಇಲ್ಲದ ಮನಸ್ಸಿನಿಂದ ಯಾವಾಗಲೂ ಹೋಗುವುದು ಯುಕ್ತ. |
ನಮಂತಿ ಫಲಿತಾ ವೃಕ್ಷಾಃ ನಮಂತಿ ಚ ಬುಧಾಜನಾಃ| ಶುಷ್ಕ ಕಾಷ್ಠಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿಚ || |
ಹಣ್ಣು ಬಿಟ್ಟಿರುವ ಮರಗಳು ಬಾಗುತ್ತವೆ. ಹಾಗೆಯೇ ವಿದ್ವಾಂಸರಾದ ಜನರೂ ಸಹ ಬಾಗಿ ನೆಡೆಯುತ್ತಾರೆ, ಆದರೆ ಒಣಗಿದ ಮರಗಳೂ ಮತ್ತೂ ಮೂರ್ಖರು ಖಂಡಿಸಲ್ಪಡುತ್ತಾರೆಯೇ ಹೊರತು ಬಾಗುವದಿಲ್ಲ. |
ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಂ | ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಂ || |
ಗುಣವಿಲ್ಲದವನ ರೂಪ, ಶೀಲಕಳೆದುಕೊಂಡವನ ಕುಲ, ಕಲಿತ ವಿದ್ಯೆಯಲ್ಲಿ ಸಿದ್ಧಿಪಡೆದುಕೊಳ್ಳದವನ ವಿದ್ಯೆ, ಸಕಲೈಶ್ವರ್ಯವಿದ್ದೂ ಅನುಭವಿಸದವನ ಸಂಪತ್ತು ಇವೆಲ್ಲ ಇದ್ದೂ ಸತ್ತಂತೆ (ಮೃತಸಮಾನ) |
ಸರ್ವಾಃ ಸಂಪತ್ತಯಸ್ತಸ್ಯ ಸಂತುಷ್ಟಂ ಯಸ್ಯ ಮಾನಸಮ್ | ಉಪಾನದ್ಗೂಢಪಾದಸ್ಯ ನನು ಚರ್ಮಾವೃತೇವ ಭೂಃ|| -ಹಿತೋಪದೇಶ, ಮಿತ್ರಲಾಭ ೧೦೯ |
ಯಾರ ಮನಸ್ಸು ತೃಪ್ತಿಯನ್ನು ಹೊಂದಿರುತ್ತದೋ ಅವನಿಗೆ ಎಲ್ಲಾ ಸಂಪತ್ತುಗಳೂ ಉಂಟು. ಪಾದರಕ್ಷೆಗಳನ್ನು ತೊಟ್ಟವನ ಪಾಲಿಗೆ ನೆಲಕ್ಕೆಲ್ಲಾ ಚರ್ಮ ಹಾಸಿದಂತೆ ತಾನೇ! |
ಯಥಾ ಯಮಃ ಪ್ರಿಯದ್ವೇಷ್ಯೌ ಪ್ರಾಪ್ತೇ ಕಾಲೇ ನಿಯಚ್ಚತಿ | ತಥಾ ರಾಜ್ಞಾ ನಿಯಂತವ್ಯಾಃ ಪ್ರಜಾಸದ್ಧಿ ಯಮವ್ರತಂ || -ಮನುಸ್ಮೃತಿ ೯-೩೦೭ |
ಇವರು ಪ್ರೀತಿಪಾತ್ರರು, ಇವರು ಬೇಡವಾದವರು ಎಂಬ ಬೇಧಭಾವವಿಲ್ಲದೇ ಆಯುಷ್ಯ ಮುಗಿದಾಗ ಎಲ್ಲರನ್ನು ಹೇಗೆ ಯಮನು ಸಾಯಿಸುತ್ತಾನೆಯೋ ಹಾಗೆಯೇ ಪಕ್ಷಪಾತವಿಲ್ಲದೇ ಅರಸನು ಎಲ್ಲರನ್ನು ದಂಡಿಸಬೇಕು. ಇದು ಯಮವ್ರತ. |
ಯತ್ ಸ್ಯಾದಹಿಂಸಾಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ | ಅಹಿಂಸಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್ || ಮಹಾಭಾರತ, ಕರ್ಣಪರ್ವ 69-57 |
ಯಾವುದರಲ್ಲಿ ಹಿಂಸೆ ಇಲ್ಲವೋ ಅದು ಧರ್ಮವೆಂಬುದು ನಿಶ್ಚಿತ. ಪ್ರಾಣಿಗಳಿಗೆ ಹಿಂಸೆ ಆಗಬಾರದೆಂದೇ ಧರ್ಮ ಪ್ರವಚನಗಳು ನೆಡೆದಿದೆ. |
ಅಕಾರಣಾವಿಷ್ಕೃತವೈರದಾರುಣಾತ್ ಅಸಜ್ಜನಾತ್ಕಸ್ಯ ಭಯಂ ನ ಜಾಯತೇ | ವಿಷಂ ಮಹಾಹೇರಿವ ಯಸ್ಯ ದುರ್ವಚಃ ಸದುಃಸಹಂ ಸನ್ನಿಹಿತಂ ಸದಾ ಮುಖೆ || -ಕಾದಂಬರೀ |
ಕಾರಣವೇ ಇಲ್ಲದೇ ಹಗೆತನವನ್ನು ತೋರುವ ದುಷ್ಟರನ್ನು ನೋಡಿದರೆ ಯಾರಿಗೆ ತಾನೆ ಭಯವಾಗುವದಿಲ್ಲ.! ಸರ್ಪದ ಬಾಯಿಯಲ್ಲಿ ವಿಷವಿರುವಂತೆ ಇವರ ಬಾಯಿಯಲ್ಲಿ ಯಾವಾಗಲೂ ಸಹಿಸಲಾಗದ ದುಷ್ಟಮಾತುಗಳನ್ನು ಇಟ್ಟುಕೊಂಡಿರುತ್ತಾರೆ. |
ಪೌರೋಹಿತ್ಯಂ ರಜನಿ ಚರಿತಂ ಗ್ರಾಮಣೀತ್ವಂ ನಿಯೋಗೋ |ಮಾಠಾಪತ್ಯಂ ಹ್ಯನೃತವಚನಂ ಸಾಕ್ಷಿವಾದಃ ಪರಾನ್ನಂ || ಬ್ರಹ್ಮದ್ವೇಷಃ ಖಲಜನರತಿಃ ಪ್ರಾಣಿನಾಂ ನಿರ್ದಯತ್ವಂ ||| ಮಾ ಭೂದೇವಂ ಮಮ ಪಶುಪತೇ ಜನ್ಮಜನ್ಮಾಂರೇsಪಿ |||| -ಶಿವಾಪರಾಧಕ್ಷಮಾಪಣಸ್ತೋತ್ರ |
ಪೌರೋಹಿತ್ಯ, ರಾತ್ರಿಸಂಚಾರ, ಗ್ರಾಮಾಧಿಕಾರ, ಪರಸೇವೆ, ಮಠಾಧಿಪತಿಯ ಕೆಲಸ, ಸುಳ್ಳುಹೇಳುವುದು, ಸಾಕ್ಷಿ ಹೇಳುವುದು, ಪರಾನ್ನ, ಬ್ರಾಹ್ಮಣದ್ವೇಷ, ದುರ್ಜನರ ಸ್ನೇಹ, ಪ್ರಾಣಿಗಳಲ್ಲಿ ನಿರ್ದಯೆ ಇವೆಲ್ಲವೂ ಕಷ್ಟಕಾರಕವಾಗಿವೆ.ಹೇ ಪರಮೇಶ್ವರ ನನಗೆ ಇವು ಜನ್ಮಜನ್ಮಾಂತರದಲ್ಲಿಯೂ ಇವು ಪ್ರಾಪ್ತವಾಗದೇ ಇರಲಿ. |
ಸುಭಾಷಿತರಸಾಸ್ವಾದಬದ್ಧರೋಮಾಂಚಕಂಚುಕಾಃ | ವಿನಾಪಿ ಕಾಮಿನೀಸಂಗಂ ಕವಯಃ ಸುಖಮಾಸತೇ || -ಸುಭಾಷಿತರತ್ನಭಾಂಡಾಗಾರ |
ಸುಭಾಷಿತಗಳ ರಸಾನುಭವದಿಂದುಂಟಾದ ರೋಮಾಂಚನದ ಕವಚವನ್ನು ಹೊಂದಿದ ಕವಿಗಳು ಕಾಮಿನಿಯ ಸಂಗವಿಲ್ಲದೇ ಸುಖವನ್ನು ಅನುಭವಿಸುತ್ತಾರೆ. |
ಮಹತಾಂ ಯೋsಪರಾಧ್ಯೇತ ದೂರಸ್ಥೋsಸ್ಮೀತಿ ನಾಶ್ವಸೇತ್ | ದೀರ್ಘೌ ಬುದ್ಧಿಮತೋ ಬಾಹೂ ತಾಭ್ಯಾಂ ಹಿಂಸತಿ ಹಿಂಸಕಮ್ || -ಪಂಚತಂತ್ರ,ಮಿತ್ರಭೇದ-೩೩೧ |
ದೊಡ್ಡವರಲ್ಲಿ ಅಪರಾಧ ಮಾಡಿದವನು ತಾನು ದೂರದಲ್ಲಿದ್ದೇನೆಂದು ಸಮಾಧಾನ ಮಾಡಿಕೊಳ್ಳಬಾರದು. ಬುದ್ಧಿವಂತರ ತೋಳುಗಳು ಬಹಳ ಉದ್ದವಾಗಿವೆ! ಅವುಗಳಿಂದ ಅವನು ಹಿಂಸೆ ಮಾಡಿದವನನ್ನು ಹಿಂಸಿಸುತ್ತಾನೆ. |
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ l ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ll -ನೀತಿಶತಕ-೪೧ |
ಸಂಪತ್ತಿಗೆ ದಾನ, ಭೋಗ, ನಾಶ ಎಂಬ ಮೂರು ಸ್ಥಿತಿಗಳು. ಯಾವನು ಸಂಪತ್ತನ್ನು ದಾನ ಮಾಡುವುದಿಲ್ಲವೊ, ಅಥವಾ ತಾನೂ ಅನುಭವಿಸುವುದಿಲ್ಲವೊ, ಅಂತಹ ಸಂಪತ್ತಿಗೆ ಮೂರನೇ ಸ್ಥಿತಿ (ನಾಶ) ಒದಗಿಬರುತ್ತದೆ. |
ವಿದ್ಯಾವಿನಯೋಪೇತಾ ಹರತಿ ನ ಚೇತಾಂಸಿ ಕಸ್ಯ ಮನುಜಸ್ಯ | ಮಣಿಕಾಂಚನಸಂಯೋಗೋ ಜನಯತಿ ಲೋಕಸ್ಯ ಲೋಚನಾನಂದಮ್|| -ಹರಿಹರಸುಭಾಷಿತ೩-೧೦ |
ವಿನಯದೊಂದಿಗೆ ಸೇರಿದ ವಿದ್ಯೆ ಯಾರ ಮನಸ್ಸನ್ನು ಸೂರೆಗೊಳ್ಳದೇ ಇದ್ದೀತು.? ಬಂಗಾರವೂ ರತ್ನವೂ ಸೇರಿದ ಆಭರಣಗಳು ಲೋಕದಲ್ಲಿ ಜನರ ಕಣ್ಣಿಗೆ ಆನಂದವನ್ನು ನೀಡುತ್ತವೆ. |
ಮಹತಾಂ ಯೋsಪರಾಧ್ಯೇತ ದೂರಸ್ಥೋsಸ್ಮೀತಿ ನಾಶ್ವಸೇತ್ | ದೀರ್ಘೌ ಬುದ್ಧಿಮತೋ ಬಾಹೂ ತಾಭ್ಯಾಂ ಹಿಂಸತಿ ಹಿಂಸಕಮ್ || -ಪಂಚತಂತ್ರ,ಮಿತ್ರಭೇದ-೩೩೧ |
ದೊಡ್ಡವರಲ್ಲಿ ಅಪರಾಧ ಮಾಡಿದವನು ತಾನು ದೂರದಲ್ಲಿದ್ದೇನೆಂದು ಸಮಾಧಾನ ಮಾಡಿಕೊಳ್ಳಬಾರದು. ಬುದ್ಧಿವಂತರ ತೋಳುಗಳು ಬಹಳ ಉದ್ದವಾಗಿವೆ! ಅವುಗಳಿಂದ ಅವನು ಹಿಂಸೆ ಮಾಡಿದವನನ್ನು ಹಿಂಸಿಸುತ್ತಾನೆ. |
ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ | ಧ್ರುವಾಣಿ ಮನ್ಯತೇ ಮೋಹಾತ್ ಗೃಹಕ್ಷೇತ್ರವಸೂನಿ ಚ || -ಭಾಗವತ ೩-೩೦-೩ |
ವಿವೇಕವಿಲ್ಲದ ಮನುಷ್ಯನು ಅಶಾಶ್ವತವಾದ ಮತ್ತು ಅನೇಕ ಬಂಧನದಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ ಭೂಮಿ ಹಣ ಮೊದಲಾದವುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ. |
ಬಂಧುಸ್ತ್ರೀಭೃತ್ಯವರ್ಗಸ್ಯ ಬುದ್ಧೇಃ ಸತ್ವಸ್ಯ ಚಾತ್ಮನಃ | ಆಪನ್ನಿಕಷಪಾಷಾಣೇ ನರೋ ಜಾನಾತಿ ಸಾರತಾಮ್ || -ಹಿತೋಪದೇಶ ಸುಹೃದ್ಭೇದ-೭೨ |
ನೆಂಟರು,ಸ್ತ್ರೀಯರು,ಸೇವಕರು,ಬುದ್ಧಿಯ ಮತ್ತು ಧೈರ್ಯದ ಯೋಗ್ಯತೆಯನ್ನು ಮನುಷ್ಯನು ಆಪತ್ತಿನ ಸಮಯದಲ್ಲಿ ಓರೆಗಲ್ಲಿನಲ್ಲಿ ಹಚ್ಚಿ ತಿಳಿಯುತ್ತಾನೆ. |
ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ | ಸ್ಪುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ || ಪಂಚತಂತ್ರ ಕಾಕೋಲೂಕೀಯ-೧೧೯ |
ಅನೇಕರೊಡನೆ ವಿರೋಧ ಸಲ್ಲದು. ಮಹಾಜನರನ್ನು ಗೆಲ್ಲುವುದು ಕಷ್ಟ. ಕೆರಳಿ ಏಳುವ ಸರ್ಪವನ್ನೂ ಒಟ್ಟಾಗಿರುವ ಇರುವೆಗಳು ತಿಂದುಹಾಕುತ್ತವೆ. |
ಸುಮಹಾಂತ್ಯಪಿ ಶಾಸ್ತ್ರಾಣಿ ಧಾರಯಂತೋ ಬಹುಶ್ರುತಾಃ | ಛೇತ್ತಾರಃ ಸಂಶಯಾನಾಂ ಚ ಕ್ಲಿಶ್ಯಂತೇ ಲೋಭಮೋಹಿತಾಃ || ಹಿತೋಪದೇಶ,ಮಿತ್ರಲಾಭ-೭೦ |
ಕಠಿಣವಾದ ಶಾಸ್ತ್ರದ ಜ್ಞಾನವನ್ನು ಹೊಂದಿದವರು, ಬಹಳಷ್ಟು ವಿಚಾರಗಳನ್ನು ಕೇಳಿತಿಳಿದುಕೊಂಡವರು, ಇತರರ ಸಂಶಯಗಳನ್ನು ನಿವಾರಿಸುವ ಸಮರ್ಥರೂ ಸಹ ಲೋಭದ ಮೋಹಕ್ಕೊಳಗಾಗಿ ಕಷ್ಟಪಡುತ್ತಾರೆ. |
ಶಕ್ಯೋ ವಾರಯಿತುಂ ಜಲೇನ ಹುತಭುಕ್ ಛತ್ರೇಣ ಸೂರ್ಯಾತಪೋ | ನಾಗೇಂದ್ರೋ ನಿಶಿತಾಂಕುಶೇನ ಸಮದೌ ದಂಡೇನ ಗೋಗರ್ದಭೌ || ವ್ಯಾಧಿರ್ಭೇಷಜಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ ||| ಸರ್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಮ್ |||| -ನೀತಿಶತಕ -೯ |
ನೀರಿನಿಂದ ಬೆಂಕಿಯನ್ನು, ಛತ್ರಿಯಿಂದ ಬಿಸಿಲನ್ನು, ಹರಿತವಾದ ಅಂಕುಶದಿಂದ ಮದಿಸಿದ ಮದ್ದಾನೆಯನ್ನು, ಕೋಲಿನಿಂದ ದನ,ಕತ್ತೆಗಳನ್ನು, ಔಷಧಿಗಳ ಸಂಗ್ರಹದಿಂದ ರೋಗಗಳನ್ನು, ನಾನಾಬಗೆಯ ಮಂತ್ರಪ್ರಯೋಗಗಳಿಂದ ವಿಷವನ್ನು ನಿವಾರಿಸಲು ಸಾಧ್ಯ. ಅ ಆದರೆ ಮೂರ್ಖನಿಗೆ ಯಾವುದೇ ಔಷಧವಿಲ್ಲ. |
ಯಶೋsಧಿಗಂತುಂ ಸುಖಲಿಪ್ಸಯಾವಾ ಮನುಷ್ಯಸಂಖ್ಯಾಮತಿವರ್ತಿತುಂ ವಾ | ನಿರುತ್ಸಾಕಾನಾಮಭಿಯೋಗಭಾಜಾಂ ಸಮುತ್ಸುಕೇವಾಂಕಮುಪೈತಿ ಸಿದ್ಧಿಃ || ಕಿರಾತಾರ್ಜುನೀಯ ೩-೪೦ |
ದುಃಖಚಿಂತೆಗಳನ್ನು ಗೆದ್ದು ಪ್ರಯತ್ನಶೀಲರಾಗಿ ಕೀರ್ತಿಯನ್ನು ಹೊಂದಲು, ಸುಖವನ್ನು ಪಡೆಯಲು, ಸಾಮಾನ್ಯರ ಮಟ್ಟವನ್ನು ಮೀರಲು ಹಠತೊಟ್ಟವರಿಗೆ ಸಿದ್ಧಿಯು ತಾನಾಗಿಯೇ ಕುತೂಹಲದಿಂದ ಹತ್ತಿರಕ್ಕೆ ಬರುತ್ತದೆ. |
ಯಶೋsಧಿಗಂತುಂ ಸುಖಲಿಪ್ಸಯಾವಾ ಮನುಷ್ಯಸಂಖ್ಯಾಮತಿವರ್ತಿತುಂ ವಾ | ನಿರುತ್ಸಾಕಾನಾಮಭಿಯೋಗಭಾಜಾಂ ಸಮುತ್ಸುಕೇವಾಂಕಮುಪೈತಿ ಸಿದ್ಧಿಃ || ಕಿರಾತಾರ್ಜುನೀಯ ೩-೪೦ |
ದುಃಖಚಿಂತೆಗಳನ್ನು ಗೆದ್ದು ಪ್ರಯತ್ನಶೀಲರಾಗಿ ಕೀರ್ತಿಯನ್ನು ಹೊಂದಲು, ಸುಖವನ್ನು ಪಡೆಯಲು, ಸಾಮಾನ್ಯರ ಮಟ್ಟವನ್ನು ಮೀರಲು ಹಠತೊಟ್ಟವರಿಗೆ ಸಿದ್ಧಿಯು ತಾನಾಗಿಯೇ ಕುತೂಹಲದಿಂದ ಹತ್ತಿರಕ್ಕೆ ಬರುತ್ತದೆ. |
ಯದಿ ನಿತ್ಯಮನಿತ್ಯೇನ ನಿರ್ಮಲಂ ಮಲವಾಹಿನಾ | ಯಶಃ ಕಾಯೇನ ಲಭ್ಯೇತ ನನು ಲಬ್ಧಂ ಭವೇನ್ನಕಿಮ್ || ಹಿತೋಪದೇಶ, ಮಿತ್ರಲಾಭ -೩೫ |
ಅಶಾಶ್ವತವಾದ ಕಶ್ಮಲಯುಕ್ತವಾದ ಶರೀರದಿಂದ ಶಾಶ್ವತವಾದ ನಿರ್ಮಲವಾದ ಯಶಸ್ಸು ಸಿಗುವುದಾದಲ್ಲಿ ಏನುನ್ನು ತಾನೆ ಪಡೆದಂತಾಗಲಿಲ್ಲ..? |
ಯಥಾ ಯಥಾ ನರೋsಧರ್ಮಂ ಸ್ವಯಂ ಕೃತ್ವಾನುಭಾಷತೇ | ತಥಾ ತಥಾ ತ್ವಚೇವಾಹಿಸ್ತೇನಾಧರ್ಮೇಣ ಮುಚ್ಯತೇ || ಮನುಸೃತಿ ೧೧-೨೨೮ |
ಮನುಷ್ಯನು ತಾನು ಮಾಡಿದ ಅಧರ್ಮಗಳನ್ನು ಸ್ವತಃ ಅರಿತು ಪ್ರಕಟವಾಗಿ ಹೇಳಿದಂತೆಲ್ಲಾ ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ ಅಧರ್ಮದ ಪಾಪದಿಂದ ಬಿಡುಗಡೆ ಹೊಂದುತ್ತಾನೆ. |
ಶಾಠ್ಯೇನ ಮಿತ್ರಂ ಕಪಟೇನ ಧರ್ಮಂ ಪರೋಪತಾಪೇನ ಸಮೃದ್ಧಭಾವಮ್| ಸುಖೇನ ವಿದ್ಯಾಂ ಪರುಷೇಣ ನಾರೀಂ ವಾಂಛಂತಿ ಯೇ ನೂನಮಪಂಡಿತಾಸ್ತೇ|| |
ಮೋಸದಿಂದ ಸ್ನೇಹಿತನನ್ನು, ವಂಚನೆಯಿಂದ ಧರ್ಮವನ್ನೂ, ಇತರರಿಗೆ ಹಿಂಸೆಕೊಡುವದರಿಂದ ಸಮೃದ್ಧಿಯನ್ನು, ಸುಖದಿಂದ ವಿದ್ಯೆಯನ್ನೂ,ಒರಟುತನದಿಂದ ಹೆಂಗಸರನ್ನು ಯಾರು ಪಡೆಯಲು ಬಯಸುವರೋ ಅವರು ನಿಜವಾಗಿ ಪಂಡಿತರಲ್ಲ (ಅವಿವೇಕಿಗಳು) (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಆಯುರ್ವರ್ಷತಂ ನೃಣಾಂ ಪರಿಮಿತಂ ರಾತ್ರೌತದರ್ಧಂ ಗತಂಮ್| ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವವೃದ್ಧತ್ವಯೋಃ || ಶೇಷಂ ವ್ಯಾಧಿವಿಯೋಗದುಃಖಭರಿತಂ ಸೇವಾದಿಭಿರ್ನೀಯತೇ ||| ಜೀವೇ ವಾರಿತರಂಗಚಂಚಲತರೇ ಸೌಖ್ಯಂ ಕುತಃ ಪ್ರಾಣಿನಾಮ್ |||| ವೈರಾಗ್ಯಶತಕ-೧೦೬ |
ಮನುಷ್ಯರ ಅಯುಷ್ಯದ ಪರಿಮಿತಿ ಸುಮಾರು ಒಂದು ನೂರು ವರ್ಷಗಳು. ಅದರಲ್ಲಿ ಅರ್ಧದಷ್ಟು ರಾತ್ರಿಯಲ್ಲಿ ಕಳೆದುಹೋಗುತ್ತದೆ. ಉಳಿದ ಅರ್ಧದಲ್ಲಿ ಅರ್ಧ ಬಾಲ್ಯ ಹಾಗೂ ವೃದ್ಧಾಪ್ಯದಲ್ಲಿ ಕಳೆದುಹೋಗುತ್ತದೆ. ಇನ್ನುಳಿದದ್ದು ರೋಗ,ವಿರಹ,ದುಃಖ, ಸೇವೆ ಮೊದಲಾದವುಗಳಿಂದ ಕಳೆಯುತ್ತದೆ.ನೀರಿನ ಅಲೆಗಳಿಗಿಂತಲೂ ಚಂಚಲವಾದ ಈ ಜೀವನದಲ್ಲಿ ಪ್ರಾಣಿಗಳಿಗೆ ಸುಖವೆಲ್ಲಿಯದು? (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಆಮ್ರಂ ಛಿತ್ವಾ ಕುಠಾರೇಣ ನಿಂಬಂ ಪರಿಚರೇತ್ತು ಯಃ| ಯಶ್ಚೈವಂ ಪಯಸಾ ಸಿಂಚೇತ್ ನೈವಾಸ್ಯ ಮಧುರೋ ಭವೇತ್|| ರಾಮಾಯಣ- ಅಯೋದ್ಯಾಕಾಂಡ |
ಮಾವಿನ ಮರವನ್ನು ಕೊಡಲಿಯಿಂದ ಕಡಿದು ಬೇವಿನಗಿಡಕ್ಕೆ ಹಾಲೆರೆದು ಉಪಚಾರ ಮಾಡಿದರೆ ಅದು ಎಂದಿಗೂ ಸಿಹಿಯಾಗಲಾರದು |
ಶುಭಂ ವಾಪ್ಯಶುಭಂ ಕರ್ಮ ಫಲಕಾಲಮಪೇಕ್ಷತೇ | ಶರದ್ಯೇವ ಫಲತ್ಯಾಶು ಶಾಲಿರ್ನ ಸುರಭೌ ಕ್ವಚಿತ್ || ಸುಭಾಷಿತರತ್ನಭಾಂಡಾಗಾರ |
ಒಳ್ಳೆಯ ಕರ್ಮವಾಗಲೀ ಕೆಟ್ಟ ಕರ್ಮವಾಗಲಿ ಫಲಕೊಡುವ ಕಾಲಕ್ಕಾಗಿ ಕಾಯುತ್ತದೆ. ಭತ್ತವು ಶರತ್ಕಾಲದಲ್ಲಿ ಬೇಗ ಫಲಿಸುತ್ತದೆ. ವಸಂತದಲ್ಲಲ್ಲ. |
ಅರ್ಥಾಗಮೋ ನಿತ್ಯಮರೋಗಿತಾಚ ಪ್ರಿಯಾ ಚ ಭಾರ್ಯಾ ಪ್ರಿಯವಾದಿನೀ ಚ | ವಶ್ಯಶ್ಚ ಪುತ್ರೋsರ್ಥಕರೀ ಚ ವಿದ್ಯಾ ಷಡ್ ಜೀವಲೋಕಸ್ಯ ಸುಖಾನಿ ರಾಜನ್ || |
ಎಲೈ ರಾಜನೇ, ಧನಪ್ರಾಪ್ತಿ, ಉತ್ತಮವಾದ ಆರೋಗ್ಯ, ಪ್ರಿಯಳಾದ, ಮನಸ್ಸನ್ನ ಮುದಗೊಳಿಸುವಂತೆ ಪ್ರಯ ಮಾತನ್ನಾಡುವ ಮಡದಿ, ವಿನೀತನಾದ ಮಗ, ಧನಾರ್ಜನೆಗೆ ಉಪಯುಕ್ತವಾದ ವಿದ್ಯೆ ಇವು ಆರು ಜನತೆಗೆ ಸುಖಕರವಾದವು |
ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ ರಜ್ಜುಚ್ಛೇದೇ ಕೇ ಘಟಂ ಧಾರಯಂತಿ | ಏವಂ ಲೋಕಸ್ತುಲ್ಯಧರ್ಮೋ ವನಾನಾಂ ಕಾಲೇಕಾಲೇ ಛಿದ್ಯತೇ ರುಹ್ಯತೇ ಚ || -ಸ್ವಪ್ನವಾಸವದತ್ತ ೬-೧೦ |
ಸಾವು ಬಂದಾಗ ಯಾರು ಯಾರನ್ನೂ ಕಾಪಾಡಲು ಸಾಧ್ಯವಿಲ್ಲ. ಬಾವಿಯಲ್ಲಿ ತುಂಬಿದಕೊಡ ಮೇಲಕ್ಕೆತ್ತುತ್ತಿರುವಾಗ ಹಗ್ಗವು ತುಂಡಾದರೆ ಕೊಡವನ್ನು ಹಿಡಿಯಲು ಸಾಧ್ಯವೇ? ಈ ಲೋಕವೂ ಅರಣ್ಯವೂ ಈ ವಿಷಯದಲ್ಲಿ ಸಮಾನವಾಗಿದೆ. ಆಯಾಕಾಲದಲ್ಲಿ ಜನನ- ಮರಗಳು ಆಗುತ್ತಿರುತ್ತದೆ. ಕಾಡಿನಲ್ಲಿ ದೊಡ್ಡ ಮರಗಳನ್ನು ಕಡಿಯುತ್ತಿರುತ್ತಾರೆ. ಹೊಸ ಚಿಗುರು ಬೆಳೆಯುತ್ತಿರುತ್ತದೆ. |
ಮಹಾಜನಸ್ಯ ಸಂಸರ್ಗಃ ಕಸ್ಯ ನೋನ್ನತಿಕಾರಕಃ l ಪದ್ಮಪತ್ರಸ್ಥಿತಂ ತೋಯಂ ಧತ್ತೇ ಮುಕ್ತಾಫಲಶ್ರಿಯಮ್ ॥ |
ನೀರಲ್ಲೆ ಇರುವ ತಾವರೆಯ ಎಲೆಯ ಮೇಲೆ ಬಿದ್ದ ನೀರ ಹನಿ ಮುತ್ತಿನಂತೆ ಹೊಳೆಯುವ ಹಾಗೆ , ಯಾರಿಗೆ ಉತ್ತಮರ ಸಂಗ ಅನುಕೂಲಕಾರಿಯಲ್ಲ? ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ |
ಸುಖಮಧ್ಯೇ ಸ್ಥಿತಂ ದುಃಖಂ ದುಃಖಮಧ್ಯೇ ಸ್ಥಿತಂ ಸುಖಂ| ದ್ವಯಮನ್ಯೋನ್ಯ ಸಂಯುಕ್ತಂ ಪ್ರೋಚ್ಯತೇ ಜಲಪಂಕವತ್|| - ಸಮಯೋಚಿತಪದ್ಯಮಾಲಿಕಾ |
ಸುಖದ ನಡುವೆ ದುಃಖವೂ, ದುಃಖದ ನಡುವೆ ಸುಖವೂ ಇವೆ. ನೀರು ಕೆಸರುಗಳಂತೆ ಒಂದನ್ನೊಂದು ಸೇರಿಕೊಂಡೇ ಇರುತ್ತವೆ. |
ವರಮೇಕೋ ಗುಣೀ ಪುತ್ರೋ, ನ ಚ ಮೂರ್ಖ ಶತಾನ್ಯಪಿ | ಏಕಶ್ಚಂದ್ರಸ್ತಮೋ ಹಂತಿ , ನ ಚ ತಾರಾಗಣೋsಪಿ ಚ || |
ನೂರು ಜನ ಮೂರ್ಖ ಮಕ್ಕಳಿಗಿಂತ ,ಸದ್ಗುಣಿಯಾದ ಒಬ್ಬ ಮಗನಿದ್ದರೆ ಸಾಕು. ಕುಲಕ್ಕೆ ಕೀರ್ತಿ ತರಬಲ್ಲನು. ನಕ್ಷತ್ರಗಳ ಗುಂಪಿದ್ದರೂ ಕತ್ತಲೆ ನಿವಾರಣೆಯಾಗದು. ಒಬ್ಬ ಚಂದ್ರನಿದ್ದರೆ ಸಾಕು ಭೂ ನಭೋ ಮಂಡಲಗಳೆರಡೂ ಬೆಳಗುವುದು. |
ಪಾದೋsಧರ್ಮಸ್ಯ ಕರ್ತಾರಂ ಪಾದಃ ಸಾಕ್ಷಿಣಮೃಚ್ಛತಿ | ಪಾದಃ ಸಭಾಸದಃ ಸರ್ವಾನ್ ಪಾದೋ ರಾಜಾನಮೃಚ್ಛತಿ || |
ಸಭೆಯೊಂದರಲ್ಲಿ ಅಧರ್ಮ ನಡೆದು ಅದನ್ನು ಯಾರೂ ವಿರೋಧಿಸದೇ ಇದ್ದರೆ ಅಧರ್ಮದ ಕಾಲುಭಾಗ ಮಾಡಿದವನಿಗೂ, ಕಾಲುಭಾಗ ಸಾಕ್ಷಿಗೂ, ಕಾಲುಭಾಗ ಎಲ್ಲಾ ಸಭ್ಯರಿಗೂ, ಕಾಲುಭಾಗ ಅರಸನಿಗೂ ಸಲ್ಲುತ್ತದೆ. |
ಸಂಪದಾ ಸಂಪರಿಷ್ವಕ್ತೋ ವಿದ್ಯಯಾ ಚಾನವದ್ಯಯಾ| ನರೋ ನ ಶೋಭತೇ ಲೋಕೇ ಹರಿಭಕ್ತಿರಸಂ ವಿನಾ || |
ಸಂಪತ್ತು, ಶ್ರೇಷ್ಠವಾದ ವಿದ್ಯೆ ಇವು ತುಂಬಿದ್ದರೂ ಸಹ ಹರಿಭಕ್ತಿರಸವಿಲ್ಲದಿದ್ದರೆ ಮನುಷ್ಯನು ಜಗತ್ತಿನಲ್ಲಿ ಶೋಭಿಸುವುದಿಲ್ಲ. (ಸಂಗ್ರಹ : ಸ್ವರ್ಣವಲ್ಲೀ ಭಕ್ತವೃಂದ) |
ನ ಸ್ಪಲ್ಪಸ್ಯ ಕೃತೇ ಭೂರಿ ನಾಶಯೇನ್ಮತಿಮಾನ್ ನರಃ | ಏತದೇವಾತ್ರಪಾಂಡಿತ್ಯಂ ಯತ್ಸ್ವಲ್ಪಾದ್ಭೂರಿರಕ್ಷಣಂ || -ಪಂಚತಂತ್ರ ಮಿತ್ರಭೇದ -೧೩೫ |
ಬುದ್ಧಿವಂತನಾದ ಮನುಷ್ಯನು ಅಲ್ಪ ಪ್ರಯೋಜನಕ್ಕಾಗಿ ಬಹುವನ್ನು ಕಳೆದುಕೊಳ್ಳಬಾರದು. ಅಲ್ಪವನ್ನು ಬಿಟ್ಟುಕೊಟ್ಟು ಬಹುವಾದುದನ್ನು ಕಾಪಾಡಿಕೊಳ್ಳುವುದೇ ಇಲ್ಲಿ ಪಾಂಡಿತ್ಯ. |
ಶತ್ರುಪಕ್ಷಂ ಸಮೃದ್ಯಂತಂ ಯೋ ಮೋಹಾತ್ ಸಮುಪೇಕ್ಷತೇ | ವ್ಯಾಧಿರಾಪ್ಯಾಯಿತ ಇವ ತಸ್ಯ ಮೂಲಮ ಛಿನತ್ತಿ ಸಃ || -ಮಹಾಭಾರತ ಸಭಾಪರ್ವ ೫೫-೧೬ |
ಬೆಳೆಯುತ್ತಿರುವ ಶತ್ರುಪಕ್ಷವನ್ನು ಯಾರು ಮೋಹದಿಂದ ಉಪೇಕ್ಷಿಸುತ್ತಾನೋ ಬೆಳೆದ ರೋಗದಂತೆ ಅವನ ಮೂಲವನ್ನೇ ಕತ್ತರಿಸುತ್ತದೆ.(ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪಾದಾಹತೋsಪಿ ದೃಢದಂಡಸಮಾಹೋsಪಿ ಯಂ ದಂಷ್ಟ್ರಯಾ ಸ್ಪೃಶತಿ ತಂ ಕಿಲ ಹಂತಿ ಸರ್ಪಃ | ಕೋಪ್ಯೇಷ ಏವ ಪಿಶುನೋಗ್ರಮನುಷ್ಯಧರ್ಮಃ ಕರ್ಣೇ ಪರಂ ಸ್ಪೃಶತಿ ಹಂತಿ ಪರಂ ಸಮೂಲಮ್ || -ಪಂಚತಂತ್ರ ಮಿತ್ರಭೇದ -೩೨೮ |
ಕಾಲಿನಿಂದ ತುಳಿದರು, ಕೋಲಿನಿಂದ ಹೊಡೆದರೂ ಹಾವು ಯಾರನ್ನು ತನ್ನ ಹಲ್ಲಿನಿಂದ ಕಚ್ಚುವುದೋ ಅವನನ್ನೇ ಕೊಲ್ಲುತ್ತದೆ. ಆದರೆ ಚಾಡಿಹೇಳುವ ಕೆಟ್ಟಮನುಷ್ಯರ ಧರ್ಮವಾದರೋ ವಿಚಿತ್ರವಾಗಿದೆ! ಅವನು ಒಬ್ಬನ ಕಿವಿ ಕಚ್ಚುತ್ತಾನೆ ಇನ್ನೊಬ್ಬನನ್ನು ಬುಡಸಹಿತ ನಾಶಪಡಿಸುತ್ತಾನೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪುಸ್ತಕಸ್ಥಾತು ಯಾ ವಿದ್ಯಾ ಪರಹಸ್ತ ಗತಂ ಧನಂ | ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ || -ಚಾಣಕ್ಯನೀತಿ |
ಪುಸ್ತಕದಲ್ಲಿರುವ ವಿದ್ಯೆ, ಬೇರೆಯವರ ಕೈಗೆ ಕೊಟ್ಟ ಸಂಪತ್ತು ( ಹಣ). ಇವೆರೆಡೂ ಅವಷ್ಯಕತೆ ಇರುವಾಗ ಲಭ್ಯವಿಲ್ಲವಾದರೆ ಅಂಥ ವಿದ್ಯೆ, ಸಂಪತ್ತು ಇದ್ದು ಏನು ಪ್ರಯೋಜನ. ಅದು ವಿದ್ಯೆಯೂ ಅಲ್ಲ. ಸಂಪತ್ತೂ ಅಲ್ಲ (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ವೃಥಾ ವೈರಂ ವಿವಾದಂಚ ನ ಚ ಕುರ್ಯಾತ್ ಕೇನಚಿತ್ಸಹ| ಅರ್ಥಾಭಾವೇsಪಿ ತತ್ ಪುಂಸಾಂ ಅನರ್ಥಾ ಏವ ಕಲ್ಪತೇ|| |
ವಿನಾಕಾರಣ ವೈರತ್ವ ಕಟ್ಟಿಕೊಳ್ಳುವದಾಗಲೀ, ವ್ಯರ್ಥ ವಾದದಲ್ಲಿ ತೊಡಗುವದಾಗಲೀ ಎಂದೂ ಮಾಡಬಾರದು. ಏಕೆಂದರೆ ಅದರಿಂದ ಲಾಭವೇನೂ ಇಲ್ಲ. ಆದರೆ ಅದರಿಂದಾಗುವ ಅನರ್ಥ ತಪ್ಪಿದ್ದಲ್ಲ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಮನಃಪ್ರೀತಿಕರಃ ಸ್ವರ್ಗಃ ನರಕಸ್ತದ್ವಿಪರ್ಯಯಃ| ನರಕಸ್ವರ್ಗಸಂಜ್ಞೇ ವೈ ಪಾಪಪುಣ್ಯೇ ದ್ವಿಜೋತ್ತಮ|| |
ಮನಸ್ಸಿಗೆ ಆನಂದ ಉಂಟುಮಾಡುವದೇ ಸ್ವರ್ಗ. ದುಃಖವೇ ನರಕ. ನರಕ ಸ್ವರ್ಗಗಳಿಗೆ ಪಾಪ ಪುಣ್ಯವೆಂದು ಹೆಸರು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಘರ್ಮಾರ್ತಂ ನ ತಥಾ ಸುಶೀತಲಜಲೈಃ ಸ್ನಾನಂ ನ ಮುಕ್ತಾವಲೀ | ನ ಶ್ರೀಖಂಡ ವಿಲೇಪನಂ ಸುಖಯತಿ ಪ್ರತ್ಯಂಗಮಪ್ಯರ್ಪಿತಂ || ಪ್ರೀತ್ಯೈ ಸಜ್ಜನಭಾಷಿತಂ ಪ್ರಭವತೀ ಪ್ರಾಯೋ ಯಥಾ ದೇಹಿನಾಂ ||| ಸದ್ಯುಕ್ತ್ಯಾ ಚ ಪುರಸ್ಕೃತಂ ಸುಕೃತಿನಾಮಾಕೃಷ್ಟಿಮಂತ್ರೋಪಮಮ್ |||| ಹಿತೋಪದೇಶ ಮಿತ್ರಲಾಭ -೭೧ |
ಎಲ್ಲರನ್ನೂ ಆಕರ್ಷಿಸುವ, ಒಳ್ಳೆಯ ಯುಕ್ತಿಗಳಿಂದ ಕೂಡಿರುವ, ಮಂತ್ರಸಮಾನವೂ ಆದ ಪುಣ್ಯವಂತರಾದ ಸಜ್ಜನರ ಮಾತುಗಳು ಮನುಷ್ಯರಲ್ಲಿ ಹೇಗೆ ಪ್ರೀತಿಯನ್ನುಂಟುಮಾಡುತ್ತವೆಯೋ ಹಾಗೆ ಬೇಗೆಗೊಳಗಾದವನನ್ನು ತಂಪಾದ ನೀರಿನ ಸ್ನಾನವಾಗಲೀ, ಮುತ್ತುಗಳ ಹಾರವಾಗಲೀ ದೇಹದ ಸರ್ವಾಂಗಗಳಿಗೆ ಲೇಪಿಸಿದ ಶ್ರೀಗಂಧವಾಗಲೀ ಸುಖವನ್ನುಂಟು ಮಾಡುವದಿಲ್ಲ.(ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಯೋ ನ ವೇತ್ತಿ ಗುಣಾನ್ಯಸ್ಯ ನ ತಂ ಸೇವೇತ ಪಂಡಿತಃ | ನ ಹಿ ತಸ್ಮಾತ್ಫಲಂ ಕಿಂಚಿತ್ಸುಕೃಷ್ಣಾದೂಷರಾದಿವ || -ಪಂಚತಂತ್ರ ಮಿತ್ರಭೇದ -೨೮೧ |
ಪಂಡಿತನಾದವನು ತನ್ನ ಗುಣವನ್ನು ಅರಿಯಲಾರದವನನ್ನು ಸೇವಿಸಬಾರದು. ಮರುಭೂಮಿಯಲ್ಲಿ ಚೆನ್ನಾಗಿ ಉಳುಮೆ ಮಾಡಿದರೆ ಪ್ರಯೋನವಾಗುವದಿಲ್ಲವೋ ಅವನೂ ಹಾಗೆಯೇ..(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಏಕಃ ಸಂಪನ್ನಮಶ್ನಾತಿ ವಸ್ತೇ ವಾಸಶ್ಚ ಶೋಭನಂ | ಯೋsಸಂವಿಭಜ್ಯ ಭೃತ್ಯೇಭ್ಯಃ ಕೋ ನೃಶಂಸತರಸ್ತತಃ || -ಮಹಾಭಾರತ ಉ ೩-೪೧ |
ಯಾರು ಆಶ್ರಿತರಿಗೆ ಏನನ್ನು ಕೊಡದೆ ತಾನೊಬ್ಬನೇ ಮೃಷ್ಟಾನ್ನವನ್ನು ತಿನ್ನುವನೋ, ಒಳ್ಳೆಯ ಬಟ್ಟೆಯನ್ನು ಉಡುವನೋ ಅವನಿನಿಂತನೂ ಪಾಪಿಯಾರು? (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಆಯುಕ್ತಚಾರಂ ದುರ್ದರ್ಶಮಸ್ವಾಧೀನಂ ನರಾಧಿಪಂ | ವರ್ಜಯಂತಿ ನರಾ ದೂರಾನ್ನದೀಪಂಕಮಿವ ದ್ವೀಪಾಃ || -ರಾಮಾಯಣ ಅರಣ್ಯಕಾಂಡ೩೩-೫ |
ಯಾವ ರಾಜನು ಗೂಢಾಚಾರರನ್ನು ನೇಮಿಸಿಕೊಂಡಿಲ್ಲವೋ, ಸಕಾಲದಲ್ಲಿ ಪ್ರಜೆಗಳಿಗೆ ದರ್ಶನ ನೀಡುವದಿಲ್ಲವೋ, ಕಂಡಕಂಡವರ ಮಾತಿಗೆ ಕಟ್ಟುಬಿದ್ದು ಪರಾಧೀನನಾಗಿ ವರ್ತಿಸುವನೋ ಅವನನ್ನು ಪ್ರಜೆಗಳು ಆನೆಯು ನದಿಯ ಕೆಸರನ್ನು ವರ್ಜಿಸುವಂತೆ ದೂರವಿಡುತ್ತಾರೆ. (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪಾದಾಹತಂ ಯದುತ್ಥಾಯ ಮೂರ್ಧಾನಮಧಿರೋಹತಿ | ಸ್ವಸ್ಥಾದೇವಾಪಮಾನೇsಪಿ ದೇಹಿನಸ್ತದ್ವರಂ ರಜಃ || -ಶಿಶುಪಾಲವಧ ೨-೪೬ |
ಧೂಳೂಸಹ ಕಾಲಿನಿಂದ ತುಳಿದ ತಕ್ಷಣ ತನ್ನ ಜಾಗದಿಂದ ಹಾರಿ ತುಳಿದವನ ತಲೆಯಮೇಲೆ ಎರಗುತ್ತದೆ. ಅಪಮಾನವಾದರೂ ಸುಮ್ಮನಿರುವ ಮಾನವರಿಗಿಂತ ಆ ಧೂಳೇ ಲೇಸು.(ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಬೃಹತ್ಸಹಾಯಃ ಕಾರ್ಯಾಂತಂ ಕ್ಷೋದೀಯಾನಪಿ ಗಚ್ಛತಿ | ಸಂಭೂಯಾಂಭೋಧಿಮಭ್ಯೇತಿ ಮಹಾನದ್ಯಾ ನಗಾಪಗಾ || -ಶಿಶುಪಾಲವಧ ೧೬-೨೨ |
ಎಷ್ಟೇ ಸಣ್ಣವನಾಗಿದ್ದರೂ, ಬಲಹೀನನಾಗಿದ್ದರೂ, ದೊಡ್ಡವರ ಸಹಾಯವಿದ್ದರೆ ಕೆಲಸವನ್ನು ಪೂರ್ತಿಗೊಳಿಸಬಲ್ಲ. ಬೆಟ್ಟದ ಮೇಲಿನ ಸಣ್ಣ ಝರಿಯೂ ಸಹ ಮಹಾನದಿಯೊಡನೆ ಸೇರಿ ಸಮುದ್ರವನ್ನು ಸೇರಬಲ್ಲದು. (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪರಚ್ಛಿದ್ರೇಷು ಹೃದಯಂ ಪರವಾರ್ತಾಸು ಚ ಶ್ರವಃ| ಪರಮರ್ಮಣಿ ವಾಚಂ ಚ ಖಲಾನಾಮಸೃಜದ್ವಿಧಿಃ|| |
ಇನ್ನೊಬ್ಬರ ದೋಷವನ್ನು ಹುಡುಕುವದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. |
ಅಂತಸ್ಸಾರೈರಕುಟಿಲೈರಚ್ಛಿದ್ರೈ ಸುಪರೀಕ್ಷಿತೈಃ | ಮಂತ್ರಿಭಿರ್ಧಾರ್ಯತೇ ರಾಜ್ಯಂ ಸುಸ್ತಂಬೈರಿವ ಮಂದಿರಮ್ || ಪಂಚತಂತ್ರ ಮಿತ್ರಭೇದ ೧೩೭ |
ಒಳಗೆ ಗಟ್ಟಿಯಾಗಿ, ನೇರವಾಗಿದ್ದು, ಒಡಕುಗಳಿಲ್ಲದ, ಚೆನ್ನಾಗಿ ಪರೀಕ್ಷಿಸಲ್ಪಟ್ಟ ಒಳ್ಳೆಯ ಕಂಬಗಳು ಕಟ್ಟಡದ ಭಾರವನ್ನು ಹೊರುವಂತೆ, ಅಂತಸ್ಸತ್ವನ್ನು ಹೊಂದಿರುವ ವಕ್ರವಲ್ಲದವರೂ ಮೋಸಗಾರರಲ್ಲದ ಚೆನ್ನಾಗಿ ಪರೀಕ್ಷಿಸಲ್ಪಟ್ಟ ಜನರು ಮಂತ್ರಿಗಳಾದಾಗ ಅವರು ರಾಜ್ಯದ ಭಾರವನ್ನು ನಿರ್ವಹಿಸುತ್ತಾರೆ. (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಶ್ರೋತ್ರಂ ಶ್ರುತೇನೈವ ನ ಕುಂಡಲೇನ ದಾನೇನ ಪಾಣಿರ್ನ ತು ಕಂಕಣೇನ || ವಿಭಾತಿ ಕಾಯಃ ಕರುಣಾಪರಾಣಾಮ್ ಪರೋಪಕಾರೈರ್ನ ತು ಚಂದನೇನ || - ನೀತಿಶತಕ-೬೯ |
ಕಿವಿಯು ಶೋಭಿಪುದು ಶಾಸ್ತ್ರಗಳ ಶ್ರವಣದಿಂದಲೇ ಹೊರತು , ಓಲೇಗಳಿಂದಲ್ಲ. ಹಾಗೆಯೇ ಕೈಗಳಿಗೆ ಶೋಭೆ ದಾನದಿಂದ, ಬಳೆಗಳಿಂದಲ್ಲ. ಕರುಣೆಯಿಂದ ಕೂಡಿದ ಶರೀರವು ಶೋಭಿಸುವುದು ಪರೋಪಕಾರಗಳಿಂದ, ಚಂದನದ ಲೇಪನದಿಂದಲ್ಲ. |
ಪರಚ್ಛಿದ್ರೇಷು ಹೃದಯಂ ಪರವಾರ್ತಾಸು ಚ ಶ್ರವಃ| ಪರಮರ್ಮಣಿ ವಾಚಂ ಚ ಖಲಾನಾಮಸೃಜದ್ವಿಧಿಃ || |
ಇನ್ನೊಬ್ಬರ ದೋಷವನ್ನು ಹುಡುಕುವದರಲ್ಲಿ ಮನಸ್ಸು, ಇನ್ನೊಬ್ಬರ ಸುದ್ದಿಯನ್ನು ಕೇಳುವದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು -ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. -ಕಲಿವಿಡಂಬನಂ (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಅನಭ್ಯಾಸೇ ವಿಷಂ ಶಾಸ್ತ್ರಂ ಅಜೀರ್ಣೇ ಭೋಜನಂ ವಿಷಮ್ || ಮೂರ್ಖಸ್ಯ ಚ ವಿಷಂ ಗೋಷ್ಠೀ ವೃದ್ಧಸ್ಯ ತರುಣೀ ವಿಷಮ್|| -ಸಮಯೋಚಿತಪದ್ಯಮಾಲಿಕಾ |
ಅಭ್ಯಾಸ ಮಾಡದಿದ್ದರೆ ಶಾಸ್ತ್ರವು ವಿಷ. ಅಜೀರ್ಣವಾದಾಗ ಭೋಜನವು ವಿಷ. ಮೂರ್ಖನಿಗೆ ವಿದ್ವತ್ಸಭೆ ವಿಷ. (ಅಂದರೆ ಹಿಡಿಸುವುದಿಲ್ಲ=ರುಚಿಸುವುದಿಲ್ಲ) ಮುದುಕನಪಾಲಿಗೆ ತರುಣಿಯು ವಿಷದಂತೆ ದುಃಖವನ್ನುಂಟುಮಾಡುತ್ತಾಳೆ. |
ನೈವಾಕೃತಿಃ ಫಲತಿ ನೈವ ಕುಲಂ ನ ಶೀಲಮ್ | ವಿದ್ಯಾಪಿನೈವ ನ ಚ ಯತ್ನಕೃತಾಪಿ ಸೇವಾ|| ಭಾಗ್ಯಾನಿ ಪೂರ್ವತಪಸಾ ಖಲು ಸಂಚಿತಾನಿ ||| ಕಾಲೇ ಫಲಂತಿ ಪುರುಷಸ್ಯ ಯಥೈವ ವೃಕ್ಷಾಃ|||| -ನೀತಿಶತಕ |
ಪುರುಷನ ಸುಂದರ ಆಕಾರ, ಉತ್ತಮ ಕುಲ, ದುಷ್ಟವಲ್ಲದ ಶೀಲ,ಹೆಚ್ಚಿನವಿದ್ಯೆ, ಪ್ರಯತ್ನದಿಂದ ಮಾಡಿದ ಸೇವೆ ಇವು ಯಾವವೂ ಫಲಕಾರಿಯಾಗುವದಿಲ್ಲ. ಹಿಂದೆ ಆಚರಿಸಿದ ತಪಸ್ಸಿನಿಂದ ಸಂಗ್ರಹವಾದ ಭಾಗ್ಯಗಳು ಸಕಾಲದಲ್ಲಿ ವೃಕ್ಷಗಳಂತೆ ಫಲಕೊಡುತ್ತವೆ. (ಆದ್ದರಿಂದ ಪ್ರಯತ್ನ ಪೂರ್ವಕವಾಗಿ ಒಳ್ಳೆಯ ಕರ್ಮವನ್ನು ಮಾಡಬೇಕು.) |
ಅರ್ಥಸ್ಯ ನಿಶ್ಚಯೋ ದೃಷ್ಟಃ ವಿಚಾರೇಣ ಹಿತೋಕ್ತಿತಃ| ನ ಸ್ನಾನೇನ ನ ದಾನೇನ ಪ್ರಾಣಾಯಾಮಶತೇನ ವಾ|| -ವಿವೇಕಚೂಡಾಮಣಿ |
ತತ್ತ್ವಾರ್ಥನಿರ್ಣಯವು ವಿಚಾರಮಂಥನದಿಂದ ಹಾಗೂ ಆಪ್ತವಾಕ್ಯದಿಂದ ಸಿದ್ಧಿಸುತ್ತದೆಯೇ ಹೊರತು ಸ್ನಾನದಿಂದಾಗಲೀ, ದಾನದಿಂದಾಗಲೀ, ನೂರಾರು ಪ್ರಾಣಾಯಾಮದಿಂದಾಗಲೀ ಸಿದ್ಧಿಸುವುದಿಲ್ಲ. |
ಆಚಾರಹೀನಃ ಪುರುಷಃ ಲೋಕೇ ಭವತಿ ನಿಂದಿತಃ l ಪರತ್ರ ಚ ಸುಖೀ ನ ಸ್ಯಾತ್ ತಸ್ಮಾದಾಚಾರವಾನ್ ಭವತ್ ll -ಶಿವಪುರಾಣ |
ಅರ್ಥ:ಆಚಾರ ಹೀನ ವ್ಯಕ್ತಿಯು ಇಹ ಲೋಕದಲ್ಲಿಯೂ ನಿಂದಿತನಾಗಿ, ಪರಲೋಕದಲ್ಲಿ ಸುಖ ಹೊಂದುವುದಿಲ್ಲ. ಹಾಗಾಗಿ ಆಚಾರವಂತನಾಗಬೇಕು. |
ಪ್ರಾಯಃ ಸರಲಚಿತ್ತಾನಾಂ ಜಾಯತೇ ವಿಪದಾಗಮಃ | ಋಜುರ್ಯಾತಿ ಯಥಾ ಛೇದಂ ನ ವಕ್ರಃ ಪಾದಪಸ್ತಥಾ|| -ಯಶಸ್ತಿಲಕಚಂಪೂ |
ಸಾಮಾನ್ಯವಾಗಿ ಋಜು ಸ್ವಭಾವದವರಿಗೆ ವಿಪತ್ತು ಬರುತ್ತದೆ. ನೆಟ್ಟಗಿರುವ ಮರಕ್ಕೆ ಛೇದನ ಒದಗುವಂತೆ, ಸೊಟ್ಟನೆಯ ಮರಕ್ಕೆ ಒದಗುವುದಿಲ್ಲ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ದಾಕ್ಷಿಣ್ಯಂ ಸ್ವಜನೇ ದಯಾ ಪರಿಜನೇ ಶಾಠ್ಯಂ ಸದಾ ದುರ್ಜನೇ | ಪ್ರೀತಿಃ ಸಾಧುಜನೇ ನಯೋ ನೃಪಜನೇ ವಿದ್ವಜ್ಜನೇ ಚಾರ್ಜವಮ್|| ಶೌರ್ಯಂ ಶತ್ರುಜನೇ ಕ್ಷಮಾ ಗುರುಜನೇ ಕಾಂತಾಜನೇ ದೃಷ್ಟತಾ||| ಯೇ ಚೈವಂ ಪುರುಷಾಃ ಕಲಾಸು ಕುಶಲಾಸ್ತೇಷ್ವೆವ ಲೋಕಸ್ಥಿತಿಃ|||| -ನೀತಿಶತಕ |
ಬಂಧು ಜನರಲ್ಲಿ ಯುಕ್ತರೀತಿಯಲ್ಲಿ ದಾಕ್ಷಿಣ್ಯ, ಬಂಧುವಲ್ಲದ ಜನರಲ್ಲಿ ಅನುಕಂಪ ದಯೆ, ಮೋಸಮಾಡುವ ದುರ್ಜನರ ವಿಷಯದಲ್ಲಿ ಅವರಿಗೆ ಅನುಗುಣವಾದ ದುರ್ನೀತಿ, ಸಾಧು,ಸಜ್ಜನರಲ್ಲಿ ಪ್ರೀತಿ, ರಾಜರಲ್ಲಿ ಅವರನ್ನ ಅನುಸರಿಸಿ ನೆಡೆಯುವ ನಯ, ವಿದ್ವಜ್ಜನರಲ್ಲಿ ಮುಚ್ಚುಮರೆಯಿಲ್ಲದೆ ಕೇಳಿ ತಿಳಿದುಕೊಳ್ಳುವ ಸರಳವರ್ತನೆ, ಶತ್ರುಗಳಲ್ಲಿ ಪರಾಕ್ರಮ,ಗುರುಹಿರಿಯರಲ್ಲಿ ತಾಳ್ಮೆ,ಸ್ತ್ರೀಯರ ವಿಚಾರದಲ್ಲಿ ದಿಟ್ಟತನ,ಹೀಗೆ ಅನೇಕ ಕಲೆಗಳಲ್ಲಿ ನಿಪುಣರಾದ ಪುರುಷರು (ವಿದ್ವಾಂಸರು) ಯಾರೋ ಅವರಿಂದಲೇ ಲೋಕದ ನಡವಳಿಕೆ ಸ್ಥಿರವಾಗಿ ಉಳಿಯುವದು. |
ಪಠಂತಿ ವೇದಶಾಸ್ತ್ರಾಣಿ ಭೋದಯಂತಿ ಪರಸ್ಪರಮ್ | ನ ಜಾನಂತಿ ಪರಂ ತತ್ವಂ ದರ್ವೀ ಪಾಕರಸಂ ಯಥಾ|| -ಗರುಡಪುರಾಣ |
ವೇದಗಳನ್ನೂ ಶಾಸ್ತ್ರಗಳನ್ನೂ ಓದುತ್ತಾರೆ. ಒಬ್ಬರಿಗೊಬ್ಬರು ಕಲಿಸುತ್ತಾರೆ. ಆದರೆ ಪರತತ್ವವನ್ನು ಅರಿತಿಲ್ಲ. ಸೌಟಿಗೆ ಅಡಿಗೆಯ ರುಚಿ ಗೊತ್ತೇ! (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ನಾನುತಿಷ್ಠತಿ ಕಾರ್ಯಾಣಿ ಭಯೇಷು ನ ಬಿಭೇತಿ ಚ| ಕ್ಷಿಪ್ತಂ ರಾಜ್ಯಾಚ್ಯುತೋ ದೀನಃ ತೃಣೈಸ್ತುಲ್ಯೋ ಭವೇದಿಹ|| -ರಾಮಾಯಣ |
ಯೋಗ್ಯ ಕಾಲದಲ್ಲಿ ತನ್ನ ಕರ್ತವ್ಯವನ್ನು ಯಾವನು ಮಾಡುವುದಿಲ್ಲವೋ, ಭಯಕಾಲದಲ್ಲಿ ಆತಂಕಪಡುವುದಿಲ್ಲವೋ, ಅಂಥವನು ಬಹು ಬೇಗನೆ ರಾಜ್ಯಭ್ರಷ್ಟನಾಗುತ್ತಾನೆ; ಹುಲ್ಲುಕಡ್ಡಿಗೆ ಸಮನಾಗುತ್ತಾನೆ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಅಜ್ಞಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ| ಜ್ಞಾನಲವದುರ್ವಿದಗ್ಧಂ ಬ್ರಹ್ಮಾಪಿ ನರಂ ನ ರಂಜಯತಿ || -ನೀತಿಶತಕ |
ಏನೂ ಅರಿಯದವನಿಗೆ ಸುಲಭವಾಗಿ ವಿಷಯವನ್ನು ತಿಳಿಸಬಹುದು. ಹಲವಾರು ವಿಷಯವನ್ನು ಚೆನ್ನಾಗಿ ಅರಿತವನಿಗೆ ಯಾವ ಶ್ರಮವೂ ಇಲ್ಲದೇ ತಿಳಿಸಿಕೊಡಬಹುದು. ಆದರೆ ಶಾಸ್ತ್ರಜ್ಞಾನವನ್ನು ಅಲ್ಪ ಸ್ವಲ್ಪವಾಗಿ ಪಡೆದು ತಾನೊಬ್ಬ ಪಂಡಿತನೆಂದು ಮೋಹಗೊಂಡಿರುವ ಮೂರ್ಖನನ್ನು ಚತುರ್ಮುಖ ಬ್ರಹ್ಮನೂ ಸಂತೋಷಗೊಳಿಸಲಾರ.(ತಿಳಿಸಿಕೊಡಲಾರ) (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಯದಮೀ ದಶಂತಿ ದಶನಾಃ ರಸನಾ ತತ್ಸ್ವಾದಮನುಭವತಿ | ಪ್ರಕೃತಿರಿಯಂ ವಿಮಲಾನಾಂ ಕ್ಲಿಶ್ಯಂತಿ ಯದನ್ಯ ಕಾರ್ಯೇಷು|| -ಸುಭಾಷಿತರತ್ನಭಾಂಡಾಗಾರ |
ಹಲ್ಲುಗಳು ಯಾವುದನ್ನು ಜಗಿಯುತ್ತವೆ(ಅಗೆಯುತ್ತವೆ) ಯೋ ಅವುಗಳ ರುಚಿಯನ್ನು ನಾಲಿಗೆ ಅನುಭವಿಸುತ್ತದೆ.! ಸತ್ಪುರುಷರು ಸ್ವಾಭಾವಿಕವಾಗಿ ಬೇರೆಯವರ ಹಿತಕ್ಕಾಗಿ ಕಷ್ಟಪಡುತ್ತಾರೆ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಸಂಪದಾ ಸಂಪರಿಷ್ವಕ್ತೋ ವಿದ್ಯಯಾ ಚಾನವದ್ಯಯಾ| ನರೋ ನ ಶೋಭತೇ ಲೋಕೇ ಹರಿಭಕ್ತಿರಸಂ ವಿನಾ || |
ಸಂಪತ್ತು, ಶ್ರೇಷ್ಠವಾದ ವಿದ್ಯೆ ಇವು ತುಂಬಿದ್ದರೂ ಸಹ ಹರಿಭಕ್ತಿರಸವಿಲ್ಲದಿದ್ದರೆ ಮನುಷ್ಯನು ಜಗತ್ತಿನಲ್ಲಿ ಶೋಭಿಸುವುದಿಲ್ಲ. |
ಸುಜನೋ ನ ಯಾತಿ ವೈರಂ ಪರಹಿತನಿರತೋ ವಿನಾಶಕಾಲೇsಪಿ| ಛೇದೇsಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ|| -ಸುಭಾಷಿತ ಸುಧಾನಿಧಿ |
ಚಂದನಮರ ಕತ್ತರಿಸುವ ಕೊಡಲಿಯ ಬಾಯನ್ನು ಕೂಡಾ ಪರಿಮಳಯುಕ್ತ ಮಾಡುವಂತೆ, ಸಜ್ಜನರು ಕೊನೆವರೆಗೂ ಪರಹಿತಕಾರ್ಯವನ್ನು ದ್ವೇಷಿಸುವುದಿಲ್ಲ. |
ಅದತ್ತದಾನಾಚ್ಚ ಭವೇದ್ ದರಿದ್ರಃ ದರಿದ್ರಭಾವಾಚ್ಚ ಕರೋತಿ ಪಾಪಮ್ l ಪಾಪಪ್ರಭಾವಾತ್ ನರಕಂ ಪ್ರಯಾತಿ ಪುನಃ ದರಿದ್ರಃ ಪುನರೇವ ಪಾಪೀ ll |
ದಾನ ಮಾಡದೇ ಇರುವುದರಿಂದ ಬಡವನಾಗುತ್ತಾನೆ. ಬಡತನದಿಂದ ಪಾಪ ಮಾಡುತ್ತಾನೆ. ಪಾಪ ಮಾಡುವುದರಿಂದ ನರಕಪ್ರಾಪ್ತಿಯಾಗುತ್ತದೆ. ನರಕವೆಂದರೆ ಮತ್ತೆ ಬಡವನಾಗಿ ಹುಟ್ಟುವುದು, ಪಾಪಕೆಲಸ ಮಾಡುವುದೇ ಆಗಿದೆ. |
ಅನುಕೂಲಾಂ ವಿಮಲಾಂಗೀಂ ಕುಲಜಾಂ ಕುಶಲಾಂ ಸುಶೀಲಸಂಪನ್ನಾಮ್ | ಪಂಚಲಕಾರಾಂ ಭಾರ್ಯಾಂ ಪುರುಷಃ ಪುಣ್ಯೋದಯಾಲ್ಲಭತೇ || |
ಅನುಕೂಲೆಯೂ ಸುಂದರಾಂಗಿಯೂ ಉತ್ತಮ ಕುಲೋತ್ಪನ್ನಳೂ ಶೀಲವತಿಯೂ ಆದ ಐದು ಲ ಕಾರವಿರುವ ಪತ್ನಿಯನ್ನು ಪುರುಷನು ಪುಣ್ಯದಿಂದ ಪಡೆಯುತ್ತಾನೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ವಿಷಂ ರುಧಿರಮಾಸಾದ್ಯ ಪ್ರಸರ್ಪತಿ ಯಥಾ ತನೌ | ತಥೈವ ಛಿದ್ರಮಾಸಾದ್ಯ ದೋಷಶ್ಚಿತ್ತೇ ಪ್ರಸರ್ಪತಿ || -ಬೋಧಿಚರ್ಯಾವತಾರ,೭-೬೯ |
ವಿಷವು ರಕ್ತವನ್ನು ಸೇರಿ ಹೇಗೆ ಶರೀರದಲ್ಲಿ ಹರಡುತ್ತದೆಯೋ ಅದೇ ರೀತಿ ಸ್ವಲ್ಪ ಅವಕಾಶವನ್ನು ಹೊಂದಿದರೂ ದೋಷವು ಮನಸ್ಸನ್ನು ಕೆಡಿಸುತ್ತದೆ. |
ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ ನ ಸ್ನಾನೇನ ನ ದಾನೇನ ಪ್ರಾಣಾಯಾಮಶತೇನ ವಾ (ವಿವೇಕಚೂಡಾಮಣಿ) |
ತತ್ತ್ವಾರ್ಥನಿರ್ಣಯವು ವಿಚಾರಮಂಥನದಿಂದ ಹಾಗೂ ಆಪ್ತವಾಕ್ಯದಿಂದ ಮಾತ್ರ ಸಿದ್ಧಿಸುತ್ತದೆಯೇ ಹೊರತು ಸ್ನಾನದಿಂದಾಗಲೀ, ದಾನದಿಂದಾಗಲೀ, ನೂರಾರು ಪ್ರಾಣಾಯಾಮದಿಂದಾಗಲೀ ತತ್ತ್ವಾರ್ಥವು ಸಿದ್ಧಿಸುವುದಿಲ್ಲ. |
ಅನುಕೂಲಾಂ ವಿಮಲಾಂಗೀಂ ಕುಲಜಾಂ ಕುಶಲಾಂ ಸುಶೀಲಸಂಪನ್ನಾಮ್ | ಪಂಚಲಕಾರಾಂ ಭಾರ್ಯಾಂ ಪುರುಷಃ ಪುಣ್ಯೋದಯಾಲ್ಲಭತೇ || |
ಅನುಕೂಲೆಯೂ ಸುಂದರಾಂಗಿಯೂ ಉತ್ತಮ ಕುಲೋತ್ಪನ್ನಳೂ ಶೀಲವತಿಯೂ ಆದ ಐದು ಲ ಕಾರವಿರುವ ಪತ್ನಿಯು ಪುರುಷನ ಪುಣ್ಯದಿಂದ ದೊರೆಯುತ್ತಾಳೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಮಹಾಜನಸ್ಯ ಸಂಸರ್ಗಃ ಕಸ್ಯ ನೋನ್ನತಿಕಾರಕಃ l ಪದ್ಮಪತ್ರಸ್ಥಿತಂ ತೋಯಂ ಧತ್ತೇ ಮುಕ್ತಾಫಲಶ್ರಿಯಮ್ ॥ |
ನೀರಲ್ಲೆ ಇರುವ ತಾವರೆಯ ಎಲೆಯ ಮೇಲೆ ಬಿದ್ದ ನೀರ ಹನಿ ಮುತ್ತಿನಂತೆ ಹೊಳೆಯುವ ಹಾಗೆ , ಯಾರಿಗೆ ಉತ್ತಮರ ಸಂಗ ಅನುಕೂಲಕಾರಿಯಲ್ಲ? |
ಪಾತಂಜಲೇ ವಿಷ್ಣುಪದಾಪಗಾಯಾಃ ಪಾತಂಜಲೇ ಚಾಪಿ ನಯೇsವಗಾಹಂ| ಆಚಕ್ಷತೇ ಶುದ್ಧಿದಮಾಪ್ರಸೂತೇ- ರಾsಚಕ್ಷತೇ ರಾಗಮಧೋಕ್ಷಜೇ ಚ|| |
ಗಂಗಾಜಲದ ಸ್ನಾನವೂ, ಪತಂಜಲಿಯು ರಚಿಸಿರುವ ಮಹಾಭಾಷ್ಯದ ಅಭ್ಯಾಸವೂ,ಭಗವಂತನಲ್ಲಿ ದೃಢವಾದ ಭಕ್ತಿಯೂ,ಹುಟ್ಟಿದ ವೇಳೆಯಿಂದ ಸಾಯುವವರೆಗೂ ಮನುಷ್ಯನ ಮಾತನ್ನು, ದೇಹವನ್ನು ಮತ್ತು ಮನಸ್ಸನ್ನು ಶುದ್ಧಿಗೊಳಿಸುತ್ತದೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಕುಲೀನೈಃ ಸಹ ಸಂಪರ್ಕಂ ಪಂಡಿತೈಃ ಸಹ ಮಿತ್ರತಾಂ| ಜ್ಞಾತಿಭಿಶ್ಚ ಸಮಂ ಮೇಲಂ ಕುರ್ವಾಣೋ ನ ವಿನಶ್ಯತಿ || |
ಒಳ್ಳೆಯ ಕುಲದಲ್ಲಿ ಹುಟ್ಟಿದವರೊಡನೆ ಸಂಪರ್ಕ, ಪಂಡಿತರೊಡನೆ ಸ್ನೇಹ, ಜ್ಞಾತಿಗಳ ಜೊತೆ ಬೆರೆಯುವದು ಇವುಗಳನ್ನು ಮಾಡುವವನು ನಾಶವಾಗುವದಿಲ್ಲ. |
ಶುಕವದ್ ಭಾಷಣಂ ಕುರ್ಯಾದ್ ಬಕವದ್ಧ್ಯಾನಮಾಚರೇತ್| ಅಜವಚ್ಚರ್ವಣಂ ಕುರ್ಯಾದ್ ಗಜವತ್ ಸ್ನಾನಮಾಚರೇತ್|| |
ಗಿಳಿಯಂತೆ ಮಾತಾಡಬೇಕು. ಬಕದಂತೆ ಧ್ಯಾನಮಾಡಬೇಕು. ಮೇಕೆಯಂತೆ ಅಗಿಯಬೇಕು. ಆನೆಯಂತೆ ಸ್ನಾನಮಾಡಬೇಕು. (ಸಂಗ್ರಹ : ಸ್ವರ್ಣವಲ್ಲೀ ಭಕ್ತವೃಂದ) |
ಅಶ್ವಃ ಶಸ್ತ್ರಂ ಶಾಸ್ತ್ರಂ ವೀಣಾ ವಾಣೀ ನರಶ್ಚ ನಾರೀ ಚ| ಪುರುಷವಿಶೇಷಂ ಪ್ರಾಪ್ಯ ಭವಂತ್ಯಯೋಗಾಶ್ಚ ಯೋಗಾಶ್ಚ|| -ಹಿತೋಪದೇಶ, ಸುಹೃದ್ಭೇದ-೬೭ |
ಕುದುರೆ, ಶಸ್ತ್ರ, ಶಾಸ್ತ್ರ, ವೀಣೆ, ಮಾತು, ಮನುಷ್ಯ ಮತ್ತು ಮಹಿಳೆ ಇವರು ವಿಶಿಷ್ಟರಾದ ಮನುಷ್ಯರನ್ನು ಸೇರಿದಾಗ ಅನುಗುಣವಾಗಿ ಯೋಗ್ಯರಾಗುವುದೂ ಉಂಟು; ಅಯೋಗ್ಯರಾಗುವುದೂ ವುಂಟು. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್ | ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್ || |
ವ್ಯಕ್ತಿಯ ಗುಣವು ರೂಪಕ್ಕೆ ಭೂಷಣ. ಕುಲಕ್ಕೆ ಶೀಲವೇ ಭೂಷಣ. ಸಿದ್ಧಿಯು ವಿದ್ಯೆಯನ್ನು ಭೂಷಿಸಿದರೆ, ಧರ್ಮಾವಿರೋಧಿಯಾದ (ಧರ್ಮಕ್ಕನುಗುಣವಾದ) ಅನುಭವಿಸುವಿಕೆಯು(ಭೋಗವು) ಧನವನ್ನು ಭೂಷಿಸುತ್ತದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಇತಃ ಕೋನ್ವಸ್ತಿ ಮೂಢಾತ್ಮಾ ಯಸ್ತು ಸ್ವಾರ್ಥೇ ಪ್ರಮಾದ್ಯತಿ | ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಮ್ || -ವಿವೇಕಚೂಡಾಮಣಿ- ೫ |
ದುರ್ಲಭವಾದ ಮನುಷ್ಯ ಶರೀರವನ್ನು ಪಡೆದು, ಅದರಲ್ಲೂ ಪುರುಷಜನ್ಮವನ್ನು ಹೊಂದಿ, ತನ್ನ ಸ್ವರ್ಥವೇ ಆದ ಮೋಕ್ಷದ ವಿಷಯದಲ್ಲಿ ಯಾವನು ಪ್ರಮಾದವನ್ನೆಸಗುವನೋ ಅವನಿಗಿಂತ ಮೂಢಾತ್ಮನು ಇನ್ನು ಯಾವನಿದ್ದಾನು? (ಸಂಗ್ರಹ:ಶ್ರೀ ಸ್ವರ್ಣವಲ್ಲೀ ಭಕ್ತವೃಂದ) |
ಗುಣೋ ಭೂಷಯತೇ ರೂಪಂ ಶೀಲಂ ಭೂಷಯತೇ ಕುಲಮ್ | ಸಿದ್ಧಿರ್ಭೂಷಯತೇ ವಿದ್ಯಾಂ ಭೋಗೋ ಭೂಷಯತೇ ಧನಮ್ || |
ವ್ಯಕ್ತಿಯ ಗುಣವು ರೂಪಕ್ಕೆ ಭೂಷಣ. ಕುಲಕ್ಕೆ ಶೀಲವೇ ಭೂಷಣ. ಸಿದ್ಧಿಯು ವಿದ್ಯೆಯನ್ನು ಭೂಷಿಸಿದರೆ, ಧರ್ಮಾವಿರೋಧಿಯಾದ (ಧರ್ಮಕ್ಕನುಗುಣವಾದ) ಅನುಭವಿಸುವಿಕೆಯು(ಭೋಗವು) ಧನವನ್ನು ಭೂಷಿಸುತ್ತದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸಂಸಾರಕಟುವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇ| ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ|| |
ಸಂಸಾರ ಎನ್ನುವದು ಒಂದು ಕಹಿಯಾದ ಮರ. ಆದರೆ ಅದರಲ್ಲಿಯೂ ಎರಡು ಅಮೃತದಂತಹ ಹಣ್ಣುಗಳಿವೆ. ಸುಭಾಷಿತ( ಒಳ್ಳೆಯಮಾತು) ಗಳನ್ನು ಸವಿಯುವದು ಮತ್ತು ಸಜ್ಜನರೊಡನೆ ಸೇರುವದು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಆಜನ್ಮನಃ ಶಾಠ್ಯಮಶಿಕ್ಷಿತೋ ಯಃ ತಸ್ಯಾಪ್ರಮಾಣಂ ವಚನಂ ಜನಸ್ಯ| ಪರಾತಿಸಂಧಾನಮಧೀಯತೇ ಯೈಃ ವಿದ್ಯೇತಿ ತೇ ಸಂತು ಕಿಲಾಪ್ತವಾಚಃ|| |
ಹುಟ್ಟಿದಾಗಿನಿಂದಲೂ ಮೋಸ ಕಪಟವೆಂದರೆ ತಿಳಿಯದ ಆಶ್ರಮವಾಸಿಗಳಾದ ಋಷಿಗಳ ಮಾತು ಜನರಿಗೆ ಪ್ರಮಾಣವಲ್ಲ. ಬೇರೆಯವರಿಗೆ ಮೋಸಮಾಡುವ ಕಲೆಯನ್ನೇ ವಿದ್ಯೆಯೆಂದು ಕಲಿತವರು ಸತ್ಯನುಡಿಯುವರಲ್ಲವೇ ! || ( ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ) |
ಮಾತೇವ ರಕ್ಷತಿ ಪಿತೇವ ಹಿತೇ ನಿಯುಕ್ತೇ ಕಾಂತೇವ ಚಾಭಿರಮಯತ್ಯಪನೀಯ ಖೇದಂ| ಕೀರ್ತಿಂ ಚ ದಿಕ್ಷು ವಿಮಲಾಂ ವಿತನೋತಿ ಲಕ್ಷ್ಮೀಂ ಕಿಂ ಕಿಂ ನ ಸಾಧಯತಿ ಕಲ್ಪತಲೇವ ವಿದ್ಯಾ|| |
ವಿದ್ಯೆಯು ತಾಯಿಯಂತೆ ಪಾಲಿಸುತ್ತದೆ. ತಂದೆಯಂತೆ ಒಳ್ಳೆಯ ದಾರಿಯಲ್ಲಿ ನಿಯೋಜಿಸುತ್ತದೆ. ಮಡದಿಯಂತೆ ಆಯಾಸವನ್ನ ಪರಿಹರಿಸಿ ಆನಂದಪಡಿಸುತ್ತದೆ. ದಿಕ್ಕು ದಿಕ್ಕುಗಳಲ್ಲಿ ಕೀರ್ತಿಯನ್ನು ಹರಡಿ ಐಶ್ವರ್ಯವನ್ನು ಸಂಪಾದಿಸಿಕೊಡುತ್ತದೆ. ವಿದ್ಯೆ ಕಲ್ಪಲತೆ ಇದ್ದಂತೆ. ಅದು ಏನನ್ನು ತಾನೆ ಸಾಧಿಸದು ? (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಮನಃಪ್ರೀತಿಕರಃ ಸ್ವರ್ಗಃ ನರಕಸ್ತದ್ವಿಪರ್ಯಯಃ| ನರಕಸ್ವರ್ಗಸಂಜ್ಞೇ ವೈ ಪಾಪಪುಣ್ಯೇ ದ್ವಿಜೋತ್ತಮ|| |
ಮನಸ್ಸಿಗೆ ಆನಂದ ಉಂಟುಮಾಡುವದೇ ಸ್ವರ್ಗ. ದುಃಖವೇ ನರಕ. ನರಕ ಸ್ವರ್ಗಗಳಿಗೆ ಪಾಪ ಪುಣ್ಯವೆಂದು ಹೆಸರು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ದುರ್ಜನೈರುಚ್ಯಮಾನಾನಿ ಸಸ್ಮಿತಾನಿ ಪ್ರಿಯಾಣ್ಯಪಿ| ಅಕಾಲಕುಸುಮಾನೀವ ಭಯಂ ಸಂಜನಯಂತಿ ಮೇ || |
ಕೆಟ್ಟವರು ಹೇಳುವ ಮಾತುಗಳು ನಗುವಿನಿಂದ ಕೂಡಿ ಪ್ರಿಯವಾಗಿದ್ದರೂ ಕಾಲವಲ್ಲದ ಕಾಲದಲ್ಲಿ ಅರಳಿದ ಹೂಗಳಂತೆ ನನಗೆ ಭಯವನ್ನುಂಟುಮಾಡುತ್ತವೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಅಂತರೇಣ ವಿಧಿಂ ಮೋಹಾದ್ಯಃ ಕುರ್ಯಾತ್ಸಾಪರಾಯಿಕಂ| ನ ಥ್ಸ್ಯಾದುಪಕಾರಾಯ ಭಸ್ಮನೀವ ಹುತಂ ಹವಿಃ| |
ಮಾಡಬೇಕೆಂಬ ವಿಧಿ ಇಲ್ಲದೇ ಅಜ್ಞಾನದಿಂದ ಮಾಡಿದ ಪರಲೋಕ ಸಾಧಕವಾದ ಕರ್ಮಗಳು ವ್ಯರ್ಥ ಬೂದಿಯಲ್ಲಿ ಹೋಮ ಮಾಡಿದಹಾಗೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ | ಚಿಂತನೀಯಾ ಹಿ ವಿಪದಾಂ ಆದಾವೇವ ಪ್ರತಿಕ್ರಿಯಾ || |
ಮನೆಗೆ ಬೆಂಕಿಬಿದ್ದಾಗ ಬಾವಿತೆಗೆಸು ಹೊರಡುವದು ಸರಿಯಲ್ಲ. ಮುಂದೆ ಬರಬಹುದಾದ ವಿಪತ್ತುಗಳಿಗೆ ಮೊದಲೇ ಪರಿಹಾರವನ್ನು ಆಲೋಚಿಸಿಕೊಂಡಿರಬೇಕು. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಪರನಿಂದಾಸು ಪಾಂಡಿತ್ಯಂ ಸ್ವೇಷು ಕಾರ್ಯೇಷ್ವನುದ್ಯಮಃ | ಪ್ರದ್ವೇಷಶ್ಚ ಗುಣಜ್ಞೇಷು ಪಂಥಾನೋಹ್ಯಾಪದಾಂ ತ್ರಯಃ|| |
ಆಪತ್ತಿಗೆ ಮೂರು ದಾರಿಗಳು ಅವು ಇತರರನ್ನು ನಿಂದಿಸುವದರಲ್ಲಿ ಪಾಂಡಿತ್ಯ, ತನ್ನ ಕೆಲಸ ಮಾಡುವದರಲ್ಲಿ ಪ್ರಯತ್ನವಿಲ್ಲದಿರುವದು ಮತ್ತು ಗುಣಶಾಲಿಗಳಲ್ಲಿ ದ್ವೇಷ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಅನೇಕಾನಿ ಚ ಶಾಸ್ತ್ರಾಣಿ ಸ್ವಲ್ಪಾಯುರ್ವಿಘ್ನಕೋಟಯಃ | ತಸ್ಮಾತ್ಸಾರಂ ವಿಜಾನೀಯಾತ್ ಕ್ಷೀರಂ ಹಂಸ ಇವಾಂಭಸಿ|| |
ಶಾಸ್ತ್ರಗಳು ಅನೇಕ. ಅದೆಲ್ಲವನ್ನೂ ತಿಳಿಯಲು ಆಯುಷ್ಯ ಕಡಿಮೆ. ಅದರಲ್ಲೂ ಅನೇಕ ವಿಘ್ನಗಳು. ಆದ್ದರಿಂದ ಹಂಸವು ನೀರನ್ನು ಬಿಟ್ಟು ಹಾಲನ್ನು ಮಾತ್ರ ಗೃಹಿಸುವಂತೆ ಶಾಸ್ತ್ರಸಾರವನ್ನು ತಿಳಿಯಬೇಕು. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಸ್ವರ್ಗಾಪವರ್ಗಯೊಃ ಪುಂಸಾಂ ರಸಾಯಾಂ ಭುವಿ ಸಂಪಾದಮ್ | ಸರ್ವಸಾಮಪಿ ಸಿದ್ಧೀನಾಂ ಮೂಲಂ ತಚ್ಚರಣಾರ್ಚನಮ್ || |
ಈ ಭೂಮಿಯಲ್ಲಿ ಮನುಷ್ಯರಿಗೆ, ಸ್ವರ್ಗಮೊಕ್ಷಗಳಿಗೂ, ಎಲ್ಲಾ ಸಂಪತ್ತುಗಳಿಗೂ, ಸಿದ್ಧಿಗಳಿಗೂ ಮೂಲ, ಆ ಪರಮಾತ್ಮನ ಪಾದಪೂಜೆಯಲ್ಲದೇ ಬೇರೆ ಇನ್ನೊಂದಿಲ್ಲ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಕರ್ಷತೋ ನಾಸ್ತಿ ದಾರಿದ್ರ್ಯ೦ ಜಪತೋ ನಾಸ್ತಿ ಪಾತಕಮ್ | ಮೌನಿನಃ ಕಲಹೋ ನಾಸ್ತಿ ನ ಭಯ೦ ಚಾಸ್ತಿ ಜಾಗ್ರತಃ || |
ಭೂಮಿಯನ್ನು ಉಳುವ ರೈತನಿಗೆ ಬಡತನವೆ೦ಬುದಿಲ್ಲ, ಭಗವಂತನನ್ನು ಸದಾ ಜಪಿಸುವವನಿಗೆ ಪಾಪವೆ೦ಬುದಿಲ್ಲ, ಮೌನವಾಗಿರುವವನಿಗೆ ಜಗಳವಿಲ್ಲ, ಸದಾ ಕಾಲ ಎಚ್ಚರದಿಂದ ಇರುವವನಿಗೆ ಭಯವೆ೦ಬುದಿಲ್ಲ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ದಾರಿದ್ರ್ಯರೋಗದುಃಖಾನಿ ಬಂಧನವ್ಯಸನಾನಿ ಚ | ಆತ್ಮಾಪರಾಧವೃಕ್ಷಸ್ಯ ಫಲಾನ್ಯೇತಾನಿ ದೇಹಿನಾಮ್ || |
ಜೀವಿಗಳಿಗೆ ಉಂಟಾಗುವ ಬಡತನ,ರೋಗ,ದುಃಖ, ಬಂಧನ, ವ್ಯಸನ ಮೊದಲಾದವು ತಾವು ತಾವು ಮಾಡಿದ ಅಪರಾಧವೆಂಬ ಮರ ಬಿಟ್ಟ ಹಣ್ಣುಗಳು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಕುಲೀನೈಃ ಸಹ ಸಂಪರ್ಕಂ ಪಂಡಿತೈಃ ಸಹ ಮಿತ್ರತಾಂ| ಜ್ಞಾತಿಭಿಶ್ಚ ಸಮಂ ಮೇಲಂ ಕುರ್ವಾಣೋ ನ ವಿನಶ್ಯತಿ || |
ಒಳ್ಳೆಯ ಕುಲದಲ್ಲಿ ಹುಟ್ಟಿದವರೊಡನೆ ಸಂಪರ್ಕ, ಪಂಡಿತರೊಡನೆ ಸ್ನೇಹ, ಜ್ಞಾತಿಗಳ ಜೊತೆ ಬೆರೆಯುವದು ಇವುಗಳನ್ನು ಮಾಡುವವನು ನಾಶವಾಗುವದಿಲ್ಲ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಏತಾವಾನೇವ ಪುರುಷಃ ಕೃತಂ ಯಸ್ಮಿನ್ ನ ನಶ್ಯತಿ | ಯಾವಚ್ಚ ಕುರ್ಯಾದನ್ಯೋsಸ್ಯ ಕುರ್ಯಾದ್ಬಹುಗುಣಂ ತತಃ || -ಮಹಾಭಾರತ ಆದಿ ೧೬೧-೧೪ |
ಯಾವಾತನಿಗೆ ಮಾಡಿದ ಉಪಕಾರವು ಅಲ್ಲಿಯೇ ಕ್ಷೀಣಿಸುವದಿಲ್ಲವೊ ಅವನೇ ಪುರುಷ. ಇನ್ನೊಬ್ಬರು ಮಾಡಿದ ಉಪಕಾರಕ್ಕಿಂತ ಹೆಚ್ಚಿನ ಉಪಕಾರ ಮಾಡಬೇಕು. ಕತಘ್ನನಾಗಬಾರದು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸಂಕ್ಷೇಪಾತ್ಕಥ್ಯತೇ ಧರ್ಮೋ ಜನಾಃ ಕಿಂ ವಿಸ್ತರೇಣ ವಃ| ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್ || |
ಎಲೈ ಜನರೇ, ನಿಮಗೆ ಧರ್ಮವನ್ನು ಚಿಕ್ಕದಾಗಿ ಹೇಳುತ್ತೇನೆ, ಹೆಚ್ಚು ಬೆಳಸುವದರಿಂದೇನು ? ಪರೋಪಕಾರ ಪುಣ್ಯಕ್ಕೂ ಪರಹಿಂಸೆಯು ಪಾಪಕ್ಕೂ ಕಾರಣವಾಗುತ್ತದೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ ) |
ಅರ್ಥಾಗಮೋ ನಿತ್ಯಮರೋಗಿತಾಚ ಪ್ರಿಯಾ ಚ ಭಾರ್ಯಾ ಪ್ರಿಯವಾದಿನೀ ಚ | ವಶ್ಯಶ್ಚ ಪುತ್ರೋsರ್ಥಕರೀ ಚ ವಿದ್ಯಾ ಷಡ್ ಜೀವಲೋಕಸ್ಯ ಸುಖಾನಿ ರಾಜನ್ || |
ಎಲೈ ರಾಜನೇ, ಧನಪ್ರಾಪ್ತಿ, ಉತ್ತಮವಾದ ಆರೋಗ್ಯ, ಪ್ರಿಯಳಾದ, ಮನಸ್ಸನ್ನ ಮುದಗೊಳಿಸುವಂತೆ ಪ್ರಯ ಮಾತನ್ನಾಡುವ ಮಡದಿ, ವಿನೀತನಾದ ಮಗ, ಧನಾರ್ಜನೆಗೆ ಉಪಯುಕ್ತವಾದ ವಿದ್ಯೆ ಇವು ಆರು ಜನತೆಗೆ ಸುಖಕರವಾದವು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಸಮಾಜೇಭ್ಯಃ ಸಮನಸಾಂ ಸುಭಾಷಿತಮಯಂ ಮಧು| ಯಾವಜ್ಜೀವಂ ವಿಚಿನ್ವಂತಿ ಸಾಧವೋ ಮಧುಪಾ ಇವ|| |
ದುಂಬಿಗಳು ಹೂಗಳಿಂದ ಮಕರಂದವನ್ನು ಸಂಗ್ರಹಿಸುವಂತೆ, ಸಜ್ಜನರು ವಿದ್ವಾಂಸರಿಂದ ಸುಭಾಷಿತವನ್ನು ಬದುಕಿರುವರೆಗೂ ಸಂಗ್ರಹಿಸುತ್ತಾರೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಸ್ವಭಾವಸುಂದರಂ ವಸ್ತು ನ ಸಂಸ್ಕಾರಮಪೇಕ್ಷತೇ| ಮುಕ್ತಾರತ್ನಸ್ಯ ಶಾಣಾಶ್ಮಘರ್ಷಣಂ ನೋಪಯುಜ್ಯತೇ || |
ಸಹಜಸುಂದರವಾದ ವಸ್ತುವಿಗೆ ಮತ್ತೆ ಸಂಸ್ಕಾರವೇನೂ ಬೇಕಾಗುವುದಿಲ್ಲ. ಮುತ್ತನ್ನು ಸಾಣೆಕಲ್ಲಿನಲ್ಲಿ ಉಜ್ಜುವುದು ಅನಾವಶ್ಯಕ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಸಂಪನ್ನತರಮೇವಾನ್ನಂ ದರಿದ್ರಾ ಭುಂಜತೇ ಸದಾ| ಕ್ಷುತ್ ಸ್ವಾದುತಾಂ ಜನಯತಿ ಸಾ ಚಾಡ್ಯೇಷು ಸುದುರ್ಲಭಾ|| |
ಬಡವರು ರುಚಿಕರವಾದ ಅನ್ನವನ್ನೇ ಸದಾ ಉಣ್ಣುತ್ತಾರೆ. ಏಕೆಂದರೆ, ಹಸಿವು ಅನ್ನದಲ್ಲಿ ರುಚಿಯನ್ನು ಹುಟ್ಟಿಸುತ್ತದೆ. ಹಣವಂತರಿಗೆ ಹಸಿವು ದುರ್ಲಭ! (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಯತ್ರಕುತ್ರ ಕುಲೇ ವಾಸೋ ಯೇಷು ಕೇಷು ಭವೋSಸ್ತು ಮೇ| ತವ ದಾಸ್ಯೈಕಭಾವೇ ಸ್ಯಾತ್ ಸದಾ ಸರ್ವತ್ರ ಮೇ ರತಿಃ| |
ಯಾವ ಕುಲದಲ್ಲಾದರೂ ನನ್ನ ವಾಸ ಆಗಲಿ. ಯಾವ ಜನ್ಮದಲ್ಲಾದರೂ ನನ್ನ ಜನನ ಆಗಲಿ. ಆದರೆ ಮಾತ್ರ, ನನ್ನ ಸಂತೋಷವು ಯಾವಾಗಲೂ ಎಲ್ಲೆಲ್ಲಿಯೂ ನಿನ್ನ ದಾಸ್ಯಭಾವವೊಂದರಲ್ಲಿಯೇ ಹೊಮ್ಮಲಿ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಅನುಭವೇನ ವಿನಾಧಿಗತಂ ಶ್ರುತಂ ಭವತಿ ನೈವ ನೃಣಾಮುಪಕಾರಕಂ | ದಧಿಮಿ ವರ್ತತ ಏವ ಹವಿಃ ಪುನಃ ನ ಮಥನೇನ ವಿನಾ ತದವಾಪ್ಯತೇ || |
ಓದಿ ಕಲಿತದ್ದಾಗಲೀ, ಕೇಳಿ ತಿಳಿದದ್ದಾಗಲಿ ಸ್ವತಃ ಅನುಭವವಿಲ್ಲದೇ ಜನರಿಗೆ ಉಪಯುಕ್ತವಾಗುವದಿಲ್ಲ. ಮೊಸರಿನಲ್ಲಿ ತುಪ್ಪವೇನೊ ಇರುತ್ತದೆ ಆದರೆ ಮೊಸರನ್ನು ಕಡೆಯದೇ ಅದು ದೊರಕುವದಿಲ್ಲ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ ) |
ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ | ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಮಮ್ || |
ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಹೇಳಿದರೂ ಸಹ, ಅವನಿಗೆ ಅವನಿಗೆ ಹೆಚ್ಚಾದ ತಿರಸ್ಕಾರವೂ, ಅಪಮಾನವೂ ಸಂಭವಿಸುವುವವು (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ ) |
ಶರ್ಕರಾಸ್ವಾದಮತ್ತೇನ ಮಕ್ಷಿಕಾ ಚೇದುಪೇಕ್ಯ್ಷತೇ| ಸಾಕಂ ಪ್ರವಿಶ್ಯ ಜಠರಂ ವಿಪತ್ತಿಂ ತನುತೇ ನ ಕಿಮ್? |
ಸಕ್ಕರೆಯನ್ನು ರುಚಿನೋಡುವ ಸಂತೋಷದಲ್ಲಿ ನೊಣವನ್ನು ಗಮನಿಸದೇ ಹೋದರೆ, ಅದು ಸಕ್ಕರೆಯೊಂದಿಗೆ ಹೊಟ್ಟೆಗೆ ಹೋಗಿ ತೊಂದರೆಯನ್ನು ಕೊಡುತ್ತದೆಯಲ್ಲವೇ ಯಾವುದೇ ಕಾರ್ಯದಲ್ಲಿ ವಿವೇಚನೆಯಿಲ್ಲದೇ ಅವಸರದ ನಿರ್ಣಯ ತೆಗೆದುಕೊಳ್ಳಬಾರದು. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಪರಿತಪ್ಯತ ಏವ ನೋತ್ತಮಃ ಪರಿತಪ್ತೊsಪ್ಯಪರಃ ಸುಸಂವೃತಿಃ| ಪರವೃದ್ಧಿರಾಹಿತವ್ಯಥಃ ಸ್ಪುಟನಿರ್ಭಿನ್ನದುರಾಶಯೋsಧಮಃ || |
ಉತ್ತಮರು ಪರರ ಏಳಿಗೆಯನ್ನು ಕಂಡು ಕರುಬುವವನಲ್ಲ,ಸಾಮಾನ್ಯನು ಕರುಬುತ್ತಾನೆ. ಆದರೆ ತೋರಿಸಿಕೊಳ್ಳುವದಿಲ್ಲ. ಆದರೆ ನೀಚನು ಪರರ ಏಳಿಗೆಯನ್ನು ಸಹಿಸಲಾಗದೆ ವ್ಯಥೆಪಟ್ಟು ತನ್ನ ಉರಿಯನ್ನು ಹೊರಗಡೆಯೂ ತೋರಿಸುತ್ತಾನೆ. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಅಥವಾಭಿನಿವಿಷ್ಟಬುದ್ಧಿಷು ವ್ರಜತಿ ವ್ಯರ್ಥಕತಾಂ ಸುಭಾಷಿತಂ | ರವಿರಾಗಿಷು ಶೀತರೋಚಿಷಃ ಕರಜಾಲಂ ಕಮಲಾಕರೇಷ್ವಿವ || |
ಹಠಮಾರಿಗಳಾದ ಜನರಿಗೆ ಹೇಳಿದ ಬುದ್ಧಿವಾದವು ವ್ಯರ್ಥ ಸೂರ್ಯನಲ್ಲಿ ಪ್ರೀತಿಯುಳ್ಳ ತಾವರೆಗಳು ಚಂದ್ರನ ಕಿರಣಗಳು ಎಷ್ಟು ತಂಪಾಗಿದ್ದರೂ ಅರಳುವದಿಲ್ಲ (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಧೃತಿಃ ಕ್ಷಮಾ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ l ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ll -ಮನುಸ್ಮೃತಿ । |
ತೃಪ್ತಿ , ಕ್ಷಮೆ ,ನಿಯಂತ್ರಿತ ಮನಸ್ಸು, ಕಳ್ಳತನ ಮಾಡದೆ ಇರುವುದು, ಸ್ವಚ್ಛತೆ, ಇಂದ್ರಿಯಗಳ ನಿಯಂತ್ರಣ, ಬುದ್ಧಿಶಕ್ತಿ , ಶಿಕ್ಷಣ, ಪ್ರಾಮಾಣಿಕತೆ ಮತ್ತು ಎಂದಿಗೂ ಕೋಪಗೊಳ್ಳದೆ ಇರುವುದು ಧಾರ್ಮಿಕ ಜೀವನದ ಹತ್ತು ಸೂತ್ರಗಳು.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಮಹತಾsಪಿ ಪ್ರಯತ್ನೇನ ತಮಿಸ್ರಾಯಾಂ ಪರಾಮೃಶನ್| ಕೃಷ್ಣಶುಕ್ಲ ವಿವೇಕಂ ಹಿ ನ ಕಶ್ಚಿದಧಿಗಚ್ಛತಿ || |
ಕತ್ತಲೆಯಲ್ಲಿ ಎಷ್ಪು ಪ್ರಯತ್ನ ಮಾಡಿನೋಡಿದರೂ ಯಾರೂಸಹ ಕಪ್ಪು ಬಿಳುಪನ್ನು ಬೇರೆ ಬೇರೆಯಾಗಿ ತಿಳಿಯಲಾರರು. (ಸಂಗ್ರಹ:ಸ್ವರ್ಣವಲ್ಲೀ ಭಕ್ತವೃಂದ) |
ಪರಿತ್ಯಜೇದರ್ಥಕಾಮೌ ಯೌ ಸ್ಯಾತಾಂ ಧರ್ಮವರ್ಜಿತೌ| ಧರ್ಮಂ ಚಾಪ್ಯಶುಭೋದರ್ಕಂ ಲೋಕವಿಕ್ರುಷ್ಟಮೇವ ಚ|| ಮನುಸ್ಮೃತಿ |
ಧರ್ಮಕ್ಕೆ ವಿರುದ್ಧವಾದ ಅರ್ಥಕಾಮಗಳನ್ನು ಬಿಡಬೇಕು. ಒಂದು ವೇಳೆ ಹಿಂದಿನಿಂದ ಆಚರಣೆಯಲ್ಲಿರುವ ಧರ್ಮವು ಈಗ ನಿಂದಿತವಾಗಿದ್ದರೆ ಮತ್ತು ಮುಂದಿನ ದಿನಗಳಲ್ಲಿ ಅಶುಭಫಲವನ್ನು ನೀಡುವಂತಿದ್ದರೆ ಅದನ್ನು ತ್ಯಜಿಸಬೇಕು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಗಂಧಾಡ್ಯಾ ನವಮಲ್ಲಿಕಾಂ ಮಧುಕರಸ್ತ್ಯಕ್ತ್ವಾಗತೋ ಯೂಥಿಕಾಂ | ತಾಂ ದೃಷ್ಟ್ವಾಶುಗತಃ ಸ ಚಂದನವನಂ ಪಶ್ಚಾತ್ಸರೋಜಂ ಗತಃ || ಬದ್ಧಸ್ತತ್ರ ನಿಶಾಕರೇಣ ಸಹಸಾರೋದಿತ್ಯಸೌಮಂದಧೀಃ ||| ಸಂತೋಷೇಣ ವಿನಾ ಪರಾಭವಪದಂ ಪ್ರಾಪ್ನೋತಿ ಸರ್ವೋಜನಃ |||| -ಭ್ರಮರಾಷ್ಟಕ |
ಈಗತಾನೇ ಅರಳಿದ ಪರಿಮಳಸೂಸುವ ಮಲ್ಲಿಗಲೆಯನ್ನು ಬಿಟ್ಟು ದುಂಬಿಯು ಸೂಜಿಮಲ್ಲಿಗೆಯ ಬಳಿ ಹಾರಿಹೋಯಿತು. ಅಲ್ಲಿಂದ ಚಂದನವನಕ್ಕೆ ಹೋಯಿತು. ಮುಂದೆ ಕಮಲದಬಳಿ ಹೋಯಿತು. ಅಲ್ಲಿ ರಾತ್ರಿಯಾಗಲು ಕಮಲದ ದಳಗಳು ಮುಚ್ಚಿ ಸಿಕ್ಕಿಹಾಕಿಕೊಂಡುಬಿಟ್ಟಿತು. ಬುದ್ದಿಗೇಡಿಯಾದ ಆ ದುಂಬಿಯು ಅಳತೊಡಗಿತು. ಹಾಗೆಯೇ ಮನುಷ್ಯನಿಗೆ ಸಂತೋಷ. ತೃಪ್ತಿಯೆಂಬುದು ಇಲ್ಲದಿದ್ದರೆ ಹಾನಿಯೇ ಹೆಚ್ಚು.(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಆಯುಷಃ ಕ್ಷಣ ಏಕೋಪಿ ನ ತುಲ್ಯಃ ಸ್ವರ್ಣಕೋಟಿಭಿಃ | ಸ ವೃಥಾ ನೀಯತೇ ಯೇನ ಪ್ರಮಾದ ಸಮಹಾನಯಂ || - ಸುಭಾಷಿತ ಸುಧಾನಿಧಿ |
ಕೋಟಿ ಹೊನ್ನುಗಳೂ ಕೂಡ ಆಯುಷ್ಯದ ಒಂದು ಕ್ಷಣಕ್ಕೂ ಸಮವಲ್ಲ. ಅಂತಹ ಅಮೂಲ್ಯವಾದ ಆಯುಷ್ಯವನ್ನು ವ್ಯರ್ಥವಾಗಿ ಕಳೆದರೆ ಮಹಾನಷ್ಟವೇ ಆಗುತ್ತದೆ. (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪರೋsಪಿ ಹಿತವಾನ್ ಬಂಧುಃ ಬಂಧುರಪ್ಯಹಿತಃ ಪರಃ| ಅಹಿತೋ ದೇಹಜೋ ವ್ಯಾಧಿಃ ಹಿತಮಾರಣ್ಯಮೌಷಧಮ್|| |
ಸಂಬಂಧವಿಲ್ಲದ ಯಾವುದೋ ವ್ಯಕ್ತಿಯು ಸಕಾಲದಲ್ಲಿ ಸಹಾಯಕನಾಗಿರುವವನು ನಿಜವಾಗಿಯೂ ಬಂಧುವಿ(ಸಂಬಂಧಿಕ)ನ ಹಾಗೆಯೇ. ಆದರೆ ಸಂಬಂಧಿಕನಾಗಿಯೂ ಸಹಾಯಕ್ಕೆ ಬರದವನು ಅಹಿತನಾಗಿರುವುದೇ ಲೇಸು. ದೇಹದಲ್ಲೇ ಇರುವ ರೋಗವು ಯಾವತ್ತೂ ದೇಹಕ್ಕೆ ಉಪದ್ರವವನ್ನೇ ನೀಡುತ್ತದೆ. ಆದರೆ ದೂರದ ಕಾಡಿನಲ್ಲಿರುವ ಗಿಡಮೂಲಿಕೆಗಳು ದೇಹಕ್ಕೆ ಹಿತವನ್ನು ಉಂಟುಮಾಡುತ್ತವೆ. (ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ) |
ನಾದ್ರವ್ಯೇ ನಿಹಿತಾ ಕಾಚಿತ್ ಕ್ರಿಯಾ ಫಲವತೀ ಭವೇತ್ | ಆಕರೇ ಪದ್ಮರಾಗಾಣಾಂ ಜನ್ಮ ಕಾಚಮಣೇಃ ಕುತಃ || - ಹಿತೋಪದೇಶ |
ಯಾವುದಾದರೂ ಕಾರ್ಯವನ್ನು ಅಯೋಗ್ಯ ಸ್ಥಳದಲ್ಲಿ ಆಚರಿಸಿದರೆ ಫಲಕಾರಿಯಾಗದು. ಪದ್ಮರಾಗರತ್ನಗಳ ಮಧ್ಯದಲ್ಲಿ ಗಾಜಿನಮಣಿ ಬಂದುಸೇರಿದರೆ ಏನು ಪ್ರಯೋಜನ? ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ |
ಗುಣೇಷು ಕ್ರಿಯತಾಂ ಯತ್ನಃ ಕಿಮಾಟೋಪೈಃ ಪ್ರಯೋಜನಂ | ವಿಕ್ರಿಯಂತೇ ನ ಘಂಟಾಭಿಃ ಗಾವಃ ಕ್ಷೀರವಿವರ್ಜಿತಾಃ || |
ನಾವು ಯಾವಾಗಲೂ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಯತ್ನಿಸಬೇಕು. ಆಡಂಬರದಿಂದ ಏನು ಪ್ರಯೋಜನ? ಆಕಳ ಕೊರಳೊಳಗಿನ ಘಂಟೆಯಿಂದ ಅದನ್ನು ಅಳೆಯುವುದಿಲ್ಲ ಬದಲಾಗಿ ಅವು ಎಷ್ಟು ಹಾಲು ನೀಡುತ್ತದೆ ಎಂಬುದನ್ನು ನೋಡುತ್ತಾರೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಮಧುನಾ ಸಿಂಚಯೇನ್ನಿಂಬಂ ನಿಂಬಃ ಕಿಂ ಮಧುರಾಯತೇ | ಜಾತಿಸ್ವಭಾವ ದೋಷೋsಯಂ ಕಟುತ್ವಂ ನ ಮುಂಚತಿ || - ಕುಮಾರಸಂಭವ |
ಬೇವಿನಮರಕ್ಕೆ ಜೇನುತುಪ್ಪವನ್ನು ಹಾಕಿದರೂ ಅದು ಸಿಹಿಯಾಗುವದಿಲ್ಲ. ಕಹಿಯು ಅದರ ಹುಟ್ಟುಗುಣ. ಅದನ್ನು ಹೇಗೆ ಬಿಟ್ಟೀತು ಅಂತೆಯೇ ದುರ್ಜನರು. (ಸಂಗ್ರಹ ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸತ್ಯಂ ರೂಪಂ ಶ್ರುತಂ ವಿದ್ಯಾ ಕೌಲ್ಯಂ ಶೀಲಂ ಬಲಂ ಧನಮ್ | ಶೌರ್ಯಂ ಯ ಚ ಚಿತ್ರಭಾಷ್ಯಂ ಚ ದಶಮೇ ಸ್ವರ್ಗಯೋನಯಃ || |
ಸತ್ಯ, ರೂಪ, ಶಾಸ್ತ್ರಜ್ಞಾನ, ಉತ್ತಮಕುಲ, ನಡತೆ, ಪರಾಕ್ರಮ, ಧನ, ಶೌರ್ಯ, ವಿನಯ ಮತ್ತು ವಾಕ್ ಚಾತುರ್ಯ ಹೀಗೆ ಹತ್ತು ಗುಣಗಳು ಸ್ವರ್ಗಕ್ಕೆ ಕಾರಣವಾಗಿದೆ. (ಜೀವನದಲ್ಲಿ ಯಶಸ್ಸು ಸಾಧಿಸಲು ಇವು ಮುಖ್ಯ) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಉಭಾಭ್ಯಾಮೇವ ಪಕ್ಷಾಭ್ಯಾಮ್ಯ ಥಾ ಖೇ ಪಕ್ಷಿಣಾಂ ಗತಿಃ | ತಥೈವ ಜ್ಞಾನಕರ್ಮಾಭ್ಯಾಮ್ ಜಾಯತೇ ಪರಮಂ ಪದಮ್ || |
ಎರಡು ರೆಕ್ಕೆಗಳಿಂದ ಹೇಗೆ ಪಕ್ಷಿಯು ಆಕಾಶದಲ್ಲಿ ಸಂಚರಿಸುತ್ತದೆಯೋ ಹಾಗೆಯೇ ಜ್ಞಾನ-ಕರ್ಮಗಳೆರಡರಿಂದ ಸರ್ವೋಚ್ಚವಾದ ಪದವು (ಮೋಕ್ಷವು) ಪ್ರಾಪ್ತಿಯಾಗುವುದು. (ಪಕ್ಷಿಯು ಹೇಗೆ ಒಂದು ರೆಕ್ಕೆಯಿಂದ ಸಂಚರಿಸಲಾಗದೊ ಹಾಗೆಯೇ ಕೆವಲ ಜ್ಞಾನಕರ್ಮಗಳಲ್ಲಿ ಒಂದನ್ನು ಪಡೆದು ಇನ್ನೊಂದು ಅಲಕ್ಷಿಸಿದರೆ ಆತ್ಮೋನ್ನತಿಯು ಲಭಿಸದು) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಶಿಷ್ಯೋ ಭಾರ್ಯಾ ಶಿಶುರ್ಭ್ರಾತಾ ಪುತ್ರೋ ದಾಸಃ ಸಮಾಶ್ರಿತಃ | ಯಸ್ಮೈತಾನಿ ವಿನೀತಾನಿ ತಸ್ಯ ಲೋಕೇ ಹಿ ಗೌರವಮ್ || ದಕ್ಷಸ್ಮೃತಿ |
ಶಿಷ್ಯ, ಹೆಂಡತಿ, ಸಹೋದರರು(ಶಿಶುರ್ಭಾತಾ-ತಮ್ಮ), ಮಗ, ಸೇವಕ, ಆಶ್ರಿತರು ಯಾರು ವಿಧೇಯರಾಗಿರುತ್ತಾರೆಯೋ ಅವನಿಗೆ ಲೋಕದಲ್ಲಿ ಗೌರವು ಹೆಚ್ಚು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಗಂಗಾದಿತೀರ್ಥೇಷು ವಸಂತಿ ಮತ್ಸ್ಯಾಃ ದೇವಾಲಯೇ ಪಕ್ಷಿಗಣಾಶ್ಚ ನಿತ್ಯಂ | ತೇ ಜ್ಞಾನಹೀನಾ ನ ಫಲಂ ಲಭಂತೇ ತೀರ್ಥಾನಿ ದೇವಾಯತನಾನಿ ಭಾವಾಃ || |
ಗಂಗಾ ನದಿಯೇ ಮೊದಲಾದ ಪುಣ್ಯತೀರ್ಥಗಳಲ್ಲಿ ಮೀನುಗಳು ವಾಸಿಸುತ್ತವೆ. ದೇವಾಲಯದಲ್ಲಿ ಹಕ್ಕಿಗಳು ನಿತ್ಯವು ವಾಸಿಸುತ್ತವೆ. ಆದರೆ ಅವುಗಳಿಗೆ ನಾವು ವಾಸಿಸುವ ಸ್ಥಳದ ಜ್ಞಾನವನ್ನು ಹೊಂದಿರುವುದಿಲ್ಲ. ಆದ್ದರಿಂದ ಪುಣ್ಯಫಲವನ್ನು ಪಡೆಯಲಾರವು. ಅದಕ್ಕೊಸ್ಕರವೇ ಹೇಳುವುದು ಒಳ್ಳೆಯ ಭಾವನೆಯೇ ಪುಣ್ಯತೀರ್ಥ ಮತ್ತು ದೇವಾಲಯವೆನಿಸುತ್ತದೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ನಂದಂತಿ ಮಂದಾಃ ಶ್ರಿಯಮಪ್ಯನಿತ್ಯಾಮ್ ಪರಂ ವಿಷೀದಂತಿ ವಿಪದ್ಗೃಹೀತಾಃ | ವಿವೇಕದೃಷ್ಟ್ಯಾ ಚರತಾಂ ನರಾಣಾಮ್ ಶ್ರಿಯೋ ನ ಕಿಂಚಿತ್ ವಿಪದೋ ನ ಕಿಂಚಿತ್|| |
ಮೂಢರು ಅನಿತ್ಯವಾದ ಐಶ್ವರ್ಯವನ್ನು ಪಡೆದು ಸಂತೋಷ ಪಡುತ್ತಾರೆ ಮತ್ತು ಕಷ್ಟಗಳಿಗೆ ಸಿಲುಕಿದಾಗ ದುಃಖಿಸುತ್ತಾರೆ. ಆದರೆ ಜಗತ್ತಿನ ಎಲ್ಲಾ ವಿಷಯಗಳನ್ನು ವಿವೇಕದಿಂದ ನೋಡಿ, ನಡೆದುಕೊಳ್ಳುವ ಮನುಷ್ಯನಿಗೆ ಐಶ್ವರ್ಯವು ಲೆಕ್ಕಕ್ಕಿಲ್ಲ ಮತ್ತು ವಿಪತ್ತು ಲೆಕ್ಕಕ್ಕಿಲ್ಲ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ | ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ || |
ರಾಮಾಯಣ ರಾವಣನನ್ನು ಕೊಂದು ಲಂಕೆಯಲ್ಲೇ ಉಳಿಯಲು ಬಯಸಿದ ಲಕ್ಷ್ಮಣನಿಗೆ ಹೀಗೆ ಶ್ರೀರಾಮ ಹೇಳಿದನು "ಲಂಕೆಯು ಚಿನ್ನದಿಂದ ನಿರ್ಮಾಣ ಆಗಿದ್ದರೂ ನನಗೆ ಇಲ್ಲಿ ಇರಲು ಇಷ್ಟವಿಲ್ಲ. ನನ್ನ ಜನನಿ ಮತ್ತು ಜನ್ಮಭೂಮಿಯೇ ಸ್ವರ್ಗಕ್ಕಿಂತ ಶ್ರೇಷ್ಟ". (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಏಕೇನಾಪಿ ಸುಪುತ್ರೇಣ ವಿದ್ಯಾಯುಕ್ತೇನ ಸಾಧುನಾ | ಆಹ್ಲಾದಿತುಂ ಕುಲಂ ಸರ್ವಂ ಯಥಾ ಚಂದ್ರೇಣ ಶರ್ವರೀ || |
ಹೇಗೆ ರಾತ್ರಿಯಲ್ಲಿ ಹಲವು ನಕ್ಷತ್ರಗಳಿದ್ದರು ಒಬ್ಬನೇ ಷೋಡಶಕಲೆಗಳಿಂದ ಕೂಡಿದ ಚಂದ್ರನಿಂದ ರಾತ್ರಿಯು ಶೋಭಿಸುವುದೊ ಹಾಗೆಯೇ ಸಂಪೂರ್ಣ ಕುಲಕ್ಕೆ ಸಂತೋಷವನ್ನು ನೀಡಲು ವಿದ್ಯೆಯನ್ನು, ಸಾಧುಸ್ವಭಾವವನ್ನು ಹೊಂದಿದ ಒಬ್ಬ ಒಳ್ಳೆಯ ಪುತ್ರನೊಬ್ಬನೇ ಸಾಕು. (ದುಷ್ಟಸ್ವಭಾವ ಹೊಂದಿದ ಅನೇಕರಿಗಿಂತ ಸಾಧುಸ್ವಭಾವದ ಒಬ್ಬನೇ ಸಾಕು) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪಿತೃಭಿಃ ತಾಡಿತಃ ಪುತ್ರಃ ಶಿಷ್ಯಸ್ತು ಗುರುಶಿಕ್ಷಿತಃ | ಘನಾಹತಂ ಸುವರ್ಣಂ ಚ ಜಾಯತೇ ಜನಮಂಡನಮ್ || |
ತಂದೆಯಿಂದ ಹೊಡೆಸಿಕೊಂಡ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯ ಏಟು ತಿಂದ ಚಿನ್ನ ಇವುಗಳಿಗೆ ಲೋಕದಲ್ಲಿ ಜನರಿಂದ ಗೌರವವು ಲಭಿಸುವುದು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಸಕೃತ್ ಕಂದುಕಪಾತೇನ ಪತತ್ಯಾರ್ಯಃ ಪತನ್ನಪಿ| ತಥಾ ಪತತಿ ಮೂರ್ಖ ಸ್ತುಮೃತ್ಪಿಂಡಪತನಂ ಯಥಾ|| - ಪಂಚತಂತ್ರ |
ಒಂದೊಮ್ಮೆ ಬುದ್ದಿವಂತನು ಬಿದ್ದರೆ ಚೆಂಡು ಬಿದ್ದಂತೆ ಬೀಳುತ್ತಾನೆ. ಆದರೆ ಮೂರ್ಖನು ಮಣ್ಣಿನ ಮುದ್ದೆ ಬೀಳುವಂತೆ ಬೀಳುತ್ತಾನೆ. (ಚೆಂಡು ಬಿದ್ದನಂತರ ಪುಟಿದೆಳುತ್ತದೆ. ಮಣ್ಣು ಬಿದ್ದಲ್ಲೆ ಬಿದ್ದಿರುತ್ತದೆ. ಬುದ್ಧಿವಂತರು ಕಾರ್ಯದಲ್ಲಿ ಎಡವಿದರು ಪುನಃ ಪ್ರಯತ್ನಿಸಿ ಏಳುತ್ತಾರೆ. ಮೂರ್ಖರು ಒಮ್ಮೆ ಸೋಲುಂಡರೇ ತಮ್ಮ ಜೀವನವೇ ಮುಗಿಯಿತೆಂದು ತಿಳಿಯುತ್ತಾರೆ.) (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್| ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್|| -ಮಹಾಭಾರತ |
ನಾಳೆ ಮಾಡುವ ಕಾರ್ಯವನ್ನು ಇಂದು ಮಾಡಬೇಕು. ಮಧ್ಯಾಹ್ನದ ಮೇಲೆ ಮಾಡಬೇಕು ಎಂದು ಕೊಂಡಿರುವುದನ್ನ ಬೆಳಗ್ಗೆಯೇ ಕೈಗೊಳ್ಳಬೇಕು. ಏಕೆಂದರೆ ಮೃತ್ಯುವು ಆಗಮಿಸುವುದಕ್ಕೂ ಮೊದಲು ಕಾರ್ಯವನ್ನು ಮಾಡಿದ್ದಾನೆಯೊ ಇಲ್ಲವೊ ಎಂದು ಕಾಯುವುದಿಲ್ಲ. (ಸಾವು ಯಾವುದಕ್ಕೂ ಕಾಯುವುದಿಲ್ಲ. ನಾವು ಅದು ಬರುವುದಕ್ಕಿಂತ ಮೊದಲು ನಮ್ಮ ಕರ್ತವ್ಯವನ್ನ ಪೂರೈಸಿರಬೇಕು.)(ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಪಿತೃಭಿಃ ತಾಡಿತಃ ಪುತ್ರಃ ಶಿಷ್ಯಸ್ತು ಗುರುಶಿಕ್ಷಿತಃ | ಘನಾಹತಂ ಸುವರ್ಣಂ ಚ ಜಾಯತೇ ಜನಮಂಡನಮ್ || |
ತಂದೆಯಿಂದ ಹೊಡೆಸಿಕೊಂಡ ಮಗ, ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ, ಸುತ್ತಿಗೆಯ ಏಟು ತಿಂದ ಚಿನ್ನ ಇವುಗಳಿಗೆ ಲೋಕದಲ್ಲಿ ಜನರಿಂದ ಗೌರವವು ಲಭಿಸುವುದು. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಯಥಾ ಖರಶ್ಚಂದನಭಾರವಾಹೀ ಭಾರಸ್ಯ ವೇತ್ತಾ ನ ತು ಚಂದನಸ್ಯ| ಏವಂ ಹಿ ಶಾಸ್ತ್ರಾಣಿ ಬಹೂನ್ಯಧೀತ್ಯ ಚಾರ್ಥೇಷು ಮೂಢಾಃ ಖರವದ್ವಹಂತಿ|| |
ಸುಶ್ರುತ ಸಂಹಿತಾ ಚಂದನದ ಕಟ್ಟಿಗೆಗಳನ್ನು ಹೊತ್ತು ಸಾಗುವ ಕತ್ತೆಗೆ ಆ ಚಂದನದ ಭಾರವು ತಿಳಿಯುವುದು ಹೊರತು ಸುಗಂಧವಲ್ಲ. ಹಾಗೆಯೇ ಬಹಳ ಶಾಸ್ತ್ರಗಳನ್ನು ಓದಿ ಅವುಗಳ ವಿಷಯದಲ್ಲಿ ವಾದವನ್ನು ಮಾಡುತ್ತಾ ಶಾಸ್ತ್ರಗಳ ಒಳ ಮರ್ಮವನ್ನು ತಿಳಿಯದೆ ಅವುಗಳನ್ನು ಆಚರಿಸದೆ ಮೂರ್ಖರು ತಲೆಯಲ್ಲಿ ಶಾಸ್ತ್ರಗಳ ಭಾರವನ್ನು ಹೊತ್ತ ಕತ್ತೆಯಂತೆ ಇರುತ್ತಾರೆ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಶ್ರೋತ್ರಂ ಶ್ರುತೇನೈವ ನ ಕುಂಡಲೇನ ದಾನೇನ ಪಾಣಿರ್ನ ತು ಕಂಕಣೇನ|| ವಿಭಾತಿ ಕಾಯಃ ಕರುಣಾಪರಾಣಾಮ್ ಪರೋಪಕಾರೈರ್ನ ತು ಚಂದನೇನ|| - ನೀತಿಶತಕ-೬೯ |
ಕಿವಿಯು ಶೋಭಿಪುದು ಶಾಸ್ತ್ರಗಳ ಶ್ರವಣದಿಂದಲೇ ಹೊರತು , ಓಲೇಗಳಿಂದಲ್ಲ. ಹಾಗೆಯೇ ಕೈಗಳಿಗೆ ಶೋಭೆ ದಾನದಿಂದ, ಬಳೆಗಳಿಂದಲ್ಲ. ಕರುಣೆಯಿಂದ ಕೂಡಿದ ಶರೀರವು ಶೋಭಿಸುವುದು ಪರೋಪಕಾರಗಳಿಂದ, ಚಂದನದ ಲೇಪನದಿಂದಲ್ಲ. (ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ) |
ಶಾಸ್ತ್ರೇಷು ಹೀನಾ ಕವಯೋ ಭವಂತಿ ಕವಿತ್ವಹೀನಾಸ್ತು ಪುರಾಣಭಟ್ಟಾಃ| ಪುರಾಣಹೀನಾ ಕೃಷಕಾ ಭವಂತಿ ಭಗ್ನಾಃ ಕೃಷೇರ್ಭಾಗವತಾ ಭವಂತಿ|| -ಅತ್ರಿಸಂಹಿತಾ,೧-೩೮೨ |
ಶಾಸ್ತ್ರಗಳನ್ನು ಅರಿಯಲಾರದವರು ಕವಿಗಳಾಗುತ್ತಾರೆ. ಕವಿಗಳಾಗುವ ಸಾಮಾರ್ಥ್ಯವಿಲ್ಲದವರು ಪುರಾಣಗಳನ್ನು ಹೇಳುವವರಾಗುತ್ತಾರೆ. ಅದೂ ಅಗದಿದ್ದರೆ ಬೇಸಾಯ ಮಾಡುತ್ತಾರೆ. ಬೇಸಾಯಕ್ಕೂ ಅವಕಾಶವಿಲ್ಲದವರು ಭಿಕ್ಷುಕರಾಗುತ್ತಾರೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ) |